777 Charlie Review: ಇದು ಚಾರ್ಲಿಯಿಂದ ಬದಲಾದ ಬದುಕು, ರಕ್ಷಿತ್ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ?

Rakshit Shetty: 777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರ ಅಭಿನಯ ಅದ್ಭುತ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಿಯೊಂದಿಗಿನ ಅವರ ಬಾಂಧವ್ಯವು, ವಿಶೇಷವಾಗಿ ಕಾಮಿಡಿ ದೃಶ್ಯಗಳು ಎಲ್ಲರನ್ನು ಭಾವುಕಗೊಳಿಸುತ್ತದೆ.

777 ಚಾರ್ಲಿ

777 ಚಾರ್ಲಿ

  • Share this:
777 ಚಾರ್ಲಿ (777 Charlie) ಈ ಚಿತ್ರ ಕನ್ನಡ ಚಿತ್ರರಂಗದ (Sandalwood) ಬಹು ನಿರೀಕ್ಷಿತ ಸಿನಿಮಾ ಎಂದರೆ ತಪ್ಪಲ್ಲ. ರಕ್ಷಿತ್ (Rakshit Shetty) ಅಭಿಮಾನಿಗಳಿಗೆ ಮಾತ್ರವಲ್ಲದೇ, ಸ್ಯಾಂಡಲ್​ವುಡ್​ಗೆ ಈ ಚಿತ್ರ ಬಹಳ ವಿಶೇಷ ಎನ್ನಬಹುದು. ತುಘಲಕ್'ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ '777 ಚಾರ್ಲಿ'(777 Charlie)ಗ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ (Film)  ಡಿಫ್ರೆಂಟ್. ಇದೀಗ ಬಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಹೇಗಿದೆ, ರಕ್ಷಿತ್ ಹಾಗೂ ಚಾರ್ಲಿ ಜೋಡಿ ಯಾವ ರೀತಿ ಮೋಡಿ ಮಾಡುತ್ತದೆ. ಹೇಗಿದೆ ಈ ಚಿತ್ರ ಇಲ್ಲಿದೆ ನೋಡಿ ರಿವ್ಯೂ.

 ಏನಿದು ಚಿತ್ರದ ಕಥೆ?

ಚಿತ್ರದ ನಾಯಕ ಧರ್ಮ (ರಕ್ಷಿತ್ ಶೆಟ್ಟಿ) ಜೀವನದಲ್ಲಿ ಒಂಟಿಯಾಗಿರುವ ನಟ, ಆದರೆ  ಅವನ ಬದುಕಿನಲ್ಲಿ ಮುದ್ದಾದ ನಾಯಿಯೊಂದು ಬಂದ ನಂತರ ಹೇಗೆ ಬದಲಾಗುತ್ತದೆ ಎಂಬುದು ಈ ಚಿತ್ರದ ಒನ್ ಲೈನ್ ಸ್ಟೋರಿ ಎನ್ನಬಹುದು.

ಹೇಗಿದೆ 777 ಚಾರ್ಲಿ ಸಿನಿಮಾ?

ಈ ಚಿತ್ರದ ಬಗ್ಗೆ ಇರುವ ನಿರೀಕ್ಷೆ ಅಷ್ಟಿಷ್ಟಲ್ಲ. ಟ್ರೈಲರ್ ಮೂಲಕವೇ ಅಭಿಮಾನಿಗಳ ಕಣ್ಣಲ್ಲಿ ನೀರನ್ನು ತರಿಸಿದ್ದ ಈ ಚಿತ್ರ ನಿಜಕ್ಕೂ ಭಾವುಕತೆಯನ್ನು ಹೊಂದಿದ್ದು, ನಾಯಿ ಪ್ರೇಮಿಗಳಿಗೆ ಇನ್ನೂ ಹೆಚ್ಚು ಇಷ್ಟವಾಗಬಹುದು. ಒಂದು ಮಾತಿದೆ,  ನಿಮ್ಮನ್ನ ಯಾರಾದರೂ ಜೀವನ ಪರ್ಯಾಂತ ಪ್ರೀತಿಸಿಬೇಕು ಎಂದಿದ್ದರೆ, ನಾಯಿಯನ್ನು ಸಾಕಿ, ಅವುಗಳಿಗೆ ಆಹಾರ ಹಾಕಿ ಎನ್ನಲಾಗುತ್ತದೆ. ಈ ಸಿನಿಮಾ ಹಾಗೂ ಈ ಮಾತು ಒಂದಕ್ಕೊಂದು ಸಂಬಂಧವಿದೆ ಎನ್ನಬಹುದು.

ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಜೀವನದಲ್ಲಿ ನೋವನ್ನು ಅನುಭವಿಸಿ, ಒಬ್ಬಂಟಿಯಾಗಿ ಬದುಕುವ ವ್ಯಕ್ತಿಯ ಕಥೆಯನ್ನು  ಹೇಳುತ್ತದೆ. ಮನೆ, ಫ್ಯಾಕ್ಟರಿ ಹೀಗೆ ಯಾಂತ್ರಿಕವಾಗಿ ಕಾಲ ಕಳೆಯುವ ಈ ವ್ಯಕ್ತಿಯ ಬದುಕು  ಜಗಳ, ಇಡ್ಲಿ ತಿನ್ನುವುದು, ಧೂಮಪಾನ ಮತ್ತು ಬಿಯರ್ ಕುಡಿಯುವುದು ಇಷ್ಟೇ ಎನ್ನುವಂತಿರುತ್ತದೆ. ಆದರೆ ಆಕಸ್ಮಿಕವಾಗಿ ಹೆಣ್ಣು ನಾಯಿಯನ್ನು ಭೇಟಿಯಾದಾಗ ಅವನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ.

ಇದನ್ನೂ ಓದಿ: ಮದುವೆಗೆ ಮಾಜಿ ಪ್ರೇಮಿಗಳನ್ನೆಲ್ಲಾ ಖಂಡಿತಾ ಕರಿತಾರಂತೆ ನಯನತಾರಾ, ಯಾರ್ಯಾರು ಹೋಗ್ತಾರೆ ಅನ್ನೋದೇ ಮುಖ್ಯ!

ಅವನ ಬದುಕು ಆ ನಾಯಿಗಾಗಿ ಮೀಸಲು ಎನ್ನುವಂತಾಗುತ್ತದೆ. ಅದಕ್ಕೆ ಚಾರ್ಲಿ ಎಂದು ಹೆಸರಿಟ್ಟು, ಸಂಪೂರ್ಣವಾಗಿ ಅದರ ಜೊತೆಯೇ ಸಮಯ ಕಳೆಯುತ್ತಿರುತ್ತಾನೆ. ಮುದ್ದು ನಾಯಿಯ ತುಂಟತನ ಮತ್ತು ಪ್ರೀತಿ, ನಾಯಕನ ಜೀವನದ ದೃಷ್ಟಿಕೋನವನ್ನು ಶಾಶ್ವತವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತದೆ. ಈ ಸಿನಿಮಾ ಸಾಕುಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ  ಹಾಗೂ ಅವುಗಳ ಜೊತೆ ಒಡನಾಟದ ಬಗ್ಗೆ ಶಕ್ತಿಯುತವಾದ ಸಂದೇಶವನ್ನು ನೀಡುತ್ತದೆ ಎಂಬುದು ಮುಖ್ಯ.

ಅಪಘಾತದಲ್ಲಿ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಳ್ಳುವ ದುರಂತದ ಪರಿಣಾಮವಾಗಿ ನಾಯಕನ ಜೀವನ ಮತ್ತು ಅವನ ಖಿನ್ನತೆಯ ಸಮಸ್ಯೆಗಳು ಹೇಗೆ ಒಂದು ನಾಯಿಯ ಬರುವಿಕೆಯಿಂದ ಬದಲಾಗುತ್ತದೆ ಹಾಗೂ ಮನುಷ್ಯದ  ಬದುಕಿನಲ್ಲಿ ಅವುಗಳ ಪ್ರಾಮುಖ್ಯತೆ ಏನು ಎಂಬುದನ್ನ ಈ ಚಿತ್ರ ಅರ್ಥ ಮಾಡಿಸುತ್ತದೆ ಎಂದರೆ ತಪ್ಪಲ್ಲ.

777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರ ಅಭಿನಯ ಅದ್ಭುತ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಿಯೊಂದಿಗಿನ ಅವರ ಬಾಂಧವ್ಯ  ಎಲ್ಲರನ್ನು ಭಾವುಕಗೊಳಿಸುತ್ತದೆ ಹಾಗೆಯೇ ವಿಶೇಷವಾಗಿ ಕಾಮಿಡಿ ದೃಶ್ಯಗಳಲ್ಲಿ ಸಹ ನಮಗೆ ಜೀವನದ ಅರ್ಥ ಕಾಣುತ್ತದೆ. ಸಂಗೀತಾ ಶೃಂಗೇರಿ, ರಾಜ್​ ಬಿ ಶೆಟ್ಟಿ ತಮ್ಮ ಪಾತ್ರಗಳಿಗೆ ಸೂಕ್ತವಾದ ನ್ಯಾಯ ಒದಗಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲೂ ಚಾರ್ಲಿ ಹವಾ, ಈ ಥರ ಕಟೌಟ್​​ ಯಾವ್​ ಹೀರೋಗಳಿಗೂ ಹಾಕಿಲ್ಲ ರೀ

ಈ ಚಿತ್ರದ ಚಿತ್ರಕತೆ, ಛಾಯಾಗ್ರಹಣ  ಸಹ ಒಪ್ಪಿಕೊಳ್ಳುವಂತಿದೆ. ಇನ್ನು ಈ ಚಿತ್ರದ ಮೊದಲಾರ್ಧದಲ್ಲಿ ಕಾಮಿಡಿ ಸೀನ್​ಗಳಿದ್ದರೆ, ನಂತರ ಬಹಳ ಭಾವನಾತ್ಮಕವಾಗಿದೆ. ಕೆಲವೊಮ್ಮೆ ಈ ಸಿನಿಮಾ ಬಹಳ ಉದ್ದವಾಯ್ತು ಅನಿಸುತ್ತದೆ. ಎಲ್ಲೂ ಸ್ವಲ್ಪ ಕಡಿಮೆ ಮಾಡಿದ್ದರೆ ಇನ್ನೂ ಅದ್ಭುತವಾಗಿ ಮೂಡಿಬರುತ್ತಿತ್ತು ಎಂಬುದು ಒಂದು ಭಾವನೆ.  ಇನ್ನು ಈ ಚಿತ್ರ ಸಿನಿಪ್ರಿಯರಿಗೆ ಹಾಗೂ ರಕ್ಷಿತ್ ಅಭಿಮಾನಿಗಳಿಗೆ ಉತ್ತಮ ಸಂದೇಶ ನೀಡುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ಚಿತ್ರದ ಕೊನೆಯಲ್ಲಿ ಕಣ್ಣಾಲಿಗಳು ಬರದೇ ಇರದು.
Published by:Sandhya M
First published: