KBC14: ಅಮಿತಾಭ್ ಬಚ್ಚನ್​ಗೆ ಟೀಚರ್ ಮೇಲೆ ಲವ್ ಆಗಿತ್ತಾ? ಕೆಬಿಸಿ ಸ್ಪರ್ಧಿ ಕೇಳಿದ ಪ್ರಶ್ನೆಗೆ ಬಿಗ್ ಬಿ ತಬ್ಬಿಬ್ಬು!

ಕೆಬಿಸಿ ಶೋ ಅನ್ನು ಜನರು ಇಷ್ಟೊಂದು ಇಷ್ಟ ಪಡಲು ಮುಖ್ಯ ಕಾರಣವೆಂದರೆ ಅಮಿತಾಭ್ ಬಚ್ಚನ್ ಅವರು ಈ ಶೋವನ್ನು ನಡೆಸಿಕೊಡುವ ರೀತಿ. ಅಲ್ಲದೆ ಪ್ರತಿಯೊಂದು ಪ್ರಶ್ನೆಗಳ ಮಧ್ಯೆ ಅಮಿತಾಭ್ ಅವರು ಅಲ್ಲಿ ಹಾಟ್ ಸೀಟ್ ಮೇಲೆ ಕುಳಿತು ಕೌನ್ ಬನೇಗಾ ಕರೋಡ್‌ಪತಿ ಆಟವನ್ನು ಆಡುತ್ತಿರುವ ಸ್ಪರ್ಧಿಗಳಿಗೆ ಮಾತಾಡಿಸುವ ರೀತಿ ಮತ್ತು ಆ ಸ್ಪರ್ಧಿಗಳು ಅಮಿತಾಭ್ ಅವರನ್ನು ಮಾತಾಡಿಸುವ ರೀತಿ ಮತ್ತು ಕೇಳುವ ಪ್ರಶ್ನೆಗಳು ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ತುಂಬಾನೇ ಮುಖ್ಯವಾದ ಅಂಶಗಳಾಗಿವೆ. 

ಕೌನ್ ಬನೇಗಾ ಕರೋಡ್‌ಪತಿ 14

ಕೌನ್ ಬನೇಗಾ ಕರೋಡ್‌ಪತಿ 14

  • Share this:
ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್‌ಪತಿ 14’ (Kaun Banega Crorepati 14) ಹಿಂದಿ ಗೇಮ್ ಶೋ ಅನ್ನು ನೋಡುವುದನ್ನು ಯಾರೊಬ್ಬ ಪ್ರೇಕ್ಷಕನು ಮಿಸ್ ಮಾಡಿಕೊಳ್ಳುವುದಿಲ್ಲ. ಈ ಶೋ ಅನ್ನು ಜನರು ಇಷ್ಟೊಂದು ಇಷ್ಟ ಪಡಲು ಮುಖ್ಯ ಕಾರಣವೆಂದರೆ ಅಮಿತಾಭ್ ಬಚ್ಚನ್ Amitabh Bachchan) ಅವರು ಈ ಶೋವನ್ನು ನಡೆಸಿಕೊಡುವ ರೀತಿ. ಅಲ್ಲದೆ ಪ್ರತಿಯೊಂದು ಪ್ರಶ್ನೆಗಳ ಮಧ್ಯೆ ಅಮಿತಾಭ್ ಅವರು ಅಲ್ಲಿ ಹಾಟ್ ಸೀಟ್ (Hot Seat) ಮೇಲೆ ಕುಳಿತು ಕೌನ್ ಬನೇಗಾ ಕರೋಡ್‌ಪತಿ ಆಟವನ್ನು ಆಡುತ್ತಿರುವ ಸ್ಪರ್ಧಿಗಳಿಗೆ ಮಾತಾಡಿಸುವ ರೀತಿ ಮತ್ತು ಆ ಸ್ಪರ್ಧಿಗಳು ಅಮಿತಾಭ್ ಅವರನ್ನು ಮಾತಾಡಿಸುವ ರೀತಿ ಮತ್ತು ಕೇಳುವ ಪ್ರಶ್ನೆಗಳು (Question) ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ತುಂಬಾನೇ ಮುಖ್ಯವಾದ ಅಂಶಗಳಾಗಿವೆ. 

ಕೌನ್ ಬನೇಗಾ ಕರೋಡ್‌ಪತಿ 14 ರ ರೋಲ್ ಓವರ್ ಸ್ಪರ್ಧಿ 
ಕೌನ್ ಬನೇಗಾ ಕರೋಡ್‌ಪತಿ 14 ರ ಇತ್ತೀಚಿನ ಒಂದು ಸಂಚಿಕೆಯಲ್ಲಿ, ರೋಲ್ ಓವರ್ ಸ್ಪರ್ಧಿ ಪೂಜಾ ಬೊಬ್ಡೆ ಅವರೊಂದಿಗೆ ಆಟವು ಪ್ರಾರಂಭವಾಗುತ್ತದೆ. ಅವರು 10,000 ರೂಪಾಯಿ ಬಹುಮಾನಕ್ಕಾಗಿ ಪ್ರಶ್ನೆಯೊಂದನ್ನು ಸ್ವೀಕರಿಸುತ್ತಾರೆ ಮತ್ತು ಆ ಪ್ರಶ್ನೆ ಸರೋಜಿನಿ ನಾಯ್ಡು ಅವರನ್ನು ಮತ್ತು ಕಾಶ್ಮೀರಿ ಕವಿ ಹಬ್ಬಾ ಖಾತೂನ್ ಅವರನ್ನು ಉಲ್ಲೇಖಿಸಲು ಯಾವ ಪಕ್ಷಿಯ ಹೆಸರನ್ನು ಬಳಸುತ್ತಾರೆ ಅಂತಾಗಿತ್ತು. ಅದಕ್ಕೆ ಕುಕು, ನೈಟಿಂಗೇಲ್, ಮೈನಾ ಮತ್ತು ಗುಬ್ಬಚ್ಚಿ ಅಂತ ನಾಲ್ಕು ಆಯ್ಕೆಗಳನ್ನು ಸಹ ನೀಡಿದ್ದರು.

ಇದನ್ನೂ ಓದಿ: Love marriage: 55 ವರ್ಷದ ವ್ಯಕ್ತಿಯನ್ನು ವಿವಾಹವಾದ 18 ವರ್ಷದ ಯುವತಿ! ಇದಕ್ಕೆಲ್ಲಾ ಕಾರಣ ಬಾಲಿವುಡ್​ ಈ ಖ್ಯಾತ ನಟನ ಹಾಡು!

ಬಿಗ್ ಬಿ ಅವರ ಮುಂದೆ ಹಾಟ್ ಸೀಟ್ ನಲ್ಲಿ ಕುಳಿತ ಪೂಜಾ ಅವರು ನೈಟಿಂಗೇಲ್ ಅಂತ ಉತ್ತರಿಸಿದರು. ನಂತರ ಪೂಜಾ ಅವರು ತಮಗೆ ಭಯವಾಗುತ್ತಿದೆ ಎಂದು ಬಿಗ್ ಬಿ ಅವರಿಗೆ ಹೇಳುತ್ತಾರೆ.

ಅಮಿತಾಭ್ ಅವರಿಗೆ ಪ್ರಶ್ನೆ ಕೇಳಿದ ಸ್ಪರ್ಧಿ  
ಹಾಗೆಯೇ ಪೂಜಾ ಅವರು ಬಿಗ್ ಬಿ ಅವರಿಗೆ ‘ನಿಮ್ಮ ನೆಚ್ಚಿನ ಶಿಕ್ಷಕ ಯಾರು’ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಬಿಗ್ ಬಿ ಅವರು "ಶಾಲೆಯಲ್ಲಿ ನನ್ನ ಪರಿಸ್ಥಿತಿ ತುಂಬಾನೇ ಕೆಟ್ಟದಾಗಿತ್ತು. ನನ್ನನ್ನು ಯಾವಾಗಲೂ ನನ್ನ ತರಗತಿಯಿಂದ ಹೊರ ಹೋಗುವಂತೆ ಶಿಕ್ಷಕರು ಹೇಳುತ್ತಿದ್ದರು ಮತ್ತು ಶಿಕ್ಷೆ ಪಡೆಯುವುದು ನನಗೆ ದಿನನಿತ್ಯದ ಅಭ್ಯಾಸವಾಗಿತ್ತು. ಆದ್ದರಿಂದ ನಾನು ಎಂದಿಗೂ ಶಿಕ್ಷಕರಿಗೆ ನೆಚ್ಚಿನ ವಿದ್ಯಾರ್ಥಿಯಾಗಿರಲಿಲ್ಲ ಮತ್ತು ನಾನು ತರಗತಿಯ ಹೊರಗೆ ಹೆಚ್ಚು ಸಮಯ ಇರುತ್ತಿದ್ದರಿಂದ ಯಾವುದೇ ಶಿಕ್ಷಕರು ನನಗೆ ನೆಚ್ಚಿನವರೂ ಆಗಿರಲಿಲ್ಲ" ಎಂದು ಹೇಳಿದರು. ಇಷ್ಟಕ್ಕೆ ಸುಮ್ಮನಿರದೆ ಪೂಜಾ ಅವರು ಅಮಿತಾಭ್ ಅವರಿಗೆ ‘ನಿಮಗೆ ಯಾವುದೇ ಶಿಕ್ಷಕರ ಮೇಲೆ ಕ್ರಶ್ ಅಗಿತ್ತೇ’ ಎಂದು ಕೇಳಿಯೇ ಬಿಟ್ಟರು.

ಇದಕ್ಕೆ ಬಿಗ್ ಬಿ ಉತ್ತರ ಹೇಗಿತ್ತು ನೋಡಿ
ಬಿಗ್ ಬಿ ಒಂದು ಕ್ಷಣ ಆಘಾತಕ್ಕೊಳಗಾದಂತೆ ಕಂಡು ನಂತರ ಅದಕ್ಕೆ ತುಂಬಾನೇ ಹಾಸ್ಯಾಸ್ಪದವಾಗಿ ಉತ್ತರಿಸಿದರು. "ನಾನು ಯಾವಾಗಲೂ ಶಿಕ್ಷಕರಿಂದ ಶಿಕ್ಷೆ ಪಡೆಯುತ್ತಿದ್ದೆ, ಹಾಗಾಗಿ ನನಗೆ ಯಾರು ನೆಚ್ಚಿನ ಶಿಕ್ಷಕರಿರಲಿಲ್ಲ ಮತ್ತು ಯಾವುದೇ ಶಿಕ್ಷಕಿಯನ್ನು ಇಷ್ಟ ಪಡಲು ನಾನು ಹೇಗೆ ಧೈರ್ಯ ಮಾಡಬಲ್ಲೆ? ನಾನು ಒಂದು ವೇಳೆ ಹಾಗೆ ಮಾಡಿದ್ದರೂ ಸಹ, ಅದನ್ನು ನಿಮಗೆ ಹೇಳಲು ಹೋಗುವುದಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: Amitabh Bachchan: ಅಮಿತಾಭ್‌ ಬಚ್ಚನ್ ಇವರಿಗೆ ದೇವರಂತೆ, ಅಭಿಮಾನಿ ಮನೆಯಲ್ಲಿ ಬಿಗ್ ಬಿ ಪ್ರತಿಮೆ!

ಹಾಗೆಯೇ ಆಟದಲ್ಲಿ ಮುಂದುವರೆದ ಪೂಜಾ ಅವರು ಮುಂದಿನ ಪ್ರಶ್ನೆಯನ್ನು 50-50 ಲೈಫ್ಲೈನ್ ಅನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ನೀಡುತ್ತಾರೆ. ನಂತರ ಅವರಿಗೆ 1,60,000 ರೂಪಾಯಿ ಬಹುಮಾನಕ್ಕಾಗಿ ಅವರಿಗೆ 2017 ರಲ್ಲಿ, ತಮಿಳುನಾಡಿನ ಇರುಳ ಎಂಬ ಬುಡಕಟ್ಟಿನ ಸದಸ್ಯರು ಅಮೆರಿಕದ ಫ್ಲೋರಿಡಾದಲ್ಲಿ ಯಾವ ಕೆಲಸಕ್ಕೆ ಸಹಾಯ ಮಾಡಲು ಹೋಗಿದ್ದರು ಎಂಬ ಪ್ರಶ್ನೆ ಕೇಳಲಾಗುತ್ತದೆ. ಅದನ್ನು ತಪ್ಪಾಗಿ ಉತ್ತರಿಸಿದ್ದಕ್ಕೆ ಆಟದಿಂದ ಹೊರ ನಡೆದ ಪೂಜಾ ಕೆಬಿಸಿಯಲ್ಲಿ ಗೆದ್ದ ಬಹುಮಾನದ ಮೊತ್ತ 10,000 ರೂಪಾಯಿಗೆ ಇಳಿಯಿತು.
Published by:Ashwini Prabhu
First published: