Bigg Boss Sonu Gowda: ತೆರೆಗೆ ಬರುತ್ತಂತೆ ಸೋನು ಶ್ರೀನಿವಾಸ ಗೌಡ ಲೈಫ್ ಸ್ಟೋರಿ! ಏನ್ ಗುರು ಇವೆಲ್ಲ ಅಂತಿದ್ದಾರೆ ನೆಟ್ಟಿಗರು

ಸೋಶಿಯಲ್ ಮೀಡಿಯಾ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ಅವರ ಜೀವನಾಧಾರಿತ ಸಿನಿಮಾ ತೆರೆ ಮೇಲೆ ಬರಲಿದ್ದು, ಖ್ಯಾತ ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಮಾಡುತ್ತದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಸೋನು ಗೌಡ

ಸೋನು ಗೌಡ

  • Share this:
ಸೋಶಿಯಲ್ ಮೀಡಿಯಾ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ (Sonu Gowda) ಅವರ ಜೀವನಾಧಾರಿತ ಸಿನಿಮಾ ತೆರೆ ಮೇಲೆ ಬರಲಿದ್ದು, ಖ್ಯಾತ ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಮಾಡುತ್ತದೆ ಎಂದು ಬಿಟಿವಿ ವರದಿ ಮಾಡಿದೆ. ಟಿಕ್ ಟಾಕ್ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾಗೆ (Social Media) ಎಂಟ್ರಿ ಕೊಟ್ಟ ಸೋನು ​ ಗೌಡ ತಮ್ಮ ವಿಡಿಯೋ ಗಳಿಗಿಂತ ಹೆಚ್ಚಾಗಿ ಟ್ರೋಲ್ (Troll)​ ಮೂಲಕವೇ ಫೇಮಸ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮಾಡುವ ಮೂಲಕ ಸೋನು ಅವರು ಸಾಕಷ್ಟು ಹಿಂಬಾಲಕರನ್ನು ಹೊಂದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ 7.7 ಲಕ್ಷ ಫಾಲೋವರ್ಸ್​ ಇದ್ದಾರೆ.

ಈ ಚಿತ್ರಕ್ಕೆ ಸೋನುಗೌಡನೇ ನಾಯಕಿನಾ?

ಸೋನು ಕೆಲ ಕಿರುಚಿತ್ರ, ಮ್ಯೂಸಿಕ್​ ವಿಡಿಯೋದಲ್ಲೂ ನಟಿಸಿದ್ದಾರೆ. ಇದೀಗ್​ ಬಿಗ್​ ಬಾಸ್​ ಮನೆಗೆ ಬಂದಿರೋ ಸೋನು ಗೌಡಗೆ ಮತ್ತಷ್ಟು ಅಭಿಮಾನಿ ಬಳಗ ಹೆಚ್ಚಿದೆ. ಸೋನು ಅವರ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಜನರಿಗೆ ತಿಳಿಸಲು ಸಿನಿಮಾ ರೆಡಿಯಾಗುತ್ತಿದ್ದು, ಖ್ಯಾತ ನಿರ್ಮಾಪಕರು ಈ ಸಿನಿಮಾ ನಿಮಾರ್ಣ ಮಾಡುತ್ತಿದ್ದರೆ. ಆ ಸಿನಿಮಾದಲ್ಲಿ ಸೋನುನೇ ನಟಿಯಾಗುತ್ತಾರೋ, ಇಲ್ಲ ಬೇರೆಯವರು ನಟಿಯಾಗಬಹುದು ಎಂಬ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ

Sonu Srinivas Gowda reveals her marriage plans in Bigg Boss ott kannada
ಸೋನು ಶ್ರೀನಿವಾಸ್​ ಗೌಡ


ಬಿಗ್​​ ಬಾಸ್​ ಸ್ಪರ್ಧಿಯಾಗಿ ಸೋನು ಮಿಂಚಿಂಗ್​

ಇತಿಹಾಸದಲ್ಲಿ ಮೊದಲ ಬಾರಿಗೆ ಬಿಗ್​ಬಾಸ್​ ಟಿವಿ ಗೆ ಬರದೇ ಒಟಿಟಿಗೆ ಬಂದಿದ್ದು, ಇದು ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಇದ್ರಲ್ಲಿ ಸೋನು ಇರುವ ಕಾರಣದಿಂದ ಹೆಚ್ಚು ಜನ ನೋಡುತ್ತಿದ್ದಾರೆ. ಸೋನು ಬಗ್ಗೆ ನೆಗಿಟಿವ್​ ಆಗಿದ್ರು ಅವರನ್ನೆ ಹೆಚ್ಚು ಜನ ಮೆಚ್ಚಿಕೊಂಡಿದ್ದಾರೆ. ಅವರೇ ಬಿಗ್​ಬಾಸ್​ ಟಾಪ್​ 3 ನಲ್ಲಿ ಉಳಿದುಕೊಳ್ಳುತ್ತಾರೆ ಅನ್ನೋ ಮಾತುಗಳ ಸಹ ಕೇಳಿ ಬರ್ತಿದೆ.

ಬಿಗ್​ ಬಾಸ್​ ವಿಡಿಯೋ ಬಗ್ಗೆ ಸೋನು ಮಾತು

ಸೋನು ಶ್ರೀನಿವಾಸ್​ ಗೌಡ ಹುಡುಗನೊಬ್ಬನ ಪ್ರೀತಿಗೆ ಬಿದ್ದಿದ್ದರು. ಇಬ್ಬರು ಲವ್​ ಮಾಡುತ್ತಿದ್ದರು. ಅಷ್ಟೇ ಏಕೆ ಆತನು ಕೂಡ ಗೌಡ ಜಾತಿಗೆ ಸೇರಿದವನಾಗಿದ್ದು, ಮೆಸೇಜ್​, ಕಾಲ್​, ವಿಡಿಯೋ ಕಾಲ್​ ಮಾಡುತ್ತಿದ್ದರಂತೆ. ಆದರೆ ಕೊನೆಗೊಂದು ದಿನ ಆ ಬಾಯ್​ ಫ್ರೆಂಡ್​​ನಿಂದಾಗಿ​ ಸೋನು ಶ್ರೀನಿವಾಸ್​ ಗೌಡ ಅವರ ಖಾಸಗಿ ವಿಡಿಯೋ ವೈರಲ್​ ಆಗಿದೆ. ಈ ಹಳೆಯ ಘಟನೆಯನ್ನು ಹೇಳುವ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ ಸೋನು ಶ್ರೀನಿವಾಸ್​ ಗೌಡ. ಆಕೆಯ ಕಣ್ಣೀರು ಕಂಡು ಉಳಿದ ಸ್ಫರ್ಧಿಗಳು ಸಂತೈಸಿದ್ದಾರೆ. ಅವರನ್ನು ತಬ್ಬಿಕೊಂಡು ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ ನಟ ರಾಕೇಶ್​ ಅಡಿಗ.

ಇದನ್ನೂ ಓದಿ: Bigg Boss OTT: 'ನಂಗೆ ನಿನ್ನ ಮೇಲೆ ಫೀಲಿಂಗ್​ ಇದೆ; ಬೇಕು ಅಂದ್ರೆ ಒಪ್ಪಿಕೋ‘, ಸೋನು ಗೌಡ ಅಂಡ್​ ರಾಕೇಶ್ ಲವ್ ಸ್ಟೋರಿ

ಆತ ಮದುವೆ ಆಗ್ತಿನಿ ಅಂದಿದ್ದ!

ಪ್ರೀತಿಗೆ ಬೀಳುವುದು ಸಹಜ. ಅದೇ ರೀತಿ ಸೋನು ಶ್ರೀನಿವಾಸ್​ ಗೌಡ ಕೂಡ ಯುವಕನೊಬ್ಬನ ಪ್ರೀತಿಗೆ ಬಿದ್ದಿದ್ದರು. ಆತನ ಮೊಲಿನಿಂದಲೂ ಆಕೆಗೆ ತಿಳಿದಿದ್ದ ಕಾರಣ ಮತ್ತು ಒಂದೇ ಜಾತಿಯವನಾಗಿದ್ದ ಕಾರಣ ಸೋನು ಕೂಡ ಆಕೆಯನ್ನು ಪ್ರೀತಿಸಿದರು. ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತಿಂದಂತೆ ಆತನನ್ನೇ ಮದುವೆ ಆಗ್ತೀನಿ ಅಂತ ಮನೆಯಲ್ಲಿ ಹೇಳಿದ್ದರಂತೆ.

ಹೀಗಿರುವಾಗ ಒಂದು ದಿನ ಪ್ರಿಯಕರ ವಿಡಿಯೋ ಕರೆ ಮಾಡು ಎಂದು ಸೋನು ಶ್ರೀನಿವಾಸ್​ ಗೌಡ ಅವರನ್ನು ಕೇಳಿಕೊಂಡಿದ್ದಾನೆ. ಆಕೆ ಕೂಡ ಆತನಿಗೆ ವಿಡಿಯೋ ಫೋನ್​ ಕರೆ ಮಾಡಿದ್ದಾರೆ. ಹೇಗೂ ಮದುವೆ ಆಗುತ್ತೇವೆ ಎಂದು ಸೋನು ಶ್ರೀನಿವಾಸ್​ ಗೌಡ ದುಡುಕುತ್ತಾರೆ. ಆತ್ತ ಕಡೆಯಿಂದ ಪ್ರಿಯಕರ ವಿಡಿಯೋ ಕರೆಯನ್ನು ರೆಕಾರ್ಡ್​ ಮಾಡತ್ತಾನೆ. ಒಂದು ವಾರದ ನಂತರ ಅವನು ಆಕೆಯ ಬಳಿ  ರೂಡ್​ ಆಗಿ ನಡೆದುಕೊಳ್ಳಲು ಶುರು ಮಾಡಿತ್ತಾನೆ ಎಂದು ಸೋನು ತನ್ನ ಬೇಸರ ಹಂಚಿಕೊಂಡಿದ್ದರು..
Published by:Pavana HS
First published: