Miss England: ಮೇಕಪ್‌ ಇಲ್ಲದೇ ʼಮಿಸ್‌ ಇಂಗ್ಲೆಂಡ್‌ʼ ಸ್ಫರ್ಧೆಯಲ್ಲಿ ಸ್ಪರ್ಧಿಸಿ ಇತಿಹಾಸ ಸೃಷ್ಟಿಸಿದ ಯುವತಿ

ಮಿಸ್ ಇಂಗ್ಲೆಂಡ್ ಸ್ಪರ್ಧೆಯ ಶತಮಾನದ ಸುದೀರ್ಘ ಇತಿಹಾಸದಲ್ಲಿ ಯಾವುದೇ ಮೇಕಪ್ ಧರಿಸದೆ ಮೊದಲ ಬಾರಿಗೆ ಯುವತಿಯೊಬ್ಬರು ರ್ಯಾಂಪ್‌ ಮೇಲೆ ವಾಕ್‌ ಮಾಡುವ ಮೂಲಕ ಸ್ಪರ್ಧಿಸಿದ್ದಾರೆ. ಈ ಮೂಲಕ 20 ವರ್ಷ ವಯಸ್ಸಿನ ಲಂಡನ್‌ ನ ಮೆಲಿಸಾ ರವೂಫ್ ಫೈನಲಿಸ್ಟ್ ಸ್ಪರ್ಧೆಯಲ್ಲಿ ಮೇಕಪ್ ಇಲ್ಲದೆ ಸ್ಪರ್ಧಿಸಿದ ಮೊದಲ ಸ್ಪರ್ಧಿಯಾಗಿದ್ದಾರೆ.

ಮೇಕಪ್‌ ಇಲ್ಲದೇ ಮಿಸ್‌ ಇಂಗ್ಲೆಂಡ್‌ ಸ್ಪರ್ಧೆಯಲ್ಲಿ ಯುವತಿ ಭಾಗಿ

ಮೇಕಪ್‌ ಇಲ್ಲದೇ ಮಿಸ್‌ ಇಂಗ್ಲೆಂಡ್‌ ಸ್ಪರ್ಧೆಯಲ್ಲಿ ಯುವತಿ ಭಾಗಿ

  • Share this:
ಸೌಂದರ್ಯ ಸ್ಪರ್ಧೆ (beauty pageant) ಎಂದರೆ ಉತ್ತಮವಾದ ಮೇಕಪ್‌, ಸುಂದರವಾದ ಬಟ್ಟೆ (Dress) ಹೀಗೆ ಎಲ್ಲವೂ ಸರಿಯಾಗಿ ಇರಬೇಕು ಎಂಬ ಕಲ್ಪನೆಯನ್ನು ಇಲ್ಲೊಬ್ಬಳು ಯುವತಿ ಸುಳ್ಳು ಮಾಡಿದ್ದಾಳೆ. ಹೌದು, ಮೊದಲ ಬಾರಿಗೆ ಮುಖಕ್ಕೆ ಮೇಕಪ್‌ (Makeup) ಮಾಡಿಕೊಳ್ಳದೇ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾಳೆ. ಮಿಸ್ ಇಂಗ್ಲೆಂಡ್ (Miss England) ಸ್ಪರ್ಧೆಯ ಶತಮಾನದ ಸುದೀರ್ಘ ಇತಿಹಾಸದಲ್ಲಿ ಯಾವುದೇ ಮೇಕಪ್ ಧರಿಸದೆ ಮೊದಲ ಬಾರಿಗೆ ಯುವತಿಯೊಬ್ಬರು ರ್ಯಾಂಪ್‌ (Ramp) ಮೇಲೆ ವಾಕ್‌ ಮಾಡುವ ಮೂಲಕ ಸ್ಪರ್ಧಿಸಿದ್ದಾರೆ. ಈ ಮೂಲಕ 20 ವರ್ಷ ವಯಸ್ಸಿನ ಲಂಡನ್‌ ನ ಮೆಲಿಸಾ ರವೂಫ್ ಫೈನಲಿಸ್ಟ್ ಸ್ಪರ್ಧೆಯಲ್ಲಿ ಮೇಕಪ್ ಇಲ್ಲದೆ ಸ್ಪರ್ಧಿಸಿದ ಮೊದಲ ಸ್ಪರ್ಧಿಯಾಗಿದ್ದಾರೆ.

ಮೇಕಪ್‌ ಇಲ್ಲದೇ ಮಿಸ್‌ ಇಂಗ್ಲೆಂಡ್‌ ಸ್ಪರ್ಧೆಯಲ್ಲಿ ಯುವತಿ ಭಾಗಿ
ಲಂಡನ್‌ನಲ್ಲಿ ರಾಜಕೀಯ ವಿಜ್ಞಾನದ ವಿದ್ಯಾರ್ಥಿನಿಯಾಗಿರುವ ಮೆಲಿಸಾ ರವೂಫ್, ಮಿಸ್ ಇಂಗ್ಲೆಂಡ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಮೇಕಪ್ ಧರಿಸದೆ ಭಾಗವಹಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಗೆಲುವು ಪಡೆದಿರುವ ಮೆಲಿಸಾ ಅಕ್ಟೋಬರ್ 17 ರಂದು ನಡೆಯಲಿರುವ ಫೈನಲ್‌ನಲ್ಲಿ 40 ಇತರ ಸ್ಪರ್ಧಿಗಳೊಂದಿಗೆ ಯುವತಿ ಸ್ಪರ್ಧಿಸಲಿದ್ದಾರೆ.

"ನಮ್ಮ ಸ್ವಂತ ಸೌಂದರ್ಯದಲ್ಲಿ ಖುಷಿಯಾಗಿದ್ದರೆ, ಮೇಕಪ್‌ ಅಗತ್ಯವಿಲ್ಲ"
ಈ ಬಗ್ಗೆ ಮಾತನಾಡಿದ ಮೆಲಿಸಾ "ಒಬ್ಬರು ತಮ್ಮದೆ ಸ್ವಂತ ಸೌಂದರ್ಯದಲ್ಲಿ ಸಂತೋಷವಾಗಿದ್ದರೆ, ನಮ್ಮ ಮುಖವನ್ನು ಮೇಕಪ್‌ನಿಂದ ಮುಚ್ಚಿಕೊಳ್ಳಬಾರದು. ನಮ್ಮ ನ್ಯೂನತೆಗಳು ನಮ್ಮನ್ನು ನಾವು ಯಾರು ಎಂಬುದನ್ನು ತೋರಿಸುತ್ತವೆ. ಅದೇ ಪ್ರತಿಯೊಬ್ಬ ವ್ಯಕ್ತಿಯನ್ನು ಇನ್ನೊಬ್ಬರಿಂದ ವಿಭಿನ್ನವಾಗಿಸುತ್ತದೆ" ಎಂದು ಹೇಳಿದ್ದಾರೆ.

"ವಿವಿಧ ವಯಸ್ಸಿನ ಅನೇಕ ಹುಡುಗಿಯರು ಮೇಕ್ಅಪ್ ಧರಿಸುತ್ತಾರೆ ಎಂದು ನನಗೆ ತಿಳಿದಿದೆ. ನನಗೆ ಈ ಬಗ್ಗೆ ಬಹಳಷ್ಟು ಅರ್ಥವಾಗಿದೆ. ಅವರು ಮೇಕ್ಅಪ್ ಧರಿಸುವಂತೆ ಒತ್ತಡಕ್ಕೆ ಒಳಗಾಗಿ ಮೇಕಪ್ ಧರಿಸುತ್ತಿದ್ದಾರೆ" ಎಂದು ರವೂಫ್ ಯುಕೆ ಇಂಡಿಪೆಂಡೆಂಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಫೈನಲ್‌ನಲ್ಲೂ ಮೇಕಪ್‌ ಇಲ್ಲದೇ ಸ್ಪರ್ಧಿಸಲು ನಿರ್ಧಾರ
ಚಿಕ್ಕ ವಯಸ್ಸಿನಲ್ಲೇ ಮೇಕ್ಅಪ್ ಮಾಡಲು ಪ್ರಾರಂಭಿಸಿದರೂ, ಸ್ಪರ್ಧೆಗಾಗಿ ಸಂಪ್ರದಾಯವನ್ನು ಮುರಿಯಲು ನಿರ್ಧರಿಸಿದೆ ಎಂದು ರವೂಫ್ ಹೇಳಿದರು. ಇದಲ್ಲದೆ, ಮಿಸ್ ಇಂಗ್ಲೆಂಡ್ ಫೈನಲ್‌ನಲ್ಲಿಯೂ ಮೇಕಪ್ ಧರಿಸದಿರಲು ಯೋಚಿಸಿರುವ ಈಕೆ, "ಇದು ಭಯಪಡಿಸುವ ನಿರ್ಧಾರ, ಆದರೆ ಅದ್ಭುತ ಅನುಭವ" ಎಂದು ಹೇಳಿದರು. ಇಷ್ಟೇ ಅಲ್ಲಾ, 2019 ರ "ಬೇರ್ ಫೇಸ್" ಸೌಂದರ್ಯ ಸ್ಪರ್ಧೆಯಲ್ಲೂ ಮೆಲಿಸಾ ಗೆದ್ದಿದ್ದರು.

ಇದನ್ನೂ ಓದಿ:  Samantha: ವೆಬ್ ಸೀರಿಸ್​ಗಾಗಿ ಮಾರ್ಷಲ್ ಆರ್ಟ್ ಕಲಿಯುತ್ತಿದ್ದಾರೆ ಸಮಂತಾ!

"ಮೇಕಪ್ ರಹಿತವಾಗಿ ಸೆಮಿಫೈನಲ್‌ನಲ್ಲಿ ಸ್ಪರ್ಧಿಸುತ್ತಿರುವುದನ್ನು ಇದೇ ಮೊದಲು"
ಮಿಸ್ ಇಂಗ್ಲೆಂಡ್‌ನ ನಿರ್ದೇಶಕಿ ಆಂಜಿ ಬೀಸ್ಲಿ, ಈ ಹಿಂದೆಯು ಮೇಕಪ್-ಮುಕ್ತ ಮಾಡೆಲಿಂಗ್ ರೌಂಡ್ ಅನ್ನು ಪರಿಚಯಿಸಲಾಗಿತ್ತು. ಆದರೆ ಮೇಕಪ್ ಇಲ್ಲದೆ ಸ್ಪರ್ಧಿಸಲು ಆಯ್ಕೆ ಮಾಡಿರುವುದು ಇದೇ ಮೊದಲು ಎಂದು ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮೇಕಪ್ ರಹಿತ ಸ್ಪರ್ಧಿಯೊಬ್ಬ ಸೆಮಿಫೈನಲ್‌ನಲ್ಲಿ ಸ್ಪರ್ಧಿಸುತ್ತಿರುವುದನ್ನು ನಾನು ಮೊದಲ ಬಾರಿಗೆ ನೋಡಿದೆ. ಎಲ್ಲಾ ಇತರ ಸ್ಪರ್ಧಿಗಳ ವಿರುದ್ಧ ತಾನು ಅಧಿಕಾರ ಹೊಂದಿದ್ದೇನೆ ಎಂದು ಅವಳು ಹೇಳಿದರು. "ಸಾಮಾಜಿಕ ಮಾಧ್ಯಮದಲ್ಲಿ ಮೇಕ್ಅಪ್ ಮತ್ತು ಫಿಲ್ಟರ್‌ಗಳ ಹಿಂದೆ ಮರೆಮಾಡುವ ಅಗತ್ಯವಿಲ್ಲದೆ ಮಹಿಳೆಯರು ನಿಜವಾಗಿಯೂ ಯಾರೆಂದು ನಮಗೆ ತೋರಿಸಲು ಇದು ಪ್ರೋತ್ಸಾಹಿಸುತ್ತದೆ" ಎಂದು ಹೇಳಿದರು. “ಮಿಸ್ ಇಂಗ್ಲೆಂಡ್‌ ಸ್ಪರ್ಧೆಯಲ್ಲಿ ಮೆಲಿಸಾಳಿಗೆ ಶುಭ ಹಾರೈಸುತ್ತೇವೆ. ಎಲ್ಲರೂ ಮೇಕ್ಅಪ್ ಧರಿಸಿದಾಗ ಅವಳ ನಿರ್ಧಾರ ತುಂಬಾ ಧೈರ್ಯಶಾಲಿ ಕೆಲಸವಾಗಿದೆ. ಈ ಮೂಲಕ ಯುವತಿಯರಿಗೆ ಸ್ವಂತ ಸೌಂದರ್ಯದ ಪ್ರಮುಖ ಸಂದೇಶವನ್ನು ಕಳುಹಿಸುತ್ತಿದ್ದಾರೆ” ಎಂದು ಬೀಸ್ಲಿ ಹೇಳಿದರು.

ಇದನ್ನೂ ಓದಿ: Sonam Kapoor: ಬಾಲಿವುಡ್ ನಟಿ ಸೋನಂ ಕಪೂರ್ ಮಗುವಿನ ಹೆಸರು ರಿವೀಲ್!

ಅಕ್ಟೋಬರ್ 17 ರಂದು ʼಮಿಸ್ ಇಂಗ್ಲೆಂಡ್ʼ ಕಿರೀಟಕ್ಕಾಗಿ ಅಂತಿಮ ಸುತ್ತು ನಡೆಯಲಿದ್ದು, ಮೆಲಿಸಾ ಇತರ 40 ಮಹಿಳೆಯರೊಂದಿಗೆ ಸ್ಪರ್ಧಿಸಲಿದ್ದಾರೆ. ಮೇಕಪ್‌ ಇಲ್ಲದೇ ಸ್ಫರ್ಧಿಸುತ್ತಿರುವ ಇವರ ನಿರ್ಧಾರಕ್ಕೆ ಹಲವಾರು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದು, ಇವರ ಗೆಲುವಿಗಾಗಿ ಕಾಯುತ್ತಿದ್ದಾರೆ.
Published by:Ashwini Prabhu
First published: