Vivek Agnihotri: ಬೀಫ್​ ಬಗ್ಗೆ ರಣಬೀರ್ ಹೇಳಿಕೆ ಬೆನ್ನಲ್ಲೇ ವಿವೇಕ್ ಅಗ್ನಿಹೋತ್ರಿ ಮತ್ತೊಂದು ವಿಡಿಯೋ ವೈರಲ್!

ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಾನೂ ಬೀಫ್ ತಿನ್ನುತ್ತೇನೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ಕಿಚ್ಚು ಹತ್ತಿಸಿದೆ. ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ಚಿತ್ರದ ಬಿಡುಗಡೆಗೆ ಮುಂಚಿತವಾಗಿ, ರಣಬೀರ್ ತಮಗೆ ಗೋಮಾಂಸ ಇಷ್ಟವೆಂದೂ ಅದರಲ್ಲಿ ಬೀಫ್ ಅನ್ನು ತಾನು ಹೆಚ್ಚು ಇಷ್ಟಪಡುವ ಆಹಾರವೆಂದು ಹೇಳಿಕೆ ನೀಡಿರುವ ವಿಡಿಯೋವೊಂದು ಟ್ವಿಟ್ಟರ್‌ನಲ್ಲಿ ಹರಡುತ್ತಿದ್ದಂತೆ ನೆಟ್ಟಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ರಣಬೀರ್ ಕಪೂರ್ ಮತ್ತು ವಿವೇಕ್ ಅಗ್ನಿಹೋತ್ರಿ

ರಣಬೀರ್ ಕಪೂರ್ ಮತ್ತು ವಿವೇಕ್ ಅಗ್ನಿಹೋತ್ರಿ

  • Share this:
ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ತಮಗೆ ಗೋಮಾಂಸವೆಂದರೆ ಇಷ್ಟ ಎಂದು ಹೇಳಿರುವ ಹಳೆಯ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆದ ನಂತರ ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ತಾನೂ ಬೀಫ್ ತಿನ್ನುತ್ತೇನೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ಕಿಚ್ಚು ಹತ್ತಿಸಿದೆ. ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ಚಿತ್ರದ ಬಿಡುಗಡೆಗೆ ಮುಂಚಿತವಾಗಿ, ರಣಬೀರ್ ತಮಗೆ ಗೋಮಾಂಸ (Beef) ಇಷ್ಟವೆಂದೂ ಅದರಲ್ಲಿ ಬೀಫ್ ಅನ್ನು ತಾನು ಹೆಚ್ಚು ಇಷ್ಟಪಡುವ ಆಹಾರವೆಂದು ಹೇಳಿಕೆ ನೀಡಿರುವ ವಿಡಿಯೋವೊಂದು ಟ್ವಿಟ್ಟರ್‌ನಲ್ಲಿ (Twitter) ಹರಡುತ್ತಿದ್ದಂತೆ ನೆಟ್ಟಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಬ್ರಹ್ಮಾಸ್ತ್ರವನ್ನು ಬಹಿಷ್ಕರಿಸುವ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ನಟನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಣಬೀರ್ ದಂಪತಿಗಳನ್ನು ದೇವಸ್ಥಾನ ಪ್ರವೇಶಿಸದಂತೆ ತಡೆದ ಬಜರಂಗದಳ
ರಾಕ್‌ಸ್ಟಾರ್ ಚಿತ್ರದ ಪ್ರಮೋಶನ್ ಸಮಯದಲ್ಲಿ ರಣಬೀರ್ ಫುಡ್ ಟಾಕ್ ಶೋಗೆ ಅತಿಥಿಯಾಗಿ ಆಗಮಿಸಿದ್ದ ಸಮಯದಲ್ಲಿ ರಣಬೀರ್ ಗೋಮಾಂಸದ ಕುರಿತು ಹೇಳಿಕೆ ನೀಡಿದ ವಿಡಿಯೋ ಹರಡುತ್ತಿರುವಂತೆ ಜನರ ಆಕ್ರೋಶಕ್ಕೆ ಒಳಗಾದರು.

ಇದನ್ನೂ ಓದಿ: Yogita Bihani: ವಿಕ್ರಮ್ ವೇದಾ ಚಿತ್ರದ ಸಹನಟಿಯನ್ನು ಹಾಡಿ ಹೊಗಳಿದ ಸೈಫ್ ಅಲಿ ಖಾನ್

ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನ ಪ್ರವೇಶಿಸದಂತೆ ಬಜರಂಗದಳದ ಕಾರ್ಯಕರ್ತರು ರಣಬೀರ್ ಹಾಗೂ ಅವರ ಪತ್ನಿ ನಟಿ ಆಲಿಯಾರನ್ನು ತಡೆದರು. ನಾನು ಗೋಮಾಂಸ ಪ್ರಿಯ ಎಂಬ ಅವರ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂಬುದು ನೆಟ್ಟಿಗರ ಆಕೋಶವಾಗಿದೆ.

ವಿವೇಕ್ ಅಗ್ನಿಹೋತ್ರಿ ಕೂಡ ಗೋಮಾಂಸ ತಿನ್ನುತ್ತಾರಂತೆ
ಇದೀಗ ಇಂತಹುದ್ದೇ ಇನ್ನೊಂದು ವಿಡಿಯೋ ಸದ್ಯ ಜಾಲತಾಣದಲ್ಲಿ ಸದ್ದುಮಾಡುತ್ತಿದ್ದು, ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಹ ತಾವು ಗೋಮಾಂಸ ತಿನ್ನುವುದಾಗಿ ಹೇಳಿಕೆ ನೀಡಿರುವ ವಿಡಿಯೋ ಅದಾಗಿದೆ.



ಬ್ರಹ್ಮಾಸ್ತ್ರ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ಕೂಡ ಟೀಕಿಸಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ವಿಡಿಯೋ ತುಣುಕೊಂದರಲ್ಲಿ ವಿವೇಕ್ ಅವರು ಎಲ್ಲಿ ಉತ್ತಮ ದನದ ಮಾಂಸ ಸಿಗುತ್ತದೆ ಎಂಬುದನ್ನು ಉಲ್ಲೇಖಿಸಿದ್ದೇನೆ, ನಾನು ಹಲವಾರು ವಿಷಯಗಳ ಬಗ್ಗೆ ಬರೆದಿದ್ದೇನೆ, ಮೊದಲು ನಾನು ಗೋಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ ನನ್ನ ಜೀವನದಲ್ಲಿ ಏನೂ ಬದಲಾವಣೆಯಾಗಿಲ್ಲ ಎಂದು ಹೇಳುತ್ತಿರುವುದು ಕಂಡುಬಂದಿದೆ.

ಅಗ್ನಿಹೋತ್ರಿಯನ್ನು ಟೀಕಿಸಿ ಕಾಮೆಂಟ್ ಮಾಡಿದ ರಣಬೀರ್ ಅಭಿಮಾನಿಗಳು
ರಣಬೀರ್ ಕಪೂರ್ ಅಭಿಮಾನಿಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು ವಿವೇಕ್ ಅಗ್ನಿಹೋತ್ರಿಯನ್ನು ಟೀಕಿಸಿ ಕಾಮೆಂಟ್‌ಗಳನ್ನು ಉಲ್ಲೇಖೀಸಿದ್ದಾರೆ. ವಿವೇಕ್ ಅಗ್ನಿಹೋತ್ರಿಯವರು ತಾವು ಗೋಮಾಂಸ ತಿನ್ನುತ್ತೇವೆ ಎಂದು ನೇರವಾಗಿ ಹೇಳಿರುವ ಈ ವಿಡಿಯೋವನ್ನು ಅವರು ಎಂದಿಗೂ ನಿಮಗೆ ತೋರಿಸುವುದಿಲ್ಲ ಏಕೆಂದರೆ ಅದು ಅವರ ವೈಯಕ್ತಿಕ ಆಯ್ಕೆಯಾಗಿದೆ. ಆದರೆ ಇದು ಅವರ ನಿರೂಪಣೆ ಹಾಗೂ ಉದ್ದೇಶಕ್ಕೆ ಹೊಂದಿಕೆಯಾಗುವುದಿಲ್ಲ. ಆದರೆ ನೀವು ಅವರಿಂದ ದೂರವಿರಿ ಮತ್ತು ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿರಿ ಹಾಗೂ #ಬ್ರಹ್ಮಾಸ್ತ್ರ ಚಿತ್ರವನ್ನು ಆನಂದಿಸಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sai Pallavi in Pushpa 2: ಅಲ್ಲು ಜೊತೆ ಆ್ಯಕ್ಟ್ ಮಾಡ್ತಾರಾ ಸಾಯಿ ಪಲ್ಲವಿ? ಏನಿದು ಪುಷ್ಪ 2 ಬ್ರೇಕಿಂಗ್ ನ್ಯೂಸ್?

ಇದೇ ಕಾರಣಕ್ಕೆ ರಣಬೀರ್ ಹಾಗೂ ಆಲಿಯಾರನ್ನು ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ತಡೆದಿರುವುದನ್ನು ಉಲ್ಲೇಖಿಸಿ ಮತ್ತೊಬ್ಬ ನೆಟ್ಟಿಗರು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿವೇಕ್ ಅಗ್ನಿಹೋತ್ರಿ ಕಾಶ್ಮೀರ ಫೈಲ್ಸ್ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರೊಂದಿಗೆ ದೇವಾಲಯದ ಒಳಗೆ ನಿಂತಿರುವುದನ್ನು ಕಾಣಬಹುದು ಮತ್ತು ವಿವೇಕ್ ಅಗ್ನಿಹೋತ್ರಿ ಕೂಡ ಗೋಮಾಂಸ ತಿನ್ನುತ್ತಾರೆ ಹಾಗಿದ್ದರೆ ಆತನನ್ನು ಏಕೆ ದೇವಸ್ಥಾನ ಪ್ರವೇಶಿಸಲು ಅನುಮತಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಬ್ರಹ್ಮಾಸ್ತ್ರ ಚಿತ್ರದಲ್ಲಿ ಆಲಿಯಾ ಭಟ್, ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಪ್ರಮುಖ ಭೂಮಿಕೆಯಲ್ಲಿದ್ದು, ಅಯಾನ್ ಮುಖರ್ಜಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರವು ಸೆಪ್ಟೆಂಬರ್ 9 ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಹೀಗೆ ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಸ್ಟಾರ್ ಸ್ಟುಡಿಯೋಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.
Published by:Ashwini Prabhu
First published: