Puneeth Rajkumar: ಕೈ ಮುಗಿದು ಏರು ಇದು ಪರಮಾತ್ಮನ ತೇರು! ಈ ಆಟೋದಲ್ಲಿ ಬಂದ್ರೆ 50% ಡಿಸ್ಕೌಂಟ್

ಅಪ್ಪು ಚಿತ್ರ ನೋಡಿದಾಗಿನಿಂದ ಪುನೀತ್ ರಾಜ್‍ ಕುಮಾರ್ ಅಪ್ಪಟ ಆಭಿಮಾನಿಯಾಗಿರೋ ದೇವಾದಿತ್ಯ, ಅಪ್ಪು ಅಗಲಿಕೆ ನಂತರ ಅಪ್ಪುಗೆ ದೇವರ ಸ್ಥಾನ ಕೊಟ್ಟು ಪೂಜಿಸ್ತಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳು ಕೈಮುಗಿಯುವಂತ ಸೇವೆ ಮಾಡಿ, ಆ ಸೇವೆಯಲ್ಲಿ ಅಪ್ಪುನ ಕಾಣ್ತಿದ್ದಾರೆ.

ಪುನೀತ್ ಅಭಿಮಾನಿಯ ಸಮಾಜಸೇವೆ

ಪುನೀತ್ ಅಭಿಮಾನಿಯ ಸಮಾಜಸೇವೆ

  • Share this:
    ಬೆಂಗಳೂರು: ಅಭಿಮಾನ (admiration) ಅನ್ನೋದನ್ನ ವರ್ಣನೆ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ಅದರಲ್ಲೂ ಅಪ್ಪು (Appu) ಅಭಿಮಾನಿಗಳ (Fans) ಅಭಿಮಾನಕ್ಕೆ ಯಾರು ಬೆಲೆ ಕಟ್ಟೋಕೇ ಆಗಲ್ಲ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Power Star Puneeth Rajkumar) ನಮ್ಮನಗಲಿ "ಪರಮಾತ್ಮ" ನಾದ ಮೇಲೆ ಅವರ ಸಾಕಷ್ಟು ಅಭಿಮಾನಿಗಳು ಒಂದೊಳ್ಳೆ ಕೆಲಸ ಮಾಡೋ ಮೂಲಕ ಆ ಕೆಲಸದಲ್ಲಿ ಅಪ್ಪು ಅವ್ರನ್ನ ಕಾಣ್ತಿದ್ದಾರೆ.. ಅದೇ ರೀತಿ ಅಪ್ಪು ದೇವರಂತೆ ಪೂಜಿಸೋ ಆಟೋ ಡ್ರೈವರ್ (Auto Driver) ಒಬ್ಬ ಅಪ್ಪು ನೆನಪಲ್ಲಿ ವಿಭಿನ್ನವಾಗಿ ಸೇವೆ ಮಾಡುವ ಮೂಲಕ ಅಪ್ಪುನ ಅರಾಧಿಸುತ್ತಿದ್ದಾನೆ. ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ವ್ಯಕ್ತಿ ಅಲ್ಲ ಅದೊಂದು ಶಕ್ತಿ. ಕಲಾಸೇವೆಯ ಜೊತೆಗೆ ಯಾರಿಗೂ ತಿಳಿಯದಂತೆ ಸಮಾಜ ಸೇವೆ ಮಾಡಿ ಕಣ್ಮರೆಯಾಗಿರುವ ಅಪ್ಪು ಇಂದು ಅಭಿ ಮಾನಿಗಳ ಪಾಲಿಗೆ ಅಕ್ಷರಶಃ ದೇವರಾಗಿದ್ದಾರೆ.

    ಪವರ್ ಸ್ಟಾರ್ ನೆನಪಲ್ಲಿ ಸಮಾಜಸೇವೆ

    ಪವರ್ ಸ್ಟಾರ್ ನಮ್ಮನಗಲಿ ಒಂಬತ್ತು ತಿಂಗಳು ಕಳೆದಿದ್ರು ಅವರ ನೆನಪು ಮಾತ್ರ ಅವರನ್ನು ಪ್ರೀತಿಸೋ ಲಕ್ಷಾಂತರ ಹೃದಯಗಳಲ್ಲಿ ಇನ್ನೂ ಜೀವಂತವಾಗಿದೆ. ಅಲ್ಲದೆ ಅಪ್ಪುಸಮಾಜ ಸೇವೆಯನ್ನುಸ್ಪೂರ್ತಿಯಾಗಿ ತೆಗೆದುಕೊಂಡು ಲಕ್ಷಾಂತರ ಅಭಿಮಾನಿಗಳು ತಮ್ಮ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡುವ ಮೂಲಕ ಅಪ್ಪುನ ಇಂದಿಗೂ ಜೀವಂತವಾಗಿಟ್ಟುಕೊಂಡಿದ್ದಾರೆ.

    ಅಪ್ಪು ಚಿತ್ರ ನೋಡಿದಾಗಿನಿಂದ ಪುನೀತ್ ರಾಜ್‍ ಕುಮಾರ್ ಅಪ್ಪಟ ಆಭಿಮಾನಿಯಾಗಿರೋ ದೇವಾದಿತ್ಯ, ಅಪ್ಪು ಅಗಲಿಕೆ ನಂತರ ಅಪ್ಪುಗೆ ದೇವರ ಸ್ಥಾನ ಕೊಟ್ಟು ಪೂಜಿಸ್ತಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳು ಕೈಮುಗಿಯುವಂತ ಸೇವೆ ಮಾಡಿ, ಆ ಸೇವೆಯಲ್ಲಿ ಅಪ್ಪುನ ಕಾಣ್ತಿದ್ದಾರೆ.
    ಅಪ್ಪು ಅಬಿಮಾನಿ ದೇವಾದಿತ್ಯ


    ಉಳ್ಳವರು ಅಪ್ಪು ನೆನಪಲ್ಲಿ ದೊಡ್ಡ ಮಟ್ಟದಲ್ಲಿ ಜನ ಸೇವೆ ಮಾಡ್ತಿದ್ದಾರೆ.. ಇಂತವರ ನಡುವೆ ಕೆಲವು ಅಪ್ಪು ಅಭಿಮಾನಿಗಳು ತಾವು ಪ್ರತಿನಿತ್ಯ ದುಡಿಯುವ ದುಡಿಮೆಯಲ್ಲೂ ಪುಟ್ಟ ಭಾಗವನ್ನು  ಕಷ್ಟದಲ್ಲಿ ಇರೋರಿಗೆ ಹಂಚೋ ಮೂಲಕ ಅಪ್ಪು ಮೇಲಿನ ಅಭಿಮಾನ ಎಂತಾದು ಎಂದು ಸಾರಿ ಸಾರಿ ಹೇಳ್ತಿದ್ದಾರೆ.

    ಆಟೋ ಡ್ರೈವರ್‌ನ ಸಮಾಜಸೇವೆ

    ಈಗ ಅದೇ ರೀತಿ ತನ್ನ ತುತ್ತಿನ ಚೀಲ ತುಂಬಿಸೋ ಸಲುವಾಗಿ ಪ್ರತಿನಿತ್ಯ ಆಟೋ ಒಡಿಸುವ ಅಪ್ಪು ಅಭಿಮಾನಿಯೋರ್ವ ವಿಭಿನ್ನವಾಗಿ ತನ್ನ ಕೈಲಾದ ಮಟ್ಟಿಗೆ ಅಪ್ಪು ಹೆಸರಲ್ಲಿ ಜನಸೇವೆ ಮಾಡೊ ಮೂಲಕ ಅಪ್ಪುನ ನೋಡ್ತಿದ್ದಾನೆ... ಹೌದು. ದೇವಾಧಿತ್ಯ ಎಂಬ ಹಾಸನ ಮೂಲಕ ಅಪ್ಪು ಅಭಿಮಾನಿ ಜೀವನ ಸಾಗಿಸೋಕೆ ಬೆಂಗಳೂರಿನಲ್ಲಿ ಆಟೋ ಓಡಿಸ್ತಿದ್ದಾನೆ.

    ಇದನ್ನೂ ಓದಿ: Puneeth Rajkumar: ಪುನೀತ್ ಸ್ಮರಣಾರ್ಥ ಆ್ಯಂಬುಲೆನ್ಸ್ ನೀಡಿದ ಪ್ರಕಾಶ್​ ರಾಜ್​, ಅಪ್ಪು ಹಾಡಿ ಹೊಗಳಿದ ನಟ

    ಅಪ್ಪುಗೆ ದೇವರ ಸ್ಥಾನ

    ಅಪ್ಪು ಚಿತ್ರ ನೋಡಿದಾಗಿನಿಂದ ಪುನೀತ್ ರಾಜ್‍ ಕುಮಾರ್ ಅಪ್ಪಟ ಆಭಿಮಾನಿ ಯಾಗಿರೋ ದೇವಾದಿತ್ಯ,  ಅಪ್ಪು ಅಗಲಿಕೆ ನಂತರ ಅಪ್ಪುಗೆ ದೇವರ ಸ್ಥಾನ ಕೊಟ್ಟು ಪೂಜಿಸ್ತಿದ್ದಾನೆ. ಜೊತೆಗೆ ಅಪ್ಪು ಅಭಿಮಾನಿಗಳು ಕೈಮುಗಿಯುವಂತ ಸೇವೆ ಮಾಡುವ ಮೂಲಕ  ಆ ಸೇವೆಯಲ್ಲಿ ಅಪ್ಪುನ ಕಾಣ್ತಿದ್ದಾನೆ.

    ಆಟೋದಲ್ಲಿ 17% ಡಿಸ್ಕೌಂಟ್


     ಪ್ರತಿ ತಿಂಗಳು 17ರಂದು ಡಿಸೌಂಟ್ ಸೇವೆ

    ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ ಯಾಗಿರುವ ದೇವಾದಿತ್ಯ ಅಪ್ಪುನ ಕಳೆದುಕೊಂಡ ನಂತರ ಅವರ ಸೇವೆಯಿಂದ ಸ್ಪೂರ್ತಿ ಪಡೆದು, ಅಪ್ಪು ಅಭಿಮಾನದ ಅಂಗವಾಗಿ ಕಳೆದ ಮಾರ್ಚ್ 17 ಅಂದ್ರೆ ಅಪ್ಪುಹುಟ್ಟುಹಬ್ಬದಿಂದ ಇಲ್ಲಿಯವರೆಗೂ ಪ್ರತಿ ತಿಂಗಳು 17ನೇ ತಾರೀಖು ತನ್ನ ಆಟೋದಲ್ಲಿ ಪ್ರಯಾಣಿಸುವವರಿಗೆ ಆಟೋದರದಲ್ಲಿ 50% ರಿಯಾಯಿತಿ ಕೊಡುವ ಮೂಲಕ ಅಪ್ಪು ಹೆಸರಲ್ಲಿ ತನ್ನ‌ ಕೈಲಾದ ಮಟ್ಟಿದೆ ಸೇವೆ ಮಾಡ್ತಿದ್ದಾನೆ..

    ಅಪ್ಪು ನಿಧನದಿಂದ ಕುಗ್ಗಿಹೋಗಿದ್ದ ದೇವಾದಿತ್ಯ

    ಪುನೀತ್ ರಾಜ್‍ಕುಮಾರ್ ಅಗಲಿಕೆ ನಂತರ ಮಾನಸಿಕವಾಗಿ ಕುಗ್ಗಿಹೋಗಿದ್ದ ದೇವಾದಿತ್ಯ, ಅಪ್ಪು ಹೆಸರಲ್ಲಿ ಜನ ಸೇವೆ ಮಾಡುವ ಮೂಲಕ ಈಗ ಕೊಂಚ ಚೇತರಿಸಿಕೊಂಡಿದ್ದಾನೆ .. ತನ್ನ ಆಟೋ ಹಿಂದೆ ಮುಂದೆ ಅಪ್ಪು ಪೋಟೊ ಹಾಕಿಕೊಂಡು, ಜೊತೆಗೆ ಆಟೋ ಹಿಂದೆ ವರ್ಷದ ಎಲ್ಲಾ ತಿಂಗಳುಗಳು ಪ್ರತಿ 17ನೇ ತಾರೀಖು ಮೀಟರ್ ದರದಲ್ಲಿ 50% ಡಿಸ್ಕೌಂಟ್ ಅಪ್ಪು ಅಭಿಮಾನದ ಪ್ರಯುಕ್ತ ಎಂದು ಬರೆಸಿಕೊಂಡಿದ್ದಾನೆ..ಇನ್ನು ಇತನ ಸೇವೆ ನೋಡಿ ಅಪ್ಪು ಅಭಿಮಾನಿ ಗಳು ತುಂಭಾ ಪ್ರೀತಿಯಿಂದನೂ ಮಾತಾನಡಿಸ್ತಾರಂತೆ.

    ಇನ್ನು ಆ ವಿಚಾರವನ್ನು ದೇವಾದಿತ್ಯ ಕೊಂಚ ಭಾವುಕನಾಗಿಯೇ ನ್ಯೂಸ್ 18 ಕನ್ನಡ ಜೊತೆ ಹಂಚಿ ಕೊಂಡಿದ್ದಾರೆ. ಇನ್ನು ಅಪ್ಪು ಅವರಂತೆ ಯಾರಿಗೂ ಕಾಣದಂತೆ ಸೇವೆ ಮಾಡ್ತಿದ್ರು.. ಅದೇ ರೀತಿ ತನ್ನ ಪುಟ್ಟ ಕೆಲಸವನ್ನು ಮಾಡಲು ದೇವಾದಿತ್ಯ  ನಿರ್ಧರಿಸಿದ್ರಂತೆ.

    ಆದರೆ ದೇವಾದಿತ್ಯನ ಕೆಲಸ ನೋಡಿದವರು ಒಳ್ಳೆ ಕೆಲಸ ಮಾಡ್ತಿದ್ಯ ನಾಲ್ಕು ಜನಕ್ಕೆ ತಿಳಿಯಲಿ ಎಂದು  ಹೇಳಿದ ಮೇಲೆ  ತನ್ನ  ಅಭಿಮಾನದ ಕೆಲಸದ ಬಗ್ಗೆ ಅಟೋ ಮೇಲೆ ಬರೆಸಿದ್ದಾ‌ನೆ.. ಅಲ್ಲದೆ ತನ್ನ ಉಸಿರು ಇರೋ ತನಕ ಈ ಸೇವೆ ಮಾಡ್ತಿನಿ.. ಸದ್ಯ ನನ್ನ ಆಟೋ ಮೇಲೆ ಸಾಲ ಇದೆ.. ಅದು ತೀರಿದ ನಂತರ ನಾನು ಪ್ರತಿ ತಿಂಗಳ 17 ನೇ ತಾರೀಖು ಉಚಿತ ಮಾಡ್ತಿನಿ ಎಂದು ಹೇಳು ದೇವಾಧಿತ್ಯ.

    ಇದನ್ನೂ ಓದಿ:  Actress Ramya: ಹೊಂಬಾಳೆ ಫಿಲ್ಸ್ಮ್​ ಮೂಲಕ ರಮ್ಯಾ ಕಮ್​ ಬ್ಯಾಕ್, ಪುನೀತ್ ಆಸೆ ಈಡೇರಿಸುತ್ತಾ ಸಂಸ್ಥೆ​?

    ಅಪ್ಪು ಅವರನ್ನು ಪ್ರೀತಿಸುವ ಎಲ್ಲರೂ ಕಟೌಟ್ ನಿಲ್ಲಿಸಿ ಹೂ ಹಾರ ಹಾಕೋ ಬದಲು, ಬಡವರ ಮಕ್ಕಳಿಗೆ ಪೆನ್ನು ಪುಸ್ತಕ, ನೀಡಿ ಎಂದು ನ್ಯೂಸ್ 18 ಕನ್ನಡದ ಮೂಲಕ ಸಮಸ್ತ ಅಪ್ಪು ಅಭಿಮಾನಿಗಳಲ್ಲಿ  ಮನವಿ ಮಾಡಿದ್ದಾರೆ.

    (ವರದಿ: ಸತೀಶ್ ಕನಕಪುರ)
    Published by:Annappa Achari
    First published: