ಅಮೀರ್​-ಕಾಜೋಲ್​ರನ್ನು ಒಂದು ಮಾಡಿದ ಗಣಪ​..!

2006ರಲ್ಲಿ ಬಾಲಿವುಡ್​ನಲ್ಲಿ ತೆರೆಕಂಡು ಹಿಟ್​ ಆದ ಸಿನಿಮಾ ಫನಾ. ಇದರಲ್ಲಿ ಅಮೀರ್ ಹಾಗೂ ಕಾಜೋಲ್​ ತೆರೆ ಹಂಚಿಕೊಂಡಿದ್ದರು. ಇದಾದ ನಂತರ ಈ ಜೋಡಿ ಎಲ್ಲೂ ಕಾಣಿಸಿಕೊಂಡೇ ಇರಲಿಲ್ಲ.

Anitha E | news18-kannada
Updated:September 5, 2019, 10:37 AM IST
ಅಮೀರ್​-ಕಾಜೋಲ್​ರನ್ನು ಒಂದು ಮಾಡಿದ ಗಣಪ​..!
ಅಮೀರ್ ಖಾನ್​ ಹಾಗೂ ಕಾಜೋಲ್​
  • Share this:
ಸಿನಿಮಾ ನಟ-ನಟಿಯರು ಪಾರ್ಟಿ ಹಾಗೂ ಹಬ್ಬಗಳಲ್ಲಿ ಒಬ್ಬರನ್ನು ಒಬ್ಬರು ಭೇಟಿ ಮಾಡೋದು ಸಹಜ. ಆದರೆ ಕೆಲವರು ವರ್ಷಗಟ್ಟಲೆ ಮುಂಬೈನಲ್ಲೇ ಇದ್ದರೂ ಭೇಟಿಯಾಗಿರುವುದಿಲ್ಲ. ಅದಕ್ಕೆ ಕಾರಣಗಳು ನೂರಾರು ಇರಬಹುದು. ಆದರೆ ಕಾಲ ಕೂಡಿ ಬಂದಾಗ ಅವರ ಭೇಟಿಯನ್ನು ಯಾರಿಂದಲೂ ತಪ್ಪಿಸಲಾಗುವುದಿಲ್ಲ.

ಹೌದು, ನಟ ಅಮೀರ್​ ಖಾನ್​ ಹಾಗೂ ಕಾಜೋಲ್​ ಒಳ್ಳೆಯ ಸ್ನೇಹಿತರು. ಇವರಿಬ್ಬರು ಸಿನಿಮಾಗಳಲ್ಲೂ ತೆರೆ ಹಂಚಿಕೊಂಡಿದ್ದಾರೆ. ಆದರೆ ಈ ಜೋಡಿ ಬಹಳ ಸಮಯದಿಂದ ಭೇಟಿಯೇ ಆಗರಿಲಿಲ್ಲವಂತೆ.

Aamir Khan and Kajol's Latest Selfie Will Take You Down Memory Lane
ಗಣೇಶ ಹಬ್ಬದಲ್ಲಿ ಅಮೀರ್​ ಕಾಜೋಲ್​


ಇವರಿಬ್ಬರ ಭೇಟಿಗೆ ಈಗ ಕಾಲ ಕೂಡಿ ಬಂದಿದೆ. ಅದೂ ಸಹ ಗಣಪನ ಹಬ್ಬದಂದು. ಹೌದು, ಬಹಳ ಸಮಯದ ನಂತರ ಗಣೇಶನ ಹಬ್ಬದಂದು ಮುಂಬೈನಲ್ಲಿ ಕಾಜೋಲ್ ಹಾಗೂ​ ಅಮೀರ್​ ಖಾನ್ ಭೇಟಿಯಾಗಿದ್ದಾರೆ. ಇದೇ ಖುಷಿಯಲ್ಲಿ ಈ ಜೋಡಿ ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಚಿತ್ರ ಅವರ ಹಳೇ ನೆನಪನ್ನು ಹಸಿರಾಗಿಸುವಂತಿದೆ. ಹೌದು, ಕಾಜೋಲ್​ ಹಾಗೂ ಅಮೀರ್​ ಅಭಿನಯದ 'ಫನಾ' ಸಿನಿಮಾದ ದೃಶ್ಯವನ್ನು ಕಣ್ಮುಂದೆ ತರುವಂತಿದೆ ಈ ಫೋಟೋ. 

ಇದನ್ನೂ ಓದಿ: ರಾಜಕೀಯ ಪ್ರವೇಶ ಕುರಿತು ಮೌನ ಮುರಿದ ಪ್ರಿನ್ಸ್​ ಮಹೇಶ್​ ಬಾಬು

ಈ ಚಿತ್ರದಲ್ಲಿ ಕಾಜೋಲ್​ ಚಿನ್ನದ ಬಣ್ಣದ ಸೀರೆಯುಟ್ಟಿದ್ದರೆ, ಅಮೀರ್​ ಬಿಳಿ ಬಣ್ಣದ ಕುರ್ತಾ ಧರಿಸಿದ್ದಾರೆ. ಈ ಚಿತ್ರ ಮೇಲೆ  'ಆಫ್ಟರ್​ ಸೋ ಲಾಂಗ್​ @ ಅಮೀರ್​ ಖಾನ್​' ಎಂದು ಬರೆಯಲಾಗಿದ್ದು, ಇದನ್ನು ಅಮೀರ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ 'ಪೈಲ್ವಾನ್'​ ಅಬ್ಬರ: ಕಿಚ್ಚನನ್ನು ಕೊಂಡಾಡಿದ  ಪಾರುಲ್​ ಯಾದವ್​..!1997ರಲ್ಲಿ ಅಮೀರ್​ ಹಾಗೂ ಕಾಜೋಲ್​ 'ಇಷ್ಕ್​' ಸಿನಿಮಾದಲ್ಲಿ ಅಭಿನಯಿಸಿದ್ದರು. ನಂತರ 2005ರಲ್ಲಿ 'ಫನಾ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಎರಡೂ ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಹಿಟ್​ ಆಗಿದ್ದವು.

 

Regina Cassandra: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಎವರು ಸಿನಿಮಾ ಖ್ಯಾತಿಯ ಹಾಟ್​ ನಟಿ ರೆಜಿನಾ..!


First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading