• Home
  • »
  • News
  • »
  • entertainment
  • »
  • Kannada Movie On Koragajja: ಕಾಂತಾರದಂತಹ ಮತ್ತೊಂದು ಸಿನಿಮಾ! ಇದು ಕೊರಗಜ್ಜನ ರಿಯಲ್ ಕಥೆ

Kannada Movie On Koragajja: ಕಾಂತಾರದಂತಹ ಮತ್ತೊಂದು ಸಿನಿಮಾ! ಇದು ಕೊರಗಜ್ಜನ ರಿಯಲ್ ಕಥೆ

ಇದು ಕೊರಗಜ್ಜನ ರಿಯಲ್ ಕಥೆ: ಡೈರೆಕ್ಟರ್ ಏನಂತಾರೆ?

ಇದು ಕೊರಗಜ್ಜನ ರಿಯಲ್ ಕಥೆ: ಡೈರೆಕ್ಟರ್ ಏನಂತಾರೆ?

"ಕರಿ ಹೈದ ಕರಿ ಅಜ್ಜ" ಮೂರು ಭಾಷೆಯಲ್ಲಿಯೇ ರೆಡಿ ಆಗುತ್ತಿದೆ. ಕನ್ನಡ, ತುಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಈ ಸಿನಿಮಾ ರೆಡಿ ಆಗುತ್ತದೆ. ನಂತರ ಇತರ ಭಾಷೆಗೂ ಡಬ್ ಮಾಡುತ್ತೇವೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ನ್ಯೂಸ್-18 ಕನ್ನಡ ಡಿಜಿಟಲ್ ಗೆ ತಿಳಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ನಾಡಿನ ತುಳುನಾಡಿನ (Tulu Nadu) ಸಂಸ್ಕೃತಿ ಕಾಂತಾರ ಸಿನಿಮಾ ಮೂಲಕ ಎಲ್ಲೆಡೆ ಈಗ ಪಸರಿಸಿದೆ. ಇಲ್ಲಿಯ ದೈವಿ ಶಕ್ತಿಯ ಪರಿಚಯ ಕೂಡ ಎಲ್ಲರಿಗೂ ಆಗಿದೆ. ಎಲ್ಲೆಡೆ ಗುಳಿಗ ದೈವ, ಪಂಜುರ್ಲಿ ದೈವ ಅಪಾರ ನಂಬಿಕೆ ಶುರು ಆಗಿದೆ. ಭೂತಕೋಲದ (Buta Kola) ಬಗ್ಗೇನು ಇನ್ನಿಲ್ಲದಂತಹ ಕುತೂಹಲ ಹೆಚ್ಚಿಸಿದೆ. ಈ ಎಲ್ಲ ಶ್ರೇಯಸ್ಸು ಈಗ ಕಾಂತಾರ (Kantara Cinema) ಸಿನಿಮಾಕ್ಕೇನೆ ಹೋಗಬೇಕು. ಅಷ್ಟು ಪರಿಣಾಮಕಾರಿಯಾಗಿಯೇ ಇಲ್ಲಿ ಅದನ್ನ ಹೇಳಲಾಗಿದೆ. ತುಳುನಾಡಿನಲ್ಲಿ ಸಾವಿರಾರು ದೈವಗಳಿವೆ. ಅದನ್ನ ನಂಬುವ ಜನರು ಅಪಾರ ಸಂಖ್ಯೆಯಲ್ಲಿಯೇ ಇದ್ದಾರೆ. ಅದರ ಹಿನ್ನೆಲೆಯಲ್ಲಿಯೇ ಅದೇ ನೆಲದ ಇನ್ನೂ ಒಂದು ಕಥೆ ಕನ್ನಡ ಚಿತ್ರರಂಗದಲ್ಲಿ ರೆಡಿ ಆಗುತ್ತಿದೆ.


ಅದರ ಬಗ್ಗೆ ಆ ಚಿತ್ರದ ನಿರ್ದೇಶಕ (Suheer Attavar) ಸುಧೀರ್ ಅತ್ತಾವರ್ ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ ಓದಿ.


ಕನ್ನಡದಲ್ಲಿ ಕಾಂತಾರದ ಎಫೆಕ್ಟ್-ತುಳುನಾಡಿನ ಮತ್ತೊಂದು ಕಥೆ


ಕನ್ನಡದಲ್ಲಿ ಒಂದು ನಂಬಿಕೆ ಇದೆ. ಆ ನಂಬಿಕೆ ಒಂದೇ ರೀತಿ ಸಿನಿಮಾ ಸುತ್ತವೇ ಇದೆ. ಒಂದು ಚಿತ್ರ ಹಿಟ್ ಆದ್ಮೇಲೆ ಅದೇ ರೀತಿಯ ಸಿನಿಮಾ ಬರುತ್ತವೆ. ಕಾಂತಾರ ಸಿನಿಮಾ ಹಿಟ್ ಆದ್ಮೇಲೆ ಕನ್ನಡದಲ್ಲಿ ಮತ್ತೊಂದು ಚಿತ್ರ ಇದೇ ರೀತಿಯ ವಿಷಯದ ಮೇಲೆ ರೆಡಿ ಆಗುತ್ತಿದೆ.


A Movie on Koragajja at Sandalwood by Director Sudeer Attavar
ಕನ್ನಡದಲ್ಲಿ ಕಾಂತಾರದ ಎಫೆಕ್ಟ್-ತುಳುನಾಡಿನ ಮತ್ತೊಂದು ಕಥೆ


ಆದರೆ ಇಲ್ಲಿ ಸಾಕಷ್ಟು ವ್ಯತ್ಯಾಸಗಳು ಇವೆ. ಕಾಂತಾರ ಸಿನಿಮಾ ಗುಳಿಗ ದೈವ ಮತ್ತು ಪಂಜುರ್ಲಿ ದೈವದ ಮೇಲೆನೆ ಇದೆ. ವಿಶೇಷವಾಗಿ ಈ ಚಿತ್ರಕ್ಕೆ ಕಮರ್ಷಿಯಲ್ ಟಚ್ ಕೂಡ ಇದೆ. ಆದರೆ ಕನ್ನಡದಲ್ಲಿ ಈಗ ಚಿತ್ರೀಕರಣ ಆರಂಭಿಸಿದ ಸಿನಿಮಾದಲ್ಲಿ ಬೇರಯದ್ದೇ ಕಥೆ ಇದೆ. ಇಲ್ಲಿರೋ ಆ ದೈವ ಯಾರು ಗೊತ್ತೇ?




ಕೊರಗಜ್ಜನ ಮೇಲೆ ಸ್ಯಾಂಡಲ್​​ವುಡ್​​ ನಲ್ಲಿ ಸಿನಿಮಾ
ಕೊರಗಜ್ಜನ ಮೇಲೆ ಸಿನಿಮಾ ಬಂದಿಯೇ ಇಲ್ಲ. ಪಂಜುರ್ಲಿ, ಗುಳಿಗ ದೈವದ ರೀತಿನೇ ಕೊರಗಜ್ಜ ಕೂಡ ಈ ನೆಲದ ವಿಶೇಷ ದೈವವೇ ಆಗಿದೆ. ಅಷ್ಟೇ ಪವರ್ ಫುಲ್ ದೈವ ಅನ್ನೋ ನಂಬಿಕೆ ಇತ್ತಕಡೆಗೆ ಅಪಾರವಾಗಿಯೇ ಇದೆ. ಈ ದೈವದ ಮೇಲೆನೇ ಇಲ್ಲಿ ಸಿನಿಮಾ ರೆಡಿ ಆಗುತ್ತಿದೆ.


"ಕರಿ ಹೈದ ಕರಿ ಅಜ್ಜ" ಸಿನಿಮಾ ಟೈಟಲ್-ಶೃತಿ ಪ್ರಮುಖ ಪಾತ್ರಧಾರಿ
ಕೊರಗಜ್ಜನ ಮೇಲೆ ರೆಡಿ ಆಗುತ್ತಿರೋ ಈ ಚಿತ್ರದಲ್ಲಿ ಕೊರಗಜ್ಜನ ಜೀವನ ಚರಿತ್ರೆನೇ ಇದೆ. ಕೊರಗಜ್ಜನ ಬಗ್ಗೆ ಇರೋ ನಂಬಿಕೆಗಳು-ಕೊರಗಜ್ಜನ ಶಕ್ತಿ ಹೀಗೆ ಎಲ್ಲ ವಿಷಯಗಳನ್ನ ಇಟ್ಟುಕೊಂಡೇ ಗಟ್ಟಿಯಾದ ಕಥೆಯನ್ನ ಇಲ್ಲಿ ಮಾಡಿಕೊಳ್ಳಲಾಗಿದೆ.


ಈ ಬಗ್ಗೆ ಡೈರೆಕ್ಟರ್ ಸುಧೀರ್ ಅತ್ತಾವರ್ ಸಿನಿಮಾ ಮಾಡುತ್ತಿದ್ದಾರೆ. ಕೊರಗಜ್ಜನ ಸಮುದಾಯಕ್ಕೆ ಸಂಬಂಧಿಸಿದ ಹಿರಿಯರನ್ನೆಲ್ಲ ಸಂಪರ್ಕಿಸಿ ಅವರ ಪರವಾನಗಿ ಪಡೆದುಕೊಂಡೇ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಕೊರಗಜ್ಜನ ಜೀವನಗಾಥೆನೆ ಇದೆ.


A Movie on Koragajja at Sandalwood by Director Sudeer Attavar
ಕೊರಗಜ್ಜನ ತಾಯಿ ಪಾತ್ರದಲ್ಲಿ ನಟಿ ಶೃತಿ ಅಭಿನಯ


ಕೊರಗಜ್ಜನ ಜೀವನದ ಮೇಲೆ ಕನ್ನಡ ಸಿನಿಮಾ
ಕೊರಗಜ್ಜನ ಕಥೆಯನ್ನ ತುಂಬಾ ಆಳವಾಗಿಯೇ ತಿಳಿದುಕೊಂಡಿರೋ ಡೈರೆಕ್ಟರ್ ಸುಧೀರ್ ಅತ್ತಾವರ್, ಕೊರಗಜ್ಜ ಒಬ್ಬ 22 ರಿಂದ 25 ವರ್ಷದ ಯುವಕ, ಚಿಕ್ಕ ವಯಸ್ಸಿನಲ್ಲಿಯೇ ತೀರಿಹೋದ ವ್ಯಕ್ತಿ. ಈತನ ಜೀವನದ ಕಥೆ ತುಂಬಾ ಕಷ್ಟದಾಯಕವಾಗಿಯೇ ಇದೆ.


ಕೊರಗಜ್ಜನ ತಾಯಿ ಪಾತ್ರದಲ್ಲಿ ನಟಿ ಶೃತಿ ಅಭಿನಯ
ಕೊರಗಜ್ಜನನನ್ನ ತನಿಯಾ ಅಂತಲೇ ಕರೆಯುತ್ತಾರೆ. ಈ ಕೊರಗಜ್ಜನ ತಾಯಿ ಹೆಸರು ಬೈರಾಕಿ ಅಂತಲೇ ಇದೆ. ಈ ಪಾತ್ರವನ್ನ ನಟಿ ಶೃತಿ ಅವರು ನಿರ್ವಹಿಸುತ್ತಿದ್ದಾರೆ. ಈ ತಾಯಿ ಕಥೆನೂ ಅಷ್ಟೇ ಕರುಣಾಜನಕವಾಗಿಯೇ ಇದೆ. ಕೊರಗಜ್ಜನ ಇಡೀ ಜೀವನದ ಕಥೆಯನ್ನೆ "ಕರಿ ಹೈದ ಕರಿ ಅಜ್ಜ" ಹೇಳುತ್ತದೆ. ಪಂಜುರ್ಲಿ ತಾಯಿ ಪಾತ್ರದಲ್ಲಿ ನಟಿ ಭವ್ಯ ಕೂಡ ಅಭಿನಯಿಸಿದ್ದಾರೆ ಎಂದು ಸುಧೀರ್ ಅತ್ತಾವರ್ ಹೇಳುತ್ತಾರೆ.


ಕೊರಗಜ್ಜ ಅಂದ ಕೂಡಲೇ ವಯಸ್ಸಾದ ವ್ಯಕ್ತಿ ಅಂತಲೇ ಎಲ್ಲರೂ ತಿಳಿಯುತ್ತಾರೆ. ಆದರೆ ಕೊರಗಜ್ಜ ತನಿಯಾ ಚಿಕ್ಕ ವಯಸ್ಸಿನ ವ್ಯಕ್ತಿ ಹಾಗಾಗಿಯೇ ನಾನು "ಕರಿ ಹೈದ ಕರಿ ಅಜ್ಜ" ಅಂತಲೇ ಚಿತ್ರಕ್ಕೆ ಶೀರ್ಷಿಕೆ ಇಟ್ಟಿದ್ದೇನೆ ಅಂತಲೇ ಸುಧೀರ್ ಅತ್ತಾವರ್ ಹೇಳುತ್ತಾರೆ.


ಕೊರಗಜ್ಜನ ಚಿತ್ರಕ್ಕೆ ರಸುಲ್ ಪುಕ್ಕುಟ್ಟಿಯಿಂದ ಸೌಂಡಿಂಗ್ ಪ್ಲಾನ್
ಆಸ್ಕರ್ ಪ್ರಶಸ್ತಿ ವಿಜೇತ ರಸುಲ್ ಪುಕ್ಕುಟ್ಟಿಯಿಂದಲೇ ಕರಿ ಹೈದ ಕೊರಗಜ್ಜ ಚಿತ್ರಕ್ಕೆ ಸೌಂಡಿಂಗ್ ಮಾಡಿಸೊ ಪ್ಲಾನ್ ಕೂಡ ಇದೆ. ಬಾಲಿವುಡ್​ ಗಾಯಕರಾದ ಶಾನ್ ಅವರಿಂದಲೂ ಈ ಚಿತ್ರಕ್ಕೆ ಹಾಡಿಸೋ ಯೋಚನೆ ಕೂಡ ಇದೆ. ಸಿನಿಮಾದ ಚಿತ್ರೀಕರಣ ಮಂಗಳೂರು ಮತ್ತು ಬೆಳ್ತಂಗಡಿಯಲ್ಲಿ ಈಗಾಗಲೇ ಚಿತ್ರೀಕರಣ ಮಾಡಲಾಗಿದೆ ಎಂದು ಸುಧೀರ್ ಅತ್ತಾವರ್ ವಿವರಿಸುತ್ತಾರೆ.


ಇದನ್ನೂ ಓದಿ: Kamal Haasan: ಕಾಂತಾರ ವೀಕ್ಷಿಸಿದ ಕಮಲ್ ಹಾಸನ್, ಕಾಲ್ ಮಾಡಿ ರಿಷಬ್ ಶೆಟ್ಟಿಗೆ ಹೇಳಿದ್ದೇನು?


ಕೊರಗಜ್ಜನ ಚಿತ್ರದಲ್ಲಿ ಬಾಲಿವುಡ್​​ನ ಕಬೀರ್ ಬೇಡಿ ಅಭಿನಯ
"ಕರಿ ಹೈದ ಕರಿ ಅಜ್ಜ" ಚಿತ್ರದಲ್ಲಿ ಬಾಲಿವುಡ್​​ನ ಗಟ್ಟಿ ಧ್ವನಿಯ ನಟ ಕಬೀರ್ ಬೇಡಿ ಕೂಡ ಅಭಿನಯಿಸುತ್ತಿದ್ದಾರೆ. ಸದ್ಯ ಮುಂಬೈ ಅಲ್ಲಿಯೇ ಇರೋ ನಿರ್ದೇಶಕ ಸುಧೀರ್ ಅತ್ತಾವರ್, ಈಗಾಗಲೇ ಅಲ್ಲಿಯ ಕಲಾವಿದರನ್ನ ಚಿತ್ರಕ್ಕೆ ಹಾಕಿಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಅಭಿನಯಿಸಿರೋ ತುಳುನಾಡ ಕಲಾವಿದರನ್ನೂ ತಮ್ಮ ಈ ಚಿತ್ರಕ್ಕೆ ಹಾಕಿಕೊಂಡಿದ್ದಾರೆ.


"ಕರಿ ಹೈದ ಕರಿ ಅಜ್ಜ" ಚಿತ್ರ ಮೂರು ಭಾಷೆಯಲ್ಲಿ ರೆಡಿ
ಹೌದು, "ಕರಿ ಹೈದ ಕರಿ ಅಜ್ಜ" ಮೂರು ಭಾಷೆಯಲ್ಲಿಯೇ ರೆಡಿ ಆಗುತ್ತಿದೆ. ಕನ್ನಡ, ತುಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಈ ಸಿನಿಮಾ ರೆಡಿ ಆಗುತ್ತದೆ. ನಂತರ ಇತರ ಭಾಷೆಗೂ ಡಬ್ ಮಾಡುತ್ತೇವೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ನ್ಯೂಸ್-18 ಕನ್ನಡ ಡಿಜಿಟಲ್ ಗೆ ತಿಳಿಸಿದ್ದಾರೆ. ತ್ರಿವಿಕ್ರಮ್ ಬೆಳ್ತಂಗಡಿ ನಿರ್ಮಾಣದ ಈ ಚಿತ್ರ ಸಣ್ಣಗೆ ಈಗಲೇ ಸುದ್ದಿ ಆಗುತ್ತಿದೆ.

First published: