• Home
  • »
  • News
  • »
  • entertainment
  • »
  • Power Star Puneeth Rajkumar: ಮರಿಯಾನೆಗೆ ಪುನೀತ್​ ರಾಜ್​ಕುಮಾರ್ ಹೆಸರಿಟ್ಟ ಅರಣ್ಯ ಇಲಾಖೆ; ಇದಕ್ಕೂ ಕಾರಣವಿದೆ..!

Power Star Puneeth Rajkumar: ಮರಿಯಾನೆಗೆ ಪುನೀತ್​ ರಾಜ್​ಕುಮಾರ್ ಹೆಸರಿಟ್ಟ ಅರಣ್ಯ ಇಲಾಖೆ; ಇದಕ್ಕೂ ಕಾರಣವಿದೆ..!

ಮರಿಯಾನೆ

ಮರಿಯಾನೆ

ಹೌದು, ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಎಂದು ನಾಮಕರಣ ಮಾಡಲಾಗಿದೆ. ಆ ಮೂಲಕ ಅರಣ್ಯ ಇಲಾಖೆ ನಟಸಾರ್ವಭೌಮನಿಗೆ ವಿಶೇಷ ಗೌರವ ಸಲ್ಲಿಸಿದೆ

  • Share this:

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್(Power Star Puneeth Rajkumar) ನಿಧನ ಕರುನಾಡಿಗೆ ಅರಗಿಸಿಕೊಳ್ಳಲಾಗದ, ಒಪ್ಪಿಕೊಳ್ಳಲೇಬೇಕಾದ ದುಃಖದ ಸಂಗತಿ. ಅವರ ಅಗಲಿಕೆ ಇಡೀ ನಾಡಿನ ಜನತೆಯನ್ನು ದುಃಖದ ಮಡುವಿಗೆ ತಳ್ಳಿದೆ. ಪುನೀತ್​ ರಾಜ್​ಕುಮಾರ್(Puneeth Rajkumar)​ ಅವರ ಅಸಂಖ್ಯಾತ ಅಭಿಮಾನಿಗಳು ಕಣ್ಣೀರು ಹಾಕಿ ವಿಧಿಯನ್ನು ಶಪಿಸಿದ್ದಾರೆ. ಅಪ್ಪು(Appu)ವಿನ ಕುಟುಂಬಸ್ಥರ ಗೋಳಂತೂ ನೋಡಲು ಆಗಲ್ಲ. ಅಷ್ಟರಮಟ್ಟಿಗೆ ಪುನೀತ್ ಅವರ ಹಠಾತ್​ ನಿಧನ ಎಲ್ಲರ ಮನಸ್ಸನ್ನು ನೋಯಿಸಿದೆ. ಈ ದುಃಖವನ್ನು ನುಂಗಿ ಮುಂದೆ ನಡೆಯಬೇಕೆಂದು ನಟ ಶಿವರಾಜ್​ ಕುಮಾರ್(Actor Shivaraj Kuamr) ಹೇಳಿದ್ದಾರೆ. ಅವರು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಅಭಿಲಾಷೆ ಅವರ ಕುಟುಂಬದವರದ್ದು ಹಾಗೂ ಅಭಿಮಾನಿಗಳದ್ದು. ಅವರ ಹೆಸರಿನಲ್ಲಿ ಅನೇಕ ಒಳ್ಳೆಯ ಕಾರ್ಯಗಳನ್ನು ಸಹ ಮಾಡುತ್ತಿದ್ದಾರೆ. ಪುನೀತ್​ ಅವರು ನೇತ್ರದಾನ(Eye Donate) ಮಾಡಿದ್ದರಿಂದ ಅವರ ನಿಧನದ ಬಳಿಕ ಜನರಲ್ಲಿ ನೇತ್ರದಾನ ಜಾಗೃತಿ ಹೆಚ್ಚಾಗಿದೆ. ತಮ್ಮ ಕಣ್ಣುಗಳನ್ನು ದಾನ ಮಾಡಲು ಲಕ್ಷಾಂತರ ಅಭಿಮಾನಿಗಳು ಮುಂದಾಗಿದ್ದಾರೆ. ಜೊತೆಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಅಪ್ಪು ಹೆಸರಿನಲ್ಲಿ ಸಮಾಜಮುಖಿ ಕಾರ್ಯ(Social Work)ಗಳನ್ನು ಮಾಡುತ್ತಿದ್ದಾರೆ.


ಅಭಿಮಾನಿಗಳ ದೊರೆ ಪುನೀತ್​ ರಾಜ್​ಕುಮಾರ್


ಅಪ್ಪುವಿನ ಅನುಪಸ್ಥಿತಿಯನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ನಗುಮೊಗ ಅಜರಾಮರ. ಅವರ ನಗು, ಮಾತು ಸದಾ ಎಲ್ಲರನ್ನೂ ಕಾಡುತ್ತಲೇ ಇರುತ್ತದೆ. ಜೊತೆಗಿರದ ಜೀವಂತ ಎಂದಿಗೂ ಜೀವಂತ ಎಂಬ ಮಾತು ಅಕ್ಷರಶಃ ಸತ್ಯ ಎಂಬುದಕ್ಕೆ ಅಭಿಮಾನಿಗಳ ಫೇವರಿಟ್ ಪುನೀತ್ ರಾಜ್​ಕುಮಾರ್ ಸಾಕ್ಷಿ ಎಂದರೆ ತಪ್ಪಾಗಲಾರದು. ಈ ನಗುವಿನ ದೊರೆ ಸದಾ ಹಸಿರಾಗಿ ಇರಬೇಕೆಂಬ ಒಂದು ಸಣ್ಣ ಅಭಿಲಾಷೆಯಿಂದ ಪುನೀತ್​ ರಾಜ್​ಕುಮಾರ್ ಅವರ ಹೆಸರನ್ನು ಆನೆಮರಿಯೊಂದಕ್ಕೆ ಇಟ್ಟಿದ್ದಾರೆ.


ಮರಿಯಾನೆಗೆ ಪುನೀತ್​ ಹೆಸರು ನಾಮಕರಣ


ಹೌದು, ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಎಂದು ನಾಮಕರಣ ಮಾಡಲಾಗಿದೆ. ಆ ಮೂಲಕ ಅರಣ್ಯ ಇಲಾಖೆ ನಟಸಾರ್ವಭೌಮನಿಗೆ ವಿಶೇಷ ಗೌರವ ಸಲ್ಲಿಸಿದೆ. ಇದು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಅರಣ್ಯಾಧಿಕಾರಿಗಳ ಈ ವಿಶೇಷ ಚಿಂತನೆಗೆ ಪ್ರಾಣಿಪ್ರೇಮಿಗಳು ಹಾಗೂ ಪುನೀತ್​ ಅಭಿಮಾನಿಗಳು ಶಹಬ್ಬಾಸ್ ಹೇಳಿದ್ದಾರೆ.


ಇದನ್ನೂ ಓದಿ:ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ Rajinikanth ಸಂತಾಪ: ಸಿಟ್ಟಿಗೆದ್ದ ನೆಟ್ಟಿಗರು..!


ತಾಯಿ ಆನೆ-ಮರಿಯಾನೆ ಬೇರ್ಪಡಿಸುವ ಕಾರ್ಯಕ್ರಮ


ಇಂದು ಸಕ್ರೆಬೈಲು ಆನೆ ಬಿಡಾರದಲ್ಲಿ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯಕ್ರಮ ನಡೆಯಿತು. ತಾಯಿ ನೇತ್ರಾ ಆನೆಯಿಂದ ಮರಿಯಾನೆಯನ್ನು ಇಂದು ಬೇರ್ಪಡಿಸಿದ ಅರಣ್ಯಾಧಿಕಾರಿಗಳು, ಅದಕ್ಕೆ ಪುನೀತ್​ ಎಂದು ಹೆಸರಿಟ್ಟು ನಾಮಕರಣ ಮಾಡಿದರು.


2 ತಿಂಗಳ ಹಿಂದೆ ಸಕ್ರೆಬೈಲಿಗೆ ಭೇಟಿ ನೀಡಿದ್ದ ಪುನೀತ್ ರಾಜ್​ಕುಮಾರ್​


ಮತ್ತೊಂದು ಸಂಗತಿ ಏನೆಂದರೆ, ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್ ಕಳೆದ 2 ತಿಂಗಳ ಹಿಂದಷ್ಟೇ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿದ್ದ ಇದೇ ಮರಿಯಾನೆಯನ್ನು ಮುದ್ದಿಸಿ ಅದರ ಜೊತೆ ಸ್ವಲ್ಪ ಕಾಲ ಕಳೆದಿದ್ದರು. ಹೀಗಾಗಿ ಅರಣ್ಯ ಇಲಾಖೆ ಆ ಆನೆಮರಿಗೆ ಪುನೀತ್ ಅವರ ಹೆಸರನ್ನೇ ಇಡುವ ಮೂಲಕ ಗೌರವ ಸಲ್ಲಿಸಿದೆ.


ಇದನ್ನೂ ಓದಿ:Puneeth Rajkumar ಅಂತಿಮ ದರ್ಶನಕ್ಕೆ ಬಂದಿರಲಿಲ್ಲ ಎಂದು ಟ್ರೋಲ್​ ಮಾಡಿದವರಿಗೆ ಉತ್ತರ ಕೊಟ್ಟ Radhika Pandit..!


ಇದೇ ಮೊದಲ ಬಾರಿಗೆ ನಟನ ಹೆಸರು ನಾಮಕರಣ


ಆನೆ ಮರಿಗಳಿಗೆ ಇದುವರೆಗೂ ದೇವರ ಹೆಸರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರನ್ನು ಇಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಚಿತ್ರನಟರೊಬ್ಬರ ಹೆಸರನ್ನು ಇಡಲಾಗಿದೆ ಎನ್ನಲಾಗುತ್ತಿದೆ. ಇದು ಪುನೀತ್​ ರಾಜ್​ ಕುಮಾರ್ ಅವರ ಅಭಿಮಾನಿಗಳ ಖುಷಿಯ ವಿಚಾರವಾಗಿದೆ. ಜೊತೆಗೆ ಅರಣ್ಯಾಧಿಕಾರಿಗಳು ಪುನೀತ್​ ಅವರಿಗೆ ಸಲ್ಲಿಸಿದ ವಿಶೇಷ ಗೌರವವೂ ಆಗಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು