Shivarajkumar: '9 ಸುಳ್ಳು ಕಥೆ'ಗೆ ಶಿವಣ್ಣ ಸಾಥ್, ಕುತೂಹಲ ಹೆಚ್ಚಿಸಿದ ಸಿನಿಮಾ ಟ್ರೈಲರ್

Shivarajkumar: ಈ ಸಿನಿಮಾದ ಹಾಡುಗಳಿಗೆ ಪ್ರವೀಣ್ ಹಾಗೂ ಪ್ರದೀಪ್​ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಪರಮೇಶ್​ ಛಾಯಗ್ರಹಣವಿದ್ದು, ಶ್ರೀಕಾಂತ್ ಸಂಕಲನವಿದೆ.

9 ಸುಳ್ಳು ಕಥೆಗಳು

9 ಸುಳ್ಳು ಕಥೆಗಳು

  • Share this:
ಸ್ಯಾಂಡಲ್​ವುಡ್​ನಲ್ಲಿ (sandalwood) ಜನರ ಟೇಸ್ಟ್​ ಬದಲಾದಂತೆ ಸಿನಿಮಾ ಮಾಡುವ ರೀತಿ ಕೂಡ ಬದಲಾಗಿದೆ. ವಿಭಿನ್ನ ಕತೆಯ ಮೂಲಕ ಜನರನ್ನು ರಂಜಿಸಲು ಹೊಸ ಬಗೆಯ ಸಿನಿಮಾಗಳು (film) ರೆಡಿಯಾಗುತ್ತಿವೆ. ಜನರ ಅಭಿರುಚಿಗೆ ತಕ್ಕ ಚಿತ್ರ ಮಾಡಲು ನಿರ್ದೇಶಕರು (directors) ಹಾಗೂ ಕಲಾವಿದರು ಸಹ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅದೇ ರೀತಿಯ ಸಿನಿಮಾವೊಂದು ಸುದ್ದಿಯಲ್ಲಿದ್ದು, ಆ ಸಿನಿಮಾ ತನ್ನ ಹೆಸರಿನ ಮೂಲಕ ಬಹಳ ಸದ್ದು ಮಾಡುತ್ತಿದೆ. ಆ ಸಿನಿಮಾದ ಹೆಸರು 9 ಸುಳ್ಳು ಕಥೆಗಳು (9 Sullu Kathegalu). ಸದ್ಯ ಈ ಸಿನಿಮಾಗೆ ಶಿವಣ್ಣ (Shivarajkumar) ಹಾಗೂ ರಿಷಭ್ ಶೆಟ್ಟಿ  (Rishab Shetty) ಸಾಥ್ ನೀಡಿದ್ದಾರೆ.

ನವರಸಗಳ ಆಧರಿತ ಸಿನಿಮಾ ಇದು

ಹೌದು, ನವರಸಗಳಾದ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ಇವುಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದ್ದು, ಇತ್ತೀಷೆಗಷ್ಟೇ ಈ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ರಿಲೀಸ್​ ಆಗಿದ್ದು, ಚೆನ್ನಾಗಿ ಮೂಡಿ ಬಂದಿದೆ. ಈ ಸಿನಿಮಾದ ಟ್ರೈಲರ್​ಗೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ವಾಯ್ಸ್​ ನೀಡಿದ್ದು, ಒಂದು ಹಾಡನ್ನು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹಾಡಿದ್ದಾರೆ.




ಈ ಸಿನಿಮಾವನ್ನು ಮಂಜುನಾಥ್ ಮುನಿಯಪ್ಪ ಎನ್ನುವವರು ನಿರ್ದೇಶನ ಮಾಡಿದ್ದು, ಇದರ ನಿರ್ಮಾಣದ ಜವಾಬ್ದಾರಿಯನ್ನು ಸಹ ಅವರೇ ವಹಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದೊಂದು ನೈಜ ಕಥೆಯನ್ನು ಆಧರಿಸಿ ಮಾಡಿದ ಸಿನಿಮಾವಾಗಿದ್ದು, ಕತೆ ರೆಡಿಯಾದ ಸಮಯದಲ್ಲಿ ಯಾರೂ ನಿರ್ಮಾಪಕರು ಸಿಕ್ಕಿರಲಿಲ್ಲ. ಆದೆ ನನ್ನ ಸ್ನೇಹಿತರು ನನ್ನ ಸಹಾಯಕ್ಕೆ ಬಂದರು ಎಂದು ಹೇಳಿಕೊಂಡಿದ್ದಾರೆ. ಬಹಳ ವರ್ಷಗಳ ಕಾಲ ರಂಗಭೂಮಿ ಅನುಭವ ಹೊಂದಿರುವ ಮಂಜುನಾಥ್​ ಅವರಿಗೆ ಇದೇ ಮೊದಲ ನಿರ್ದೇಶನವಾಗಿದ್ದು, ಸಿನಿಮಾ ಬಗ್ಗೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.


ಇದನ್ನೂ ಓದಿ: ಸಲಾರ್ ಸಿನಿಮಾ ಶೂಟಿಂಗ್ ನಿಲ್ಲುತ್ತಾ? ಏನಿದು ಟಾಲಿವುಡ್​ನ ಬ್ರೇಕಿಂಗ್ ನ್ಯೂಸ್?

ಹಲವಾರು ಕಲಾವಿದರಿರುವ ಸಿನಿಮಾ

ಈ ಸಿನಿಮಾದಲ್ಲಿ ನಟ ಪ್ರಮೋದ್​ ಶೆಟ್ಟಿ, ವಿನಾಯ್ ಜೋಶಿ, ಕರಿ ಸುಬ್ಬು, ಸುಕೃತಾ ವಾಗ್ಳೆ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.  ಈ ಸಿನಿಮಾದ ಹಾಡುಗಳಿಗೆ ಪ್ರವೀಣ್ ಹಾಗೂ ಪ್ರದೀಪ್​ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಪರಮೇಶ್​ ಛಾಯಗ್ರಹಣವಿದ್ದು, ಶ್ರೀಕಾಂತ್ ಸಂಕಲನವಿದೆ.




ಇದನ್ನೂ ಓದಿ: ಅಮೃತಾ ಅಯ್ಯಂಗಾರ್​ ಬರ್ತ್​ ಡೇಗೆ ಸಿಕ್ತು ಬಿಗ್​ ಗಿಫ್ಟ್​ , ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನಟಿ

ಇನ್ನು ಈ ಸಿನಿಮಾದಲ್ಲಿ 6 ಹಾಡುಗಳಿದ್ದು, ಸಂತ ಶಿಶುನಾಲ ಶರೀಫರ ಹಾಡೊಂದನ್ನು ಬಳಸಿಕೊಳ್ಳಲಾಗಿದೆ. ವಿಕ್ರಮ್ ವಸಿಷ್ಠ, ಸತೀಶ್ ಬೆಲ್ಲೂರು ಹಾಗೂ ಕಿರಣ್ ವಿಪ್ರ ಉಳಿದ ಹಾಡುಗಳನ್ನು ಬರೆದಿದ್ದು, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಶಶಿಧರ್ ಕೋಟೆ, ಚಿಂತನ್ ವಿಕಾಸ್ ಈ ಅದ್ಭುತ ಹಾಡುಗಳನ್ನು ಹಾಡಿದ್ದಾರೆ.
Published by:Sandhya M
First published: