HOME » NEWS » Entertainment » A FAN ASKED JAGGESH TO GIVE SUGGESTION FOR HAVING THE CHILDREN VB

ಮಕ್ಕಳಾಗಿಲ್ಲ, ಸಲಹೆ ಕೊಡಿ ಎಂದ ಅಭಿಮಾನಿಗೆ ನವರಸನಾಯಕ ಜಗ್ಗೇಶ್ ಹೇಳಿದ್ದೇನು ಗೊತ್ತಾ?

ಅಭಿಮಾನಿಗಳ ಯಾವ ಮನವಿಯನ್ನೂ ಜಗ್ಗೇಶ್ ಹಗುರವಾಗಿ ಕಾಣುವವರಲ್ಲ. ಹೀಗಾಗಿ ಇವರಿಗೂ ಅತ್ಯುತ್ತಮ ಸಲಹೆಯನ್ನೇ ಕೊಟ್ಟಿದ್ದಾರೆ.

news18-kannada
Updated:June 23, 2020, 1:39 PM IST
ಮಕ್ಕಳಾಗಿಲ್ಲ, ಸಲಹೆ ಕೊಡಿ ಎಂದ ಅಭಿಮಾನಿಗೆ ನವರಸನಾಯಕ ಜಗ್ಗೇಶ್ ಹೇಳಿದ್ದೇನು ಗೊತ್ತಾ?
ನಟ ಜಗ್ಗೇಶ್
  • Share this:
ನವರಸ ನಾಯಕ ಜಗ್ಗೇಶ್ ಅವರು ಅಭಿನಯ ಮಾತ್ರವಲ್ಲದೆ ತಮ್ಮ ನೇರ ನುಡಿಯಿಂದ ಜನರ ಮನಸ್ಸು ಗೆದ್ದವರು. ಯಾರಾದರೂ ಕಷ್ಟದಲ್ಲಿದ್ದಾರೆ ಎಂದರೆ ಸಾಕು ಕೈಲಾದಷ್ಟು ಸಹಾಯ ಮಾಡುವ ಹೆಂಗರಳು ಅವರದ್ದು. ಹೀಗಾಗಿಯೇ ಜಗ್ಗೇಶ್ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಜನರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರುವ ಜಗ್ಗೇಶ್ ತಮ್ಮ ಟ್ವಿಟರ್ ಪೇಜ್​ನಲ್ಲಿ ಅಭಿಮಾನಿಗಳ ಸಮಸ್ಯೆಗೆ ಸ್ಪಂದಿಸುತ್ತಿರುತ್ತಾರೆ. ಅಂತೆಯೆ ಇತ್ತೀಚೆಗಷ್ಟೆ ಅಭಿಮಾನಿಯೊಬ್ಬರು ಜಗ್ಗೇಶ್ ಬಳಿ ತಮಗಾಗಿರುವ ತೊಂದರೆಯೊಂದನ್ನು ಹೇಳಿ ಸಲಹೆ ನೀಡುವಂತೆ ಕೋರಿದ್ದರು. ಅದಕ್ಕೆ ನವರಸ ನಾಯಕ ಏನು ಹೇಳಿದ್ರು?.

Rana Daggubati: ಒಟಿಟಿ ಮೂಲಕ ರಿಲೀಸ್​ ಆಗಲಿದೆ ಶ್ರದ್ಧಾ ಶ್ರೀನಾಥ್ ನಟನೆಯ ಈ ಸಿನಿಮಾ: ಸುಳಿವು ಕೊಟ್ಟ ರಾಣಾ ದಗ್ಗುಬಾಟಿ

ಅಭಿಮಾನಿಯೊಬ್ಬರು ಟ್ವಿಟ್ಟರ್​ನಲ್ಲಿ ಜಗ್ಗೇಶ್ ಬಳಿ, 'ನಮಗೆ ಮದುವೆ ಆಗಿ 8 ವರ್ಷಗಳಾಗಿವೆ, ಇನ್ನೂ ಮಕ್ಕಳಾಗಿಲ್ಲ. ಹಾಸ್ಪಿಟಲ್, ದೇವರ ಗುಡಿ ಸುತ್ತಿದರೂ ಪ್ರಯೋಜನವಾಗಿಲ್ಲ. ನಿಮ್ಮ ಆಶೀರ್ವಾದದಿಂದ ನಮಗೆ ರಾಯರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಏನಾದರೂ ಸಲಹೆ ಕೊಡಿ' ಎಂದು ಕೇಳಿದ್ದಾರೆ.

 ಮಗಳು ನ್ಯಾಸಾರನ್ನು ಸಿನಿ ಜಗತ್ತಿಗೆ ಪರಿಚಯಿಸುವ ಬಗ್ಗೆ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಜೋಲ್​​..!

ಅಭಿಮಾನಿಗಳ ಯಾವ ಮನವಿಯನ್ನೂ ಜಗ್ಗೇಶ್ ಹಗುರವಾಗಿ ಕಾಣುವವರಲ್ಲ. ಹೀಗಾಗಿ ಇವರಿಗೂ ಅತ್ಯುತ್ತಮ ಸಲಹೆಯನ್ನೇ ಕೊಟ್ಟಿದ್ದಾರೆ. ಹೋಮಿಯೋಪತಿ ವೈದ್ಯ ಡಾ. ರುದ್ರೇಶ್ ಭೇಟಿ ಮಾಡಿ ಎಂದು ಫೋನ್ ನಂಬರ್ ಕೊಟ್ಟಿದ್ದಲ್ಲದೆ, ಗೋಪಾಲಕೃಷ್ಣ ಆಲಯದಲ್ಲಿ ಪೂಜೆ ಮಾಡಿ ಮತ್ತು ರಾಯರಲ್ಲಿ ಪ್ರಾರ್ಥನೆ ಮಾಡಿ ಎಂದಿದ್ದಾರೆ. ಅಲ್ಲದೆ, ಸಾಧ್ಯವಾದರೆ ಸರ್ಪ ಸಂಸ್ಕಾರ ಮಾಡಿಸಿ ಎಂದೂ ಸಲಹೆ ಕೊಟ್ಟಿದ್ದಾರೆ. ಜಗ್ಗೇಶ್ ನೀಡಿದ ಸಲಹೆಯಿಂದ ಖುಷಿಯಾದ ಅಭಿಮಾನಿ ಸಿಹಿ ಸುದ್ದಿ ಬಂದ ತಕ್ಷಣ ನಿಮಗೆ ತಿಳಿಸುವೆ ಎಂದು ಹೇಳಿದ್ದಾರೆ.
First published: June 23, 2020, 1:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories