• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Aishwarya Rai: ಹೆಂಡ್ತಿಯಿಂದ ಇದನ್ನೆಲ್ಲಾ ಕಲಿತ್ರಂತೆ ಅಭಿಷೇಕ್​ ಬಚ್ಚನ್​, ಐಶ್ವರ್ಯಾ ಬಂದಿದ್ದೇ ಬಂದಿದ್ದು ಲಕ್​ ಬದಲಾಯ್ತಂತೆ!

Aishwarya Rai: ಹೆಂಡ್ತಿಯಿಂದ ಇದನ್ನೆಲ್ಲಾ ಕಲಿತ್ರಂತೆ ಅಭಿಷೇಕ್​ ಬಚ್ಚನ್​, ಐಶ್ವರ್ಯಾ ಬಂದಿದ್ದೇ ಬಂದಿದ್ದು ಲಕ್​ ಬದಲಾಯ್ತಂತೆ!

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್

ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮಡದಿ ಐಶ್ವರ್ಯ ಅವರಿಂದ ಕಲಿತ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಆರ್ಟಿಕಲ್ ಓದಿ

 • Share this:
 • published by :

ಐಶ್ವರ್ಯ (Aishwarya Rai) ಅವರ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಹೆಚ್ಚಾಗಿ ಅಭಿಮಾನಿಗಳು ಬಯಸುತ್ತಾರೆ. ಅವರ ವೈಯಕ್ತಿಕ (Personal) ಜೀವನಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಅಭಿಷೇಕ್ ಬಚ್ಚನ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಅವರಿಂದ ನಾನು ತುಂಬಾ ವಿಚಾರಗಳನ್ನು ಕಲಿತಿದ್ದೇನೆ ಅವರಿಂದ ಕಲಿತ ವಿಚಾರಗಳು ಸದಾ ನನಗೆ ಆತ್ಮವಿಶ್ವಾಸ (Confidence) ತಂದು ಕೊಡುತ್ತದೆ ಎಂದು ಅಭಿಷೇಕ್ ಬಚ್ಚನ್ (Abhishek bachchan) ಹೇಳಿದ್ದಾರೆ. ಮದುವೆಯ (Marriage) ನಂತರ ತಾನು ಅವರಿಂದ ಕಲಿತ ವಿಚಾರಗಳು ಬಹಳಷ್ಟಿವೆ ಎಂದು ಅವರು ಹೇಳಿದ್ದಾರೆ.


ಐಶ್ವರ್ಯಾ ರೈ ಬಾಲಿವುಡ್​​ನ ಅತ್ಯಂತ ಜನಪ್ರಿಯ ನಟಿಯರಲ್ಲೊಬ್ಬರು ಮಾಜಿ ವಿಶ್ವ ಸುಂದರಿಕೂಡ ಆಗಿದ್ದಾರೆ. ನಟನೆ ಆರಂಭಿಸಿದ ಕೆಲವೇ ದಿನಗಳಲ್ಲಿ ಅವರು ಉನ್ನತ ನಟಿಯಾಗಿ ಬಾಲಿವುಡ್​​ನಲ್ಲಿ ಗುರುತಿಸಿಕೊಂಡಿದ್ದಾರೆ. ಐಶ್ವರ್ಯಾ ಹಲವಾರು ಚಿತ್ರಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಇವರ ವೃತ್ತಿಜೀವನವದ ಹೊರತಾಗಿಯೂ ಐಶ್ವರ್ಯಾ ಅವರ ಅಭಿಮಾನಿಗಳು ಅವರ ವೈಯಕ್ತಿಕ ಜೀವನದ ಬಗ್ಗೆ ವಿಶೇಷವಾಗಿ ಅಭಿಷೇಕ್ ಬಚ್ಚನ್ ಅವರೊಟ್ಟಿಗೆ ಐಶ್ವರ್ಯ ಹೇಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹೆಚ್ಚು ಬಯಸುತ್ತಾರೆ.


ಸಂದರ್ಶನದಲ್ಲಿ ಹೇಳಿದ ಮಾತು


ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮಡದಿ ಐಶ್ವರ್ಯ ಅವರಿಂದ ಕಲಿತ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ. ವೋಗ್ ಇಂಡಿಯಾ ನಿಯತಕಾಲಿಕೆಯ ಹಳೆಯ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ಅವರಿಂದ ಕಲಿತ ವಿಷಯಗಳ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅಭಿಷೇಕ್ ಬಚ್ಚನ್ ಮದುವೆಯಾಗುವ ಮೊದಲು ನನಗೆ ಆತ್ಮವಿಶ್ವಾಸವನ್ನು ನೀಡಿದ್ದಾಳೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್​ನಲ್ಲಿ ವಿಲನ್ ಆಗಿ ಐಶ್ವರ್ಯಾ ರೈ!


ಆತ್ಮವಿಶ್ವಾಸ ಹೆಚ್ಚಿಸಿದ ಮಡದಿ


ತಾನು ಹಿಂದೆಂದೂ ಹೊಂದಿರದ ಆತ್ಮವಿಶ್ವಾಸವನ್ನು ಅವಳು ನನಗೆ ನೀಡಿದ್ದಾಳೆ. ನಾನು ನಮ್ಮ ಕುಟುಂಬದಲ್ಲಿ ಮಗುವಿನಂತಿದ್ದೆ. ನನ್ನ ಸಹೋದರಿ ವರ್ಷಗಳ ಹಿಂದೆ ಮದುವೆಯಾಗಿದ್ದರು ಮತ್ತು ಅವಳು ಯಾವಾಗಲೂ ನನ್ನನ್ನು ನೋಡಿಕೊಳ್ಳುವ ಜವಾಬ್ಧಾರಿ ಹೊಂದಿದ್ದಳು ಎಂದು ಹೇಳಿದರು. ತನಗೆ ಯಾವ ವಿಷಯದ ಕುರಿತೂ ನಿಜವಾಗಿಯೂ ಜವಾಬ್ದಾರಿ ಇರಲಿಲ್ಲ. ಆದರೆ ಮದುವೆಯಾದ ನಂತರ ನಾನು ಐಶ್ವರ್ಯ ಅವರಿಂದ ಜವಾಬ್ಧಾರಿ ಕಲಿತೆ ಎಂದು ಅವರು ಹೇಳಿಕೊಂಡಿದ್ದಾರೆ. ಯಾವಾಗಲೂ ಐಶ್ವರ್ಯ ಅವರನ್ನು ಜೋಪಾನಮಾಡಲು ನಾನು ಬಯಸುತ್ತೇನೆ ಎಂಬುದಾಗಿಯೂ ಅವರು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಾನು ಇಷ್ಟುದಿನದವರೆಗೆ ಏನೇ ಮಾಡಿದ್ದರು ಅದು ನನ್ನ ತಂದೆ ತಾಯಿಗೆ ಸೇರಬೇಕಾದದ್ದು ಅದೇ ರೀತಿ ನನ್ನ ಹೆಂಡತಿಗೂ ಇದು ಸೇರಬೇಕು ಎಂದು ಹೇಳಿದ್ದಾರೆ.


ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್ ಟ್ರೈಲರ್ ರಿಲೀಸ್! ಸೌತ್​ನಿಂದ ಮತ್ತೊಂದು ಬ್ಲಾಕ್​ಬಸ್ಟರ್ ಫಿಕ್ಸ್

top videos


  ಇಷ್ಟೇ ಅಲ್ಲದೆ ಒಂದೆರಡು ತಿಂಗಳ ಹಿಂದೆ ETimes ಗೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ತನ್ನ ಪತಿಯೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಕನಸು ನನಸಾಗಬೇಕು. ಅಭಿಷೇಕ್‌ ಅವರ ಕನಸಿನ ಯೋಜನೆ ಸಾಕಾರಗೊಳ್ಳಲಿ ಎಂದು ಅವರು ಹೇಳಿದ್ದಾರೆ. ಎಪ್ರಿಲ್‌ನಲ್ಲಿ ಅಭಿಷೇಕ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತನ್ನ ಹೆಂಡತಿಯೊಂದಿಗೆ ಮತ್ತೆ ತೆರೆಯ ಮೇಲೆ ಬರಲು ಇಷ್ಟಪಡುತ್ತೇನೆ ಎಂದು ಹೇಳಿದರು. ನಮ್ಮಿಬ್ಬರಿಗೆ ಒಪ್ಪುವ ಒಂದೊಳ್ಳೆ ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ನಾವಿಬ್ಬರು ಒಟ್ಟಿಗೆ ಕೆಲಸಮಾಡಲು ಈಗಲೂ ಇಷ್ಟ ಪಡುತ್ತೇವೆ ಎಂದು ಹೇಳಿದ್ದಾರೆ.

  First published: