'ಕಿರಿಕ್ ಪಾರ್ಟಿ' ಹೀರೋ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕನಾಗಿಯೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ರಕ್ಷಿತ್ ಶೆಟ್ಟಿ ಬರ್ತ್ಡೇಗೆ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ '777 ಚಾರ್ಲಿ ' (777 Charlie) ಚಿತ್ರತಂಡ ಸರ್ಪ್ರೈಸ್ ಒಂದನ್ನು ನೀಡಿದೆ. ರಕ್ಷಿತ್ ಶೆಟ್ಟಿ (Rakshit Shetty) ನಾಯಕನಾಗಿರುವ 777 ಚಾರ್ಲಿ ಎಂಬ ಮುದ್ದಾದ ನಾಯಿಯ ಕತೆಯಿರುವ '777 ಚಾರ್ಲಿ' ಸಿನಿಮಾದ ಟೀಸರ್ (777 Charlie Movie Teaser) ಇಂದು ರಿಲೀಸ್ ಆಗಿದೆ.
ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿರುವ '777 ಚಾರ್ಲಿ ' ಸಿನಿಮಾದ ಟೀಸರ್ ಅನ್ನು ಐದೂ ಭಾಷೆಗಳಲ್ಲಿ ಇಂದು ರಿಲೀಸ್ ಮಾಡಲಾಗಿದೆ. ಮುದ್ದಾದ ನಾಯಿಯ ಕತೆಯನ್ನು ಒಳಗೊಂಡಿರುವ ಈ '777 ಚಾರ್ಲಿ' ಸಿನಿಮಾದ ಟೀಸರ್ಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ.
ಕೆ. ಕಿರಣ್ ರಾಜ್ '777 ಚಾರ್ಲಿ' ಸಿನಿಮಾಗೆ ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಸಂಗೀತಾ ಶೃಂಗೇರಿ ಚಾರ್ಲಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ( Rakshit Shetty Birthday) ಪ್ರಯುಕ್ತ ಇಂದು 777 ಚಾರ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ.
'ಸಿಂಪಲ್ ಆಗೊಂದ್ ಲವ್ ಸ್ಟೋರಿ', 'ಉಳಿದವರು ಕಂಡಂತೆ', 'ಕಿರಿಕ್ ಪಾರ್ಟಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಅವನೇ ಶ್ರೀಮನ್ನಾರಾಯಣ' ಮುಂತಾದ ಸಿನಿಮಾ ಮೂಲಕ ಮನೆಮಾತಾಗಿರುವ ರಕ್ಷಿತ್ ಶೆಟ್ಟಿ ಇದೀಗ '777 ಚಾರ್ಲಿ' ಎಂಬ ನಾಯಿಯ ಗೆಳೆಯ ಧರ್ಮನಾಗಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.
ಈಗಾಗಲೇ ಚಾರ್ಲಿ (777 Charlie Movie) ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಕೊರೋನಾ ರಣಕೇಕೆ ನಿಯಂತ್ರಣಕ್ಕೆ ಬಂದ ಬಳಿಕ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. 2019ರಲ್ಲಿ ‘ಅವನೇ ಶ್ರೀಮನ್ನಾರಾಯಣ‘ ಚಿತ್ರ ಬಿಡುಗಡೆ ಮಾಡಿದ ಬಳಿಕ ರಕ್ಷಿತ್ ಶೆಟ್ಟಿಯವರು '777 ಚಾರ್ಲಿ' ಚಿತ್ರದಲ್ಲಿ ನಟಿಸಿದ್ದಾರೆ.
We hope that you will receive our labour of love, with love. #LifeOfCharlie is now out 😊
Proudly presenting the official teaser of #777Charlie in Kannada, Malayalam, Tamil, Telugu & Hindi ✨
Kannada: https://t.co/2daqMJzCvV
Malayalam: https://t.co/vU4aiek6Hv pic.twitter.com/GCLvp68WX3
— Rakshit Shetty (@rakshitshetty) June 6, 2021
Happy to release the official teaser of this super cute film #777Charlie, #LifeOfCharlie in Telugu 😊#777CharlieTeaser @rakshitshetty @Kiranraj61 @ParamvahStudios https://t.co/V6XXGp45a3
— Nani (@NameisNani) June 6, 2021
Here is your first look into the heart warming world of Charlie! 😊https://t.co/3ILoapiCSc#777Charlie's official teaser, #LifeOfCharlie Out Now#777CharlieTeaser@rakshitshetty @Kiranraj61 @ParamvahStudios @PrithvirajProd @PrithviOfficial #SupriyaMenon pic.twitter.com/Vkzw8R9Hxu
— Prithviraj Sukumaran (@PrithviOfficial) June 6, 2021
ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿರುವ 777 ಚಾರ್ಲಿ ಸಿನಿಮಾದ ಟೀಸರ್ನಲ್ಲಿಯೇ ಹಿನ್ನೆಲೆ ಸಂಗೀತಕ್ಕೆ ಈಗಾಗಲೇ ಪ್ರೇಕ್ಷಕರು ಹಾಗೂ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮರುಳಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ