Viral Video: ಐಶ್ವರ್ಯಾ ರೈ ಅಂತೆಯೇ ಡ್ಯಾನ್ಸ್ ಮಾಡಿದ ವ್ಯಕ್ತಿ! ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ

ಇಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವಂತಹ ವೀಡಿಯೋ ಸ್ವಲ್ಪ ಡಿಫರೆಂಟ್ ಆಗಿದೆ ಎಂದು ಹೇಳಬಹುದು. ಏಕೆಂದರೆ ಈ ವೀಡಿಯೋದಲ್ಲಿ ಡ್ಯಾನ್ಸ್ ಮಾಡಿದ್ದು ಪಕ್ಕಾ ಡ್ಯಾನ್ಸರ್ ಮತ್ತು ಅವರು ಹಾಕಿಕೊಂಡಿರುವ ಸ್ಟೈಲಿಷ್ ಉಡುಗೆಗಳು ನಿಮ್ಮ ಗಮನವನ್ನು ಸೆಳೆಯದೆ ಇರದು. ಈಗ ವೈರಲ್ ಆಗಿರುವ ವೀಡಿಯೋದಲ್ಲಿ ನೃತ್ಯಗಾರರಾದ ಜೈನಿಲ್ ಮೆಹ್ತಾ ಅವರು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಗುರು ಚಿತ್ರದ ‘ಬರ್ಸೊ ರೆ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಜೈನಿಲ್ ಮೆಹ್ತಾ

ಜೈನಿಲ್ ಮೆಹ್ತಾ

  • Share this:
ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹೆಚ್ಚಾಗಿ ಹರಿದಾಡುವ ಡ್ಯಾನ್ಸ್ ವೀಡಿಯೋಗಳು (Dance Video) ಎಂದರೆ ಹುಡುಗಿಯರದ್ದೇ ಎಂದು ಅಂತ ಹೇಳಿದರೆ ತಪ್ಪಾಗುವುದಿಲ್ಲ, ಏಕೆಂದರೆ ನಾವು ಇತ್ತೀಚೆಗೆ ಗಗನಸಖಿಯೊಬ್ಬಳು ವಿಮಾನದಲ್ಲಿ (Flight) ಹಿಟ್ ಹಾಡಿಗೆ ಡ್ಯಾನ್ಸ್ ಮಾಡಿದ್ದ ಮತ್ತು ಇನ್ನೊಬ್ಬ ಮಹಿಳೆ ಸೀರೆಯುಟ್ಟು ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿದ್ದನ್ನು, ಹೀಗೆ ಅನೇಕ ಡ್ಯಾನ್ಸ್ ವೀಡಿಯೋಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಇನ್ನೂ ಕೆಲವರಂತೂ ತಮಗೆ ಇಷ್ಟ ಬಂದಾಗಲೆಲ್ಲಾ ಡ್ಯಾನ್ಸ್ ಮಾಡುತ್ತಲೇ ಇರುತ್ತಾರೆ, ಅವರಿಗೆ ಈ ಸ್ಥಳ ಆ ಸ್ಥಳ ಅಂತ ಯಾವುದೇ ಚಿಂತೆಯೇ ಇರುವುದಿಲ್ಲ ಎಂದು ಹೇಳಬಹುದು.

‘ಬರ್ಸೊ ರೆ’ ಹಾಡಿಗೆ ನೃತ್ಯ ಮಾಡಿದ ಯುವಕ
ಆದರೆ ಇಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವಂತಹ ವೀಡಿಯೋ ಸ್ವಲ್ಪ ಡಿಫರೆಂಟ್ ಆಗಿದೆ ಎಂದು ಹೇಳಬಹುದು. ಏಕೆಂದರೆ ಈ ವೀಡಿಯೋದಲ್ಲಿ ಡ್ಯಾನ್ಸ್ ಮಾಡಿದ್ದು ಪಕ್ಕಾ ಡ್ಯಾನ್ಸರ್ ಮತ್ತು ಅವರು ಹಾಕಿಕೊಂಡಿರುವ ಸ್ಟೈಲಿಷ್ ಉಡುಗೆಗಳು ನಿಮ್ಮ ಗಮನವನ್ನು ಸೆಳೆಯದೆ ಇರದು. ಈಗ ವೈರಲ್ ಆಗಿರುವ ವೀಡಿಯೋದಲ್ಲಿ ನೃತ್ಯಗಾರರಾದ ಜೈನಿಲ್ ಮೆಹ್ತಾ ಅವರು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಗುರು ಚಿತ್ರದ ‘ಬರ್ಸೊ ರೆ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಅವರು ಹಾಕಿದ ಸ್ಟೆಪ್ಸ್ ಮಾತ್ರ ತುಂಬಾನೇ ಅದ್ಭುತವಾಗಿವೆ ಮತ್ತು ಅಂತರ್ಜಾಲವು ಈ ವೀಡಿಯೋವನ್ನು ತುಂಬಾನೇ ಇಷ್ಟಪಡುತ್ತಿದೆ. ಈ ಬೇಸಿಗೆಯ ಸುಡುವ ತಾಪಮಾನದಿಂದ ನೀವು ಸ್ವಲ್ಪ ವಿಶ್ರಾಂತಿ ಬಯಸಿದರೆ ಮತ್ತು ನಿಮ್ಮ ದೇಹವನ್ನು ತಂಪಾಗಿಸಿಕೊಳ್ಳಬೇಕು ಎಂದು ನಿಮಗೆ ಅನ್ನಿಸಿದರೆ ಈ ವೀಡಿಯೋ ನಿಮಗೆ ಸ್ವಲ್ಪ ಸಮಾಧಾನವನ್ನು ನೀಡಬಹುದು.

ಸಿಕಾಪಟ್ಟೆ ವೈರಲ್ ಆದ ವಿಡಿಯೋ
ಅಂತದ್ದು ಏನಿದೆ ಈ ವೀಡಿಯೋದಲ್ಲಿ ಅಂತ ನೀವು ಆಶ್ಚರ್ಯಚಕಿತರಾಗಿದ್ದರೆ, ಈ ವೀಡಿಯೋವನ್ನು ನೀವು ನೋಡಲೆಬೇಕು. ಕಾರಂಜಿಗಳ ನಡುವೆ ಜೈನಿಲ್ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಈ ವೀಡಿಯೋವನ್ನು ಕಳೆದ ತಿಂಗಳು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಇದುವರೆಗೂ ಈ ವೀಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ:  Viral Video: ಹೆಂಡತಿಯರು ಕೊಟ್ಟ ಗಿಫ್ಟ್​ಗೆ ಗಂಡಂದಿರು ಫಿದಾ! ಸೂಪರ್ ಆಗಿತ್ತು ಸರ್ಪೈಸ್

ಈ ವೀಡಿಯೋಗೆ 23,000ಕ್ಕೂ ಹೆಚ್ಚು ಲೈಕ್ ಗಳು ಸಿಕ್ಕಿವೆ ಎಂದು ಹೇಳಬಹುದು. ಒಟ್ಟಿನಲ್ಲಿ ಈ ವೀಡಿಯೋ ತುಂಬಾನೇ ಹವಾ ಎಬ್ಬಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ವಿಡಿಯೋದಲ್ಲಿ ಏನಿದೆ?
ಈಗ ವೈರಲ್ ಆಗಿರುವ ವೀಡಿಯೋದಲ್ಲಿ, ಜೈನಿಲ್ ಅವರು ಸ್ಕರ್ಟ್ ಮತ್ತು ಕುರ್ತಾವನ್ನು ಧರಿಸಿ ಡಿಟ್ಟೋ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ರೀತಿಯಲ್ಲಿಯೇ ಹೆಜ್ಜೆ ಹಾಕಿದ್ದಾರೆ. ‘ಬರ್ಸೊ ರೇ’ ಹಾಡಿಗೆ ನಿರಾಯಾಸವಾಗಿ ನೃತ್ಯ ಮಾಡುತ್ತಿರುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು. ಅವರ ಅದ್ಭುತ ಪ್ರದರ್ಶನದಿಂದ ನೀವು ಸಂಪೂರ್ಣವಾಗಿ ದಿಗ್ಭ್ರಮೆಗೊಳ್ಳುತ್ತೀರಿ. ಬಹುಶಃ, ಮಾನ್ಸೂನ್ ಋತುವು ಇನ್ನೇನು ಬರುತ್ತದೆ ಎಂದು ಹೇಳುವಾಗ ಈ ಕ್ಷಣದಲ್ಲಿ ಸಂತೋಷಪಡಲು ಇದು ಪರಿಪೂರ್ಣವಾದ ಹಾಡು ಎಂದು ಹೇಳಬಹುದು.

ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದು ಹೀಗೆ
"ಬರ್ಸೊ ರೇ ಹಾಡಿನಲ್ಲಿ ಐಶ್ವರ್ಯ ಮಾಡಿದ ಡ್ಯಾನ್ಸ್ ನೋಡಿದ ನಾನು ಇದನ್ನು ಸ್ವಯಂಪ್ರೇರಿತವಾಗಿ ಕಲಿತುಕೊಂಡು ಮತ್ತು ಸ್ಪಷ್ಟವಾಗಿ ನಾನು ಈ ಹಾಡಿಗೆ ಡ್ಯಾನ್ಸ್ ಮಾಡಲು ಕಲಿತೆ. ಈ ಹಾಡು ಟಿಕ್ ಟಾಕ್ ನಲ್ಲಿ ಈಗ ಟ್ರೆಂಡಿಂಗ್ ಆಗಿದ್ದರೆ, ಇನ್‌ಸ್ಟಾಗ್ರಾಮ್ ರೀಲ್ಸ್ ಅಲ್ಲೂ ಸಹ ಇದು ಹವಾ ಸೃಷ್ಟಿಸಿದೆ" ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:  Norway Dance: ನಾರ್ವೆಯಲ್ಲಿ ಬಾಲಿವುಡ್ ಗಾನಾ! ಕಾಲಾ ಚಷ್ಮಾಗೆ ಸಖತ್ ಸ್ಟೆಪ್

ಇಂಟರ್ನೆಟ್ ನಲ್ಲಿ ಈ ವೀಡಿಯೋವನ್ನು ನೋಡಿದವರು ಜೈನಿಲ್ ಅವರ ಡ್ಯಾನ್ಸ್ ಸ್ಟೆಪ್ಸ್ ನೋಡಿ ಫುಲ್ ಫಿದಾ ಅಗಿದ್ದಂತೂ ನಿಜ. ಕಾಮೆಂಟ್ ವಿಭಾಗವು ಜೈನಿಲ್ ಬಗ್ಗೆ ಮೆಚ್ಚುಗೆಯಿಂದ ತುಂಬಿದೆ ಎಂದು ಹೇಳಬಹುದು. ‘ಬರ್ಸೊ ರೇ’ ಹಾಡು 2007 ರಲ್ಲಿ ಬಿಡುಗಡೆಯಾದ ‘ಗುರು’ ಚಿತ್ರದ ಒಂದು ಹಾಡು. ಈ ಹಾಡನ್ನು ಐಶ್ವರ್ಯ ರೈ ಬಚ್ಚನ್ ಅವರ ಮೇಲೆ ಚಿತ್ರೀಕರಿಸಲಾಗಿತ್ತು.
Published by:Ashwini Prabhu
First published: