RRR: ರಾಜಮೌಳಿ ಆರ್.ಆರ್.ಆರ್ ಚಿತ್ರಕ್ಕಾಗಿ ಬಾಹುಬಲಿ‌ ಮೀರಿಸೋ ಸೆಟ್!

ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್ ಇದೇ ಮೊಲದ‌ ಬಾರಿಗೆ ತೆರೆಮೇಲೆ ಒಂದಾಗಿದ್ದಾರೆ. ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿದ್ದಾರೆ‌. ಇದಿಷ್ಟೇ ಕಾರಣಕ್ಕೆ ಆರ್.ಆರ್.ಆರ್ ಮೇಲೆ ಮುಗಿಲೆತ್ತರದ ನಿರೀಕ್ಷೆ ಕ್ರಿಯೇಟ್ ಆಗಿದೆ. ಆರ್. ಆರ್.ಆರ್ ಸಿನಿಮಾ ಬಾಹುಬಲಿಯ ದಾಖಲೆಗಳನ್ನ ನುಚ್ಚು ನೂರಾಗಿಸೋದು ಗ್ಯಾರಂಟಿ ಅನ್ನೋ‌ ಮಾತು ಈಗಾಗಲೇ ಹುಟ್ಕೊಂಡಿದೆ.

news18-kannada
Updated:June 3, 2020, 10:44 PM IST
RRR: ರಾಜಮೌಳಿ ಆರ್.ಆರ್.ಆರ್ ಚಿತ್ರಕ್ಕಾಗಿ ಬಾಹುಬಲಿ‌ ಮೀರಿಸೋ ಸೆಟ್!
ಆರ್.ಆರ್.ಆರ್
  • Share this:
ಸೌತ್ ಸಿನಿಮಾದ ದಿ ಗ್ರೇಟ್ ಡೈರೆಕ್ಟರ್ ರಾಜಮೌಳಿ ಸಿನಿಮಾ ಅಂದರೆ ಅಲ್ಲಿ ಅದ್ಧೂರಿತನ ಮೇಳೈಸಿರುತ್ತೆ. ಕೋಟಿ ಕೋಟಿ ವೆಚ್ಚದ ಸೆಟ್ಟುಗಳು. ಕಣ್ ಕೋರೈಸುವ, ದೃಶ್ಯವೈಭವವನ್ನ ಸಾರುವ ವಿ.ಎಫ್.ಎಕ್ಸ್ ಮೌಳಿ ಸಿನಿಮಾದ ಹೈಲೈಟ್. ಅದರಲ್ಲೂ ಬಾಹುಬಲಿ ಸಿರೀಸ್ ಅಂತೂ ಹಾಲಿವುಡ್​ನವರೇ  ಬೆರಗಾಗುವಷ್ಟು ತಾಂತ್ರಿಕವಾಗಿ ಶ್ರೀಮಂತವಾಗಿತ್ತು.

ಸದ್ಯ  ರಾಜಮೌಳಿಯ ಮ್ಯಾಜಿಕ್ ನಲ್ಲಿ ಆರ್.ಆರ್.ಆರ್ ಎಂಬ ಸಿನಿಮಾ ಬರೋಕೆ ಸಜ್ಜಾಗ್ತಿದೆ. ಈ ಸಿನಿಮಾಗಾಗಿ ಟಾಲಿವುಡ್ ನ ಇಬ್ಬರು ಮಹಾನ್ ತಾರೆಯರನ್ನೇ ಒಂದೇ ಫ್ರೇಮ್ ನಲ್ಲಿ ನಿಲ್ಲಿಸಿದ್ದಾರೆ ದಿ ಗ್ರೇಟ್ ರಾಜಮೌಳಿ. ಈ ಸಿನಿಮಾ ಸಹ ಅದ್ಧೂರಿತನದಲ್ಲಿ ರಾಜಮೌಳಿಯ ಸ್ಟ್ಯಾಂಡರ್ಡ್ ಗೆ ತಕ್ಕಂತೆ ಮೂಡಿಬರಲಿದೆ. ಅದಕ್ಕಾಗಿಯೇ ರಾಜಮೌಳಿ ಒಂದು ವರ್ಷದಿಂದ ಅವಿರತವಾಗಿ ಶ್ರಮಿಸ್ತಿದ್ದಾರೆ.

ಇನ್ನು ಈ ಸಿನಿಮಾಗಾಗಿ ವಿಲೇಜ್ ಸೆಟ್ ಒಂದನ್ನ ಕ್ರಿಯೇಟ್ ‌ಮಾಡಲಾಗುತ್ತಿದೆಯಂತೆ. ಇದಕ್ಕಾಗಿ ಒಂದಲ್ಲಾ ಎರಡಲ್ಲಾ 18 ಕೋಟಿ ಹಣ ಖರ್ಚು ಮಾಡಲಾಗುತ್ತಿದೆಯಂತೆ.  ಸಿನಿಮಾದ ಸಾಕಷ್ಟು ಪೋರ್ಷನ್ ಈ ವಿಲೇಜ್ ನಲ್ಲಿಯೇ ನಡೆಯಲಿದಂತೆ.

ಅಂದಹಾಗೆ ಲಾಕ್ ಡೌನ್ ಕಾರಣ ಈಗ ಆರ್.ಆರ್.ಆರ್. ಚಿತ್ರದ ಶೂಟಿಂಗ್​​​ಗೆ ಬ್ರೇಕ್ ನೀಡಲಾಗಿದೆ. ಕಳೆದ ಎರಡು ತಿಂಗಳಿನಿಂದ ರಾಜಮೌಳಿ ಸಿನಿಮಾದ ಶೂಟಿಂಗ್ ಹೊರತುಪಡಿಸಿ ಬೇರೆ ಕೆಲಸಗಳನ್ನ ಮಾಡಿ ಮುಗಿಸುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಮುಗಿದು, ಶೂಟಿಂಗ್ ಗೆ ಅನುಮತಿ ಕೊಟ್ಟ ನಂತರ ಈ ಸಿನಿಮಾದ ಶೂಟಿಂಗ್ ಮತ್ತೆ ಶುರುವಾಗಲಿದೆ.

ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್ ಇದೇ ಮೊಲದ‌ ಬಾರಿಗೆ ತೆರೆಮೇಲೆ ಒಂದಾಗಿದ್ದಾರೆ. ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿದ್ದಾರೆ‌. ಇದಿಷ್ಟೇ ಕಾರಣಕ್ಕೆ ಆರ್.ಆರ್.ಆರ್ ಮೇಲೆ ಮುಗಿಲೆತ್ತರದ ನಿರೀಕ್ಷೆ ಕ್ರಿಯೇಟ್ ಆಗಿದೆ. ಆರ್. ಆರ್.ಆರ್ ಸಿನಿಮಾ ಬಾಹುಬಲಿಯ ದಾಖಲೆಗಳನ್ನ ನುಚ್ಚು ನೂರಾಗಿಸೋದು ಗ್ಯಾರಂಟಿ ಅನ್ನೋ‌ ಮಾತು ಈಗಾಗಲೇ ಹುಟ್ಕೊಂಡಿದೆ.

ಮೋಸ್ಟ್ ಎಕ್ಸ್ ಪೆಕ್ಟೆಡ್ ಆರ್​​.ಆರ್.ಆರ್​ ಸಿನಿಮಾ ಸ್ವತಂತ್ರ ಪೂರ್ವದ ಕಥೆಯನ್ನ ಒಳಗೊಂಡಿದೆ. ತೆಲುಗು ನೆಲದ ಇಬ್ಬರು ಕ್ರಾಂತಿಕಾರಿಗಳ ಬದುಕಿನ ಘಟ್ಟವನ್ನ ತೆರೆಮೇಲೆ ತೋರಿಸಲು ಹೊರಟಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಹಾಗೂ ಸಣ್ಣ ಟೀಸರ್ ಬಿಡುಗಡೆಯಾಗಿದೆ. ರಾಮ್ ಚರಣ್ ಹಾಗೂ ಎನ್​ಟಿಆರ್ ಅವರ ಲುಕ್ ನೋಡಿ ಇಬ್ಬರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಆರ್.ಆರ್.ಆರ್ ಸಿನಿಮಾ ಜನವರಿ 8ಕ್ಕೆ ಬರೋದು ಪಕ್ಕಾ ಆಗಿತ್ತು. ಆದರೆ ಕೊರೋನಾ ಎಂಬ ಮಾಹಾಮಾರಿ ಎಲ್ಲವನ್ನೂ ತಲೆಕೆಳಗಾಗಿಸಿದೆ. ರಾಜಮೌಳಿಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಹೀಗಾಗಿ ಆರ್. ಆರ್.ಆರ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.Facebook: ನಿಮ್ಮ ಖಾತೆಯನ್ನು ಯಾರಾದರೂ ಕದ್ದು ನೋಡುತ್ತಿದ್ದಾರೆಯೇ? ಹೀಗೆ ಪತ್ತೆಹಚ್ಚಬಹುದು

ನನ್ನಿಂದಾದ ತಪ್ಪಿಗೆ ನನ್ನ ತಂದೆಯನ್ನು ಅಪಹಾಸ್ಯ ಮಾಡುವುದು ಸರಿಯೇ?; ಹಾರ್ದಿಕ್ ಪಾಂಡ್ಯ
First published: June 3, 2020, 10:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading