Aamir Khan ಮಗಳ ಹುಟ್ಟುಹಬ್ಬದ ಫೋಟೋ ಟ್ರೋಲ್​​! ಕೇಕ್​ ಕಟ್​ ಮಾಡೋಕೆ ಈ ಬಟ್ಟೆನಾ ಹಾಕೋದು ಅಂತ ಕ್ಲಾಸ್​

ಆಮಿರ್​ ಖಾನ್​ ತಮ್ಮ ಸಿನಿಮಾ(Movie)ದಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ ಅವರ ವೈವಾಹಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಸುದ್ದಿಯಾಗಿರೋದು ಆಮಿರ್​ ಖಾನ್​ ಅಲ್ಲ.  ಅವರ ಮಗಳು  ಪುತ್ರಿ ಇರಾ ಖಾನ್ (Ira Khan)​. ಅದು ಅವರ ಹುಟ್ಟುಹಬ್ಬ (Birthday) ದಂದೆ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾರೆ.

ಇರಾ ಖಾನ್​, ಆಮೀರ್​ ಖಾನ್

ಇರಾ ಖಾನ್​, ಆಮೀರ್​ ಖಾನ್

  • Share this:
ಬಾಲಿವುಡ್​(Bollywood)ನಲ್ಲಿ ಖಾನ್(Khan)​ಗಳದ್ದೇ ಅಬ್ಬರ. ಅದು ಆಗಿನಿಂದಲೂ. ಶಾರುಖ್​ ಖಾನ್(Shah Rukh  Khan)​, ಸಲ್ಮಾನ್​ ಖಾನ್(Salman Khan)​, ಆಮಿರ್​ ಖಾನ್(Aamir Khan)​ ಈ ಮೂರು ಖಾನ್​ಗಳೇ ಬಾಲಿವುಡ್(Bollywood)​ನ ಪಿಲ್ಲರ್(Pillar)​.  ಇವರಲ್ಲಿ ಸಲ್ಮಾನ್​ ಖಾನ್​ ಇನ್ನೂ ಬ್ಯಾಚುಲರ್​​.ಮದುವೆ ಸಹವಾಸವೇ ಬೇಡ ಅಂತ ಸುಮ್ಮನಿದ್ದಾರೆ. ಶಾರುಖ್​ ಖಾನ್ (Shah Rukh Khan)​ ಮದುವೆಯಾಗಿ ಅನೋನ್ಯವಾಗಿದ್ದಾರೆ.  ಇನ್ನೂ ಇತ್ರೀಚೆಗೆ ಆಮಿರ್​​ ಖಾನ್​ ತಮ್ಮ 2ನೇ ಪತ್ನಿಗೆ ವಿಚ್ಛೇದನ ನೀಡಿದ್ದರು. ಆಮಿರ್​ ಖಾನ್​ ತಮ್ಮ ಸಿನಿಮಾ(Movie)ದಿಂದ ಎಷ್ಟು ಸುದ್ದಿಯಲ್ಲಿ ಇರುತ್ತಾರೋ, ಅಷ್ಟೇ ಅವರ ವೈವಾಹಿಕ ಜೀವನದಿಂದಲೂ ಸುದ್ದಿಯಲ್ಲಿರುತ್ತಾರೆ. ಆದರೆ, ಈ ಬಾರಿ ಸುದ್ದಿಯಾಗಿರೋದು ಆಮಿರ್​ ಖಾನ್​ ಅಲ್ಲ.  ಅವರ ಮಗಳು  ಪುತ್ರಿ ಇರಾ ಖಾನ್ (Ira Khan)​. ಅದು ಅವರ ಹುಟ್ಟುಹಬ್ಬ (Birthday) ದಂದೆ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾರೆ. ಅದ್ಯಾಕೆ ಅಂತೀರಾ? ಮುಂದೆ ನೋಡಿ.

ಹುಟ್ಟುಹಬ್ಬದ ಫೋಟೋ ಸಿಕ್ಕಾಪಟ್ಟೆ ಟ್ರೋಲ್​!

ಇರಾ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಂದೆ ಆಮೀರ್ ಖಾನ್ ಮತ್ತು ತಾಯಿ ರೀನಾ ದತ್ತಾ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. ಇರಾ ಖಾನ್ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ವಿಮ್ಮಿಂಗ್ ಡ್ರೆಸ್‌ನಲ್ಲಿರುವ ಇರಾ ಖಾನ್ ಕೇಕ್ ಕತ್ತರಿಸುತ್ತಿದ್ದಾರೆ. ಪಕ್ಕದಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಪುತ್ರ ಆಜಾದ್ ಖಾನ್ ಮತ್ತು ಇರಾ ಖಾನ್ ತಾಯಿ ರೀನಾ ದತ್ತಾ ಜೊತೆಯಲ್ಲಿದ್ದಾರೆ. ಇದನ್ನು ಕಂಡ ನೆಟ್ಟಿಗರು ನೀವೇನೂ ಮನೆಯಲ್ಲಿದ್ದೀರಾ? ಅಥವಾ ಬೀಚ್​​ನಲ್ಲಿದ್ದೀರಾ? ಎಂದು ಕಮೆಂಟ್​ ಮಾಡುತ್ತಿದ್ದಾರೆ.
View this post on Instagram


A post shared by POP Diaries (@ipopdiaries)

ಇದು ಒಂದು ಬಟ್ಟೆನಾ ಎಂದು ಪ್ರಶ್ನಿಸಿದ ನೆಟ್ಟಿಗರು!

ಇರಾ ಖಾನ್ ಧರಿಸಿದ್ದ ಬಟ್ಟೆ ಇದೀಗ ನೆಟ್ಟಿಗರ ಕೆಂಗಣ್ಣಿಗೆ  ಗುರಿಯಾಗಿದೆ. ಅನೇಕರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಸಮಯದಲ್ಲಾದರೂ ಸರಿಯಾದ ಬಟ್ಟೆ ಧರಿಸಬಾರದಾ ಎಂದು ಹೇಳುತ್ತಿದ್ದಾರೆ. ಅಪ್ಪನ ಮುಂದೆ ಇಂಥ ಬಟ್ಟೆ ಧರಿಸಲು ನಿಮಗೆ ಏನು ಅನ್ನಿಸುವುದಿಲ್ಲವಾ? ಎಂದು ಕೇಳಿದ್ದರು. ಇನ್ನು ಕೆಲವರು ಅವರ ಬಟ್ಟೆ ಅವರ ಇಷ್ಟ ಎಂದು ಕಾಮೆಂಟ್ ಮಾಡುವ ಮೂಲಕ ಇರಾ ಪರ ನಿಂತಿದ್ದಾರೆ. ಇರಾ ಖಾನ್ ಸ್ವಿಮಿಂಗ್ ಪೂಲ್ ಪಕ್ಕದಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ಹಾಗಾಗಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕೆಲವರು ಸಪೋರ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್​ ಚಾಪ್ಟರ್​ 3 ಸಿನಿಮಾದಲ್ಲಿ ಇವ್ರು ವಿಲನ್​ ಅಂತೆ! 'ಬಾಹುಬಲಿ'ಲೇ ಅಬ್ಬರಿಸಿದ್ರು, ಇನ್ನು ಇಲ್ಲಿ ಬಿಡ್ತಾರಾ?

ಇರಾ ಖಾನ್​ ಲವ್​ ಸ್ಟೋರಿ ಕೂಡ ವೈರಲ್​ ಆಗಿತ್ತು!

ಇರಾ ಖಾನ್ ಫಿಟ್ನೆಸ್ ಕೋಚ್ ನೂಪೂರ್ ಶಿಖಾರೆ ಜೊತೆಗೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಇಬ್ಬರ ಪ್ರೀತಿಯ ವಿಚಾರ ಏನು ಗುಟ್ಟಾಗಿ ಉಳಿದಿಲ್ಲ. ನೂಪೂರ್ ಸಹ ಪ್ರೇಯಸಿಗೆ ಪ್ರೀತಿಯ ವಿಶ್ ಮಾಡಿದ್ದಾರೆ. ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯಗಳು ನನ್ನ ಲವ್. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.ಇರಾ ಖಾನ್ ಡ್ರಾಮದಲ್ಲಿ ಆಕ್ಟೀವ್ ಆಗಿದ್ದಾರೆ. ನಾಟಕಗಳನ್ನು ನಿರ್ದೇಶನ ಮಾಡುವ ಮೂಲಕ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ. ಭಾರತದಾದ್ಯಂತ ಪ್ರದರ್ಶನ ನೀಡುತ್ತಿರುತ್ತಾರೆ. ಇನ್ನು ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: KGF 2 ಸಿನಿಮಾಗೆ 25 ದಿನಗಳ ಸಂಭ್ರಮ, ರಾಕಿ ಭಾಯ್​ ಅಬ್ಬರಕ್ಕೆ ಪತರುಗುಟ್ಟಿದ ವರ್ಲ್ಡ್​ ಬಾಕ್ಸ್ ಆಫೀಸ್​!


ಆಮಿರ್ ಖಾನ್ ಆತಂಕ ಕೊನೆಗೂ ನಿಜವಾಯ್ತು!

ಕೆಜಿಎಫ್​ 2 ಸಿನಿಮಾದ ಎದುರು ಆಮಿರ್​ ಖಾನ್​ ತೊಡೆತಟ್ಟಿದ್ದರು. ಆಮಿರ್​ ಖಾನ್​ ಹಾಗೂ ಕರೀನಾ ಕಪೂರ್​ ನಟನೆಯ ಲಾಲ್ ಸಿಂಗ್​ ಛಡ್ಡಾ ಸಿನಿಮಾವನ್ನು ಕೆಜಿಎಫ್ 2 ರಿಲೀಸ್​ ಆದ ದಿನವೇ ರಿಲೀಸ್​ ಮಾಡುವುದಾಗಿ ಹೇಳಿಕೊಂಡಿತ್ತು. ಇದಾದ ಕೆಲ ದಿನಗಳ ಬಳಿಕ ಈ ಘೋಷಣೆಯನ್ನು ಚಿತ್ರತಂಡ ಹಿಂಪಡೆದುಕೊಂಡಿತ್ತು. ಯಾಕೆಂದರೆ ಕೆಜಿಎಫ್​  1 ಎದುರು ಬಂದಿದ್ದ ಶಾರುಖ್​ ಖಾನ್​ ಸಿನಿಮಾ ಜೀರೋ ಮಕಾಡೆ ಮಲಗಿತ್ತು. ಈ ಭಯದಿಂದ ಆಮಿರ್​ ಖಾನ್​ ಹಿಂದೆ ಸರಿದಿದ್ದರು. ಆದರೂ ಅವರ ಆತಂಕ ನಿಜವಾಗಿದೆ. ದಂಗಲ್​ ದಾಖಲೆಯನ್ನೇ ರಾಕಿ ಭಾಯ್​ ಊಡೀಸ್​ ಮಾಡಿದ್ದಾರೆ.


Published by:Vasudeva M
First published: