ವಿ. ಮನೋಹರ್ ಸಾರಥ್ಯದಲ್ಲಿ 20 ಹಾಡುಗಳಿರುವ ಮ್ಯೂಸಿಕಲ್ ಕಿರುಚಿತ್ರ; ಸದ್ಯದಲ್ಲೆ ಬಿಡುಗಡೆ

ರೆಕಾರ್ಡಿಂಗ್ ಆದ ಹಾಡುಗಳನ್ನ ಕಲಾವಿದರಿಗೆ ವಾಟ್ಸ್​ಆ್ಯಪ್​ನಲ್ಲಿ ಕಳಿಹಿಸಿ ಕಲಾವಿದರ ಮೊಬೈಲ್​ನಲ್ಲೇ ಶೂಟಿಂಗ್ ಮಾಡಿಸಿ ವೀಡಿಯೋ ತರಿಸಿಕೊಳ್ಳಲಾಗಿದೆ. ಈ ವೇಳೆ ಕೆಲವು ತಾಂತ್ರಿಕ ದೋಷಗಳು ಎದುರಾದರೂ ಸಹ ಅದನ್ನೆಲ್ಲಾ ನಿಭಾಯಿಸಿ ೪೫ ನಿಮಿಷಗಳ ಕಿರುಚಿತ್ರ ತಯಾರು ಮಾಡಲಾಗಿದೆ.

news18-kannada
Updated:June 1, 2020, 10:30 AM IST
ವಿ. ಮನೋಹರ್ ಸಾರಥ್ಯದಲ್ಲಿ 20 ಹಾಡುಗಳಿರುವ ಮ್ಯೂಸಿಕಲ್ ಕಿರುಚಿತ್ರ; ಸದ್ಯದಲ್ಲೆ ಬಿಡುಗಡೆ
ವಿ. ಮನೋಹರ್.
  • Share this:
ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿ, ದೇಶವಾಸಿಗಳು ಕ್ವಾರಂಟೈನ್ ನಲ್ಲಿದ್ದಾಗ, ಇಂತಹ ಸಮಯದಲ್ಲೇ ಚಿತ್ರರಂಗದ ಅನೇಕರು ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಬಿಟ್ಟರು. ಎಲ್ಲರಿಗೂ ಸ್ಪೂರ್ತಿ ಅಮಿತಾಭ್ ಬಚ್ಚನ್. ಎಲ್ಲರಿಗಿಂತ ಮೊದಲು ೬ ನಿಮಿಷದ ವಿಡಿಯೋ ಬಿಟ್ಟಿದ್ದರು. ಅದನ್ನು ನೋಡಿ ಸಾಕಷ್ಟು ಜನ ಒಂದೊಂದು ವಿಡಿಯೋ ಮಾಡಿದರು. ಇವೆಲ್ಲ ನಾಲ್ಕು ನಿಮಿಷ, ಐದು ನಿಮಿಷಗಳ ವಿಡಿಯೋಗಳು.

ಇನ್ನೇನು ಲಾಕ್​ಡೌನ್ ಮುಗಿದೇಹೋಯಿತು ಎಂದಾಗ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ ವಿ. ಮನೋಹರ್ ಅವರು 45 ನಿಮಿಷದ ಒಂದು ಸಣ್ಣ ಚಲನಚಿತ್ರವನ್ನೇ ಮಾಡಿ ಮಲ್ಲಿಗೆ ಮೂವೀಸ್ ಲಾಂಛನದಲ್ಲಿ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲು ತಯಾರಾಗಿದ್ದಾರೆ. ಸದ್ಯ ಟ್ರೇಲರ್ ರಿಲೀಸ್ ಆಗಿದೆ.

ಇದೊಂದು ಸಂಗೀತಮಯ ಚಿತ್ರ. ಇದರಲ್ಲಿ 20 ಹಾಡುಗಳಿವೆ. ಹಾಡಿಂದ ಪ್ರಾರಂಭವಾಗಿ ಹಾಡಲ್ಲಿ ಮುಗಿಯುತ್ತದೆ. ಸ್ವತಃ ವಿ. ಮನೋಹರ್ ಹಾಡು ಬರೆದು ರಾಗ ಸಂಯೋಜನೆ ಮಾಡಿದ್ದಾರೆ. ಈ ಎಲ್ಲಾ ಹಾಡುಗಳಿಗೆ 9 ಮಂದಿ ಪ್ರೋಗ್ರಾಮಿಂಗ್ ಮಾಡಿದ್ದಾರೆ.

Wajid Khan Passes Away: ಬಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್​ ಖಾನ್​ ನಿಧನಈ ಮ್ಯೂಸಿಕಲ್ ಕಿರುಚಿತ್ರದ ಕೆಲಸ ಏಪ್ರಿಲ್ ಇಪ್ಪತ್ತಕ್ಕೆ  ಪ್ರಾರಂಭವಾಯಿತು. ಸಂಗೀತಗಾರರು ಅದಕ್ಕೆ ವಾದ್ಯ ಜೋಡಣೆ ಮಾಡುವಾಗ ಕೊಂಚ ತಡವಾಯಿತಂತೆ. ಆಗ ಯಾವ ಸ್ಟುಡಿಯೋಗಳು ತೆರೆಯುವ ಹಾಗಿರಲಿಲ್ಲ. ರೆಕಾರ್ಡಿಂಗ್ ಬಂದ್ ಆಗಿತ್ತು. ಯಾರು ಮನೆಯಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದಾರೆ ಅಂಥವರನ್ನೇ ಹುಡುಕಿ ರೆಕಾರ್ಡಿಂಗ್ ಮಾಡಲಾಗಿದೆ.

ಹಾಟ್​ ಲುಕ್​ನಲ್ಲಿ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಕಿರುತೆರೆ ನಟಿ..!ರೆಕಾರ್ಡಿಂಗ್ ಆದ ಹಾಡುಗಳನ್ನ ಕಲಾವಿದರಿಗೆ ವಾಟ್ಸ್​ಆ್ಯಪ್​ನಲ್ಲಿ ಕಳಿಹಿಸಿ ಕಲಾವಿದರ ಮೊಬೈಲ್​ನಲ್ಲೇ ಶೂಟಿಂಗ್ ಮಾಡಿಸಿ ವೀಡಿಯೋ ತರಿಸಿಕೊಳ್ಳಲಾಗಿದೆ. ಈ ವೇಳೆ ಕೆಲವು ತಾಂತ್ರಿಕ ದೋಷಗಳು ಎದುರಾದರೂ ಸಹ ಅದನ್ನೆಲ್ಲಾ ನಿಭಾಯಿಸಿ ೪೫ ನಿಮಿಷಗಳ ಕಿರುಚಿತ್ರ ತಯಾರು ಮಾಡಲಾಗಿದೆ.

ಲಾಕ್​ಡೌನ್ ಸಮಯದಲ್ಲಿ ಇಂದ್ರಿಯಗಳು, ಹೊಟ್ಟೆಯ ಅವವ್ಯಯಗಳು ತಮ್ಮ-ತಮ್ಮ ಕಷ್ಟ-ಸುಖವನ್ನು ಹೇಳಿಕೊಳ್ಳುತ್ತವೆ. ಪ್ರತಿ ಅಂಗಾಂಗ ಇಲ್ಲಿ ಮನುಷ್ಯ ರೂಪದಲ್ಲಿ ಅಭಿನಯಿಸುತ್ತವೆ. ಉದಾಹರಣೆಗೆ ಎರಡು ಕಣ್ಣುಗಳ ಪಾತ್ರ ಇಬ್ಬರು ಹುಡುಗಿಯರು ಮಾಡಿದ್ದಾರೆ. ಎರಡು ಕಿವಿಗಳ ಪಾತ್ರ ಕೂಡ ಇನ್ನಿಬ್ಬರು ಹುಡುಗಿಯರು ಮಾಡಿದ್ದಾರೆ. ನಾಲಿಗೆ ಪಾತ್ರ ಶುಭರಕ್ಷಾ ಮಾಡಿದ್ದಾರೆ. ಮೂಗು ಪಾತ್ರ ಮೂಗು ಸುರೇಶ್, ಹಲ್ಲುಗಳಾಗಿ ಮೈಸೂರು ರಮಾನಂದ ಮತ್ತು ರಂಗನಾಥ್ ಮಾಡಿದ್ದಾರೆ.

Shraddha Srinath: ಋತುಮತಿಯಾಗಿದ್ದಾಗ ನಾನು ಪೂಜೆಯಲ್ಲಿ ಭಾಗವಹಿಸಿದ್ದೆ..!

ಈ ಇಂದ್ರಿಯಗಳ ಮತ್ತು ಹೊಟ್ಟೆ ಒಳಗಿನ ಅವಯವಗಳ ಮೀಟಿಂಗ್ ಅನ್ನು ಕೊರೋನ ನೋಡುತ್ತಾನೆ. ಕೊರೋನ ಪಾತ್ರ ಮಿಮಿಕ್ರಿ ದಯಾನಂದ್ ಮಾಡಿದ್ದಾರೆ. ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಮೆದುಳಿನ ಪಾತ್ರ ಮಾಡಿದ್ದಾರೆ. ೨೩ ಕಲಾವಿದರು, ೧೪ ಮಂದಿ ಗಾಯಕ-ಗಾಯಕಿಯರು ಒಂಬತ್ತು ಮಂದಿ ಸಂಗೀತಗಾರರು ಇದಕ್ಕೆ ದುಡಿದಿದ್ದಾರೆ.
First published: June 1, 2020, 10:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading