ಕಿಚ್ಚ ಸುದೀಪ್ ಚಿತ್ರದಲ್ಲಿ ಚಾನ್ಸ್ ಕೊಡಿಸುವ ಆಮಿಷವೊಡ್ಡಿ ಯುವತಿ ಮೇಲೆ ಅತ್ಯಾಚಾರ

ಇಬ್ಬರ ನಡುವೆ ಅತಿಯಾದ ಸಲುಗೆ ಕೂಡ ಇತ್ತು ಎನ್ನಲಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿ ಪವನ್ ಜನವರಿ 12ರಂದು ಸಂತ್ರಸ್ತೆಗೆ ಕರೆ ಮಾಡಿ, ನಟ ಸುದೀಪ್ ಚಿತ್ರದಲ್ಲಿ ನಿನಗೆ ತಂಗಿ ಪಾತ್ರ ಸಿಕ್ಕಿದೆ. ಆಡಿಷನ್​​ ಮಾಡಲು ಡೈರೆಕ್ಟರ್ ಬಂದಿದ್ದಾರೆ.  ಬೇಗ ಡ್ಯಾನ್ಸ್​ ಕ್ಲಾಸ್​ ಹತ್ತಿರ ಬಾ, ಎಂದು ಕರೆಸಿಕೊಂಡಿದ್ದಾನೆ.

news18-kannada
Updated:January 16, 2020, 8:02 AM IST
ಕಿಚ್ಚ ಸುದೀಪ್ ಚಿತ್ರದಲ್ಲಿ ಚಾನ್ಸ್ ಕೊಡಿಸುವ ಆಮಿಷವೊಡ್ಡಿ ಯುವತಿ ಮೇಲೆ ಅತ್ಯಾಚಾರ
ಆರೋಪಿ ಪವನ್ ಮಾಸ್ಟರ್
  • Share this:
ಬೆಂಗಳೂರು(ಜ.16): ನಟ ಕಿಚ್ಚ ಸುದೀಪ್​ ಚಿತ್ರದಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಡ್ಯಾನ್ಸ್​​ ಮಾಸ್ಟರ್ ಮೇಲೆ ಕೇಳಿ ಬಂದಿದೆ. ಸದ್ಯ ಆರೋಪಿಯು ಪೊಲೀಸರ ವಶದಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ರೈನ್ ಬೋ ಡ್ಯನ್ಸ್​​ ಶಾಲೆಯ ಪವನ್​ ಮಾಸ್ಟರ್​ ಬಂಧಿತ ಆರೋಪಿ. ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಕಳೆದ ಮೂರು ವರ್ಷಗಳಿಂದ ಆರೋಪಿಯ ಡ್ಯಾನ್ಸ್​ ಶಾಲೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಳು. ಇಬ್ಬರು ಕೂಡ ಆತ್ಮೀಯವಾಗಿ ಪರಿಚಯವಿದ್ದರಿಂದ ಸಂತ್ರಸ್ತೆ ಪವನ್​ ಡ್ಯಾನ್ಸ್​ ಶೋ ಕಾರ್ಯಕ್ರಮಗಳಿಗೂ ಹೋಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಡ್ಯಾನ್ಸ್​ ಮೋಡಿಗೆ ಬಾಲಿವುಡ್​ ಮಂದಿಯೇ ಫಿದಾ: ಯಾರೀ ಟಿಕ್ ಟಾಕ್ ಸ್ಟಾರ್

ಇಬ್ಬರ ನಡುವೆ ಅತಿಯಾದ ಸಲುಗೆ ಕೂಡ ಇತ್ತು ಎನ್ನಲಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿ ಪವನ್ ಜನವರಿ 12ರಂದು ಸಂತ್ರಸ್ತೆಗೆ ಕರೆ ಮಾಡಿ, "ನಟ ಸುದೀಪ್ ಚಿತ್ರದಲ್ಲಿ ನಿನಗೆ ತಂಗಿ ಪಾತ್ರ ಸಿಕ್ಕಿದೆ. ಆಡಿಷನ್​​ ಮಾಡಲು ಡೈರೆಕ್ಟರ್ ಬಂದಿದ್ದಾರೆ.  ಬೇಗ ಡ್ಯಾನ್ಸ್​ ಕ್ಲಾಸ್​ ಹತ್ತಿರ ಬಾ," ಎಂದು ಕರೆಸಿಕೊಂಡಿದ್ದಾನೆ.

ಆರೋಪಿಯ ರೈನ್ ಬೋ ಡ್ಯಾನ್ಸ್ ಶಾಲೆ ನಾಗರಬಾವಿಯ 2ನೇ ಸ್ಟೇಜ್ ಅನ್ನಪೂರ್ಣೇಶ್ವರಿ ನಗರದಲ್ಲಿದೆ. ಯುವತಿ ಅಲ್ಲಿಗೆ ಬಂದ ಬಳಿಕ, ಪಾರ್ಟಿಗೆ ಹೋಗೋಣ ಅಂತ ಬಲವಂತ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ಮೊಬೈಲ್​​​ನಲ್ಲಿ ಅಶ್ಲೀಲ ದೃಶ್ಯಗಳನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಇಷ್ಟೇ ಅಲ್ಲದೇ, ಯುವತಿಗೆ  ಮತ್ತು ಬರಿಸುವ ದ್ರಾವಣ ಕುಡಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

Roberrt: ಭಜರಂಗಿ ಅವತಾರದಲ್ಲಿ ಡಿ ಬಾಸ್: ಅಭಿಮಾನಿಗಳು ಫುಲ್ ಖುಷ್

ಕೃತ್ಯದ ಬಳಿಕ ಆರೋಪಿ ಪವನ್​​​, ಸಂತ್ರಸ್ತೆಯ ಗೆಳೆಯನ ಜೊತೆಗೂಡಿ ಆಕೆಯನ್ನು ಮನೆಗೆ ತಂದು ಬಿಟ್ಟಿದ್ದ ಎನ್ನಲಾಗಿದೆ. ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ