Puneeth Rajkumar: ಗಣೇಶನ ಜೊತೆ ಮನೆಗೆ ಬರ್ತಾರೆ ಪವರ್ ಸ್ಟಾರ್! ಅಪ್ಪು ಕುಟುಂಬಕ್ಕೆ ಮೂರ್ತಿ ನೀಡಲು ಅಭಿಮಾನಿಗಳ ಸಿದ್ಧತೆ

ಗಣೇಶ ಹಬ್ಬದಂದು ನೆಚ್ಚಿನ ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಗಣಪತಿ ಮೂರ್ತಿ ಉಡುಗೊರೆಯಾಗಿ ನೀಡಲು ಕಲಾವಿದ ಭೀಮರಾಜ್ ಹಾಗೂ ಕುಟುಂಬಸ್ಥರು 6 ಗಣೇಶನ ಮೂರ್ತಿಗಳನ್ನ ತಯಾರಿಸಿದ್ದು, ಅಪ್ಪುವಿಗೆ ಅಪ್ಪುಗೆಯ ಪ್ರೀತಿ ತೋರಿಸಿದ್ದಾರೆ.

ಅಪ್ಪು ಹಾಗೂ ಗಣೇಶ ಮೂರ್ತಿಗಳು

ಅಪ್ಪು ಹಾಗೂ ಗಣೇಶ ಮೂರ್ತಿಗಳು

  • Share this:
ನಗುಮುಖದ ಸರದಾರ ಅಪ್ಪು (Appu) ಅಗಲಿ 10 ತಿಂಗಳೇ ಕಳೆದಿದೆ. ಆದ್ರೆ  ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇಲ್ಲೊಂದು ಕಲಾವಿದರ ಕುಟುಂಬ ಗಣೇಶ ತಯಾರಿಕೆಯಲ್ಲಿ ಪುನೀತ್ ರಾಜ್​ ಕುಮಾರ್ (Puneeth Rajkumar)​ ಅವರನ್ನ ನಿರ್ಮಿಸಿದ್ದು, ಅಪ್ಪಾಜಿ ಕುಟುಂಬಕ್ಕೆ ಗಣಪತಿ ಹಬ್ಬದ ಉಡುಗೊರೆಯಾಗಿ ನೀಡಲು ಸಜ್ಜಾಗಿದ್ದಾರೆ. ರಾಜ್ಯದೆಲ್ಲೆಡೆ ಈ ಬಾರಿ ಅಪ್ಪು ಗಣಪತಿ ಮೂರ್ತಿಗಳು (Ganapati Idols) ವಿಶೇಷ ಆಕರ್ಷಣೆಯಾಗಿದೆ. ಎಂದಿನಂತೆ ಕೋಲಾರದ (Kolara) ಗಾಂಧಿನಗರದಲ್ಲಿ ಭೀಮಾರಾಜ್ ಕುಟುಂಬ ಗಣೇಶೋತ್ಸವಕ್ಕೆ, ಬೃಹತ್ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ.

ಭೀಮರಾಜ್ ಹಾಗೂ ಮಕ್ಕಳಾದ ಮುತ್ತುರಾಜ್, ಭರತ್ ತಯಾರಿಸುವ ಗಣೇಶನ ಮೂರ್ತಿಗಳಿಗೆ ಕೋಲಾರ ಹಾಗೂ ನೆರೆಯ ಆಂಧ್ರ ಹಾಗೂ ತಮಿಳುನಾಡಿನಲ್ಲೂ ಬೇಡಿಕೆಯಿದೆ. ಆದರೆ ಈ ಬಾರಿ ವಿಶೇಷವಾಗಿ ಅಭಿಮಾನಿಗಳ ದೇವರು ಎಂದೇ ಖ್ಯಾತಿ ಪಡೆದಿರುವ ಪುನೀತ್ ರಾಜಕುಮಾರ್ ಅವರನ್ನು ಗಣೇಶನ ಜೊತೆಗೆ ನಿರ್ಮಿಸಿ ವಿಭಿನ್ನತೆ ಪ್ರದರ್ಶಿಸಿದ್ದಾರೆ.



ಅಪ್ಪು ಅಭಿಮಾನಿಗಳಿಂದ ವಿಭಿನ್ನ ಕೆಲಸ

ಜೊತೆಗಿರದ ಜೀವ ಇಂದಿಗೂ ಜೀವಂತ ಎನ್ನುವ ಹಾಗೇ ನೆಚ್ಚಿನ ನಟನನ್ನು ಮರೆಯಲಾಗದೆ. ತಮ್ಮ ಕಲೆಯಲ್ಲಿ ಅಪ್ಪು ಮೇಲಿನ ಅಭಿಮಾನವನ್ನ ಈ ಕುಟುಂಬ ಪ್ರದರ್ಶಿಸುತ್ತಿದೆ. ಭೀಮಾರಾಜ್ ಕುಟುಂಬ ಸಹ ಅಣ್ಣಾವ್ರು ಹಾಗು ಅಪ್ಪುವಿನ ಅಭಿಮಾನಿಗಳಾಗಿದ್ದು, ಈ ಬಾರಿಯ ಗಣೇಶೋತ್ಸವಕ್ಕೆ ಅಪ್ಪುವಿನ ಗಣೇಶ ಮೂರ್ತಿಗಳನ್ನು ವಿಭಿನ್ನ ರೀತಿಯಲ್ಲಿ ತಯಾರು ಮಾಡಿದ್ದಾರೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್​ ನೀಡಲು ನಿರ್ಧಾರ

ಮೊದಲು ತಯಾರು ಮಾಡಿರುವ ಪಾರಿವಾಳ ಸಹಿತ ಮೂರ್ತಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ನೀಡಲು ಈ ಕಲಾವಿದರ ಕುಟುಂಬ ಸಜ್ಜಾಗಿದೆ. ಜೇಡಿ ಮಣ್ಣಲ್ಲೆ, ಯಾವುದೇ ಅಚ್ಚುಗಳಿಲ್ಲದೆ, ಬರಿಗೈಯಲ್ಲೇ ಗಣಪತಿ ಮೂರ್ತಿಗಳನ್ನ ತಯಾರಿಸುವ ಇವರು, ಅಪ್ಪು ಸಹಿತ ಗಣಪತಿ ಮೂರ್ತಿಯನ್ನು ಸಹ ಹಾಗೆಯೇ ನಿರ್ಮಿಸಿದ್ದಾರೆ. ಎರಡೂವರೆ ಅಡಿಯ ಆರು ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಮಣ್ಣಿನ ಮೂರ್ತಿಯಲ್ಲೂ ಅಪ್ಪು ಮುದ್ದು ಮುದ್ದಾಗಿ ರೂಪುಗೊಂಡಿದ್ದಾರೆ.



ಕಂಠೀರವ ಸ್ಟುಡಿಯೋದಲ್ಲಿ ಕೆಲಸ ಮಾಡ್ತಿದ್ದ ಭೀಮರಾಜ್​

ಭೀಮಾರಾಜ್ ಅವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಡಾ.ರಾಜಕುಮಾರ್ ಅಭಿಮಾನಿಯಾಗಿದ್ದರು. ನಂತರ ಕೋಲಾರದ ಗಾಂಧಿನಗರಕ್ಕೆ ಬಂದು ನೆಲೆಸಿದ ಮೇಲೆ ಗಣೇಶ ಮೂರ್ತಿಗಳ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿ ವರ್ಷ ಬರುವ ಗಣೇಶೋತ್ಸವಕ್ಕೆ ತಮಗೆ ಬರುವ ಬೇಡಿಕೆಯ ಮೇಲೆ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದರು.

ಮಕ್ಕಳು ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿ

ಭೀಮಾರಾಜ್‍ಗೆ ಇಬ್ಬರು ಮಕ್ಕಳು, ಪತ್ನಿ ಸಹಕಾರಿಯಾಗಿ ನಿಂತಿದ್ದಾರೆ, ಗಣಪತಿ ಹಬ್ಬದ ಸೀಸನ್ ನಲ್ಲಿ ಮಾತ್ರ ಮೂರ್ತಿಗಳನ್ನು ತಯಾರಿಸುವ ಇವರು, ಉಳಿದ ತಿಂಗಳು ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಭೀಮರಾಜ್ ಅವರು ಡಾ.ರಾಜ್ ಅಭಿಮಾನಿಯಾದರೆ ಮಕ್ಕಳು ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಾರೆ. ಮೂರ್ತಿಗಳಲ್ಲಿ ಈ ಬಾರಿ ಗಣೇಶ ಆರ್ಶೀವಾದ ಮಾಡುತ್ತಿರುವುದು, ಲಡ್ಡು ತಿನ್ನಿಸುತ್ತಿರುವುದು, ಅಪ್ಪುವನ್ನು ಕೈಯಲ್ಲಿ ಮೇಲೆ ಎತ್ತಿ ಹಿಡಿದಿರುವ ಮೂರ್ತಿಗಳನ್ನು ನಿರ್ಮಾಣ ಮಾಡಲಾಗಿದೆ.



ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವ ಮಾತಿಗೆ ಪುನೀತ್ ರಾಜಕುಮಾರ್  ಉದಾಹರಣೆಯಾಗಿದ್ದು. ಅವರು ಮಾಡಿರುವ ಸಾಮಾಜಿಕ ಸೇವೆ ಜನ್ರ ಮನಸ್ಸಿನಲ್ಲಿ ಉಳಿದಿದೆ. ಜೊತೆಗೆ ನಮ್ಮನ್ನಗಲಿ 10 ತಿಂಗಳೇ ಕಳೆದ್ರು ಇಂದಿಗೂ ಸಾವಿರಾರು ಮಂದಿಗೆ ಆದರ್ಶವಾಗಿ ನಿಂತಿರುವುದಂತೂ ಸುಳ್ಳಲ್ಲ.
Published by:Pavana HS
First published: