Puneeth Rajkumar: ಆಕಾಶದಲ್ಲಿ ಮಿನುಗುವ ನಕ್ಷತ್ರಕ್ಕೆ ಅಪ್ಪು ಹೆಸರು; ‘ದಿ ಬಿಗ್ ಲಿಟ್ಲ್’ ಸಂಸ್ಥೆಯ ಕಾರ್ಯಕ್ಕೆ ವಿಕ್ರಮ್ ರವಿಚಂದ್ರನ್ ಸಾಥ್
Puneeth Rajkumar: ಆಕಾಶದಲ್ಲಿ ಮಿನುಗುವ ನಕ್ಷತ್ರಕ್ಕೆ ಅಪ್ಪು ಹೆಸರು; ‘ದಿ ಬಿಗ್ ಲಿಟ್ಲ್’ ಸಂಸ್ಥೆಯ ಕಾರ್ಯಕ್ಕೆ ವಿಕ್ರಮ್ ರವಿಚಂದ್ರನ್ ಸಾಥ್
ಪುನೀತ್ ರಾಜ್ಕುಮಾರ್ ಜನ್ಮದಿನ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಗಲಿ ವರ್ಷ ಕಳೆದ್ರು ಅಭಿಮಾನಿಗಳು ಅಪ್ಪುವನ್ನು ಮರೆತಿಲ್ಲ. ಇತ್ತೀಚಿಗಷ್ಟೇ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ರು. ನಕ್ಷತವೊಂದಕ್ಕೆ ಪುನೀತ್ ಹೆಸರಿಡಲಾಗಿದೆ.
ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆಕಾಶದಲ್ಲಿನ ನಕ್ಷತ್ರವೊಂದಕ್ಕೆ ಪುನೀತ್ ರಾಜ್ಕುಮಾರ್ ಹೆಸರನ್ನು ಇಡಲಾಗಿದೆ. ದಿ ಬಿಗ್ ಲಿಟ್ಲ್ ಸಂಸ್ಥೆಯ ಈ ಕಾರ್ಯವನ್ನು ತಿಳಿಸಲು ವಿಶೇಷ ವಿಡಿಯೋ ಹಂಚಿಕೊಳ್ಳಲಾಗಿದೆ.
ಪುನೀತ್ ರಾಜ್ಕುಮಾರ್ ಅವರಿಗೆ ನೀಡಿದ ವಿಶೇಷ ಗೌರವಕ್ಕೆ ವಿಕ್ರಮ್ ರವಿಚಂದ್ರನ್ (Vikram Ravichandran) ಸಾಥ್ ನೀಡಿದ್ದು, ತಮ್ಮ ಧ್ವನಿ ನೀಡಿದ್ದಾರೆ. ಅಪ್ಪು ಹೆಸರನ್ನು ಶಾಶ್ವತವಾಗಿಸುವ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ಆಗಸದಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿವೆ. ಅವುಗಳಲ್ಲಿ ಒಂದು ತಾರೆಗೆ ಅಧಿಕೃತವಾಗಿ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಹೆಸರು ರಿಜಿಸ್ಟರ್ ಮಾಡಿಸಿರುವ ಪ್ರಮಾಣಪತ್ರವನ್ನು ‘ದಿ ಬಿಗ್ ಲಿಟ್ಲ್’ ಸಂಸ್ಥೆ ಹಂಚಿಕೊಂಡಿದೆ.
ಧ್ವನಿ ನೀಡಿದ ವಿಕ್ರಮ್ ರವಿಚಂದ್ರನ್ ಅವರು ಈ ಬಗ್ಗೆ ಮಾತಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ತೊಡಗಿಸಿಕೊಳ್ಳಲು ನನಗೆ ತುಂಬಾ ಸಂತೋಷ ಆಗುತ್ತದೆ ಎಂದು ಹೇಳಿದ್ದಾರೆ.
ನಾನು ಚಿಕ್ಕ ವಯಸ್ಸಿನಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಸಿನಿಮಾದ ಆಚೆಗಿನ ಅವರ ಜೀವನ ನನಗೆ ಸ್ಫೂರ್ತಿ ಆಗಿದೆ. ಅವರಿಗಾಗಿ ಮಾಡುತ್ತಿರುವ ಈ ಒಳ್ಳೆಯ ಕೆಲಸದಲ್ಲಿ ನಾನು ಭಾಗಿ ಆಗಿರೋದು ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.
ದಿ ಬಿಗ್ ಲಿಟ್ಲ್ ಕಂಪನಿಯ ಸಂಸ್ಥಾಪಕಿ ಕಾವ್ಯ ಶಂಕರೇಗೌಡ ಅವರು ಈ ಕುರಿತು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ನಮ್ಮ ಕಂಪನಿ ಕೂಡ ಅವರಿಂದ ತುಂಬಾ ಕಲಿತಿದೆ ಎಂದು ಹೇಳಿದ್ರು.
ನಕ್ಷತ್ರಗಳು ನಮ್ಮ ಮಾರ್ಗದರ್ಶಿ ಶಕ್ತಿಯಾಗಿರುತ್ತವೆ. ಆ ಕಲ್ಪನೆಯಡಿ ನಾವು ಮಾಡಿರುವ ಕಾನ್ಸೆಪ್ಟ್ ಮೂಡಿಬಂದಿದೆ. ನಮ್ಮ ಆಪ್ತರು ನಿಧನರಾದಾಗ ನಕ್ಷತ್ರಗಳಾಗುತ್ತಾರೆ ಅಂತ ನಾವು ನಂಬಿದ್ದೇವೆ ಎಂದು ಹೇಳಿದ್ದಾರೆ.
ಅಪ್ಪು ನಮಗೆಲ್ಲ ಸ್ಟಾರ್ ಆಗಿದ್ದರು. ಅವರ ಹೆಸರಲ್ಲಿ ಒಂದು ನಕ್ಷತ್ರ ಇರಬೇಕೆಂದು ನಾವು ಬಯಸುತ್ತೇವೆ. ನಮ್ಮೆಲ್ಲರ ಅತ್ಯುತ್ತಮ ಸ್ಫೂರ್ತಿಯ ಶಕ್ತಿಗೆ ಇದು ನಮ್ಮ ಚಿಕ್ಕ ಕೊಡುಗೆ ಎಂದು ಕಾವ್ಯ ಶಂಕರೇಗೌಡ ಹೇಳಿದ್ದಾರೆ. ಒಟ್ಟಾರೆ ಈ ವಿಚಾರ ಅಪ್ಪು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
Published by:ಪಾವನ ಎಚ್ ಎಸ್
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ