ತಮಿಳುನಾಡು: ಭಾರತೀಯ ಚಿತ್ರರಂಗದ (Indian film industry) ಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್ (superstar Rajinikanth) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? 72 ವರ್ಷ ವಯಸ್ಸಿನ ರಜನಿಕಾಂತ್ ಹೊಸ ಸಿನಿಮಾ ನೋಡುವುದಕ್ಕಾಗಿ ದೇಶಾದ್ಯಂತ ಅಭಿಮಾನಿಗಳು (Fans) ಕಾಯುತ್ತಿದ್ದಾರೆ. ಇತ್ತ ಸೂಪರ್ ಸ್ಟಾರ್ ರಜನಿಕಾಂತ್ ಮಂಗಳೂರಿನಲ್ಲಿ (Mangaluru) ‘ಜೈಲರ್’ ಸಿನಿಮಾ ಶೂಟಿಂಗ್‌ನಲ್ಲಿ (Jailor Movie Shooting) ಬ್ಯುಸಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್‌ಕುಮಾರ್ (Shiva Rajkumar) ಕೂಡ ರಜನಿಕಾಂತ್ ಜೊತೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಹೊತ್ತಲ್ಲೇ ರಜನಿಕಾಂತ್‌ಗೆ ಸಂಬಂಧಿಸಿದಂತೆ ಹೊಸ ಬ್ರೇಕಿಂಗ್ ನ್ಯೂಸ್ (Braking News) ಒಂದು ಬಂದಿದೆ!
ರಜನಿಕಾಂತ್ ಸ್ಟೈಲ್, ಮ್ಯಾನರಿಸಂ, ಡೈಲಾಗ್‌ಗೆ ಫಿದಾ ಆಗದವರ್ಯಾರು?
ರಜನಿಕಾಂತ್ ಅಂದ್ರೆನೇ ಸ್ಟೈಲ್ಗೆ ಮತ್ತೊಂದು ಹೆಸರು. ಹೀಗಾಗಿಯೇ ಅವರನ್ನು ಸ್ಟೈಲ್ ಕಿಂಗ್ ಅಂತಾನೇ ಕರೆಯುತ್ತಾರೆ. ಅವರ ಶೈಲಿ, ಆಂಗಿಕ ಅಭಿನಯ, ವಿಶೇಷ ಮ್ಯಾನರಿಸಂ, ಡೈಲಾಗ್ ಹೇಳುವ ಸ್ಟೈಲ್ಗೆ ಅಭಿಮಾನಿಗಳು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆಯುತ್ತಾರೆ. ಎಷ್ಟೋ ಜನ ಅವರಂತೆ ಅನುಕರಿಸುತ್ತಾರೆ. ಹಾಗಾದ್ರೆ ಇನ್ನು ಮುಂದೆ ಅವರ ಫೋಟೋ ಬಳಸುವಂತಿಲ್ಲ, ಧ್ವನಿ ಅನುಕರಿಸುವಂತಿಲ್ಲ! ಒಂದು ವೇಳೆ ಹಾಗೆ ಮಾಡಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹುಷಾರ್!
ಕಾನೂನು ಸಮರ ಸಾರಿದ ರಜನಿಕಾಂತ್
ಕಳೆದ ಹಲವು ವರ್ಷಗಳಲ್ಲಿ ರಜನಿಕಾಂತ್ ಅವರ ವಿಶಿಷ್ಟ ಸ್ಟೈಲ್, ಅವರ ವಿಶಿಷ್ಟ ವಾಯ್ಸ್‌ಗಳ್ನನ್ನು ಹಲವು ವ್ಯಾಪಾರಿ ಸಂಸ್ಥೆಗಳು ತಮ್ಮ ಬ್ರ್ಯಾಂಡ್, ವಸ್ತುಗಳನ್ನು ಪ್ರಚಾರ ಮಾಡಲು ವ್ಯಾಪಕವಾಗಿ ಬಳಸಿಕೊಂಡಿವೆ. ಕೆಲವರು ರಜನಿಕಾಂತ್ ಅನುಮತಿ ಪಡೆದಿದ್ದರೆ, ಹಲವರು ಅವರನ್ನು ಮಾತನಾಡಿಸುವ ಸೌಜನ್ಯವನ್ನೂ ತೋರಿಸಿರಲಿಲ್ಲ. ಇದೀಗ ಇವುಗಳ ವಿರುದ್ಧ ತಲೈವಾ ಕಾನೂನು ಸಮರ ಸಾರಿದ್ದಾರೆ.
ಇದನ್ನೂ ಓದಿ: Narendra Modi-C Voter: ಈಗ ಚುನಾವಣೆ ನಡೆದ್ರೆ ಮೋದಿಯೇ ಪ್ರಧಾನಿ! ಸಿ ವೋಟರ್ ಸಮೀಕ್ಷೆ ಹೇಳಿದ್ದೇನು?
ರಜನಿಕಾಂತ್ ಫೋಟೋ, ಧ್ವನಿಯನ್ನು ಬಳಸಿಕೊಳ್ಳುವಂತಿಲ್ಲ
ಹೌದು, ಇನ್ನು ಮುಂದೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಫೋಟೋ, ಧ್ವನಿ ಅಥವಾ ಅವರ ಸ್ಟೈಲ್‌ಗಳನ್ನು ಅವರ ಅನುಮತಿ ಪಡೆಯದೇ ಯಾವುದೇ ಉತ್ಪನ್ನದ ಜಾಹೀರಾತು ಅಥವಾ ವಾಣಿಜ್ಯಾತ್ಮಕವಾಗಿ ಬಳಸಿಕೊಳ್ಳುವಂತೆ ಇಲ್ಲ.
ಕಠಿಣ ಕಾನೂನು ಕ್ರಮದ ಎಚ್ಚರಿಕೆ
ರಜನಿಕಾಂತ್ ಅವರ ವಕೀಲ ಸುಬ್ಬಯ್ಯ ಎಳಂಭರತಿ ಅವರ ಸಹಿ ಇರುವ ಪತ್ರದಲ್ಲಿ ಕಾನೂನು ಕ್ರಮದ ಸೂಚನೆ ನೀಡಲಾಗಿದೆ. ಯಾವುದೇ ಬ್ರ್ಯಾಂಡ್‌ಗಳು ತಮ್ಮ ಲಾಭಕ್ಕಾಗಿ ಒಪ್ಪಿಗೆಯಿಲ್ಲದೆ ಸೂಪರ್‌ಸ್ಟಾರ್ ರಜನಿಕಾಂತ್ ಗುರುತನ್ನು ಬಳಸಿಕೊಂಡ ಎಚ್ಚರಿಕೆಯನ್ನು ಪಡೆದಿವೆ. 'ಯಾರಾದರೂ ಅವರ ವ್ಯಕ್ತಿತ್ವ/ಪ್ರಚಾರ/ಸೆಲೆಬ್ರಿಟಿ ಹಕ್ಕುಗಳನ್ನು ಉಲ್ಲಂಘಿಸಿದರೆ' ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪತ್ರದಲ್ಲಿ ರಜನಿಕಾಂತ್ "ತಮ್ಮ ವ್ಯಕ್ತಿತ್ವ, ಹೆಸರು, ಧ್ವನಿ, ಚಿತ್ರ, ಹೋಲಿಕೆ ಮತ್ತು ಇತರ ಗುಣಲಕ್ಷಣಗಳ ವಾಣಿಜ್ಯ ಬಳಕೆಯ ಮೇಲೆ ನಿಯಂತ್ರಣ ಹೊಂದಿರುವ ಏಕೈಕ ವ್ಯಕ್ತಿ" ಎಂದು ಹೇಳುತ್ತದೆ.
ವಕೀಲರು ನೀಡಿರುವ ನೋಟಿಸ್‌ನಲ್ಲಿ ಏನಿದೆ?
"ರಜನಿಕಾಂತ್ ಅವರ ಹೆಸರು, ಧ್ವನಿ, ಚಿತ್ರ ಮತ್ತು ರಜನಿಕಾಂತ್ ಅವರೊಂದಿಗೆ ಅನನ್ಯವಾಗಿ ಸಂಬಂಧಿಸಿರುವ ಯಾವುದೇ ವಿಶಿಷ್ಟ ಅಂಶಗಳಿಗೆ ಸೀಮಿತವಾಗಿಲ್ಲ" ಇದರರ್ಥ ಯಾವುದೇ ಮಿಮಿಕ್ರಿ ಅಥವಾ ಅನುಕರಣೆಯನ್ನು ಸಹ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ತನ್ನ ಗುರುತನ್ನು ಉಲ್ಲಂಘಿಸುವ ಯಾರೊಬ್ಬರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಅವರ ಖ್ಯಾತಿ ಅಥವಾ ವ್ಯಕ್ತಿತ್ವಕ್ಕೆ ಯಾವುದೇ ಹಾನಿ ಅಥವಾ ಉಲ್ಲಂಘನೆಯು ನಮ್ಮ ಕಕ್ಷಿದಾರರಿಗೆ ಅನೇಕ ಕ್ಷೇತ್ರಗಳಲ್ಲಿ ಅದರ ಪರಿಣಾಮವನ್ನು ಬೀರುವ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ ಅಂತ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ