Shah Rukh Khan: ಕಿಂಗ್ ಖಾನ್​ ಹಾಗೂ ಗೌರಿ ದಂಪತಿಗಳ ಕ್ಯೂಟ್ ಹನಿಮೂನ್​ ಫೋಟೋ ವೈರಲ್

ಶಾರುಖ್​ ಖಾನ್ ಮತ್ತು ಗೌರಿ ಖಾನ್​

ಶಾರುಖ್​ ಖಾನ್ ಮತ್ತು ಗೌರಿ ಖಾನ್​

ಶಾರುಖ್ ಹಾಗೂ ಗೌರಿಯವರ ನವಜೋಡಿಗಳಾಗಿದ್ದ ಸಂದರ್ಭದಲ್ಲಿ ತೆಗೆದಿದ್ದ ಚಿತ್ರಗಳನ್ನು ಶಾರುಖ್ ಖಾನ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿರುವ ಬಾಲಿವುಡ್ ನಟ ವಿವೇಕ್ ವಾಸ್ವಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • Share this:

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ (Shah Rukh Khan) ಪಠಾಣ್ ಚಿತ್ರದ (Pathaan Movie) ನಂತರ ಮತ್ತೊಮ್ಮೆ ಗೆಲುವಿನ ಹಾದಿ ಹಿಡಿದಿದ್ದಾರೆ. ಒಂದರ ಹಿಂದೊಂದರಂತೆ ಸೋಲು ಕಂಡಿದ್ದ ಶಾರುಖ್ ಪಠಾಣ್ ಚಿತ್ರದಲ್ಲಿ ಹುರಿಗಟ್ಟಿಸಿದ ದೇಹ, ಅಬ್ಬರದ ಫೈಟಿಂಗ್‌ನ ಮೂಲಕ ಬಾಲಿವುಡ್‌ನ ಅದ್ಭುತ ದೊರೆ ನಾನೇ ಎಂಬುದನ್ನು ತಿಳಿಸಿದ್ದಾರೆ. ಸಿನಿ ಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿ ಕೂಡ ಶಾರುಖ್ ಟಾಪ್ ವ್ಯಕ್ತಿತ್ವದವರು ಎಂದೆನಿಸಿಕೊಂಡಿದ್ದಾರೆ.


ನವವಧು ಗೌರಿಯನ್ನು ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಬಂದಿದ್ದ ಶಾರುಖ್


ಶಾರುಖ್ ಹಾಗೂ ಅವರ ಪತ್ನಿ ಗೌರಿಯವರದ್ದು ಪ್ರೇಮ ವಿವಾಹ. ಶಾರುಖ್ ಬಾಲಿವುಡ್‌ನಲ್ಲಿ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ್ದ ಸಮಯದಲ್ಲಿಯೇ ಗೌರಿಯನ್ನು ಪ್ರೇಮ ವಿವಾಹವಾಗಿದ್ದರು. ಹಾಗಾಗಿ, ದಂಪತಿಗಳು ಹೆಚ್ಚಿನ ಸಮಯ ಸೆಟ್‌ನಲ್ಲಿಯೇ ಕಳೆಯುತ್ತಿದ್ದರು ಹಾಗೂ ನವದಂಪತಿಗಳು ಶೂಟಿಂಗ್ ತಾಣಗಳನ್ನೇ ವಿವಾಹದ ದಿನಗಳಲ್ಲಿ ಆಸ್ವಾದಿಸುತ್ತಿದ್ದರು.


ಜೋಡಿಗಳ ಸುಂದರ ಚಿತ್ರ ಹಂಚಿಕೊಂಡ ವಿವೇಕ್ ವಾಸ್ವಾನಿ


ಇದೀಗ ನವಜೋಡಿಗಳಾಗಿದ್ದ ಶಾರುಖ್ ಹಾಗೂ ಗೌರಿಯವರ ಚಿತ್ರಗಳನ್ನು ಶಾರುಖ್ ಖಾನ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿರುವ ಬಾಲಿವುಡ್ ನಟ ವಿವೇಕ್ ವಾಸ್ವಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಿನಿಮಾ ಸೆಟ್‌ಗೆ ಶಾರುಖ್ ತಮ್ಮ ನವವಧುವಾದ ಪತ್ನಿಯನ್ನು ಕರೆತಂದಿದ್ದರು ಹಾಗೂ ಜೋಡಿ ಇಲ್ಲಿಯೇ ಮಧುಚಂದ್ರವನ್ನಾಚರಿಸಿದೆ ಎಂದು ಕ್ಯಾಪ್ಶನ್ ಬರೆದು ದಂಪತಿಗಳ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಮಹಿಳೆಯರ ದೇಹ ಅಮೂಲ್ಯವಾದದ್ದು ಎಂದ ಸಲ್ಮಾನ್ ಖಾನ್! ಸ್ಟಾರ್ ನಟ ಹೇಳಿದ್ದಿಷ್ಟು


ದಾರ್ಜೀಲಿಂಗ್‍ನ ಸುಂದರ ತಾಣಗಳಲ್ಲಿ ವಿಹರಿಸಿದ್ದ ಯುವ ದಂಪತಿಗಳು


'ರಾಜು ಬನ್‌ ಗಯಾ ಜಂಟಲ್‌ ಮ್ಯಾನ್' ಚಿತ್ರದ ಶೂಟಿಂಗ್ ಅನ್ನು ದಾರ್ಜೀಲಿಂಗ್‍ನಂತಹ ಸುಂದರ ಪರಿಸರದಲ್ಲಿ ಚಿತ್ರಿಸಲಾಗಿತ್ತು. ಅಂತೆಯೇ ಚಿತ್ರದ ಮೊದಲ ಹಾಡನ್ನು ದಾರ್ಜೀಲಿಂಗ್‍ನ ಸುಂದರ ಪರಿಸರಗಳಲ್ಲಿ ಚಿತ್ರೀಕರಿಸಲಾಗಿತ್ತು.


ನಾವು ದೆಹಲಿಗೆ ಹೋದೆವು ಅಲ್ಲಿ ಶಾರುಖ್ ವಿವಾಹಿತರಾಗಿ ನೇರವಾಗಿ ನವವಧುವಿನೊಂದಿಗೆ ಬಂದಿದ್ದರು. ಅಲ್ಲಿಂದ ನಾವು ದಾರ್ಜೀಲಿಂಗ್‍ಗೆ ಪ್ರಯಾಣಿಸಿದೆವು ಎಂದು ವಾಸ್ವಾನಿ ಬರೆದುಕೊಂಡಿದ್ದಾರೆ.



ರಾಜುಬನ್‌ಗಯಾ ಜಂಟಲ್‌ಮ್ಯಾನ್ ಚಿತ್ರ


ವಿವೇಕ್ ವಾಸ್ವಾನಿ ಮತ್ತು ಶಾರುಖ್ ಖಾನ್ ಅವರು ರಾಜು ಬನ್ ಗಯಾ ಜಂಟಲ್‌ಮ್ಯಾನ್, ಇಂಗ್ಲಿಷ್ ಬಾಬು ದೇಸಿ ಮೇಮ್, ಕಭಿ ಹಾನ್ ಕಭಿ ನಾ ಮತ್ತು ಕಿಂಗ್ ಅಂಕಲ್ ಮುಂತಾದ ಚಿತ್ರಗಳಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ.


ಶಾರುಖ್​ ಖಾನ್ ಮತ್ತು ಗೌರಿ ಖಾನ್​


ರಾಜು ಬನ್ ಗಯಾ ಜಂಟಲ್‌ಮ್ಯಾನ್ 1992 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು ಶಾರುಖ್ ಖಾನ್ ಮತ್ತು ಅಮೃತಾ ಸಿಂಗ್ ಮತ್ತು ಜೂಹಿ ಚಾವ್ಲಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶಾರುಖ್ ಖಾನ್ ದಾರ್ಜೀಲಿಂಗ್‍ನ ಡಿಪ್ಲೊಮಾ ಹೋಲ್ಡರ್ ಆಗಿ ನಟಿಸಿದ್ದು ಅವರು ಯಶಸ್ವಿ ಇಂಜಿನಿಯರ್ ಆಗಲು ಮುಂಬೈಗೆ ಆಗಮಿಸುವ ಕಥಾ ಪಾತ್ರವನ್ನು ಚಿತ್ರ ಹೊಂದಿದೆ.


ಕುಟುಂಬವೇ ನನ್ನ ತಾಕತ್ತು ಗೌರಿ ಖಾನ್


ಕೆಲವೇ ದಿನಗಳ ಹಿಂದೆ ಶಾರುಖ್, ಗೌರಿ ಹಾಗೂ ಮೂವರು ಮಕ್ಕಳಾದ ಆರ್ಯನ್, ಸುಹಾನಾ ಹಾಗೂ ಅಬ್ರಾಮ್‌ರೊಂದಿಗಿನ ಗ್ರೂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.









View this post on Instagram






A post shared by Gauri Khan (@gaurikhan)





ಇದಕ್ಕೆ ಮುದ್ದಾಗಿ ಕಾಮೆಂಟ್ ಮಾಡಿರುವ ಶಾರುಖ್, ಗೌರಿ ಎಂತಹ ಸುಂದರವಾದ ಮಕ್ಕಳಿಗೆ ಜನ್ಮನೀಡಿರುವಿರಿ. ಇದನ್ನು ಕ್ಯೂಟ್ ಅಲ್ಲದಿದ್ದರೆ ಬೇರೇನೂ ಹೇಳಬೇಕೆಂದು ತೋಚುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.


ಪುಸ್ತಕ ಬಿಡುಗಡೆಯ ಮಾಹಿತಿ ಹಂಚಿಕೊಂಡ ಗೌರಿ ಖಾನ್


ಕುಟುಂಬದೊಂದಿಗಿನ ಚಿತ್ರವನ್ನು ಹಂಚಿಕೊಂಡು ಗೌರಿಯವರು ತಮ್ಮ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.




ಕುಟುಂಬದಿಂದಲೇ ಮನೆ ನಂದನವನವಾಗುತ್ತದೆ. ಪೆಂಗ್ವಿನ್ ಇಂಡಿಯಾ ಕಾಫಿ ಟೇಬಲ್ ಪುಸ್ತಕದ ಕುರಿತು ಉತ್ಸುಕಳಾಗಿರುವೆ ಶೀಘ್ರದಲ್ಲೇ ಕೈ ಸೇರಲಿದೆ ಎಂಬ ಶೀರ್ಷಿಕೆಯನ್ನು ಗೌರಿ ನೀಡಿದ್ದಾರೆ. ಅಂತೆಯೇ ಗೌರಿಖಾನ್‌ ಡಿಸೈನ್ಸ್ ಹಾಗೂ ಮೈಲೈಫ್‌ಇನ್‌ಡಿಸೈನ್ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಪೋಸ್ಟ್‌ಗೆ ನೀಡಿದ್ದಾರೆ.


ಚಿತ್ರರಂಗಕ್ಕೆ ಮಗಳು ಸುಹಾನಾ ಪಾದಾರ್ಪಣೆ


ಶಾರುಖ್ ಖಾನ್ 1991 ರಲ್ಲಿ ಗೌರಿ ಖಾನ್ ಅವರನ್ನು ವಿವಾಹವಾದರು. ಐಷಾರಾಮಿ ಸಾಮೂಹಿಕ ಬ್ರ್ಯಾಂಡ್ ಅನ್ನು ನಿರ್ಮಿಸಿದ ದಂಪತಿಗಳ ಪುತ್ರ ಆರ್ಯನ್ ಹಿರಿಯ ಮಗನಾಗಿದ್ದಾನೆ. ಇನ್ನು ಮಗಳು ಸುಹಾನಾ ಶೀಘ್ರದಲ್ಲೇ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ. 9ರ ಹರೆಯದ ಪುತ್ರ ಅಬ್ರಾಮ್ ಮುಂಬೈನಲ್ಲಿರುವ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

First published: