VIDEO: ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ಇಸ್​ ಬ್ಯಾಕ್​: 'ಆದಿ ಲಕ್ಷಿ ಪುರಾಣ'ದಲ್ಲಿ ನಯನ ಮನೋಹರಿ ರಾಧಿಕಾ ಪಂಡಿತ್

ಯಶ್​ ನಾಯಕರಾಗಿದ್ದ ಸಂತು ಸ್ಟ್ರೈಟ್ ಫಾರ್ವಡ್​ ಚಿತ್ರದಲ್ಲಿ ಕೊನೆಯ ಬಾರಿ ಬಣ್ಣ ಹಚ್ಚಿದ್ದ ರಾಧಿಕಾ ಪಂಡಿತ್ ಈ ಸಿನಿಮಾದಲ್ಲಿ​ ಲಕ್ಷ್ಮಿ ಎಂಬ ಪಾತ್ರದಲ್ಲಿ ಮತ್ತಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

zahir | news18
Updated:February 10, 2019, 9:33 AM IST
VIDEO: ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ಇಸ್​ ಬ್ಯಾಕ್​: 'ಆದಿ ಲಕ್ಷಿ ಪುರಾಣ'ದಲ್ಲಿ ನಯನ ಮನೋಹರಿ ರಾಧಿಕಾ ಪಂಡಿತ್
ರಾಧಿಕಾ ಪಂಡಿತ್
zahir | news18
Updated: February 10, 2019, 9:33 AM IST
ಸ್ಯಾಂಡಲ್​ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್​ ಎರಡು ವರ್ಷಗಳ ಬಳಿಕ ಮತ್ತೆ ಮಾಯಾಲೋಕಕ್ಕೆ ಮರಳಿದ್ದಾರೆ.​ ರಾಕಿಂಗ್ ಸ್ಟಾರ್ ಯಶ್​ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಮುದ್ದು ಮುಖದ ಬೆಡಗಿ ರಾಧಿಕಾ ​ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಮದುವೆ ಬಳಿಕ ಸಿನಿರಂಗದಿಂದ ದೂರವೇ ಉಳಿದಿದ್ದ ರಾಧಿಕಾ ಪಂಡಿತ್ ಅಭಿನಯದ ​ ಆದಿ ಲಕ್ಷ್ಮಿ ಪುರಾಣ ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

ಸಿನಿಮಾದಲ್ಲಿ ರಾಧಿಕಾಗೆ ಜೋಡಿಯಾಗಿ ರಂಗಿತರಂಗ ಖ್ಯಾತಿಯ ನಿರೂಪ್​ ಭಂಡಾರಿ  ಕಾಣಿಸಿಕೊಂಡಿದ್ದಾರೆ. ನಟ ರಮೇಶ್​ ಅರವಿಂದ್​ ಹಿನ್ನಲೆ ಧ್ವನಿಯಲ್ಲಿ ಮೂಡಿಬಂದಿರುವ ಈ ಚಿತ್ರದ ಟೀಸರ್​ನಲ್ಲಿ ಪಾತ್ರಗಳ ಎಳೆಗಳನ್ನು ಬಿಟ್ಟುಕೊಡಲಾಗಿದೆ. ಅದರಂತೆ ಈ ಸಿನಿಮಾದ ಮೂಲಕ ನಿರೂಪ್​ ಭಂಡಾರಿ ಪೊಲೀಸ್​ ಅಧಿಕಾರಿ ಆದಿಯಾಗಿ ತೆರೆ ಮೇಲೆ ಬರಲಿದ್ದಾರೆ.

ಯಶ್​ ನಾಯಕರಾಗಿದ್ದ ಸಂತು ಸ್ಟ್ರೈಟ್ ಫಾರ್ವಡ್​ ಚಿತ್ರದಲ್ಲಿ ಕೊನೆಯ ಬಾರಿ ಬಣ್ಣ ಹಚ್ಚಿದ್ದ ರಾಧಿಕಾ ಪಂಡಿತ್ ಈ ಸಿನಿಮಾದಲ್ಲಿ​ ಲಕ್ಷ್ಮಿ ಎಂಬ ಪಾತ್ರದಲ್ಲಿ ಮತ್ತಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ತುಂಬು ಗರ್ಭಿಣಿಯಾಗಿದ್ದ ವೇಳೆ ಈ ಸಿನಿಮಾದ ಡಬ್ಬಿಂಗ್ ಕಾರ್ಯಗಳನ್ನು ಮುಗಿಸಿಕೊಟ್ಟಿದ್ದರು ಎಂಬುದು ವಿಶೇಷ. ಆದಿಯ ತಾಯಿಯ ರೋಲ್​ನಲ್ಲಿ ತಾರಾ ಅನುರಾಧಾ ಕೂಡ ಬಣ್ಣ ಹಚ್ಚಿದ್ದಾರೆ. ರಾಕ್​ಲೈನ್ ವೆಂಕಟೇಶ್​ ನಿರ್ಮಿಸಿರುವ ಆದಿ ಲಕ್ಷ್ಮಿ ಪುರಾಣಕ್ಕೆ ಪ್ರಿಯಾ ವಿ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ.
First published:February 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...