Ranveer Singh :83 ಸಿನಿಮಾದ ಟೀಸರ್ ಝಲಕ್ ಗೆ ಅಭಿಮಾನಿಗಳು ಫಿದಾ

83 Movie Teaser :ಇನ್ನು ಇದು ಜೀವನದಲ್ಲಿ ಗಂಡ ಹೆಂಡತಿಯಾಗಿರುವ ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ 83 ಸಿನಿಮಾದಲ್ಲಿಯೂ ಗಂಡ ಹೆಂಡತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.. ರಣವೀರ್ ಸಿಂಗ್ ಕಪಿಲ್ ದೇವ್ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಕಪಿಲ್ ಪತ್ನಿ ರೂಮಿ ದೇವ್ ಅವರ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ

'83

'83

  • Share this:
    1983ರಲ್ಲಿ ಭಾರತ ವೆಸ್ಟ್ ಇಂಡೀಸ್ ( India-West Indies )ವಿರುದ್ಧ ಗೆದ್ದು ಭಾರತಕ್ಕೆ ಮೊದಲ ವಿಶ್ವಕಪ್ ಕ್ರಿಕೆಟ್ ( World Cup cricket )ಟ್ರೋಫಿಯನ್ನು ಗೆದ್ದುಕೊಟ್ಟಿತ್ತು. ಅಂದು ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ಸಿನಿಮಾ ( cinema )ತಯಾಗುತ್ತಿರುವ '83' ಸಿನಿಮಾ ಬಿಡುಗಡೆ ಸಿದ್ದಗೊಂಡಿದೆ.. ಕೆಲವು ತಿಂಗಳುಗಳ ಹಿಂದೆ 83 ಸಿನಿಮಾದ ಪೋಸ್ಟರ್ಗಳನ್ನು ಚೆನ್ನೈನಲ್ಲಿ ( Chennai) ಬಿಡುಗಡೆ ಮಾಡಲಾಗಿತ್ತು. ಈಗ 1983ರ ವಿಶ್ವಕಪ್ ನಲ್ಲಿ ನಡೆದ ಐತಿಹಾಸಿಕ ಘಟನೆಯ ( Historical movement) ಟೀಸರನ್ನು ಸಿನಿಮಾ ತಂಡ ಬಿಡುಗಡೆಗೊಳಿಸಿದೆ.

    '83' ಟೀಸರ್ ಬಿಡುಗಡೆ ಮಾಡಿದ ರಣವೀರ್ ಸಿಂಗ್

    ಜೂನ್ 25, 1983ರಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ( Lord's )ನಡೆದ ವಿಶ್ವಕಪ್ ಫೈನಲ್( world cup final ) ಪಂದ್ಯದಲ್ಲಿ ಕಪಿಲ್ ದೇವ್ ( Kapil Dev )ವೆಸ್ಟ್ ಇಂಡೀಸ್ ಆಟಗಾರ ವಿವಿಯನ್ ರಿಚರ್ಡ್ಸ್ ( Vivian Richard)ಅವರ ಕ್ಯಾಚ್ ಹಿಡಿದು, ಭಾರತಕ್ಕೆ ಐತಿಹಾಸಿಕ ವಿಶ್ವಕಪ್ ತಂದುಕೊಟ್ಟ ಸಿನಿಮಾ ದೃಶ್ಯಾವಳಿಯ ಟೀಸರ್ ನ್ನು ರಣವೀರ ಸಿಂಗ್ ( Ranveer Singh ) ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ( Instagram )ಹಂಚಿಕೊಂಡಿದ್ದಾರೆ.ಅಂದು ಕಪಿಲ್ ದೇವ್ ಅವರು ಈ ಕ್ಯಾಚ್( catch ) ಹಿಡಿದ ಬಳಿಕವೇ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು, ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು




    ರಣವೀರ್ ಜೊತೆ ಸಿನಿಮಾದಲ್ಲಿ ದೀಪಿಕಾ ಕೂಡಾ ನಟನೆ

    ಇನ್ನು ಇದು ಜೀವನದಲ್ಲಿ ಗಂಡ ಹೆಂಡತಿಯಾಗಿರುವ ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ 83 ಸಿನಿಮಾದಲ್ಲಿಯೂ ಗಂಡ ಹೆಂಡತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.. ರಣವೀರ್ ಸಿಂಗ್ ಕಪಿಲ್ ದೇವ್ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಕಪಿಲ್ ಪತ್ನಿ ರೂಮಿ ದೇವ್ ಅವರ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ..ಇನ್ನು ವಿಶೇಷ ಅಂದ್ರೆ 83 ಸಿನಿಮಾಗೆ ದೀಪಿಕಾ ಪಡುಕೋಣೆ ಸಹ ನಿರ್ಮಾಪಕಿ ಕೂಡ.

    ಇದನ್ನೂ ಓದಿ :ಅವರಿಂದ ನಟಿ ಪೂಜಾ ಹೆಗ್ಡೆ ಏನು ಕಲಿತುಕೊಂಡಿದ್ದಾರೆ ಗೊತ್ತಾ? ಇಲ್ಲಿದೆ ಕೇಳಿ

    ಡಿಸೆಂಬರ್ 24ಕ್ಕೆ 83 ಸಿನಿಮಾ ರಿಲೀಸ್..

    ಕನ್ನಡ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಡಿಸೆಂಬರ್ 24ರಂದು 83 ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ವಿಶ್ವಕಪ್ ಗೆದ್ದ ನಾಯಕ ಎಂದು ಖ್ಯಾತಿ ಪಡೆದಿರುವ ಕಪಿಲ್ ದೇವ್ ಪಾತ್ರದಲ್ಲಿ ರಣ್‌ವೀರ್ ಸಿಂಗ್ ಕಾಣಿಸಿಕೊಂಡ್ರೆ, ತಹೀರ್ ರಾಜ್‌ ಭಾಸಿನ್ ಅವರು ಸುನೀಲ್ ಗಾವಸ್ಕರ್ ಆಗಿ, ಕೃಷ್ಣಮಾಚಾರಿ ಶ್ರೀಕಾಂತ್ ಆಗಿ ಜೀವಾ, ಮೊಹೀಂದರ್ ಅಮರ್‌ನಾಥ್ ಆಗಿ ಸಾಕಿಬ್ ಸಲೀಮ್, ಸಂದೀಪ್ ಪಾಟೀಲ್ ಆಗಿ ಚಿರಾಗ್ ಪಾಟೀಲ್ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

    ಕಬೀರ್ ಖಾನ್ ಡೈರೆಕ್ಷನ್ ಮಾಡಿರೋ 83 ಸಿನಿಮಾದ ಚಿತ್ರೀಕರಣವು 2019 ರಲ್ಲಿ ಪ್ರಾರಂಭವಾಯಿತು. ಚಿತ್ರದ ಆರಂಭಿಕ ಬಿಡುಗಡೆ ದಿನಾಂಕವು ಏಪ್ರಿಲ್ 10, 2020 ಎಂದು ನಿಗದಿಯಾಗಿತ್ತು. ಆದರೂ ಕೊರೋನಾದಿಂದಾಗಿ ರಿಲೀಸನ್ನು ಕ್ರಿಸ್ಮಸ್‌ಗೆ ಮುಂದೂಡಲಾಯಿತು. ಕೊರೋನಾ ಮತ್ತು ಲಾಕ್‌ಡೌನ್‌ಗಳಿಂದಾಗಿ ಬಿಡುಗಡೆಯ ದಿನಾಂಕಗಳಲ್ಲಿ ಹಲವಾರು ಬಾರಿ ಬದಲಾವಣೆಗಳಾದ ನಂತರ, ಸಿನಿಮಾ ಕೊನೆಗೂ ಡಿಸೆಂಬರ್ 24 ರಂದು ತೆರೆಗೆ ಬರಲಿದೆ.

    ಇದನ್ನೂ ಓದಿ :ಹಾಟ್​ ಫೋಟೋ ಶೇರ್ ಮಾಡಿದ Ranveer Sigh: ಟವೆಲ್​ ಜಾರುತ್ತಿದೆ ಜೋಕೆ ಎಂದ Pooja Hegde

    ಸಿನಿಮಾಗಾಗಿ ಕಪಿಲ್ ದೇವ್ ಬಳಿ ತರಬೇತಿ ಪಡೆದಿದ್ದ ರಣವೀರ್

    ಇನ್ನು 23 ಸಿನಿಮಾಗಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದ ರಣವೀರ ಸಿಂಗ್ ತೂಕ ಇಳಿಸಿಕೊಂಡು ಗಮನಸೆಳೆದಿದ್ದರು..ಅಲ್ಲದೆ ಕ್ರಿಕೆಟರ್ ಗಳ ಬಾಡಿ ಲ್ಯಾಂಗ್ವೇಜ್ ಹಾಗೂ ಆಟಿಟ್ಯೂಡ್ ಗಳು ಹೇಗೆ ಇರುತ್ತದೆ.. ಕಪಿಲ್ ದೇವ್ ಅವರು ಹೇಗೆ ವರ್ತನೆ ಮಾಡುತ್ತಿದ್ದರು ಎನ್ನುವುದನ್ನು ಮೂರು ದಿನಗಳ ಕಾಲ ಕಪಿಲ್ ದೇವ್ ಅವರ ಜೊತೆಯಲ್ಲಿಯೇ ಇದ್ದು ರಣವೀರ್ ಸಿಂಗ್ ಕಲಿತುಕೊಂಡಿದ್ದಾರೆ
    Published by:ranjumbkgowda1 ranjumbkgowda1
    First published: