Shivarajkumar: ಶಿವಣ್ಣನ ಹುಟ್ಟುಹಬ್ಬಕ್ಕೆ ಮಾನ್ಯತಾ ನಿವಾಸಿಗಳಿಂದ ಸರ್ಪ್ರೈಸ್ ಗಿಫ್ಟ್! ಸದಾ ನೆನಪಿನಲ್ಲಿರೋ ಉಡುಗೊರೆ ಇದು

ಶಿವಣ್ಣನ ಹುಟ್ಟುಹಬ್ಬವನ್ನು ಪ್ರತಿವರ್ಷ ಶಿವಸೈನ್ಯ (Shivasainya) ದಸರಾ ಉತ್ಸವದಂತೆ ಆಚರಿಸಿ ಎಂಜಾಯ್ (Enjoy) ಮಾಡುತ್ತಿದ್ದರು.  ಆದರೆ, ಈ ಸಲ ಈ ಸಂಭ್ರಮ ಶಿವಣ್ಣನ ಅಭಿಮಾನಿಗಳ ಅಂಗಳದಲ್ಲಿ ಕಾಣಿಸೋದಿಲ್ಲ. ಆದರು ಶಿವಣ್ಣನ 60ನೇ ಹುಟ್ಟುಹಬ್ಬಎಷ್ಟೇ ವರ್ಷಗಳು ಕಳೆದರು ಸದಾ ನೆನಪಿನಲ್ಲಿ ಉಳಿಯುವಂತ ಉಡು ಗೊರೆಯೊಂದು ಶಿವಣ್ಣನ ಮಡಿಲಿಗೆ ಸೇರಿದೆ.

ಶಿವರಾಜ್​ಕುಮಾರ್

ಶಿವರಾಜ್​ಕುಮಾರ್

  • Share this:
ನಾಳೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Hattrick Hero) 60ನೇ ವರ್ಷದ ಹುಟ್ಟುಹಬ್ಬ (Birthday) . ಅಪ್ಪು ಇಲ್ಲದಕಾರಣ ತಮ್ಮ ಜನ್ಮದಿನವನ್ನು ಸಂಭ್ರಮಿಸದಿರಲು ಶಿವಣ್ಣ (Shivanna) ನಿರ್ಧಾರ ಮಾಡಿದ್ದಾರೆ. ಆದರೆ ಶಿವಣ್ಣನ ಹುಟ್ಟು ಹಬ್ಬ ಆಚರಣೆ ಇಲ್ಲದಿದ್ದರೆ ಏನಂತೆ, ಟಗರು (Tagaru) ಶಿವನ 60 ನೇ ಹುಟ್ಟು ಹಬ್ಬ ಎಷ್ಟೇ ವರ್ಷಗಳು ಕಳೆದರು ಸದಾ ನೆನಪಿನಲ್ಲಿ ಉಳಿಯುವಂತ ಉಡುಗೊರೆ (Big Gift) ಯೊಂದು ಶಿವಣ್ಣನಿಗೆ ಸಿಕ್ಕಿದೆ. ಶಿವಣ್ಣನ ಹುಟ್ಟುಹಬ್ಬವನ್ನು ಪ್ರತಿವರ್ಷ ಶಿವಸೈನ್ಯ (Shivasainya) ದಸರಾ ಉತ್ಸವದಂತೆ ಆಚರಿಸಿ ಎಂಜಾಯ್ (Enjoy) ಮಾಡುತ್ತಿದ್ದರು.  ಆದರೆ, ಈ ಸಲ ಈ ಸಂಭ್ರಮ ಶಿವಣ್ಣನ ಅಭಿಮಾನಿಗಳ ಅಂಗಳದಲ್ಲಿ ಕಾಣಿಸೋದಿಲ್ಲ. ಆದರು ಶಿವಣ್ಣನ 60ನೇ ಹುಟ್ಟುಹಬ್ಬಎಷ್ಟೇ ವರ್ಷಗಳು ಕಳೆದರು ಸದಾ ನೆನಪಿನಲ್ಲಿ ಉಳಿಯುವಂತ ಉಡು ಗೊರೆಯೊಂದು ಶಿವಣ್ಣನ ಮಡಿಲಿಗೆ ಸೇರಿದೆ.

ಶಿವಣ್ಣನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮಾನ್ಯತ ನಿವಾಸಿಗಳು!

ಶಿವಣ್ಣನ 60ನೇ ವರ್ಷದ ಹುಟ್ಟುಹಬ್ಬ ಸದಾ ಕಾಲ ನೆನಪಿನಲ್ಲಿ ಉಳಿಯಬೇಕು ಎಂಬ ದೊಡ್ಡ ಕನಸ್ಸಿನಲ್ಲಿ, ಶಿವಣ್ಣ ವಾಸವಿರುವ ಮಾನ್ಯತಾ ರೆಸಿಡೆನ್ಸಿಯ ನಿವಾಸಿಗಳೆಲ್ಲ ಸೇರಿ ಶಿವಣ್ಣನ 60ನೇ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್ ಕೊಡುವುದಕ್ಕೂ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಕಳೆದ 15 ವರ್ಷಗಳಿಂದ ಶಿವಣ್ಣ ಹೆಬ್ಬಾಳ ಬಳಿಯಿರುವ ಮಾನ್ಯತಾ ಟೆಕ್ ಪಾರ್ಕ್​ನಲ್ಲಿ ವಾಸವಾಗಿದ್ದಾರೆ. ಮಾನ್ಯತಾ ರೆಸಿಡೆನ್ಸಿ ನಿವಾಸಿಗಳೆಲ್ಲ ಸೇರಿ  ಈಗ ಮಾನ್ಯತಾ ರೆಸಿಡೆನ್ಸಿ ಬಳಿ ಇರುವ ವೃತ್ತಕ್ಕೆ ಡಾ.ಶಿವರಾಜ್ ಕುಮಾರ್ ಹೆಸರಿಡಲು ನಿರ್ಧಾರ ಮಾಡಿದ್ದಾರೆ.

ವೃತ್ತಕ್ಕೆ  ಶಿವರಾಜ್​ಕುಮಾರ್​ ಹೆಸರಿಡಲು ನಿರ್ಧಾರ!

ಮಾನ್ಯತಾ ರೆಸಿಡೆನ್ಸಿಯಲ್ಲಿರುವ ಶಿವಣ್ಣನ ನಿವಾಸದ ಬಳಿ ಇರುವ ವೃತ್ತಕ್ಕೆ, ಶಿವಣ್ಣನ 60 ನೇ ಹುಟ್ಟುಹಬ್ಬದ ಪ್ರಯುಕ್ತ ಡಾ.ಶಿವರಾಜ್ ಕುಮಾರ್ ಎಂದು ಹೆಸರಿಡಲು ಮಾನ್ಯತಾ ನಿವಾಸಿಗಳು ರೆಡಿಯಾಗಿದ್ದಾರೆ. 2007 ರಿಂದ ಶಿವಣ್ಣ ಇಲ್ಲಿ ವಾಸವಿದ್ದು, ಇಲ್ಲಿನ ನಿವಾಸಿಗಳ ಜೊತೆ  ತುಂಬಾ ಆತ್ಮೀಯವಾಗಿ ಶಿವಣ್ಣ ಇದ್ದಾರೆ. ಅಲ್ಲದೆ ಶಿವಣ್ಣ ಮಾನ್ಯತಾ ರೆಸಿಡೆಸನ್ಸಿ ಅಸೋಸಿಯೇಷನ್  ಬೆಳವಣಿಗೆಗೆ ಸಹಕಾರ ನೀಡಿದ್ದು, ಶಿವಣ್ಣನ ಸರಳತೆಗೆ ಇಲ್ಲಿನ ನಿವಾಸಿಗಳು ಮನಸೋತಿ ದ್ದಾರೆ.

ಇದನ್ನೂ ಓದಿ: ವ್ಹಾ, ಸೂಪರ್​ ಹೀರೋ ಅವತಾರದಲ್ಲಿ ಶಿವಣ್ಣ! ಆ್ಯಕ್ಷನ್​ ಕಟ್​ ಹೇಳ್ತಿರೋದು 'ಅವನೇ ಶ್ರೀಮನ್ನಾರಾಯಣ'

ಶಿವಣ್ಣನ ನೋಡೋಕೆ ಅಂತಾನೇ ವಾಕಿಂಗ್​ ಮಾಡ್ತಾರಂತೆ!

"ಅಲ್ಲದೆ ಶಿವಣ್ಣ ನಮ್ಮ ಮಾನ್ಯತಾದಲ್ಲಿ ಇರೋದು ನಮಗೆಲ್ಲ ಹೆಮ್ಮೆಯ ವಿಚಾರ, ಪ್ರತಿದಿನ  ಬೆಳಗ್ಗೆ ಶಿವಣ್ಣ ಪಾರ್ಕ್ ನಲ್ಲಿ ವಾಕಿಂಗ್ ಮಾಡ್ತಾರೆ. ಶಿವಣ್ಣನ ನೋಡುವ ಸಲುವಾಗಿ ನಮ್ಮ ಮಾನ್ಯತಾ ರೆಸಿಡೆನ್ಸಿಯ ಎಷ್ಟೊ ಮಂದಿ ವಾಕಿಂಗ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಶಿವಣ್ಣ ಕೂಡ ತಾನು ಸ್ಟಾರ್ ಅನ್ನೊದ ಮರೆತು ನಮ್ಮ ಜೊತೆ ಸರಳವಾಗಿ ಇರ್ತಾರೆ. ಅಂತವರು ನಮ್ಮ ಜೊತೆ ಇರೋದು ನಮಗೆಲ್ಲ ಹೆಮ್ಮೆಯ ವಿಷಯ" ಎಂದು ಮಾನ್ಯತ ರೆಸಿಡೆನ್ಸಿ ಅಸೋಸಿಯೇಷನ್ ನ ಸದಸ್ಯೆ ಸವಿತಾ ನ್ಯೂಸ್ 18 ಕನ್ನಡಕ್ಕೆ ಜೊತೆ ಮಾತನಾಡಿದ್ದಾರೆ.

ಇದನ್ನೂ ಓದಿ: ಮುಂದುವರೆದ ಕಿಚ್ಚನ ಸಮಾಜಮುಖಿ ಕಾರ್ಯ, ಈ ಬಾರಿ ಮಾಡಿರೋ ಸಹಾಯ ನೋಡಿದ್ರೆ ನಿಮಗೂ ಸ್ಫೂರ್ತಿ ಬರುತ್ತೆ!

ಇನ್ನು ನಾಳೆ ಶಿವಣ್ಙ ಹುಟ್ಟುಹಬ್ಬದ ದಿನವೇ ವೃತ್ತಕ್ಕೆ ಶಿವಣ್ಣನ ಹೆಸರಿಡಲು ಎಲ್ಲಾ ತಯಾರಿ ನಡೆದಿದ್ದು, ನಾಳೆ ಬೆಳಗ್ಗೆ 9 ಗಂಟೆಗೆ ಶಿವಣ್ಣನ ಶ್ರೀಮುತ್ತು ನಿವಾಸದ ಬಳಿ ಇರುವ ವೃತ್ತದ ಬಳಿ  ಸರಳ ಕಾರ್ಯಕ್ರಮ ಮಾಡಿ ವೃತ್ತಕ್ಕೆ ಶಿವಣ್ಣನ ಹೆಸರನ್ನು ನಾಮಕರಣ ಮಾಡಲಾಗುತ್ತೆ. ವೃತ್ತದಲ್ಲಿ ಡಾ.ಶಿವರಾಜ್ ಕುಮಾರ್ ವೃತ್ತ ಎಂದು ನಾಮ ಫಲಕ ಹಾಕಲು ಮಾನ್ಯತಾ ರೆಸಿಡೆನ್ಸಿ ನಿವಾಸಿ ಗಳು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ.

ವರದಿ - ಸತೀಶ್​ ಎಂ.ಬಿ
Published by:Vasudeva M
First published: