• Home
  • »
  • News
  • »
  • entertainment
  • »
  • Puneeth Rajkumar: ಕರ್ನಾಟಕದಾದ್ಯಂತ ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ಗೌರವ

Puneeth Rajkumar: ಕರ್ನಾಟಕದಾದ್ಯಂತ ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ಗೌರವ

ಪುನೀತ್​ ರಾಜ್​ಕುಮಾರ್​​

ಪುನೀತ್​ ರಾಜ್​ಕುಮಾರ್​​

ಎಲ್ಲರೂ ಅಕ್ಟೋಬರ್ 22 ಮತ್ತು 23 ರಂದು ನಡೆಯಲಿರುವ ಆಹಾರ ಉತ್ಸವವಾದ ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಮೂಲಕ ದಿವಂಗತ ನಟನ ಆಹಾರದ ಮೇಲಿನ ಪ್ರೀತಿಯನ್ನು ಆಚರಿಸಲು ಕರ್ನಾಟಕದಾದ್ಯಂತದ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಸಿದ್ಧರಾಗುತ್ತಿದ್ದಾರೆ.

  • Trending Desk
  • Last Updated :
  • Bangalore Rural, India
  • Share this:

ಪವರ್ ಸ್ಟಾರ್ (Power star) ಅಂತಾನೆ ಖ್ಯಾತಿ (Reputation)ಪಡೆದಿದ್ದ ದಿವಂಗತ ನಟ ಪುನೀತ್ ರಾಜ್ ಕುಮಾರ್ (Late Actor Puneeth Rajkumar) ಅವರು ನಮ್ಮೆಲ್ಲರನ್ನು ಅಗಲಿದರೂ ಸಹ ನಮ್ಮೆಲ್ಲರ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ (Alive) ಅಂತ ಹೇಳಿದರೆ ತಪ್ಪಾಗುವುದಿಲ್ಲ.ಈಗ ಬೆಂಗಳೂರಿನ ಫೈವ್ ಸ್ಟಾರ್ ಹೊಟೇಲ್ ಗಳಿಂದ (5 Star Hotel) ಹಿಡಿದು ಬೀದಿಬದಿ ಆಹಾರ ತಯಾರಿಸುವ ವ್ಯಾಪಾರಿಗಳವರೆಗೆ (A Street Food Vendor) ಎಲ್ಲರೂ ಅಕ್ಟೋಬರ್ 22 ಮತ್ತು 23 ರಂದು ನಡೆಯಲಿರುವ ಆಹಾರ ಉತ್ಸವವಾದ ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಮೂಲಕ ದಿವಂಗತ ನಟನ ಆಹಾರದ ಮೇಲಿನ ಪ್ರೀತಿಯನ್ನು ಆಚರಿಸಲು ಕರ್ನಾಟಕದಾದ್ಯಂತದ (All Over Karnataka) ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಸಿದ್ಧರಾಗುತ್ತಿದ್ದಾರೆ. (Fans are getting ready)


ಸಾಂದರ್ಭಿಕ ಚಿತ್ರ


ಬಿಡುಗಡೆ ಆಗಲಿದೆ ಗಂಧದ ಗುಡಿ


ಹೌದು, ಅಪ್ಪು ಕೊನೆಯ ಬಾರಿಗೆ ಅಭಿನಯಿಸಿದ ʼಗಂಧದ ಗುಡಿʼ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ದೊಡ್ಡ ಪರದೆಯಲ್ಲಿ ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ಕಣ್ತುಂಬಿಕೊಳ್ಳಲು ಭಾರದ ಮನಸ್ಸಿನಲ್ಲಿ ಅಭಿಮಾನಿಗಳು ಸಂಭ್ರಮದಿಂದ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.


ಅಪ್ಪು ಕನಸಿನ ಕೂಸು 'ಗಂಧದ ಗುಡಿ' ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳು ಹೊಸ ಇತಿಹಾಸ ನಿರ್ಮಿಸಲು ಪಣ ತೊಟ್ಟಿದ್ದಾರೆ. ಯಾರು ಕಂಡು ಕೇಳರಿಯದಂತೆ ಚಿತ್ರದ ಪ್ರಚಾರ ಆರಂಭವಾಗಿದೆ.


ಮೊನ್ನೆ ತಾನೇ ಗಂಧದ ಗುಡಿ ಬೈಕ್‌ ರ್ಯಾಲಿ ಚಾಲನೆಗೊಂಡಿದೆ. ಇನ್ನೂ ವಿಶೇಷವಾಗಿ ಭೋಜನ ಪ್ರಿಯ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಕರ್ನಾಟಕದಾದ್ಯಂತ ವಿನೂತನ ಪ್ರಚಾರ ಮಾಡಲು ಸಜ್ಜಾಗಿದ್ದು, ಅಪ್ಪು ಹೆಸರಲ್ಲಿ ಫುಡ್‌ಫೆಸ್ಟಿವಲ್ ನಡೆಯಲಿದೆ.


ಏನಿದು ‘ಫ್ಲೇವರ್ಸ್ ಆಫ್ ಗಂಧದ ಗುಡಿ’?


ಈ ಕಾರ್ಯಕ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿರುವ ತಂಡದ ಸದಸ್ಯರೊಬ್ಬರು "ಕರ್ನಾಟಕವು ಎಷ್ಟು ಸುಂದರವಾಗಿದೆ ಎಂಬುದನ್ನು ತೋರಿಸುವ ದೃಷ್ಟಿಕೋನದಿಂದ ಗಂಧದ ಗುಡಿ ಚಿತ್ರವನ್ನು ತಯಾರಿಸಲಾಗಿದೆ.


A special tribute to Puneeth Raj kumar, a food lover across Karnataka
ಪುನೀತ್ ರಾಜ್‌ಕುಮಾರ್


ಈ ಚಿತ್ರ ಹೊರಬಂದ ನಂತರ ಕರ್ನಾಟಕದ ಪ್ರವಾಸೋದ್ಯಮವು ಹೇಗೆ ಹೆಚ್ಚಾಗುತ್ತದೆ ಎಂಬುದರ ಬಗ್ಗೆ ಪುನೀತ್ ಯಾವಾಗಲೂ ಮಾತನಾಡುತ್ತಿದ್ದರು” ಎಂದು ಹೇಳಿದರು.


“ಅಪ್ಪು, ನಮಗೆಲ್ಲರಿಗೂ ತಿಳಿದಿರುವಂತೆ, ಆಹಾರ ಪ್ರಿಯರಾಗಿದ್ದರು. ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಫೇಮಸ್ ಆಗಿರುವ ಪಾಕಪದ್ಧತಿಗಳು ಮತ್ತು ರುಚಿಕರವಾದ ತಿಂಡಿಗಳನ್ನು ಪ್ರದರ್ಶಿಸುವ ಬಗ್ಗೆ ಅವರಿಗಿದ್ದ ಆಸಕ್ತಿಯ ಬಗ್ಗೆ ಅವರು ಯಾವಾಗಲೂ ಹೇಳುತ್ತಿದ್ದರು. ವಿಭಿನ್ನ ರುಚಿಯ ಅಡುಗೆಗಳು ಕರ್ನಾಟಕವನ್ನು ಹೇಗೆ ವ್ಯಾಖ್ಯಾನಿಸುತ್ತವೆ ಎಂಬುದನ್ನು ತೋರಿಸಲು ಅವರು ಬಯಸಿದ್ದರು" ಎಂದು ಹೇಳಿದರು.


ಅಪ್ಪು ನೆಚ್ಚಿನ ಅಡುಗೆಗಳು


"ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ನಮ್ಮ ಆಹಾರವನ್ನು ಆಚರಿಸುವ ಪ್ರದರ್ಶನವನ್ನು ಪ್ರಾರಂಭಿಸಲು ಅವರು ಬಯಸಿದ್ದರು. ದುರದೃಷ್ಟವಶಾತ್, ಆ ಕನಸು ಈಡೇರಲಿಲ್ಲ. ಆದ್ದರಿಂದ, ನಾವು ಅದರ ಬಗ್ಗೆ ಏನನ್ನಾದರೂ ಮಾಡುವ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗ, ನಾವು ಅದರ ಬಗ್ಗೆ ಒಂದು ನಿರ್ಧಾರ ತೆಗೆದುಕೊಂಡೆವು. ನಾವು ಆಹಾರ ಉತ್ಸವವನ್ನು ಮಾಡಬಹುದು ಎಂದು ನಾವು ತೀರ್ಮಾನಿಸಿದೆವು. ಅದು ಮೂಲತಃ ಅಪ್ಪು ಅವರ ನೆಚ್ಚಿನ ಅಡುಗೆಗಳಿಂದ ತುಂಬಿದ ಮೆನು ಆಗಿರಬೇಕು" ಅಂತ ಅವರು ಹೇಳುತ್ತಾರೆ.


ಇದನ್ನೂಓದಿ:Actor Puneeth Rajkumar News in Kannada


ಈ ಆಹಾರ ಉತ್ಸವಕ್ಕೆ ಹೇಗೆ ತಯಾರಿ ಶುರು ಮಾಡಿದ್ದರು ನೋಡಿ..


"ಆದ್ದರಿಂದ, ಅಪ್ಪು ಅವರು ಭೇಟಿ ನೀಡಿದ, ಉದ್ಘಾಟನೆ ಮಾಡಿದ ಅಥವಾ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಸಿದ ರೆಸ್ಟೋರೆಂಟ್ ಗಳ ಪಟ್ಟಿಯನ್ನು ತಯಾರಿಸಲು ಪ್ರಾರಂಭಿಸಿದೆವು. ನಾವು ಜನರನ್ನು ಸಂಪರ್ಕಿಸಲು ಪ್ರಾರಂಭಿಸಿದಾಗ, ಆ ಸಂಖ್ಯೆಯನ್ನು ನೋಡಿ ನಮಗೆ ತುಂಬಾನೇ ಆಶ್ಚರ್ಯವಾಯಿತು. ಮೊ


ದಲಿಗೆ, ನಾವು ಅದನ್ನು ಬೆಂಗಳೂರಿಗೆ ಸೀಮಿತಗೊಳಿಸುವುದು ಅಂತ ನಾವು ಭಾವಿಸಿದ್ದೇವೆ. ಆದರೆ ನಂತರ ನಾವು ಅಪ್ಪು ಅವರ ಚಿತ್ರೀಕರಣದ ಸಮಯದಲ್ಲಿ ಕರ್ನಾಟಕದಾದ್ಯಂತ ಭೇಟಿ ನೀಡಿದ ರೆಸ್ಟೋರೆಂಟ್ ಗಳನ್ನು ಸಹ ಸಂಪರ್ಕಿಸಿದ್ದೇವೆ.


A special tribute to Puneeth Raj kumar, a food lover across Karnataka
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​


ಈ ಸುದ್ದಿ ಹರಡುತ್ತಿದ್ದಂತೆ, ಅಪ್ಪು ಅವರ ಆಹಾರದ ಬಗ್ಗೆ ಇರುವ ಅಭಿರುಚಿಯನ್ನು ಆಚರಿಸಲು ಪಂಚತಾರಾ ಹೋಟೆಲ್ ಮಾಲೀಕರಿಂದ ಹಿಡಿದು ಸಣ್ಣ ಬೀದಿ ವ್ಯಾಪಾರಿಗಳವರೆಗೆ ರಾಜ್ಯದಾದ್ಯಂತದ ಅಭಿಮಾನಿಗಳಿಂದ ನಮಗೆ ಕರೆಗಳು ಬರಲು ಪ್ರಾರಂಭಿಸಿದವು ಎಂದು ಹೇಳುತ್ತಾರೆ.


ಈಗ, ನಾವು ನೋಡಿದರೆ, ಅನೇಕ ಜನರು ತಮ್ಮ ರೆಸ್ಟೋರೆಂಟ್ ಗಳನ್ನು ಅಲಂಕರಿಸುತ್ತಿದ್ದಾರೆ, ಮೆನುಗಳನ್ನು ಕ್ಯುರೇಟ್ ಮಾಡುತ್ತಿದ್ದಾರೆ ಮತ್ತು ಈ ವಿಶೇಷ ಗೌರವವನ್ನು ತಾವೇ ಆಯೋಜಿಸುತ್ತಿದ್ದಾರೆ. ಪುನೀತ್ ಎಷ್ಟು ಜನರ ಮನವನ್ನು ಗೆದ್ದಿದ್ದಾರೆ ಮತ್ತು ಅವರು ಅವರೊಂದಿಗೆ ಹಂಚಿಕೊಂಡ ಅನನ್ಯ ಬಂಧವನ್ನು ಇದು ತೋರಿಸುತ್ತದೆ" ಎಂದು ಅವರು ಹೇಳುತ್ತಾರೆ.


ಇದನ್ನೂಓದಿ: Gandhada Gudi Trailer: ಅಪ್ಪು ನಿಮ್ಮನ್ನ ಗಂಧದ ಗುಡಿಗೆ ಕರೆದುಕೊಂಡು ಹೋಗ್ತಾರೆ ಬನ್ನಿ


ವಿ.ವಿ.ಪುರಂ ಚಾಟ್ ಸ್ಟ್ರೀಟ್ ಅಲಂಕರಿಸಲಾಗುತ್ತಿದೆ..


"ಇಡೀ ವಿ.ವಿ.ಪುರಂ ರಸ್ತೆಗಳು ಮತ್ತು ಚಾಟ್ ಸ್ಟ್ರೀಟ್ ನಲ್ಲಿರುವ ಎಲ್ಲಾ ಅಂಗಡಿಗಳನ್ನು ಗಂಧದ ಗುಡಿ ಉತ್ಸವಕ್ಕೆ ಅಲಂಕರಿಸಲಾಗುತ್ತಿದೆ. ಪುನೀತ್ ಅವರ ಅಭಿಮಾನಿಗಳು ನಿಜವಾಗಿಯೂ ಅವರ ಯೋಜನೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ” ಎಂದು ಅವರು ಹೇಳುತ್ತಾರೆ.


A special tribute to Puneeth Raj kumar, a food lover across Karnataka
ಗಂಧದ ಗುಡಿ ಹೊಸ ಪೋಸ್ಟರ್​


"ನಾವು ಆರಂಭದಲ್ಲಿ ಅಕ್ಟೋಬರ್ 22 ಮತ್ತು 23 ರಂದು ಕಾರ್ಯಕ್ರಮವನ್ನು ಯೋಜಿಸಿದ್ದೆವು. ಆದರೆ ಅಭಿಮಾನಿಗಳು ಈಗ ಅದನ್ನು ಇಡೀ ತಿಂಗಳು ಆಚರಿಸಲು ಬಯಸುತ್ತಿದ್ದಾರೆ. ಸಾಕಷ್ಟು ಕುಟುಂಬಗಳು ರೆಸ್ಟೋರೆಂಟ್ ಗಳಿಗೆ ಬರುತ್ತಿವೆ ಮತ್ತು ಪುನೀತ್ ಅವರ ನೆಚ್ಚಿನ ಪಾಕಪದ್ಧತಿಯನ್ನು ಕೇಳುತ್ತಿದ್ದಾರೆ ಮತ್ತು ಅದನ್ನು ಆರ್ಡರ್ ಮಾಡುತ್ತಿದ್ದಾರೆ. ಜನರು ಹೀಗೆ ಉತ್ತಮ ಆಹಾರವನ್ನು ಸವಿಯಲು ಪುನೀತ್ ಅವರು ಯಾವಾಗಲೂ ಬಯಸುತ್ತಿದ್ದರು" ಎಂದು ಅವರು ಹೇಳುತ್ತಾರೆ.

Published by:Mahmadrafik K
First published: