ಕಿಚ್ಚ ಸುದೀಪ್ (Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದು, ಇದೇ ತಿಂಗಳ 28ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಇನ್ನು ವಿಕ್ರಾಂತ್ ರೋಣ ರಿಲೀಸ್ ವೇಳೆ ಕಿಚ್ಚನ ಫ್ಯಾನ್ಸ್ ಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ವಿಶೇಷ ಗೌರವ ಸೂಚಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ ಕಟೌಟ್ ಅರ್ಭಟ ಶುರುವಾಗೋ ಸೂಚನೆ ಸಿಕ್ಕಿದೆ. ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ವಿಕ್ರಾಂತ್ ರೋಣ ಕಟೌಟ್ ಗಳು ತಲೆ ಎತ್ತಲಿವೆ. ಇದರ ಜೊತೆಗೆ ನಗರದ ನಾಲ್ಕು ಚಿತ್ರಮಂದಿರಗಳಲ್ಲಿ ವಿಶೇಷವಾದ ಕಟೌಟ್ ಗಳು ರಾರಾಜಿಸಲಿವೆ.
ಸುದೀಪ್ ಕಟೌಟ್ ಜೊತೆ ಅಪ್ಪು ಕಟೌಟ್:
ಸದ್ಯ ಎಲ್ಲೇ ನೋಡಿದ್ರು ವಿಕ್ರಾಂತ್ ರೋಣ ಹವಾ ಜೋರಾಗಿದೆ. ಅಲ್ಲದ ಕಿಚ್ಚನ ಫ್ಯಾನ್ಸ್ ಗಳಲ್ಲಿ "VR" ಫೀವರ್ ಶುರುವಾಗಿದೆ. ಎಲ್ಲಿ ಕೇಳಿದ್ರು ವಿಕ್ರಾಂತ್ ರೋಣ ಹಾಡಿನ ಹಬ್ಬ ಜೋರಾಗಿದೆ. ಇದರ ನಡುವೆ ವಿಕ್ರಾಂತ್ ರೋಣನನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿರೋ ಕಿಚ್ಚನ ಅಭಿಮಾನಿಗಳು ವಿಕ್ರಾಂತ್ ರೋಣ ಚಿತ್ರದ ರಿಲೀಸ್ ವೇಳೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಪ್ರೀತಿಯ ನಮನ ಸಲ್ಲಿಸಲು ತಯಾರಿ ಮಾಡಿಕೊಳ್ಳುದ್ದಾರೆ. ಅಪ್ಪು ಅಗಲಿಕೆ ನಂತರ ಯಾವುದೇ ಶುಭಕಾರ್ಯ ಇರಲಿ ಅಲ್ಲಿ ಪವರ್ ಸ್ಟಾರ್ ಗೆ ಪ್ರೀತಿಯ ಅಭಿಷೇಕ ಮತ್ತು ಪೂಜೆ ಎರಡನ್ನು ಸಲ್ಲಿಸಲಾಗುತ್ತಿದೆ.
ಈಗ ಅದೇ ರೀತಿ ಕಿಚ್ಚನ ಫ್ಯಾನ್ಸ್ ಗಳು ಅಭಿಮಾನಿಗಳ ಪ್ರೀತಿಯ ಅಪ್ಪುಗೆ ವಿಶೇಷ ಗೌರವ ನೀಡಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಕಿಚ್ಚನ ವಿಕ್ರಾಂತ್ ರೋಣ ಕಟೌಟ್ ಗಳು ರೆಡಿಯಾಗ್ತಿದ್ದು, ಈ ಕಟೌಟ್ ಗಳ ಜೊತೆ ವಿಕ್ರಾಂತ್ ರೋಣ ಕಟೌಟ್ ನಿಲ್ಲುವ ಕೆಲವು ಕಡೆ ಕಿಚ್ಚ ಹಾಗೂ ಅಪ್ಪು ಒಟ್ಟಿಗೆ ಇರೋ ಕಟೌಟ್ ನಿಲ್ಲಿಸೋಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ಗೆ ಕೊರೋನಾ ಪಾಸಿಟಿವ್? ಪೋಸ್ಟ್ಪೋನ್ ಆಗುತ್ತಾ ‘ವಿಕ್ರಾಂತ್ ರೋಣ‘ ರಿಲೀಸ್ ಡೇಟ್?
ವಿಶೇಷ ಫೋಟೋ ಆಗಲಿದೆ ಕಟೌಟ್:
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರನ್ನು ಖಾಸಗಿ ಕಾರ್ಯಕ್ರಮದ ವೇಳೆ ಪ್ರೀತಿಯಿಂದ ತಬ್ಬಿಕೊಂಡಿದ್ರು. ಇನ್ನು ಇವರಿಬ್ಬರ ಆ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಅದೇ ಪೋಟೊವನ್ನು ಕಟೌಟ್ ಮಾಡಿಸಿ ಬೆಂಗಳೂರಿನ 4 ಚಿತ್ರಮಂದಿರಗಳಲ್ಲಿ ಅಪ್ಪು ಕಿಚ್ಚನ ಕಟೌಟ್ ನಿಲ್ಲಿಸಿ ಪವರ್ ಸ್ಟಾರ್ ಗೆ ವಿಶೇಷ ಗೌರವ ಸಲ್ಲಿಸೊಕೆ ಕಿಚ್ಚನ ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Vikrant Rona: ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ, NFT ಗೆ ಎಂಟ್ರಿ ಕೊಟ್ಟ ವಿಕ್ರಾಂತ್ ರೋಣ
ಅಪ್ಪು ಮತ್ತು ಕಿಚ್ಚನ ಸ್ನೇಹ:
ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಡುವೆ ಆತ್ಮೀಯವಾದ ಸ್ನೇಹವಿತ್ತು. ಅಲ್ಲದೆ ಸ್ನೇಹಿತನ ಕಳೆದು ಕೊಂಡಾಗ ಕಿಚ್ಚ ಬಿಕ್ಕಿ ಬಿಕ್ಕಿ ಅತ್ತಿದ್ರು. ಈಗ ಇವರಿಬ್ಬರ ಸ್ನೇಹಕ್ಕೆ ಹಾಗೂ ಅಭಿಮಾನಿಗಳ ಪಾಲಿಗೆ ದೇವರಾಗಿರುವ ಪ್ರೀತಿಯ ಅಪ್ಪುಗೆ ಕಿಚ್ಚ ಸುದೀಪ್ ಫ್ಯಾನ್ಸ್ ಗಳು ಇದೇ ತಿಂಗಳ 28ಕ್ಕೆ ವಿಶೇಷ ಗೌರವ ಕೊಡಲು ನಿರ್ಧಾರ ಮಾಡಿದ್ದಾರೆ. ಅಲ್ಲದೆ ಅಪ್ಪು ಕಿಚ್ಚನ ಒಂದು ಕಟೌಟ್ ಕರ್ನಾಟಕ ಮತ್ತು ತಮಿಳುನಾಡಿನ ಬಾರ್ಡರ್ ನಲ್ಲಿ ನಿಲ್ಲೋದು ಪಕ್ಕಾ ಆಗಿದ್ದು, ಈ ವಿಚಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಅಂಗಳದಲ್ಲಿ ಸಂತದವನ್ನುಂಟು ಮಾಡಿದೆ.
ವರದಿ: ಸತೀಶ್ ಎಂಬಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ