Roberrt: ರಂಜಾನ್​ ಹಬ್ಬಕ್ಕೆ ರಾಬರ್ಟ್​ನಿಂದ ಭರ್ಜರಿ ಉಡುಗೊರೆ; ಏನದು?

Ramadan 2020: ಕಳೆದ ವರ್ಷ ರಂಜಾನ್​ ಹಬ್ಬಕ್ಕೆ ರಾಬರ್ಟ್​​ ಚಿತ್ರತಂಡ ಥೀಮ್​ ಪೋಸ್ಟರ್​ ಬಿಡುಗಡೆ ಮಾಡಿತ್ತು. ಈ ವರ್ಷ ಪೋಸ್ಟರ್​ ಮೂಲಕ ಆಗಮಿಸಲು ರೆಡಿಯಾಗಿದೆ ಎಂದು ನಿರ್ದೇಶಕ ತರುಣ್​ ಸುಧೀರ್​ ಹೇಳಿದ್ದಾರೆ. ಅಭಿಮಾನಿಗಳು ಕೂಡ ಹೊಸ ಪೋಸ್ಟರ್​ ನೋಡಲು ಕಾದು ಕುಳಿತ್ತಿದ್ದಾರೆ.

news18-kannada
Updated:May 22, 2020, 3:16 PM IST
Roberrt: ರಂಜಾನ್​ ಹಬ್ಬಕ್ಕೆ ರಾಬರ್ಟ್​ನಿಂದ ಭರ್ಜರಿ ಉಡುಗೊರೆ; ಏನದು?
ರಾಬರ್ಟ್​
  • Share this:
ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಅಭಿನಯದ ‘ರಾಬರ್ಟ್‘​ ಚಿತ್ರತಂಡ ರಂಜಾನ್​ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಲು ಸಿದ್ಧವಾಗಿದೆ. ಈ ವಿಚಾರವನ್ನು ಸ್ವತಃ ರಾಬರ್ಟ್​ ನಿರ್ದೇಶಕ ತರುಣ್​ ಸುಧೀರ್​ ಅವರೇ ಹೇಳಿದ್ದು, ಅಭಿಮಾನಿಗಳಿಗೆ ಬಾಡೂಟ ಬಳಸಿದಂತಾಗಿದೆ.

ಕಳೆದೊಂದು ತಿಂಗಳಿನಿಂದ ರಾಬರ್ಟ್​ ಚಿತ್ರದಿಂದ ಅಭಿಮಾನಿಗಳಿಗೆ ಯಾವುದೇ ಅಪ್ಡೇಟ್​ ಸಿಕ್ಕಿಲ್ಲ. ಇದೀಗ ಮೇ 24ರಂದು ದೇಶದಾದ್ಯಂತ ರಂಜಾನ್​ ಹಬ್ಬದಲ್ಲಿರುವ ಜನತೆಗೆ ರಾಬರ್ಟ್​ ಚಿತ್ರತಂಡ ಪೋಸ್ಟರ್​​ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆ ಮೂಲಕ ರಂಜಾನ್​ಗೆ ಶುಭಾಶಯ ಕೋರಲಿದೆ.

ಕಳೆದ ವರ್ಷ ರಂಜಾನ್​ ಹಬ್ಬಕ್ಕೆ ರಾಬರ್ಟ್​​ ಚಿತ್ರತಂಡ ಥೀಮ್​ ಪೋಸ್ಟರ್​ ಬಿಡುಗಡೆ ಮಾಡಿತ್ತು. ಈ ವರ್ಷ ಪೋಸ್ಟರ್​ ಮೂಲಕ ಆಗಮಿಸಲು ರೆಡಿಯಾಗಿದೆ ಎಂದು ನಿರ್ದೇಶಕ ತರುಣ್​ ಸುಧೀರ್​ ಹೇಳಿದ್ದಾರೆ. ಅಭಿಮಾನಿಗಳು ಕೂಡ ಹೊಸ ಪೋಸ್ಟರ್​ ನೋಡಲು ಕಾದು ಕುಳಿತ್ತಿದ್ದಾರೆ.

 


ಏ.9ಕ್ಕೆ ರಾಬರ್ಟ್​ ಚಿತ್ರ ಬಿಡುಗಡೆಯಾಗಿ ಧೂಳೆಬ್ಬಿಸಬೇಕಾಗಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಚಿತ್ರತಂಡ ಹಾಕಿಕೊಂಡ ಯೋಜನೆ ಉಲ್ಟಾ-ಪಲ್ಟಾ ಆಗಿದೆ. ಹಾಗಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಲಾಕ್​ಡೌನ್​ ಮುಗಿದ ನಂತರ ರಾಬರ್ಟ್​ ತೆರೆ ಮೇಲೆ ಬಿಡುಗಡೆ ಮಾಡಲು ತರುಣ್​ ಸುಧೀರ್​ ನಿರ್ಧರಿಸಿದ್ದಾರೆ.

PUBG: ಟೀಂ ಇಂಡಿಯಾ ಸ್ಟಾರ್​​ ಆಟಗಾರರ ಜೊತೆ ಪಬ್​ಜಿ ಆಡುವ ಸುವರ್ಣವಕಾಶ; ಅತ್ಯುತ್ತಮ ಪ್ಲೇಯರ್​​ಗೆ ಒನ್ ಪ್ಲಸ್ ಮೊಬೈಲ್
First published: May 22, 2020, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading