Anitha EAnitha E
|
news18-kannada Updated:December 7, 2020, 9:08 AM IST
ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ 777 ಚಾರ್ಲಿ. ಕಿರಣ್ರಾಜ್ ಕೆ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಕೊರೋನಾ ಲಾಕ್ಡೌನ್ ಆರಂಭವಾಗುವ ಮೊದಲೇ ಸಾಕಷ್ಟು ಲೊಕೇಷನ್ಗಳಲ್ಲಿ ಚಿತ್ರೀಕರಣಗೊಂಡಿತ್ತು. ಕೊರೋನಾ ಭೀತಿಯಿಂದಾಗಿ ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆಯೇ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ, ಚಿತ್ರತಂಡ ಬೆಂಗಳೂರಿಗೆ ಮರಳಿತ್ತು. ಇದಾದ ನಂತರ ಇತ್ತೀಚೆಗಷ್ಟೆ ಮತ್ತೆ ಬೆಂಗಳೂರಿನಲ್ಲಿ ಶೂಟಿಂಗ್ ಆರಂಭವಾಯಿತು. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿದ ನಂತರ ಚಿತ್ರತಂಡ ಮತ್ತೆ ಕೊಡೈಕೆನಾಲ್ಗೆ ಹೋಗಿತ್ತು. ಈ ಬಗ್ಗೆ ಸಿನಿಮಾದ ನಿರ್ದೇಶಕ ಕಿರಣ್ರಾಜ್ ಸಾಮಾಜಿಕ ಜಾಲತಾಣದಲ್ಲಿ ಸದಾ ಅಪ್ಡೇಟ್ ಕೊಡುತ್ತಿದ್ದರು. ಇನ್ನೂ ರಕ್ಷಿತ್ ಶೆಟ್ಟಿ ಸಹ ರಿಚ್ಚಿ ಸಿನಿಮಾದ ಕಥೆ ಬರೆಯಲು ಗೋವಾಗೆ ಹೋಗಿದ್ದರು. ಅಲ್ಲಿಂದ ಬಂದ ಕೂಡಲೇ ಶೂಟಿಂಗ್ ಸೆಟ್ಗೆ ಮರಳಿದ್ದರು. ಕೊಡೈಕೆನಾಲ್ನಲ್ಲಿ ಶೂಟಿಂಗ್ ಮುಗಿಸಿದ ನಂತರ ಈಗ 777 ಚಾರ್ಲಿ ಚಿತ್ರತಂಡ ಕಾಶ್ಮೀರ ಸೇರಿಕೊಂಡಿದೆ. ಕಾಶ್ಮೀರದಲ್ಲಿ ಚಿತ್ರೀಕರಣದ ವೇಳೆ ತೆಗೆದ ಫೋಟೋವೊಂದನ್ನು ರಕ್ಷಿತ್ ಶೆಟ್ಟಿ ಈಗ ಹಂಚಿಕೊಂಡಿದ್ದಾರೆ.
ಕಾಶ್ಮೀರದಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಲಾಕ್ಡೌನ್ ಸಡಿಲಗೊಂಡ ನಂತರ ನಿರ್ದೇಶಕ ಕಿರಣ್ರಾಜ್ ಕೊಡೈಕೆನಾಲ್ನಲ್ಲಿ ಚಿತ್ರೀಕರಣ ಮುಗಿಸಿದರು. ಅಲ್ಲಿಂದ ಕಾಶ್ಮೀರಕ್ಕೆ ಹಾರಿದ ಈ ತಂಡ ಈಗ ಭೂಮಿ ಮೇಲಿನ ಸ್ವರ್ಗದಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ.
ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರದ ಸೌಂದರ್ಯವನ್ನು ರಕ್ಷಿತ್ ಶೆಟ್ಟಿ ಆಸ್ವಾದಿಸುತ್ತಿದ್ದಾರೆ. ಅಲ್ಲಿನ ಸೌಂದರ್ಯ, ಬಣ್ಣ ಹಾಗೂ ದೈವತ್ವದ ಅಂಶಗಳನ್ನು ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳುತ್ತಿದ್ದಾರಂತೆ. ಹೀಗೆಂದು ಟ್ವೀಟ್ ಮಾಡಿದ್ದಾರೆ. ರಕ್ಷಿತ್ ಅವರ ಫೋಟೋಗೆ ಕಮೆಂಟ್ ಮಾಡುತ್ತಿರುವ ನೆಟ್ಟಿಗರು ಈ ಸಿನಿಮಾ ಕುರಿತಾದ ಅಪ್ಡೇಟ್ ಕೊಡಿ ಎನ್ನುತ್ತಿದ್ದಾರೆ.
ಇನ್ನು ಕಾಶ್ಮೀರದಲ್ಲಿ ಶೂಟಿಂಗ್ ಪೂರ್ಣಗೊಂಡರೆ, 777 ಚಾರ್ಲಿ ಸಿನಿಮಾದ ರಿಲೀಸ್ಗೆ ದಿನಗಣನೆ ಆರಂಭವಾಗಲಿದೆ. ರಕ್ಷಿತ್ ಶೆಟ್ಟಿ ಅವರ ಕೈಯಲ್ಲಿ ಈ ಚಿತ್ರ ಬಿಟ್ಟು, ಸಪ್ತಸಾಗರದಾಚೆ ಎಲ್ಲೊ, ಪುಣ್ಯಕೋಟಿ, ಕಿರಿಕ್ ಪಾರ್ಟಿ 2 ಹಾಗೂ ಇನ್ನೂ ಹೆಸರಿಡದ ಸಿನಿಮಾ ಇದೆ. ಮೊದಲಿಗೆ ಜನವರಿಯಲ್ಲಿ ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆ ಎಲ್ಲೊ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಹೇಮಂತ್ ಎಂ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿದ್ದಾರೆ. ಈ ರೊಮ್ಯಾಂಟಿಕ್ ಡ್ರಾಮಾದ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆಯಂತೆ.
Published by:
Anitha E
First published:
December 7, 2020, 8:49 AM IST