HOME » NEWS » Entertainment » A KID WHO ACTED AS JUNIOR PRABHAS IN RAMYA KRISHNA HAND IN BAAHUBALI AS GROWN UP PHOTO GOES VIRAL SESR

Baahubali: ಬಾಹುಬಲಿ ಚಿತ್ರದಲ್ಲಿ ನಟಿಸಿದ ಈ ಮಗು ಈಗ ಹೇಗಿದೆ ಗೊತ್ತಾ? ಇಲ್ಲಿದೆ ಚಿತ್ರಣ

ಮಹೇಂದ್ರ ಬಾಹುಬಲಿಯಾಗಿ ಕಾಣಿಸಿಕೊಂಡ ಈ ಕಂದ ಹೆಣ್ಣು ಮಗು ಎಂಬುದು ಬಹುತೇಕರಿಗೆ ತಿಳಿದಿಲ್ಲ

news18-kannada
Updated:January 28, 2021, 9:25 PM IST
Baahubali: ಬಾಹುಬಲಿ ಚಿತ್ರದಲ್ಲಿ ನಟಿಸಿದ ಈ ಮಗು ಈಗ ಹೇಗಿದೆ ಗೊತ್ತಾ? ಇಲ್ಲಿದೆ ಚಿತ್ರಣ
ಬಾಹುಬಲಿ ಚಿತ್ರದ ಪೋಸ್ಟರ್​
  • Share this:
ಗಲ್ಲಾಪೆಟ್ಟಿಗೆ ಮಾತ್ರವಲ್ಲದೇ, ಭಾರತೀಯ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ ಚಿತ್ರ ಬಾಹುಬಲಿ. ರಾಜಮೌಳಿ ನಿರ್ದೇಶನದ ಪ್ರಭಾಸ್​, ರಾಣ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಅಭಿನಯದ ಚಿತ್ರ ಇಂದಿಗೂ ಅನೇಕರ ಅಚ್ಚುಮೆಚ್ಚಿನ ಚಿತ್ರ. ಬಾಹುಬಲಿ 1 ರ ದಾಖಲೆಯನ್ನೇ ಮುರಿದು ಬಾಹುಬಲಿ 2 ಚಿತ್ರ ಯಶಸ್ಸು ಪಡೆಯಿತು. 2015ರಲ್ಲಿ ಬಾಹುಬಲಿ ಬಿಡುಗಡೆಯಾದರೆ, 2017ರಲ್ಲಿ ಬಾಹುಬಲಿ 2 ಬಿಡುಗಡೆಗೊಂಡಿತು. ಈ ಚಿತ್ರದಲ್ಲಿ ಗಮನಸೆಳೆದ ಮತ್ತೊಂದು ಅಂಶ ಚಿತ್ರದ ಪೋಸ್ಟರ್​ಗಳು. ಅದರಲ್ಲಿಯೂ ರಮ್ಯಾಕೃಷ್ಣ ಮಗುವೊಂದನ್ನು ಹರಿಯುವ ನೀರಿನ ಮಧ್ಯೆ ಮೇಲೆತ್ತಿದ ಪೋಸ್ಟರ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಪ್ರಭಾಸ್​ ಮಗುವಾಗಿ ಕಾಣಿಸಿಕೊಂಡ ಈ ಕಂದಮ್ಮ ಈಗ ಆರು ವರ್ಷದ ಮಗುವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.



ಮಹೇಂದ್ರ ಬಾಹುಬಲಿಯಾಗಿ ಕಾಣಿಸಿಕೊಂಡ ಈ ಕಂದ ಹೆಣ್ಣು ಮಗು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆರು ವರ್ಷಗಳ ಹಿಂದೆ ಈ ಚಿತ್ರದಲ್ಲಿ ಕಾಣಿಸಿಕೊಂಡ ಕಂದಮ್ಮ ಈಗ ಪುಟ್ಟ ಪೋರಿಯಾಗಿದ್ದಾಳೆ. ಆಕೆಯ ಹೆಸರು ತನ್ವಿ. ಯುಕೆಜಿ ಓದುತ್ತಿರುವ ಬಾಲೆ ಈಕೆ.

ಇದನ್ನು ಓದಿ: ಬಿಡುಗಡೆಯಾಯ್ತು ಬಿಗ್​ಬಾಸ್​ ಪ್ರೋಮೋ; ಶೀಘ್ರದಲ್ಲಿಯೇ ದೊಡ್ಮನೆಗೆ ಕಿಚ್ಚನ ಎಂಟ್ರಿ

ಚಿತ್ರದಲ್ಲಿ ಮಗು ಮಹೇಂದ್ರ ಬಾಹುಬಲಿಯಾಗಿ ಕಾಣಿಸಿಕೊಂಡ ಈ ಬಾಲಕಿ ಚಿತ್ರದ ಪೋಸ್ಟರ್​ಗಳಲ್ಲಿ ಸಿಕ್ಕಾಪಟ್ಟೆ ಕಾಣಿಸಿಕೊಂಡಿದ್ದಳು. ಹಾಲುಗಲ್ಲದ ಮುದ್ದು ಕಂದಮ್ಮ ಇಂದು ಹರಳು ಉರಿದಂತೆ ಮಾತನಾಡುವ ಪುಟಾಣಿಯಾಗಿದ್ದಾಳೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈಕೆಯ ಪೋಟೋ ಮತ್ತೆ ಸದ್ದು ಮಾಡುತ್ತಿದ್ದು, ಮಗುವಿನ ಮುಂದಿನ ಭವಿಷ್ಯು ಉಜ್ವಲವಾಗಿರಲಿ ಎಂದು ಹಲವರು ಹಾರೈಸಿದ್ದಾರೆ.
Published by: Seema R
First published: January 28, 2021, 9:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories