• Home
  • »
  • News
  • »
  • entertainment
  • »
  • Kantara-KGF Hotel: ಥಿಯೇಟರ್‌ನಲ್ಲಿ ನೋಡಿದ್ದಾಯ್ತು, ಈಗ ಅಲ್ಲೇ ಕೂತು ಊಟ ಮಾಡಿ! ಕಾಂತಾರ, ಕೆಜಿಎಫ್‌ ಹೆಸರಲ್ಲಿ ನಿರ್ಮಾಣವಾಗ್ತಿದೆ ಹೋಟೆಲ್!

Kantara-KGF Hotel: ಥಿಯೇಟರ್‌ನಲ್ಲಿ ನೋಡಿದ್ದಾಯ್ತು, ಈಗ ಅಲ್ಲೇ ಕೂತು ಊಟ ಮಾಡಿ! ಕಾಂತಾರ, ಕೆಜಿಎಫ್‌ ಹೆಸರಲ್ಲಿ ನಿರ್ಮಾಣವಾಗ್ತಿದೆ ಹೋಟೆಲ್!

ಕಾಂತಾರ ಹೆಸರಿನ ಹೋಟೆಲ್‌

ಕಾಂತಾರ ಹೆಸರಿನ ಹೋಟೆಲ್‌

ಇದೀಗ ಕಾಂತಾರ ಹಾಗೂ ಕೆಜಿಎಫ್‌ ಹೆಸರನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಹೋಟೆಲ್‌ ಉದ್ಯಮಿಯೊಬ್ಬರು ಮುಂದಾಗಿದ್ದಾರೆ. ಹೌದು, ಕಾಂತಾರ ಹಾಗೂ ಕೆಜಿಎಫ್ ಹೆಸರಲ್ಲಿ ಮಂಗಳೂರು (Mangaluru) ಹಾಗೂ ಬೆಂಗಳೂರಿನಲ್ಲಿ (Bengaluru) ಹೋಟೆಲ್ (Hotel) ನಿರ್ಮಾಣವಾಗಿದ್ದು, ಆಹಾರ ಪ್ರಿಯರು ಹಾಗೂ ಸಿನಿ ಪ್ರಿಯರ ಗಮನ ಸೆಳೆದಿದೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಮಂಗಳೂರು/ಬೆಂಗಳೂರು: ಕಾಂತಾರ (Kantara) ಅಬ್ಬರ ಇಷ್ಟು ದಿನವಾದರೂ ಇನ್ನೂ ನಿಂತಿಲ್ಲ. ಕನ್ನಡ ಸಿನಿಮಾದತ್ತ (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕಾಂತಾರ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕಾಂತಾರ ಕಥೆಗೆ, ರಿಷಬ್ ಶೆಟ್ಟಿ ಅತ್ಯುತ್ತಮ ನಟನೆಗೆ ಪ್ರೇಕ್ಷಕರಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಗಣ್ಯರು ಫಿದಾ ಆಗಿದ್ದರು. ಇನ್ನು ಕೆಜಿಎಫ್‌ (KGF) ಸಿನಿಮಾದ ಬಗ್ಗೆಯೂ ಎಲ್ಲರಿಗೂ ಗೊತ್ತು. ಕೆಜಿಎಫ್‌ ಹಾಗೂ ಕೆಜಿಎಫ್ ಚಾಪ್ಟರ್ 2 (KGF Chapter 2) ಅಂತ 2 ಹಂತದಲ್ಲಿ ಬಂದ ಕೆಜಿಎಫ್‌ ದಾಖಲೆ ಮೇಲೆ ದಾಖಲೆ ಮಾಡಿತ್ತು. ಇದೀಗ ಕಾಂತಾರ ಹಾಗೂ ಕೆಜಿಎಫ್‌ ಹೆಸರನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಹೋಟೆಲ್‌ ಉದ್ಯಮಿಯೊಬ್ಬರು ಮುಂದಾಗಿದ್ದಾರೆ. ಹೌದು, ಕಾಂತಾರ ಹಾಗೂ ಕೆಜಿಎಫ್ ಹೆಸರಲ್ಲಿ ಮಂಗಳೂರು (Mangaluru) ಹಾಗೂ ಬೆಂಗಳೂರಿನಲ್ಲಿ (Bengaluru) ಹೋಟೆಲ್ (Hotel) ನಿರ್ಮಾಣವಾಗಿದ್ದು, ಆಹಾರ ಪ್ರಿಯರು ಹಾಗೂ ಸಿನಿ ಪ್ರಿಯರ ಗಮನ ಸೆಳೆದಿದೆ.


ಮಂಗಳೂರಿನಲ್ಲಿ ಆರಂಭವಾಗಲಿದೆ ಕಾಂತಾರ ಹೋಟೆಲ್


ಕಾಂತಾರ ಮಾಡುತ್ತಿರುವ ರೆಕಾರ್ಡ್ಸ್ ಬಗ್ಗೆ ಗೊತ್ತೇ ಇದೆ. ಇದನ್ನೇ ಎನ್‌ ಕ್ಯಾಶ್ ಮಾಡಿಕೊಳ್ಳಲು ಹೋಟೆಲ್ ಉದ್ಯಮಿಯೊಬ್ಬರು ಸಜ್ಜಾಗಿದ್ದಾರೆ. ಮಂಗಳೂರಿನಲ್ಲಿ ಕಾಂತಾರ ಹೆಸರಿನಲ್ಲಿ ಹೋಟೆಲ್ ಒಂದು ಈಗಾಗಲೇ ನಿರ್ಮಾಣವಾಗಿದೆ. ಅತೀ ಶೀಘ್ರದಲ್ಲೇ ಕಾಂತಾರ ಹೋಟೆಲ್ ಪ್ರಾರಂಭ ಮಾಡುವುದಾಗಿ ಸುದ್ದಿಯಾಗಿದೆ. ಕಾಂತಾರ ಹೆಸರಿನಲ್ಲಿ ಶುರುವಾಗಲಿರುವ ಹೋಟೆಲ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ಕಾಂತಾರ-ಕೆಜಿಎಫ್ ಹೆಸರಿನ ಹೋಟೆಲ್


ಬೆಂಗಳೂರಿನಲ್ಲಿ ಕೆಜಿಎಫ್‌ ಹೆಸರಿನಲ್ಲಿ ಹೋಟೆಲ್


ಇತ್ತ ಕೆಜಿಎಫ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಹೋಟೆಲ್‌ ಒಂದು ನಿರ್ಮಾಣವಾಗಿದೆ. ಸಹಕಾರ ನಗರದ ಕೊಡಿಗೆಹಳ್ಳಿ ಗೇಟ್ ಬಳಿ ಹೋಟೆಲ್ ಒಂದು ಶುರುವಾಗಿದೆ. ಅದಕ್ಕೆ ಕೆಜಿಎಫ್‌ ಅಂತ ಹೆಸರು ಇಡಲಾಗಿದೆ. ಈಗಾಗಲೇ ಕೆಜಿಎಫ್ ನಲ್ಲಿ ಊಟ ಸವಿದವರು, ಆ ಸಿನಿಮಾವನ್ನು ನೆನಪಿಸುವಂತಹ ಸ್ಥಳಗಳಲ್ಲಿ ಕೂತು ಎಂಜಾಯ್ ಮಾಡುತ್ತಿದ್ದಾರೆ.


ದಾಖಲೆ ಬರೆದ ಕಾಂತಾರ ಸಿನಿಮಾ


ಇದನ್ನೂ ಓದಿ: Kantara Movie: ಕೊನೆಯ 25 ನಿಮಿಷ ಅದ್ಭುತ, ಕಣ್ಣಲ್ಲಿ ನೀರು ಬಂತು! ಕಾಂತಾರಕ್ಕೆ ಸುನೀಲ್ ಶೆಟ್ಟಿ ಮೆಚ್ಚುಗೆ


ಕಾಂತಾರ ವೀಕ್ಷಿಸಿದ ಕಮಲ್ ಹಾಸನ್


50 ದಿನ ಪೂರೈಸಿದೆ ಕಾಂತಾರ ಸಿನಿಮಾವನ್ನ ಅನೇಕ ಸೂಪರ್ ಸ್ಟಾರ್​​ಗಳು ವೀಕ್ಷಿಸಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಚಿತ್ರವನ್ನ ಕೊಂಡಾಡಿದ್ದಾರೆ. ಸಿನಿಮಾ ನೋಡಿದ ಕೆಲ ಸ್ಟಾರ್​ ನಟರು ರಿಷಬ್ ಶೆಟ್ಟಿಗೆ ಕಾಲ್ ಮಾಡಿಯೇ ವಿಶ್ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಆದ್ಮೇಲೆ ಈಗ ದಕ್ಷಿಣ ಭಾರತದ ಮತ್ತೊಬ್ಬ ಮಹಾನ್ ನಟ ಕಮಲ್ ಹಾಸನ್ ಕನ್ನಡದ ಕಾಂತಾರ ಸಿನಿಮಾವನ್ನ ತಮ್ಮದೇ ಭಾಷೆಯಲ್ಲಿ ವೀಕ್ಷಿಸಿ ಕೊಂಡಾಡಿದ್ದಾರೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿ ವಿಶ್ ಮಾಡಿದ್ದಾರೆ.


ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದಿದ್ದ ಕೆಜಿಎಫ್‌ ಸಿನಿಮಾ


ಕಾಂತಾರಕ್ಕೆ ಸುನೀಲ್ ಶೆಟ್ಟಿ ಮೆಚ್ಚುಗೆ


ಬಾಲಿವುಡ್ ನಟ ಮತ್ತು ಸೆಲೆಬ್ರಿಟಿ ಸುನೀಲ್ ಶೆಟ್ಟಿ, ತಮ್ಮ ಮುಂದಿನ ವೆಬ್ ಸರಣಿ ಧಾರಾವಿ ಬ್ಯಾಂಕ್ ಕುರಿತು ಡಿಎನ್‌ಎ ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರು ಕಾಂತಾರ ಚಿತ್ರದ ಬಗ್ಗೆ ಹೇಳಿದ್ದಾರೆ.


ಕೆಜಿಎಫ್‌ ಚಾಪ್ಟರ್ 2 ಸಿನಿಮಾ


ಇದನ್ನೂ ಓದಿ: Kantara: ಕಲೆಕ್ಷನ್‌ನಲ್ಲಿ ಪುಷ್ಪ ಮೀರಿಸಿದ ಕಾಂತಾರ! ಹೆಚ್ಚು ಗಳಿಕೆಯ ಟಾಪ್-10 ಸಿನಿಮಾಗಳಲ್ಲಿ ಎಷ್ಟನೇ ಸ್ಥಾನ ಗೊತ್ತಾ?


ಕೊನೆಯ ಇಪ್ಪತ್ತೈದು ನಿಮಿಷ ರೋಮಾಂಚನವಾಯ್ತು


ಬಾಲಿವುಡ್ ನಟ ಮತ್ತು ಸೆಲೆಬ್ರಿಟಿ ಸುನೀಲ್ ಶೆಟ್ಟಿ ಅವರು ಕಾಂತಾರ ಚಿತ್ರದ ಬಗ್ಗೆ ಹೇಳಿದ್ದಾರೆ. ಚಿತ್ರದ ಕೊನೆಯ 25 ನಿಮಿಷ ರೋಮಾಂಚನಗೊಳಿಸಿತು ಹಾಗೂ ಕಣ್ಣಲ್ಲಿ ನೀರು ಬಂತು. ಯಾಕಂದ್ರೆ ನಾನು ಅದೇ ಭಾಗದವನು. ಪ್ರತೀ ವರ್ಷ ಇದೇ ರೀತಿಯ ಕೋಲ ಹಾಗೂ ದೈವದ ಪೂಜೆಗೆ ತಪ್ಪದೇ ಹೋಗುತ್ತೇನೆ ಅಂತಾ ಹೇಳಿದ್ರು.

Published by:Annappa Achari
First published: