HOME » NEWS » Entertainment » AAMIR KHAN APOLOGISES FOR HIS MISTAKES ON TWITTER MICHHAMI DUKKADAM TROLL FOR THUGS OF HINDOSTAN FLOP FILMS AE

Aamir Khan: ಕ್ಷಮೆಯಾಚಿಸಿದ ಅಮೀರ್​ ಖಾನ್​: ಹಣ ವಾಪಸ್​ ಕೇಳಿದ ಜನರು..!

Aamir Khan: ನಟ ಅಮೀರ್​ ಖಾನ್​ ಮಾಡಿರುವ ಒಂದು ಟ್ವೀಟ್​ ಜನರಿಗೆ ಅರ್ಥವಾಗಿಲ್ಲ. ಆದರೂ ಟ್ವೀಟಿಗರು ಈ ಟ್ವೀಟ್​ನಿಂದಲೇ ಅವರನ್ನು ಟ್ರಾಲ್​ ಮಾಡುತ್ತಿದ್ದಾರೆ.

Anitha E | news18-kannada
Updated:September 6, 2019, 9:29 AM IST
Aamir Khan: ಕ್ಷಮೆಯಾಚಿಸಿದ ಅಮೀರ್​ ಖಾನ್​: ಹಣ ವಾಪಸ್​ ಕೇಳಿದ ಜನರು..!
ಕ್ಷಮೆ ಕೇಳಿದ ನಟ ಅಮೀರ್​ ಖಾನ್​
  • Share this:
ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಷನಿಸ್ಟ್​ ಅಮೀರ್​ ಖಾನ್​ ಸದ್ಯ ಸುದ್ದಿಯಲ್ಲಿದ್ದಾರೆ. ಅದು ಅವರ ಸಿನಿಮಾ ಕಾರಣಕ್ಕಾಗಿ ಅಲ್ಲ. ಬದಲಾಗಿ ಅವರು ಮಾಡಿರುವ ಒಂದು ಟ್ವೀಟ್​ನಿಂದಾಗಿ. ಹೌದು, ನಿನ್ನೆ ಅವರು ಮಾಡಿರುವ ಒಂದು ಟ್ವೀಟ್​ ಈಗ ಟ್ವೀಟಿಗರ ವ್ಯಂಗ್ಯಕ್ಕೆ ಕಾರಣವಾಗಿದೆ.

ನಟ ಅಮೀರ್​ ಖಾನ್​ ನಿನ್ನೆ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಜನರ ಕ್ಷಮೆ ಯಾಚಿಸಿ ಒಂದು ಟ್ವೀಟ್​ ಮಾಡಿದ್ದಾರೆ. 'ಮಿಚ್ಚಾಮಿ ದುಖಃಧಮ್​... ತಿಳಿದೋ ತಿಳಿಯದೆಯೋ ಯಾರಿಗಾದರೂ ನಾನು ನೋವುಂಟು ಮಾಡಿದ್ದಲ್ಲಿ ನನ್ನನ್ನು ಕ್ಷಮಿಸಿ. ತಲೆ ಬಾಗಿಸಿ ಕೈ ಮುಗಿದು ಕ್ಷಮೆ ಕೇಳುತ್ತಿದ್ದೇನೆ' ಎಂದು ಅಮೀರ್​ ಟ್ವೀಟ್​ ಮಾಡಿದ್ದಾರೆ.
ಆದರೆ ಅಮೀರ್​ ಅವರ ಈ ಟ್ವೀಟ್​ ನೋಡಿದವರಲ್ಲಿ ಯಾರಿಗೂ ಇದು ಅರ್ಥವಾಗಲಿಲ್ಲ. ಅವರು ಏಕೆ ಹೀಗೆ ಟ್ವೀಟ್​ ಮಾಡಿದ್ದಾರೆ ಎಂದು ತಿಳಿಯದೆ ಕೆಲವರಂತೂ ಅಮೀರ್ ಅವರನ್ನು ಟ್ರಾಲ್​ ಮಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಅಂಗಳಕ್ಕೆ ಕಾಲಿಡಲಿದ್ದಾರೆ ಲಿಲ್ಲಿ ರಶ್ಮಿಕಾ ಮಂದಣ್ಣ..!

ಹೌದು, ಕೆಲವರು ಅಮೀರ್​ ಖಾನ್​ಗೆ ಈ ಟ್ವೀಟ್ ಅರ್ಥವಾಗುತ್ತಿಲ್ಲ ಎಂದು ಕೇಳಿದರೆ, ಮತ್ತೆ ಕೆಲವರು 'ಠಗ್ಸ್​ ಆಫ್​ ಹಿಂದೋಸ್ತಾನ್​' ಸಿನಿಮಾದ ಹಣ ವಾಪಸ್​ ಮಾಡಿ, ಇಂತಹ ಕೆಟ್ಟ ಸಿನಿಮಾ ಮುಂದೆ ಮಾಡಬೇಡಿ ಎಂದೂ ಸಲಹೆ ನೀಡಿದ್ದಾರೆ.

ಇನ್ನೂ ಕೆಲವರು ಕಾಶ್ಮೀರದ ಜನರ ನೋವಿನ ಅರಿವಿದ್ದರೆ, ಅವರ ದನಿಯಾಗಿ ಎಂದು ಕೆಲವರು ಟ್ವೀಟ್​ ಮಾಡಿದ್ದಾರೆ.

Aamir Khan trolled for his tweet
ಟ್ವೀಟ್​ ಮಾಡಿ ಟ್ರಾಲ್​ ಆದ ನಟ ಅಮೀರ್ ಖಾನ್​


ಅಮೀರ್​ ಕ್ಷಮೆಯಾಚಿಸಲು ಕಾರಣ ಗೊತ್ತೆ..?

ಅಮೀರ್​ ಖಾನ್​ ನಿಜಕ್ಕೂ ಕ್ಷಮೆ ಯಾಚಿಸಲು ಕಾರಣವಿದೆ. ಅದು ಕ್ಷಮೆ ಯಾಚಿಸುವುದನ್ನು ಹಬ್ಬವಾಗಿ ಆಚರಿಸಲಾಗುತ್ತದೆ. ಜೈನ ಧರ್ಮದಲ್ಲಿ ಇದೊಂದು ದೊಡ್ಡ ಪರ್ವ ಎಂಬ ನಂಬಿಕೆ ಇದೆ. ಇದನ್ನು ಪ್ರಯೂಷಣ್​ ಪರ್ವ ಹಾಗೂ ದಸ್​ಲಕ್ಷಣ್ ಪರ್ವ ಎಂದು ಕರೆಯಲಾಗುತ್ತಿದೆ.  ಈ ಹಬ್ಬದಲ್ಲಿ ಕೆಲವರು ತಪ್ಪಸ್ಸು ಹಾಗೂ ಉಪವಾಸವನ್ನೂ ಮಾಡುತ್ತಾರೆ. ಈ ಹಬ್ಬದ ಕೊನೆಯ ದಿನವನ್ನು ಕ್ಷಮೆಯಾಚಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದು ಎಲ್ಲರೂ ತಿಳಿದು ತಿಳಿಯದೆ ಮಾಡಿದ ತಪ್ಪಿಗಾಗಿ ಕ್ಷಮೆ ಕೇಳುತ್ತಾರೆ.

ಇದನ್ನೂ ಓದಿ: Rashmika mandanna: ವೈರಲ್​ ಆಗುತ್ತಿದೆ ರಶ್ಮಿಕಾರ ಬೀಚ್​ ಸೈಡ್​ ಫೋಟೋ..!

ಅದನ್ನು 'ಮಿಚ್ಚಾಮಿ ದುಖಃಧಮ್​' ಎನ್ನಲಾಗುತ್ತದೆ. ಈ ದಿನದಂದು ಅಮೀರ್​ ಎಲ್ಲರ ಕ್ಷಮೆಯಾಚಿಸಿ ಆ ಟ್ವೀಟ್​ ಮಾಡಿದ್ದರು. ಆದರೆ ಇದನ್ನು ಅರಿಯದ ಮಂದಿ ಅವರನ್ನು ಟ್ರಾಲ್​ ಮಾಡಿದ್ದಾರೆ.

Rashmi Gautham: ಕಣ್ಣೋಟದಿಂದಲೇ ಪಡ್ಡೆಗಳ ನಿದ್ದೆ ಕದ್ದಿರುವ ರಶ್ಮಿ ಗೌತಮ್​..!

First published: September 5, 2019, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading