Hitler Kalyana: 'ಹಿಟ್ಲರ್ ಕಲ್ಯಾಣ'ದಲ್ಲಿ ಮತ್ತೆ ದೊಡ್ಡದೊಂದು ಟ್ವಿಸ್ಟ್! ಮುಗಿತಾ ದುರ್ಗಾಳಾ ಆಟ?
ಇಷ್ಟು ದಿನ ಮನೆಯ ಒಳಗೆ ಮಾಡುತ್ತಿದ್ದ ಕಿತಾಪತಿ ಈಗ ಲೀಲಾ ಮನೆಯವರೆಗೂ ಹೋಗಿದೆ. ಲೀಲಾಳ ಬಳಿಯಿದ್ದ ಅಧಿಕಾರವನ್ನು ಕಿತಾಪತಿಯಿಂದಲೇ ಮತ್ತೆ ಮರಳಿ ಪಡೆದಿದ್ದಾಳೆ. ಅಂದು ಪಾರ್ಟಿಲಿ ನಡೆದಿರುವುದು ಸತ್ಯನ ಸುಳ್ಳೋ ಎಂದು ತಿಳಿದುಕೊಳ್ಳಲು ಎಜೆ ಹೊರಟ್ಟಿದ್ದಾನೆ!
ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿ ದಿನಕ್ಕೊಂದು ಇಂಟ್ರೆಸ್ಟಿಂಗ್ (Intresting) ಎಪಿಸೋಡ್ಗಳನ್ನ ನೀಡುತ್ತಲೇ ಇದೆ. ಅಭಿಮಾನಿಗಳ ನಿರೀಕ್ಷೆಗಿಂತಲೂ ಉತ್ತಮವಾಗಿ ಈ ಧಾರಾವಾಹಿ ಮೂಡಿಬರುತ್ತಿದೆ. ಲೀಲಾ (Leela) ಎಡವಟ್ಟುಗಳನ್ನು ಮಾಡುತ್ತಿದ್ದರು ಕೆಲವೊಂದು ಬಾರಿ ದಿಟ್ಟ ಪ್ರಶ್ನೆಗಳಿಂದ ಎಲ್ಲರನ್ನು ಕಂಗೆಡಿಸಿದ್ದು ಇದೆ. ದುರ್ಗಾಳಿಗೆ ಇನ್ನು ಸಮಾಧಾನವಾದಂತೆ ಕಾಣುತ್ತಿಲ್ಲ. ಯಾಕೆಂದರೆ, ಲೀಲಾಳ ಮೇಲಿನ ಸೇಡು ತೀರಿಸಿಕೊಳ್ಳುವ ಕೆಲಸವನ್ನು ಇನ್ನು ಬಿಟ್ಟಿಲ್ಲ. ಇಷ್ಟು ದಿನ ಮನೆಯ ಒಳಗೆ ಮಾಡುತ್ತಿದ್ದ ಕಿತಾಪತಿ ಈಗ ಲೀಲಾ ಮನೆಯವರೆಗೂ ಹೋಗಿದೆ. ಲೀಲಾಳ ಬಳಿಯಿದ್ದ ಅಧಿಕಾರವನ್ನು ಕಿತಾಪತಿಯಿಂದಲೇ ಮತ್ತೆ ಮರಳಿ ಪಡೆದಿದ್ದಾಳೆ. ಅಂದು ಪಾರ್ಟಿಲಿ ನಡೆದಿರುವುದು ಸತ್ಯನ ಸುಳ್ಳೋ ಎಂದು ತಿಳಿದುಕೊಳ್ಳಲು ಎಜೆ (AJ) ಹೊರಟ್ಟಿದ್ದಾನೆ.
ಮನದಲ್ಲಿ ಎಜೆಗೆ ಶಪಿಸುತ್ತಿದ್ದಾಳೆ ಲೀಲಾ!
ಇತ್ತ ಲೀಲಾ ಬಹಳ ದುಃಖದಲ್ಲಿ ಇದ್ದಾಳೆ. ಪರ್ಫೆಕ್ಟ್ ಏಜೆ ಮನೇಲಿ ಇಂತಹ ಅವಘಡ ಸಂಭವಿಸದಂತೆ ನಿಗಾ ವಹಿಸಬಹುದಿತ್ತು. ಇನ್ನೂ ಆ ಮನೆಗೆ ಎಂದಿಗು ಕಾಲಿಡುವುದಿಲ್ಲ. ತಂದೆ ಅವಮಾನವಾದ ಜಾಗದಲ್ಲಿ ಒಂದು ಕ್ಷಣ ಇರುವುದಿಲ್ಲ ಎಂದು ಮನದಲ್ಲಿ ಶಪಥ ಮಾಡಿಕೊಂಡಿದ್ದಾಳೆ ಲೀಲಾ. ತಂದೆಯ ಸ್ಥಿತಿ ನೋಡಲಾಗದೆ ಮನದಲ್ಲಿ ಎಜೆಗೆ ಶಪಿಸುತ್ತಿದ್ದಾಳೆ.
ಲೀಲಾಳನ್ನು ವಾಪಸ್ ಕರೆ ತರುತ್ತಾರಾ ಎಜೆ?
ಏಜೆ ಅಮ್ಮ, ಲೀಲಾ ಮನೆ ಬಿಟ್ಟು ತೆರಳಿರುವುದನ್ನೆ ನೆನಪಿಸಿಕೊಂಡು ಅಳುತ್ತಿದ್ದಾರೆ, ಈ ವೇಳೆ ತಾಯಿ ಬಳಿ ಆಗಮಿಸಿದ ಎಜೆ ತಾಯಿಗೆ ಸಾಂತ್ವಾನದ ಮಾತುಗಳನ್ನು ಹೇಳಿ ತಾಯಿಗೆ ಊಟ ಮಾಡಲು ಎಷ್ಟೆಲ್ಲ ಒತ್ತಾಯಿಸಿದರು ಊಟ ಮಾಡದೇ ಲೀಲಾ ಮನೆಗೆ ಬರಬೇಕು, ಆಮೇಲೆ ಊಟ ಮಾಡುವೆ ಎಂದು ಅಳುತ್ತಾ ಹೇಳುತ್ತಾರೆ. ಇನ್ನೂ ಏಜೆ, ಲೀಲಾಳನ್ನು ವಾಪಸ್ಸು ಮನೆಗೆ ಕರೆತರುವುದಾಗಿ ಅಮ್ಮನಿಗೆ ಹೇಳಿದ್ದಾರೆ.
ಲೀಲಾ ತಾಯಿ ತರಕಾರಿ ಕೊಳ್ಳಲೆಂದು ತರಕಾರಿ ಗಾಡಿ ಬಳಿ ಬಂದಾಗ ಪಕ್ಕದ ಮನೆಯವರು ಅವರನ್ನು ಮಾತನಾಡಿಸದೇ ದೂರ ತಳ್ಳಿದ್ದಾರೆ. ಚುಚ್ಚು ಮಾತುಗಳಿಂದ ಲೀಲಾ ತಾಯಿಗೆ ನೋಯಿಸಿ ಮಾತನಾಡಿಸಿದ್ದಾರೆ. ಗಂಡನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಇದನ್ನು ಕೇಳಿಸಿ ಕೊಂಡ ಲೀಲಾ ತಾಯಿ ಅಳು ತಡೆಯಲಾಗದೆ ಮನೆಗೆ ಒಡೋಡಿ ಬರುತ್ತಾರೆ. ಇತ್ತ ಲೀಲಾಳ ತಂದೆ ನಿದ್ದೆಯಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡು ಬೇಡ ನನಗೆ ಹೊಡಿಬೇಡಿ ನಾನೇನು ಮಾಡಿಲ್ಲ ಎಂದು ಕನವರಿಸುತ್ತಿರುವುದನ್ನು ಕಂಡು ಲೀಲಾ ಆತಂಕಕ್ಕೀಡಾಗುತ್ತಾಳೆ.
ಆರೋಪ ಮಾಡಿದಾಕೆ ಎಜೆ ಮನೆಗೆ ಎಂಟ್ರಿ
ಏಜೆ ತನ್ನ ಪಿ.ಎಯನ್ನೂ ಕರೆದು ಅತ್ಯಾಚಾರ ಆರೋಪ ಮಾಡಿದ ಹುಡುಗಿಯನ್ನು ಕರೆತರುವಂತೆ ಹೇಳಿದ್ದಾನೆ .ಎಲ್ಲಿದ್ದರೂ ಸರಿ, ಕೂಡಲೇ ನನ್ನ ಬಳಿ ಮಾತನಾಡಲು ಬರಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಲೀಲಾಳ ತಂದೆಯ ಮೇಲೆ ಅತ್ಯಾಚಾರ ಆರೋಪ ಮಾಡಿದ ಲೇಡಿ ಇದೀಗ ಎಜೆ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಎಜಿ ತನ್ನ ಖಡಕ್ ಮಾತುಗಳಿಂದ ಆಕೆಯ ಬಾಯಿಂದ ನಡೆದ ಘಟನೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾನೆ. ಆಕೆಯಂತೂ ಭಯದಲ್ಲಿ ನಡುಗಿ ಹೋಗಿದ್ದಾಳೆ. ಇನ್ನೇನು ಸತ್ಯ ಹೇಳಿದರೆ ದುರ್ಗಾಳ ಕಥೆಯಂತೂ ಮುಗಿದಂತೆ.
ಇತ್ತ ಎಜೆ ಈ ಘಟನೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಲು ಹೊರಟಿದ್ದಾನೆ. ಈ ಬಗ್ಗೆ ದುರ್ಗಾಗೆ ತಿಳಿದೇ ಇಲ್ಲ. ನಾನು ಮಾಡಿದ್ದೆ ಎಲ್ಲಾ, ಎಜೆ ಮನೆಯಲ್ಲಿ ನನ್ನದೇ ಕಾರುಬಾರು ಎಂದು ಮನದಲ್ಲಿ ಅಹಂಕಾರವನ್ನು ಮೂಡಿಸುತ್ತಿದ್ದಾಳೆ. ಸುಳ್ಳಿನ ಜಾಡು ಹಿಡಿದು ಹೋದ ಎಜೆಗೆ ಇನ್ನಾದರೂ ಸತ್ಯದ ಅರಿವಾಗುತ್ತಾ? ದುರ್ಗಾ ಮುಖವಾಡ ಕಳಚುತ್ತಾ? ಕಾದು ನೋಡಬೇಕಿದೆ. ಮುಂದಿನ ಸಂಚಿಕೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆಯಾ ಲೀಲಾಳ ತಂದೆ ನಿರಪರಾಧಿ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ