HOME » NEWS » Entertainment » A FOREIGN PARA NORM EXPERT WHO SPOKE WITH THE SPIRIT OF SUSHANT SINGH THE VIDEO IS VIRAL MAK

sushant singh: ಸುಶಾಂತ್‌ ಸಿಂಗ್ ಆತ್ಮದ ಜೊತೆಗೆ ಮಾತನಾಡಿದ ವಿದೇಶಿ ಪ್ಯಾರಾ ನಾರ್ಮಲ್ ತಜ್ಞ; ವಿಡಿಯೋ ವೈರಲ್

ಸುಶಾಂತ್‌ ಆತ್ಮವನ್ನು ಬರಮಾಡಿ ಪ್ರಶ್ನೆ ಮಾಡುವ ಸ್ಟೇವ್ ಹಫ್, “ನೀವು ಬೆಳಕಿನಲ್ಲಿದ್ದೀರಾ?” ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಸುಶಾಂತ್‌ ಸಿಂಗ್ ಆತ್ಮ, ನಾನು ಈಗ ಬೆಳಕನ್ನು ಪಡೆದುಕೊಳ್ಳುತ್ತಿದ್ದೇನೆ” ಎಂದಿದೆ.

MAshok Kumar | news18-kannada
Updated:July 21, 2020, 3:01 PM IST
sushant singh: ಸುಶಾಂತ್‌ ಸಿಂಗ್ ಆತ್ಮದ ಜೊತೆಗೆ ಮಾತನಾಡಿದ ವಿದೇಶಿ ಪ್ಯಾರಾ ನಾರ್ಮಲ್ ತಜ್ಞ; ವಿಡಿಯೋ ವೈರಲ್
ಒಟ್ಟಿನಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆ ಬೆನ್ನಲ್ಲೇ ಶುರುವಾದ ಸ್ವಜನಪಕ್ಷಪಾತದ ಚರ್ಚೆಗಳು ಇದೀಗ ಬಾಲಿವುಡ್ ನಟಿಯರಲ್ಲೇ ಬಿರುಕು ಮೂಡಿಸುವತ್ತ ಹೊರಟಿರುವುದು ಮಾತ್ರ ವಿಪರ್ಯಾಸ.
  • Share this:
ಬಾಲಿವುಡ್ ನಟ ಸುಶಾಂತ್‌ ಸಿಂಗ್ ರಜಪೂತ್ ಇತ್ತೀಚೆಗೆ ತಮ್ಮದೇ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದರು. ಇವರ ಸಾವಿನ ನಂತರ ಬಾಲಿವುಡ್‌ನಲ್ಲಿ ದೊಡ್ಡ ಚರ್ಚಾ ಅಲೆಯೇ ಎದ್ದಿದೆ. ಅಲ್ಲದೆ, ಸುಶಾಂತ್‌ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ವಾದಿಸುವವರು ಇದ್ದಾರೆ. ಆದರೆ, ಉತ್ತರ ಮಾತ್ರ ಈವರೆಗೆ ಸ್ಪಷ್ಟವಾಗಿಲ್ಲ. ಈ ನಡುವೆ ವಿದೇಶಿ ಪ್ಯಾರಾ ನಾರ್ಮಲ್‌ ತಜ್ಞ ಸ್ಟೇವ್ ಹಫ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ತಾನು ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜೊತೆಗೆ ಮಾತನಾಡಿದ್ದೇನೆ ಎಂದು ಸಾಕ್ಷಿ ಸಮೇತ ಹೇಳಿಕೊಂಡಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ 10 ವರ್ಷಗಳಿಂದ ಪ್ಯಾರಾ ನಾರ್ಮಲ್‌ ಚಟುವಟಿಕೆಗಳ ಕುರಿತು ಸಂಶೋಧನೆ ನಡೆಸುತ್ತಿರುವ ತಜ್ಞ ಸ್ಟೇವ್ ಹಫ್‌ ಈ ಹಿಂದೆ ಮೈಕೆಲ್‌ ಜಾಕ್ಸನ್‌ ಅವರ ಆತ್ಮದ ಜೊತೆಗೂ ಮಾತನಾಡಿದ್ದಾಗಿ ಹೇಳಿಕೊಂಡಿದ್ದರು. ಇದೀಗ ಅವರು ಬಿಡುಗಡೆ ಮಾಡಿರುವ 4.7 ನಿಮಿಷದ ಎರಡು ವಿಡಿಯೋದಲ್ಲಿ ಸುಶಾಂತ್‌ ಮಾತನಾಡಿರುವುದು ಸ್ಪಷ್ಟವಾಗಿ ಕೇಳುತ್ತಿದೆ.

ಸುಶಾಂತ್‌ ಆತ್ಮವನ್ನು ಬರಮಾಡಿ ಪ್ರಶ್ನೆ ಮಾಡುವ ಸ್ಟೇವ್ ಹಫ್, “ನೀವು ಬೆಳಕಿನಲ್ಲಿದ್ದೀರಾ?” ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಸುಶಾಂತ್‌ ಸಿಂಗ್ ಆತ್ಮ, "ನಾನು ಈಗ ಬೆಳಕನ್ನು ಪಡೆದುಕೊಳ್ಳುತ್ತಿದ್ದೇನೆ” ಎಂದಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಆದರೆ, “ನಾನು ಬೆಳಕನ್ನು ಪಡೆದುಕೊಳ್ಳುತ್ತಿದ್ದೇನೆ” ಎಂದಿರುವ ಸುಶಾಂತ್‌ ದ್ವನಿಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಅವರ ಅಭಿಮಾನಿಗಳು “ನಾನು ಕೊಲೆಯಾಗಿದ್ದೇನೆ” ಎಂದು ಹೇಳಿರುವುದಾಗಿ ಆರೋಪಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಪ್ಯಾರಾ ನಾರ್ಮಲ್ ತಜ್ಞ ಸ್ಟೀವ್ ಹಫ್, “ಸಾವಿರಾರು ಜನ ನನ್ನನ್ನು ಸುಶಾಂತ್ ಅವರ ಆತ್ಮದ ಜೊತೆಗೆ ಮಾತನಾಡುವಂತೆ ಒತ್ತಾಯಿಸಿದ್ದರು. ಅವರ ಒತ್ತಾಯದ ಮೇರೆಗೆ ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೆ. ಸುಶಾಂತ್ ಸಿಂಗ್ ರಜಪೂತ್‌ ಅವರ ಆತ್ಮದೊಂದಿಗೆ ಸಂಪರ್ಕ ಸಾಧಿಸಲು ನಾನು ಸಾಕಷ್ಟು ಪ್ರಯತ್ನಪಟ್ಟಿದ್ದೆ. ಆದರೆ, ಕೊನೆಗೂ ಅವರ ಆತ್ಮ ದೃಢವಾಗಿ ಸ್ಪಷ್ಟವಾಗಿ ಮಾತನಾಡಿರುವುದು ಸಂತೋಷ ತಂದಿದೆ” ಎಂದು ತಿಳಿಸಿದ್ದಾರೆ.ಇದನ್ನೂ ಓದಿ : ನಾಳೆಯಿಂದ ಲಾಕ್‌ಡೌನ್‌ ತೆರವು; ಹೇಗಿರಲಿದೆ ಸರ್ಕಾರದ ಹೊಸ ಮಾರ್ಗಸೂಚಿ? ಯಾವುದಕ್ಕೆಲ್ಲಾ ನಿರ್ಬಂಧ?

ಮೃತರ ಆತ್ಮಗಳ ಜೊತೆಗೆ ಮಾತನಾಡುವ ಪರಂಪರೆ ಶತಮಾನಗಳಿಂದಲೂ ಇದೆ. ಆದರೆಮ ಇದೇ ಯುಕ್ತಿಯನ್ನು ಇತ್ತೀಚೆಗೆ ತಾಂತ್ರಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, ಆತ್ಮಗಳ ಸಂಭಾಷಣೆಯನ್ನು ಕೇಳಲು ಸ್ಪಿರಿಟ್‌ ಬಾಕ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಂತಹದ್ದೇ ಯಂತ್ರದ ಮೂಲಕ ಸ್ಟೇವ್ ಹಫ್‌ ಸುಶಾಂತ್ ಸಿಂಗ್ ಜೊತೆ ಮಾತನಾಡಿದ್ದಾರೆ. ಆದರೆ, ಇದು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದು ಮಾತ್ರ ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿಯೇ ಉಳಿದಿದೆ.
Published by: MAshok Kumar
First published: July 21, 2020, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories