ಬೆಂಗಳೂರಿನಲ್ಲಿ `83’ ಜಬರ್​ದಸ್ತ್​ ಪ್ರಚಾರ : ದ್ರಾವಿಡ್​ ಬಯೋಪಿಕ್​ನಲ್ಲಿ ನಟಿಸ್ತಾರಾ ಕಿಚ್ಚ ಸುದೀಪ್​?

83 ಚಿತ್ರದ ಸುದ್ದಿಗೋಷ್ಠಿ ವೇಳೆ ಈ ಪ್ರಶ್ನೆ ಕೇಳಿಬಂತು. ಕ್ರಿಕೆಟ್​ ದಿಗ್ಗಜ, ದಿ ವಾಲ್​, ಟೀಂ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಅವರ ಬಯೋಪಿಕ್​ ಮಾಡುವ ವಿಚಾರವೂ ಚರ್ಚೆಗೆ ಬಂದಿದೆ. ಕಿಚ್ಚ ಸುದೀಪ್​ ಅವರು ಇದರಲ್ಲಿ ರಾಹುಲ್​ ದ್ರಾವಿಡ್​ ಅವರ ಪಾತ್ರವನ್ನು ಮಾಡಬೇಕು ಎನ್ನುವ ಆಗ್ರಹ ಕೇಳಿಬಂತು.

ಬೆಂಗಳೂರಿನಲ್ಲಿ 83 ಸಿನಿಮಾ ಪ್ರಚಾರ

ಬೆಂಗಳೂರಿನಲ್ಲಿ 83 ಸಿನಿಮಾ ಪ್ರಚಾರ

  • Share this:
1983ರಲ್ಲಿ ಭಾರತೀಯ ಕ್ರಿಕೆಟ್​ ತಂಡ ವಿಶ್ವಕಪ್(World Cup)​ ಗೆದ್ದ ಘಟನೆಯನ್ನು ಆಧರಿಸಿ ‘83’ (83 Movie) ಸಿನಿಮಾ ಸಿದ್ಧಗೊಂಡಿದೆ. ಅದನ್ನು ಕರ್ನಾಟಕದಲ್ಲಿ ಸುದೀಪ್​ ಪ್ರಸ್ತುತಪಡಿಸುತ್ತಿದ್ದಾರೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ತಿಂಗಳಿಂದ ಕಾಯುತ್ತಿದ್ದರು. ಮೊದಲ ಲಾಕ್​ಡೌನ್(Lockdown)​ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ರಿಲೀಸ್​ಗೆ ಸಿದ್ಧವಾಗಿತ್ತು. ಆದರೆ ಲಾಕ್​ಡೌನ್​ ಜಾರಿಯಾದ ಬಳಿಕ ಬಿಡುಗಡೆ(Release) ದಿನಾಂಕ ಮುಂದೂಡಿಕೊಳ್ಳುವುದು ಅನಿವಾರ್ಯ ಆಗಿತ್ತು. ರಣವೀರ್​ ಸಿಂಗ್​ ನಟನೆಯ ಈ ಚಿತ್ರ ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಡಿ.24ರಂದು ತೆರೆ ಕಾಣಲಿದೆ.ಈ ಹಿನ್ನೆಲೆ ಈ ಸಿನಿಮಾ ತಂಡ ಪ್ರಚಾರ(Promotion) ಕಾರ್ಯವನ್ನು ಶುರುಮಾಡಿಕೊಂಡಿದೆ. ನಿನ್ನೆ ಈ ಚಿತ್ರತಂಡ ಬೆಂಗಳೂರಿ(Bengaluru)ನಲ್ಲೂ ಜಬರ್​ದಸ್ತ್​ ಪ್ರಚಾರ ಮಾಡಿದೆ. ಒಂದೇ ವೇದಿಕೆಯಲ್ಲಿ ಘಟಾನುಘಟಿ ದಿಗ್ಗಜರ ಸಮಾಗಮವಾಗಿದೆ. ಕಿಚ್ಚ ಸುದೀಪ್(Kiccha Sudeep)​, ರಣವೀರ್​ ಸಿಂಗ್(Ranveer Singh)​, ಕಪೀಲ್​ ದೇವ್(Kapil Dev)​ ಸೇರಿ ಹಲವು ಕ್ರಿಕೆಟ್​ ದಿಗ್ಗಜರ ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ರಣವೀರ್​ ಸಿಂಗ್​ ಇದಾರೆ ಅಂದರೆ ಅಲ್ಲಿ ಮನರಂಜನೆ(Entertinment)ಗೆ ಕೊರತೆ ಇಲ್ಲ. ಜೊತೆಗೆ ಕಿಚ್ಚ ಸುದೀಪ್​ ಸೇರಿದ್ದಾರೆ ಅಂದರೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ. ಬೆಂಗಳೂರಿನಲ್ಲಿ ನಡೆದ 83 ಸಿನಿಮಾ ಪ್ರಚಾರ ಸಖತ್​ ಥ್ರಿಲ್(Thrill)​ ಆಗಿತ್ತು. ಹಾಗಿದ್ದರೆ ಯಾವೆಲ್ಲ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಚರ್ಚೆ ಮಾಡಲಾಯಿತು ಅಂತ ಮುಂದೆ ನೋಡೋಣ..

ಕನ್ನಡದಲ್ಲಿ ‘83’ ಸಿನಿಮಾವನ್ನು ಸುದೀಪ್​ ಅರ್ಪಿಸುತ್ತಿದ್ದಾರೆ

ವಿಶೇಷವಾಗಿ ಕರ್ನಾಟಕದ ಸಿನಿ‌ ಪ್ರೇಕ್ಷಕರಿಗೆ  83 ಸಿನಿಮಾವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅರ್ಪಿಸುತ್ತಿದ್ದಾರೆ. 1983ರಲ್ಲಿ ವಿಶ್ವಕಪ್ ಗೆದ್ದ ರೋಚಕ ಸ್ಟೋರಿಯ 83 ಸಿನಿಮಾವನ್ನು ಕನ್ನಡದಲ್ಲಿ ಸುದೀಪ್ ರಿಲೀಸ್ ಮಾಡುತ್ತಿದ್ದಾರೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಮಿಂಚಿದ್ದು, ಕಬೀರ್ ಖಾನ್ (Kabir Khan) ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.  ದೀಪಿಕಾ ಪಡುಕೋಣೆ ಕಪಿಲ್ ದೇವ್ ಅವರ ಪತ್ನಿ ರೋಮಿ ಭಾಟಿಯಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಟೀಸರ್​, ಟ್ರೈಲರ್​ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಇದನ್ನು ಓದಿ : ರಾಮಾಚಾರಿ, ಕೆಂಪೇಗೌಡ ಸಿನಿಮಾ ಡೈಲಾಗ್ ಹೊಡೆದ ವಿಶ್ವಕಪ್ ಹೀರೋ ಕೃಷ್ಣಮಾಚಾರಿ

ರಾಹುಲ್​ ದ್ರಾವಿಡ್​ ಬಯೋಪಿಕ್​ನಲ್ಲಿ ಸುದೀಪ್​?

ಹೌದು, 83 ಚಿತ್ರದ ಸುದ್ದಿಗೋಷ್ಠಿ ವೇಳೆ ಈ ಪ್ರಶ್ನೆ ಕೇಳಿಬಂತು. ಕ್ರಿಕೆಟ್​ ದಿಗ್ಗಜ, ದಿ ವಾಲ್​, ಟೀಂ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಅವರ ಬಯೋಪಿಕ್​ ಮಾಡುವ ವಿಚಾರವೂ ಚರ್ಚೆಗೆ ಬಂದಿದೆ. ಕಿಚ್ಚ ಸುದೀಪ್​ ಅವರು ಇದರಲ್ಲಿ ರಾಹುಲ್​ ದ್ರಾವಿಡ್​ ಅವರ ಪಾತ್ರವನ್ನು ಮಾಡಬೇಕು ಎನ್ನುವ ಆಗ್ರಹ ಕೇಳಿಬಂತು. ಇದಕ್ಕೆ ‘83’ ನಿರ್ದೇಶಕ ಕಬೀರ್​ ಖಾನ್​ ಒಪ್ಪಿಗೆ ನೀಡಿದ್ದಾರೆ. ‘ಹಕ್ಕನ್ನು ತಂದ್ರೆ ಬಯೋಪಿಕ್​ ಮಾಡ್ತೀನಿ’ ಎಂದು ಕಿಚ್ಚ ಸುದೀಪ್​ ಹೇಳಿದರು. ಈ ವಿಚಾರ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ. ಮೊದಲಿನಿಂದಲೂ ಸುದೀಪ್​ ಅವರಿಗೆ ಕ್ರಿಕೆಟ್​ ಅಂದರೆ ಇಷ್ಟ, ಹೀಗಾಗಿ ರಾಹುಲ್ ದ್ರಾವಿಡ್​ ಅವರ ಬಯೋಪಿಕ್ ಮಾಡಲಿ ಎಂದು ಅವರ ಫ್ಯಾನ್ಸ್​ ಹೇಳಿದ್ದಾರೆ.

ಇದನ್ನು ಓದಿ : ಫೆಬ್ರವರಿ 11ಕ್ಕೆ ಲವ್​ ಮಾಕ್​ಟೈಲ್​ 2 ರಿಲೀಸ್​: ಮತ್ತೆ ಕಮಾಲ್​ ಮಾಡೋಕೆ ನಿಧಿಮಾ-ಆದಿ ರೆಡಿ!

83 ಸಿನಿಮಾದಲ್ಲಿದೆ ತಾರೆಯರ ದಂಡು!

83 ಸಿನಿಮಾದಲ್ಲಿ ತಾರೆಯರ ದಂಡೇ ಇದೆ. ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ, ಬೊಮನ್ ಇರಾನಿ, ಹಾರ್ಡಿ ಸಂಧು, ಆಮಿ ವಿರ್ಕ್ ಸೇರಿ ಹಲವಾರು ಕಲಾವಿದರು ನಟಿಸಿದ್ದಾರೆ. ಕಪಿಲ್​ ದೇವ್​ ಪಾತ್ರದಲ್ಲಿ ನಟಿಸಲು ರಣವೀರ್​ ಸಿಂಗ್​ ತುಂಬ ಶ್ರಮಪಟ್ಟಿದ್ದಾರೆ. ಟೀಸರ್​, ಟ್ರೈಲರ್​​ ಪೋಸ್ಟರ್​ಗಳಲ್ಲಿ ಅವರ ಲುಕ್​ ಗಮನ ಸೆಳೆದಿದೆ. ಥೇಟ್​ ಕಪಿಲ್​ ದೇವ್​ ಅವರಂತೆ ಕಾಣಲು ರಣವೀರ್​ ಸಿಂಗ್​ ತುಂಬ ವರ್ಕ್ ಮಾಡಿದ್ದಾರೆ. ಚಿತ್ರ ರಿಲೀಸ್​ ಡೇಟ್​ ಯಾವಾಗ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ.
Published by:Vasudeva M
First published: