• Home
  • »
  • News
  • »
  • entertainment
  • »
  • Hanuman Pan India Cinema: ಇಂಡಿಯನ್ ಸೂಪರ್ ಹೀರೋ ಮೇಲೆ ಪ್ಯಾನ್ ಇಂಡಿಯಾ ಸಿನಿಮಾ, ಚಿತ್ರದ ಟೀಸರ್ ಫುಲ್ ಬೆಂಕಿ!

Hanuman Pan India Cinema: ಇಂಡಿಯನ್ ಸೂಪರ್ ಹೀರೋ ಮೇಲೆ ಪ್ಯಾನ್ ಇಂಡಿಯಾ ಸಿನಿಮಾ, ಚಿತ್ರದ ಟೀಸರ್ ಫುಲ್ ಬೆಂಕಿ!

ಇಂಡಿಯನ್ ಸೂಪರ್ ಹೀರೋ ಹನುಮಾನ್

ಇಂಡಿಯನ್ ಸೂಪರ್ ಹೀರೋ ಹನುಮಾನ್

ಹನುಮಾನ್ ಸಿನಿಮಾದ ಟೀಸರ್ ಅದ್ಬುತವಾಗಿಯೇ ಇದೆ. ಪಾತ್ರಗಳ ಪೋಷಣೆ ಕೂಡ ಸೂಪರ್ ಅನಿಸುತ್ತದೆ. ಅದರಲ್ಲೂ ಆಂಜನೇಯನನ್ನ ಇಲ್ಲಿ ತೋರಿರೋ ರೀತಿ ವೈಬ್ರೇಷನ್ ಕ್ರಿಯೇಟ್ ಮಾಡುತ್ತದೆ. ಟೀಸರ್​ನ ಕೊನೆಯಲ್ಲಿ ಬರೋ ಆ ಒಂದು ದೃಶ್ಯ ನಿಜಕ್ಕೂ ಅದ್ಭುತವಾಗಿಯೇ ಇದೆ.

  • News18 Kannada
  • Last Updated :
  • Bangalore [Bangalore], India
  • Share this:

ದಕ್ಷಿಣದ ಭಾರತದಲ್ಲಿ ಮತ್ತೊಂದು (Hanuman Cinema) ಬಿರುಗಾಳಿ ಬೀಸೋ ಹಾಗೆ ಕಾಣುತ್ತಿದೆ. ಬಾಹುಬಲಿ, ಟ್ರಿಪಲ್ ಆರ್, ಕೆಜಿಎಫ್ ಮತ್ತು ಕಾಂತಾರ ಸರದಿ ಬಳಿಕ ಈಗ ಹನುಮಾನ್ ಸಿನಿಮಾ ಅತಿ ದೊಡ್ಡ ಭರವಸೆ ಮೂಡಿಸುತ್ತಿದೆ. ಚಿತ್ರದ ಸದ್ದೇ ಇಲ್ಲದ ಸಮಯದಲ್ಲಿ ಒಂದೇ (Teaser) ಟೀಸರ್ ಈಗ ಬೇರೆ ಲೆವಲ್​ ನ ಫೀಲ್ ಕೊಡುತ್ತಿದೆ. ಬಹು (Multi Language) ಭಾಷೆಯಲ್ಲಿಯೇ ರಿಲೀಸ್ ಆಗ್ತಿದೆ. ಈ ಸಿನಿಮಾ ಮೊದಲು ತೆಲುಗು ಭಾಷೆಯಲ್ಲಿಯೇ ರೆಡಿ ಆಗುತ್ತೆ. ಬಳಿಕ ಇತರ ಭಾಷೆಯಲ್ಲೂ ರಿಲೀಸ್ ಆಗುತ್ತದೆ. ಆದರೆ ಈಗ ಬಿಟ್ಟಿರೋ ಟೀಸರ್ (Teaser Release)​ ನಲ್ಲಿ ಸಂಸ್ಕೃತ ಸ್ಲೋಕ ಇರೋದು ವಿಶೇಷ.ಈ ಚಿತ್ರದ ಟೀಸರ್ ಕಂಡ್ರೆ ಇದೊಂದು ವಿಭಿನ್ನ ಚಿತ್ರ ಅಂತಲೇ ನಿಮಗೆ ಅನಿಸುತ್ತದೆ. ಅಷ್ಟು ವಿಶೇಷ ಅನಿಸೋ ಈ ಚಿತ್ರದಲ್ಲಿ ವಾಯು ಪುತ್ರನ ಶಕ್ತಿಯ ಸಂಪೂರ್ಣ ಚಿತ್ರಣ ಇದ್ದಂತೆ ಕಾಣುತ್ತಿದೆ.


ಇಂಡಿಯನ್ ಸೂಪರ್ ಹೀರೋ ಹನುಮಾನ್
ಭಾರತೀಯ ಸಿನಿಮಾರಂಗದಲ್ಲಿ ಆಂಜನೇಯನ ಮೇಲೆ ಅನೇಕ ಸಿನಿಮಾ ಬಂದಿವೆ. ಅನೇಕ ಕಾರ್ಟೂನ್ ಚಿತ್ರಗಳೂ ಇವೆ. ಆದರೆ ಬಿಗ್ ಬಜೆಟ್​​ನಲ್ಲಿ ಸಿನಿಮಾ ಬಂದಿರೋದೇ ಇಲ್ಲ. ಅದರಲ್ಲೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಂದಿರೋದು ಇಲ್ವೇನೋ.


A movie on Indian Superhero, now film Teaser Released
ಹನುಮಾನ್ ಬಹು ಭಾಷೆಯಲ್ಲಿ ರಿಲೀಸ್


ಟಾಲಿವುಡ್​​ನಲ್ಲಿ ಈಗ ಇಂತಹ ಒಂದು ಪ್ರಯೋಗ ಆಗಿದೆ. ವಾಯುಪುತ್ರನ ಕಂಟೆಂಟ್​ ಇಟ್ಟುಕೊಂಡೇ ದಕ್ಷಿಣದ ಟಾಲಿವುಡ್​​ನಿಂದ ಎಲ್ಲೆಡೆ ಒಂದೇ ಒಂದು ಟೀಸರ್​ ಮೂಲಕ ಹನುಮಾನ್ ಗಾಳಿ ಜೋರಾಗಿಯೇ ಬಿಸುತ್ತಿದೆ. ಇದನ್ನ ಒಮ್ಮೆ ನೋಡಿದ್ರೆ, ನೀವೂ ಕೂಡ ವಾವ್ ಅಂತ ಹೇಳುತ್ತೀರಾ, ಅಷ್ಟು ಅದ್ಭುತವಾಗಿಯೇ ಈ ಟೀಸರ್ ಇದೆ.


ಬಹು ಕೋಟಿಯ ಹನುಮಾನ್ ಬಹು ಭಾಷೆಯಲ್ಲಿ ರಿಲೀಸ್
ಹನುಮಾನ್ ಸಿನಿಮಾದ ವೆಚ್ಚ ಬಹು ಕೋಟಿನೇ ಆಗಿದೆ. ವಿಕಿಪಿಡಿಯಾದಲ್ಲಿ ಒಮ್ಮೆ ಚೆಕ್ ಮಾಡಿದ್ರೆ, ಅನಧಿಕೃತವಾಗಿಯೇ 75 ಕೋಟಿ ವೆಚ್ಚದ ಲೆಕ್ಕ ಸಿಗುತ್ತದೆ. ಅದು ಬಿಡಿ, ಸಿನಿಮಾದ ಟೀಸರ್​ ಕಂಡ್ರೇನೆ ಇದು ಬಹು ಕೋಟಿ ಸಿನಿಮಾ ಅನಿಸದೇ ಇರದೆ, ಇಂತಹ ಈ ಚಿತ್ರ ಬಹು ಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ.




ತೆಲುಗು, ತಮಿಳು, ಕನ್ನಡ, ಹೀಗೆ ಎಲ್ಲ ಭಾಷೆಯಲ್ಲೂ ಹನುಮಾನ್ ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಲೇ ಈ ಸಿನಿಮಾ ಬಗ್ಗೆ ಒಂದು ಹೋಪ್ ಹುಟ್ಟಿಕೊಂಡಿದೆ. ಭಾರತದ ಸೂಪರ್ ಹೀರೋ ಹನುಮಾನ್ ಮೇಲೆ ಬರ್ತಿರೋ ಈ ಚಿತ್ರದ ಬಗ್ಗೆ ಟೀಸರ್ ಭಾರೀ ನಿರೀಕ್ಷೆ ಹುಟ್ಟಿಸಿದೆ.


ಹನುಮಾನ್ ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?
ಹನುಮಾನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಯುವ ನಟ ತೇಜ್ ಸಜ್ಜ ಅಭಿನಯಿಸಿದ್ದಾರೆ. ಹನುಮಾನ್ ರೂಪ ತಾಳಿ ಇಲ್ಲಿ ಬೇರೆ ಲೆವಲ್​​ನ ವೈಬ್ರೇಷನ್ ಕ್ರಿಯೇಟ್ ಮಾಡಿದ್ದಾರೆ.
ಚಿತ್ರದ ಇತರ ಮುಖ್ಯ ಪಾತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್, ನವ ನಟಿ ಅಮೃತ ಅಯ್ಯರ್ ಅಭಿನಯಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ವಿಲನ್ ರೋಲ್ ಮಾಡಿರೋ ನಟ ರಾಜ್ ದೀಪಕ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಟೀಸರ್ ಸೂಪರ್, ಸಿನಿಮಾ ರಿಲೀಸ್ ಯಾವಾಗ?
ಹನುಮಾನ್ ಸಿನಿಮಾದ ಟೀಸರ್ ಅದ್ಬುತವಾಗಿಯೇ ಇದೆ. ಪಾತ್ರಗಳ ಪೋಷಣೆ ಕೂಡ ಸೂಪರ್ ಅನಿಸುತ್ತದೆ. ಅದರಲ್ಲೂ ಆಂಜನೇಯನನ್ನ ಇಲ್ಲಿ ತೋರಿರೋ ರೀತಿ ವೈಬ್ರೇಷನ್ ಕ್ರಿಯೇಟ್ ಮಾಡುತ್ತದೆ. ಟೀಸರ್​ನ ಕೊನೆಯಲ್ಲಿ ಬರೋ ಆ ಒಂದು ದೃಶ್ಯ ನಿಜಕ್ಕೂ ಅದ್ಭುತವಾಗಿಯೇ ಇದೆ.


A movie on Indian Superhero, now film Teaser Released
ಹನುಮಾನ್ ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?


ಹೀಗೆ ಹಲವು ವಿಶೇಷತೆಗಳನ್ನ ಹೊಂದಿರೋ ಈ ಚಿತ್ರವನ್ನ ಪ್ರಶಾಂತ್ ವರ್ಮಾ ಡೈರೆಕ್ಟ್ ಮಾಡಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನು ಕೂಡ ಇವರೇ ಮಾಡಿಕೊಂಡಿದ್ದಾರೆ. ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ಅನುದೀಪ್ ದೇವ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.


ಇದನ್ನೂ ಓದಿ: Kantara Song: ಜರ್ಮನ್ ಅಂಧ ಗಾಯಕಿಯ ಧ್ವನಿಯಲ್ಲಿ ವರಾಹ ರೂಪಂ! ಸಖತ್ ವೈರಲ್


ಸಿನಿಮಾದ ರಿಲೀಸ್ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ. ಸದ್ಯಕ್ಕೆ ಎಲ್ಲ ಬಹು ಭಾಷೆಯ ಪೋಸ್ಟರ್ ಮತ್ತು ಸಂಸ್ಕೃತ ಭಾಷೆ ಇರೋ ಟೀಸರ್ ಮಾತ್ರ ರಿಲೀಸ್ ಆಗಿದೆ. ಅತಿ ದೊಡ್ಡ ಭರವಸೆಯನ್ನೂ ಈಗಲೇ ಮೂಡಿಸಿದೆ.

First published: