• Home
  • »
  • News
  • »
  • entertainment
  • »
  • MM Keeravani: ಗೋಲ್ಡನ್ ಗ್ಲೋಬ್ ಅವಾರ್ಡ್​ ಗೆದ್ದ ಎಂ ಎಂ ಕೀರವಾಣಿ ಯಾರು!? ಇವ್ರು ಮೂಸಿಕ್​ ಡೈರೆಕ್ಟರ್ ಆಗಿದ್ದು ಹೇಗೆ?

MM Keeravani: ಗೋಲ್ಡನ್ ಗ್ಲೋಬ್ ಅವಾರ್ಡ್​ ಗೆದ್ದ ಎಂ ಎಂ ಕೀರವಾಣಿ ಯಾರು!? ಇವ್ರು ಮೂಸಿಕ್​ ಡೈರೆಕ್ಟರ್ ಆಗಿದ್ದು ಹೇಗೆ?

ಎಂ ಎಂ ಕೀರವಾಣಿ

ಎಂ ಎಂ ಕೀರವಾಣಿ

ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಕೀರವಾಣಿ ಸೋದರ ಸಂಬಂಧಿಗಳಾಗಿದ್ದು, ರಾಜಮೌಳಿ ನಿರ್ದೇಶನದ ಎಲ್ಲಾ 12 ಚಲನಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ.

  • Share this:

ಆರ್‌ಆರ್‌ಆರ್ (RRR) ಚಿತ್ರದ ಜನಪ್ರಿಯ ಹಾಡು ನಾಟು ನಾಟು ಅತ್ಯುತ್ತಮ ಒರಿಜಿನಲ್ ಹಾಡು ಎಂಬ ಮನ್ನಣೆಯನ್ನು ಪಡೆಯುವುದರೊಂದಿಗೆ (ಮೂಲ) ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ (Golden Globe Award) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಇದು ಐತಿಹಾಸಿಕ ಕ್ಷಣವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ (MM Keeravani) ಈ ಮಹತ್ತರ ಸಂಭ್ರಮದಲ್ಲಿ ನಾನು ಭಾಗಿಯಾಗಿರುವುದಕ್ಕೆ ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ


ರಾಜಮೌಳಿಗೆ ಧನ್ಯವಾದ ಅರ್ಪಿಸಿದ ಕೀರವಾಣಿ


ಈ ಪ್ರಶಸ್ತಿ ನನಗೆ ಸೇರಬೇಕಾದ್ದಲ್ಲ ನನ್ನ ಸಹೋದರ ಎಸ್ಎಸ್ ರಾಜಮೌಳಿಗೆ ಸಲ್ಲಬೇಕಾಗಿರುವುದು. ಏಕೆಂದರೆ ಚಿತ್ರವನ್ನು ನಿರ್ದೇಶಿಸಿರುವ ರಾಜಮೌಳಿ ಚಿತ್ರದಲ್ಲಿ ತಮ್ಮ ಅಪ್ರತಿಮ ಕಲಾವಂತಿಕೆಯನ್ನು ಪ್ರದರ್ಶಿಸಿದ್ದಾರೆ. ಅವರ ನಿರಂತರ ಬೆಂಬಲ ಹಾಗೂ ಪ್ರೋತ್ಸಾಹದಿಂದಲೇ ಈ ಪ್ರಶಸ್ತಿಗೆ ನಾನು ಅರ್ಹನಾಗಿರುವೆ ಎಂದು ತಿಳಿಸಿದ್ದಾರೆ. ಹೀಗಾಗಿ ಈ ಪ್ರಶಸ್ತಿ ಅವರಿಗೆ ಸಲ್ಲಬೇಕಾಗಿರುವುದು ಎಂದು ವಿನಮ್ರರಾಗಿ ತಿಳಿಸಿದ್ದಾರೆ.
ಹಾಡಿಗೆ ತಕ್ಕಂತೆ ನರ್ತಿಸಿರುವ ರಾಮ್‌ಚರಣ್ ಹಾಗೂ ಎನ್‌ಟಿಆರ್


ಕೀರವಾಣಿ, ಹಾಡಿನ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಅವರಿಗೆ ಧನ್ಯವಾದ ತಿಳಿಸಿದ್ದು, ಹಾಡಿಗೆ ನರ್ತಿಸಿರುವ ಪ್ರಮುಖ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ಪುತ್ರ ಕಾಲ ಭೈರವನಿಗೂ ಕೀರವಾಣಿ ಧನ್ಯವಾದ ಅರ್ಪಿಸಿದ್ದು, ಕಾಲ ಭೈರವ ಕೂಡ ಹಾಡಿಗೆ ದನಿಗೂಡಿಸಿದ್ದಾರೆ.


ನಾಟು ನಾಟು ಹಾಡಿನಲ್ಲಿ ರಾಮ್‌ಚರಣ್ ಹಾಗೂ ಎನ್‌ಟಿಆರ್ ತಮ್ಮ ಅದ್ಭುತ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದ್ದು, ಎಲ್ಲಿಯೂ ಲಯ ತಪ್ಪದೆ ಸಮಾನವಾಗಿ ಹೆಜ್ಜೆಗಳನ್ನು ಹಾಕುತ್ತಾ, ಹೈ ಎನರ್ಜಿಯ ಹಾಡಿಗೆ ಅಷ್ಟೇ ಎನರ್ಜಿಯಿಂದ ಕುಣಿದು ಹಾಡಿನ ಖ್ಯಾತಿಯನ್ನು ಇನ್ನಷ್ಟು ವಿಸ್ತಾರಗೊಳಿಸಿದ್ದಾರೆ.


ಯೂಟ್ಯೂಬ್‌ನಲ್ಲಿ 11 ಕೋಟಿಗೂ ಹೆಚ್ಚು ವೀಕ್ಷಣೆ ಕಂಡ ಹಾಡು


ಹಾಡು ಬಿಡುಗಡೆಯಾದಾಗ ನಟರಿಬ್ಬರ ನೃತ್ಯ ಹಾಗೂ ಹಾಡು ಎರಡೂ ವೈರಲ್ ಆಗಿತ್ತು ಹಾಗೂ ಯೂಟ್ಯೂಬ್‌ನಲ್ಲಿ 11 ಕೋಟಿಗೂ ಹೆಚ್ಚು ವೀಕ್ಷಣೆ ಕಂಡು ದಾಖಲೆಯನ್ನು ಮಾಡಿತ್ತು.


ರೀಲ್ಸ್‌ಗಳಲ್ಲಿಯೂ ಈ ಹಾಡಿನ ನೃತ್ಯವನ್ನು ಪ್ರತಿಯೊಬ್ಬರೂ ಅನುಕರಿಸಿ ಬಿಡುಗಡೆ ಮಾಡುತ್ತಿದ್ದರು. ಒಂದು ರೀತಿಯ ಕ್ರೇಜ್ ಅನ್ನು ಈ ಹಾಡು ಮತ್ತು ನೃತ್ಯ ಹುಟ್ಟುಹಾಕಿತ್ತು ಎಂಬುದು ಸುಳ್ಳಲ್ಲ.


ಅನಿಸಿಕೆ ಹಂಚಿಕೊಂಡ ಕೀರವಾಣಿ


ಕೀರವಾಣಿ ಸಂದರ್ಶನವೊಂದರಲ್ಲಿ ಹಾಡಿನ ದೇಶೀಯ ಬೀಟ್‌ಗಳ ಬಗ್ಗೆ ಹಾಗೂ ಪ್ರೇಕ್ಷಕರನ್ನೂ ಕುಣಿಯುವಂತೆ ಮಾಡಿದ ನೃತ್ಯದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇಂಟರ್ನೆಟ್‌ನ ಎಲ್ಲಾ ಡ್ಯಾನ್ಸಿಂಗ್ ಟ್ರೆಂಡ್‌ಗಳನ್ನು ಈ ಹಾಡಿಗಾಗಿ ಅನುಸರಿಸಿರುವುದಾಗಿ ಕೀರವಾಣಿ ಬಹಿರಂಗಪಡಿಸಿದ್ದಾರೆ.


ಕೀರವಾಣಿಯ ಕುರಿತು ಕಿರುಪರಿಚಯ


61 ರ ಹರೆಯದ ಸಂಗೀತ ಸಂಯೋಜಕರಾಗಿರುವ ಕೀರವಾಣಿ, ಆಂಧ್ರಪ್ರದೇಶದ ಕೊವ್ವೊರುನವರು. ಕೀರವಾಣಿಯವರ ತಂದೆ ಶಿವಶಕ್ತಿ ದತ್ತ ಅವರು ತೆಲುಗು ಚಿತ್ರರಂಗದ ಪ್ರಸಿದ್ಧ ಗೀತರಚನೆಕಾರರೂ ಹೌದು.


ರಾಜಮೌಳಿ ಹಾಗೂ ಕೀರವಾಣಿ ಸೋದರ ಸಂಬಂಧಿಗಳಾಗಿದ್ದು ರಾಜಮೌಳಿ ನಿರ್ದೇಶನದ ಎಲ್ಲಾ 12 ಚಲನಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಬಾಹುಬಲಿ ಸೀರೀಸ್‌ಗಳಾದ, ಬಾಹುಬಲಿ: ದ ಬಿಗಿನಿಂಗ್ ಹಾಗೂ ಬಾಹುಬಲಿ: ದ ಕನ್‌ಕ್ಲೂಶನ್ ಪ್ರಮುಖವಾದವುಗಳು.


ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂಗೀತ ಸಂಯೋಜಕ


ಮನಸು ಮಮತಾ (1990) ಚಿತ್ರದ ಮೂಲಕ ಕೀರವಾಣಿ ಸಂಗೀತ ಸಂಯೋಜಕರಾಗಿ ಪಾದಾರ್ಪಣೆ ಮಾಡಿದರು. ರಾಮ್ ಗೋಪಾಲ್ ವರ್ಮಾ ಅವರ ಕ್ಷಣ ಕ್ಷಣಂ (1991) ಚಿತ್ರ ಅವರಿಗೆ ತೆಲುಗು ಕ್ಷೇತ್ರದಲ್ಲಿ ದೊಡ್ಡ ಖ್ಯಾತಿಯನ್ನೇ ತಂದುಕೊಟ್ಟಿತು.


ಇದನ್ನೂ ಓದಿ: MM Keeravani: ಕನ್ನಡಕ್ಕೂ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ ಗೋಲ್ಡನ್ ಗ್ಲೋಬ್ ವಿನ್ನರ್! ಎಂಎಂ ಕೀರವಾಣಿಯ ಮೂಸಿಕ್ ಮೋಡಿ


ಕೀರವಾಣಿ ಹಿಂದಿ ಹಾಗೂ ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಹಿಂದಿಯಲ್ಲಿ ಅವರನ್ನು ಎಮ್‌ಎಮ್ ಕ್ರೀಮ್ ಎಂದೂ ಕರೆಯುತ್ತಾರೆ.


ಹಿಂದಿ ಸಿನಿ ಕ್ಷೇತ್ರದಲ್ಲಿ ಕ್ರಿಮಿನಲ್, ಸುರ್, ಜಿಸ್ಮ್ ಕೀರವಾಣಿ ಸಂಗೀತ ಸಂಯೋಜಿಸಿರುವ ಜನಪ್ರಿಯ ಚಲನಚಿತ್ರಗಳಾಗಿವೆ. 1997 ರಲ್ಲಿ ಅನ್ನಮಯ ಎಂಬ ಭಕ್ತಿ ಪ್ರಧಾನ ಚಿತ್ರಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದರು.

Published by:ಪಾವನ ಎಚ್ ಎಸ್
First published: