• Home
  • »
  • News
  • »
  • entertainment
  • »
  • Yash-Pepsi India: ಐ ಲವ್​ ಯೂ ಪೆಪ್ಸಿ ಎಂದ ರಾಕಿ ಭಾಯ್​; ಪ್ರಸಿದ್ಧ ಪಾನೀಯ ಕಂಪನಿಗೆ ಯಶ್ ರಾಯಭಾರಿ

Yash-Pepsi India: ಐ ಲವ್​ ಯೂ ಪೆಪ್ಸಿ ಎಂದ ರಾಕಿ ಭಾಯ್​; ಪ್ರಸಿದ್ಧ ಪಾನೀಯ ಕಂಪನಿಗೆ ಯಶ್ ರಾಯಭಾರಿ

ನಟ ಯಶ್​

ನಟ ಯಶ್​

ಯಶ್​ ಪೆಪ್ಸಿ ಇಂಡಿಯಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ (Actor Yash)​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಟಾಲಿವುಡ್​, ಬಾಲಿವುಡ್​ ಅಷ್ಟೇ ಅಲ್ಲದೇ ವಿದೇಶದಲ್ಲೂ ಕೂಡ ರಾಕಿ ಭಾಯ್ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಕಿಂಗ್​ ಸ್ಟಾರ್ (Rocking Star) ಮುಂದಿನ ಸಿನಿಮಾಗಾಗಿ ಇಡೀ ಚಿತ್ರರಂಗವೇ ಎದುರು ನೋಡ್ತಿದೆ. ಯಶ್​ಗೆ ಸಾಲು ಸಾಲು ಸಿನಿಮಾ ಆಫರ್​ಗಳ (Movie Offers) ಕೂಡ ಬರ್ತಿದೆ. ಜೊತೆಗೆ ಹೊಸ ಹೊಸ ಜಾಹೀರಾತಿನ ಆಫರ್​ಗಳು ಕೈ ಬೀಸಿ ಕರೆಯುತ್ತಿದೆ. ಈಗಾಗಲೇ ಅವ್ರು ಅನೇಕ ಬ್ರ್ಯಾಂಡ್​ಗಳಿಗೆ ಅಂಬಾಸಿಡರ್ ಕೂಡ ಆಗಿದ್ದಾರೆ. ಇದೀಗ ನಟ ಯಶ್​ ಪ್ರಸಿದ್ಧ ಬ್ರ್ಯಾಂಡ್ ಪೆಪ್ಸಿ ಇಂಡಿಯಾ (Pepsi India) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. 


ಯಶ್ ಇದೀಗ ಪೆಪ್ಸಿ ಬ್ರ್ಯಾಂಡ್​ನ ರಾಯಭಾರಿ


ಕೆಜಿಎಫ್​ 2 ಸಿನಿಮಾ ಬಳಿಕ ನಟ ಯಶ್​ ಲೆವೆಲ್ ಬದಲಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್​, ಇನ್ನೂ ತಮ್ಮ ಮುಂದಿನ ಸಿನಿಮಾ ಬಗ್ಗೆ ಘೋಷಣೆ ಮಾಡಿಲ್ಲ. ಅಭಿಮಾನಿಗಳು ಮತ್ತೆ ತೆರೆ ಮೇಲೆ ರಾಕಿ ಭಾಯ್ ನೋಡಲು ಕಾಯುತ್ತಿದ್ದಾರೆ. ಯಶ್​ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇದೀಗ ಯಶ್​, ಪೆಪ್ಸಿ ಕಂಪನಿಯ ಪ್ರಚಾರ ರಾಯಭಾರಿ ಆಗಿದ್ದಾರೆ.


I am fighter I did not mind if I die in fighting Actor Yash said see why


ಪೆಪ್ಸಿ, ಐ ಲವ್​ ಯೂ ಎಂದ ಯಶ್​


ಯಶ್​ ಪೆಪ್ಸಿ ಇಂಡಿಯಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ.  ಪೆಪ್ಸಿ ಕುಡಿಯುತ್ತಿರುವ ವಿಡಿಯೋ ಹಂಚಿಕೊಂಡಿರುವ ಯಶ್​, ‘ಅಭಿನಂದನೆಗಳು ಪೆಪ್ಸಿ. ಐ ಲವ್​ ಯೂ’ ಎಂದು ಹೇಳಿದ್ದಾರೆ. ಇದೀಗ ಯಶ್​ ವಿಡಿಯೋ ಸಖತ್ ವೈರಲ್ ಆಗಿದೆ.ಪಾನ್ ಮಸಾಲ ಸೇವನೆ ಜಾಹೀರಾತಿನ ಆಫರ್ ರಿಜೆಕ್ಟ್​


ಪತ್ನಿ ರಾಧಿಕಾ ಜೊತೆ ಯಶ್​ ಕೆಲ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದು, ಅನೇಕ ಜಾಹೀರಾತಿನ ಆಫರ್​ ಕೂಡ ಬಂದಿದೆ. ಯಶ್​ಗೆ ಈ ಮೊದಲು ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲು ಆಫರ್ ಬಂದಿತ್ತು ಎನ್ನಲಾಗಿದೆ. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು. ಪಾನ್ ಮಸಾಲ ಸೇವನೆ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ಯಶ್ ಅವರು ಇದನ್ನು ಪ್ರೋತ್ಸಾಹಿಸಿರಲಿಲ್ಲ ಎಂದು ಹೇಳಲಾಗ್ತಿದೆ.


kgf chapter 2 star yash selected as brand ambassador for pepsi india
ನಟ ಯಶ್​


ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್!


2018 ಡಿಸೆಂಬರ್ನಲ್ಲಿ ತೆರೆಕಂಡ ಯಶ್ಚಿತ್ರ, ಕೆಜಿಎಫ್ಸಿನಿಮಾ ಬಾಲಿವುಡ್, ಟಾಲಿವುಡ್ನಲ್ಲೂ ಕಮಾಲ್ಮಾಡಿತು. ಬಾಲಿವುಡ್ಮಂದಿ ಕೂಡ ಕನ್ನಡದ ರಾಕಿ ಭಾಯ್ಗೆ ಜೈ ಎಂದ್ರು. ರಿಲೀಸ್ ಆದ 5 ದಿನದಲ್ಲಿ ಕೆಜಿಎಫ್​ 100 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತು. ಸ್ಯಾಂಡಲ್ವುಡ್ಮಾತ್ರವಲ್ಲ ಬಾಲಿವುಡ್ಬಾಕ್ಸ್ಆಫೀಸ್ ಕೊಳ್ಳೆ ಹೊಡೆಯಿತು.


ಪ್ಯಾನ್ಇಂಡಿಯಾ ಸ್ಟಾರ್ ಯಶ್


ಏಪ್ರಿಲ್ 14ರಂದು 2022ರಲ್ಲಿ ತೆರೆಕಂಡ ಕೆಜಿಎಫ್​ 2 ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದ್ದು, ಅನೇಕ ಸಿನಿಮಾಗಳ ದಾಖಲೆಯನ್ನು ಉಡೀಸ್ಮಾಡಿದೆ. 1400 ಕೋಟಿ ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿತು. ಕೆಜಿಎಫ್ ಸಿನಿಮಾ ಮೂಲಕ ಯಶ್ಪ್ಯಾನ್ಇಂಡಿಯಾ ಸ್ಟಾರ್ ಆದ್ರು.
ಇದನ್ನೂ ಓದಿ: Katrina Kaif: ಗುಡ್ ನ್ಯೂಸ್ ಹಂಚಿಕೊಂಡ ಕತ್ರಿನಾ ಕೈಫ್; ಅಭಿಮಾನಿಗಳಿಂದ ಅಭಿನಂದನೆಯ ಸುರಿಮಳೆ!


ಇದೀಗ ಯಶ್ ಮುಂದಿನ ಚಿತ್ರಕ್ಕಾಗಿ ಇಡೀ ದೇಶವೇ ಕಾಯುತ್ತಿದೆ.ಯಶ್ 19ನೇ ಸಿನಿಮಾ ಬಗ್ಗೆ ಫ್ಯಾನ್ಸ್​ಗೆ ಈ ಮೊದಲಿನಿಂದಲೂ ಕುತೂಹಲ ಇದೆ.  ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಯಶ್ ಮುಂದಿನ ಚಿತ್ರವನ್ನು ‘ಕೆವಿಎನ್​ ಪ್ರೊಡಕ್ಷನ್ಸ್​​’ ನಿರ್ಮಾಣ ಮಾಡಲಿದೆ ಎಂಬ ಮಾತು ಕೇಳಿ ಬಂದಿದೆ.

Published by:ಪಾವನ ಎಚ್ ಎಸ್
First published: