777 Charlie: ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ, ಚಾರ್ಲಿಯ ತುಂಟಾಟವನ್ನು ನೀವೂ ಕಣ್ತುಂಬಿಕೊಳ್ಳಿ

Making Video: ಅಲ್ಲದೇ ನಾವು ವಿಡಿಯೋದಲ್ಲಿ ಹೇಗೆಲ್ಲಾ ತಯಾರಿ ಮಾಡಲಾಗುತ್ತಿತ್ತು ಎಂಬುದನ್ನ ನೋಡಬಹುದಾಗಿದೆ. ಇದರಲ್ಲಿ ಆರಂಭದಿಂದ  ಹಿಡಿದು ಅಂತ್ಯದವರೆಗೆ ಹೇಗಿತ್ತು ಹಾಗೂ ತೆರೆಯ ಹಿಂದಿನ ಫನ್ ಘಟನೆಗಳನ್ನು ತೋರಿಸಲಾಗಿದೆ.

777 ಚಾರ್ಲಿ

777 ಚಾರ್ಲಿ

  • Share this:
ಸದ್ಯ ಸ್ಯಾಂಡಲ್​ವುಡ್​ನಲ್ಲಿ (Sandalwood)  ಎಲ್ಲಿ ನೋಡಿದರೂ ಚಾರ್ಲಿ ಹವಾ, 777 ಚಾರ್ಲಿ (777 Charlie) ಯಾವ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದೆ ಎಂದರೆ ಎಲ್ಲರ ಸ್ಟೇಟಸ್​ಗಳಲ್ಲಿ ಕೂಡ ಚಾರ್ಲಿ, ಕೆಲವು ಕಡೆ ನಾಯಿಗೆ ಚಾರ್ಲಿ ಎಂದು ನಾಮಕರಣ ಮಾಡಲಾಗಿದೆ. ಒಟ್ಟಾರೆಯಾಗಿ ಚಾರ್ಲಿ ಮೇನಿಯಾ ಎನ್ನಬಹುದು. ಈ ಅದ್ಭುತ ಚಿತ್ರ (Movie) ತಯಾರಾಗಲು ಸರಿ ಸುಮಾರು ಮೂರು ವರ್ಷಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದೆ. ಚಿತ್ರತಂಡದ ಪರಿಶ್ರಮ ಈ ಚಿತ್ರವನ್ನು ಈ ರೀತಿ ಸಕ್ಸಸ್​ ಆಗಲು ಕಾರಣವಾಗಿದೆ. ಇದೀಗ ಈ ಚಿತ್ರ ಸಕ್ಸಸ್​ ಆಗುತ್ತಿರುವಂತೆ, ಚಾರ್ಲಿ ಚಿತ್ರತಂಡ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದೆ.  ನಟ ರಕ್ಷಿತ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ತೆರೆಯ ಹಿಂದಿನ ಪರಿಶ್ರಮದ ಸಣ್ಣ ತುಣುಕು ಈ ಮೇಕಿಂಗ್ ವಿಡಿಯೋ ಮೂಲಕ ನಿಮ್ಮ ಮುಂದೆ ಎಂದು ಬರೆದುಕೊಂಡಿದ್ದಾರೆ.

ಮೇಕಿಂಗ್ ವಿಡಿಯೋ ರಿಲೀಸ್​ 

ಈಗಾಗಲೇ ಈ ವಿಡಿಯೋವನ್ನು ಸುಮಾರು 310ಕ್ಕೂ ಹೆಚ್ಚು ಜನ ರೀಟ್ವಿಟ್​ ಮಾಡಿದ್ದು, ಫುಲ್ ಶೇರ್ ಆಗುತ್ತಿದೆ. ಅಲ್ಲದೇ ನಾವು ವಿಡಿಯೋದಲ್ಲಿ ಹೇಗೆಲ್ಲಾ ತಯಾರಿ ಮಾಡಲಾಗುತ್ತಿತ್ತು ಎಂಬುದನ್ನ ನೋಡಬಹುದಾಗಿದೆ. ಇದರಲ್ಲಿ ಆರಂಭದಿಂದ  ಹಿಡಿದು ಅಂತ್ಯದವರೆಗೆ ಹೇಗಿತ್ತು ಹಾಗೂ ತೆರೆಯ ಹಿಂದಿನ ಫನ್ ಘಟನೆಗಳನ್ನು ತೋರಿಸಲಾಗಿದೆ.  ಈ ವಿಡಿಯೋ ನೋಡಿದರೆ ಈ ಚಿತ್ರವನ್ನು ತಯಾರಿಸಲು ತಂಡ ಎಷ್ಟು ಕಷ್ಟಪಟ್ಟಿದೆ, ಒಂದು ಅದ್ಭುತ ಚಿತ್ರದ ಹಿಂದೆ ಎಷ್ಟೆಲ್ಲಾ ಜನರ ಯಾವ ರೀತಿಯ ಪರಿಶ್ರಮ ಇರುತ್ತದೆ ಎಂಬುದು ಕಾಣುತ್ತದೆ.

ಅದರಲ್ಲೂ ಈ ಚಿತ್ರದಲ್ಲಿ ನಾಯಿಯನ್ನು ಇಟ್ಟುಕೊಂಡು ಮಾಡಲಾಗಿದೆ. ಆ ಸಮಯದಲ್ಲಿ ಒಂದು ಪ್ರಾಣಿಯನ್ನು ಇಟ್ಟುಕೊಂಡು ಶೂಟ್​ ಮಾಡುವುದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಏನೆಲ್ಲಾ ಸರ್ಕಸ್​ ಮಾಡಬೇಕು ಎಂಬುದನ್ನ ನಾವು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ಅಭಿಮಾನಿಗಳ ದೇವರನ್ನ ತಲೆ ಮೇಲೆ ಹೊತ್ತು ಕುಣಿದ ಫ್ಯಾನ್ಸ್! ಅಪ್ಪು ಮೇಲಿನ ಪ್ರೀತಿ ನೋಡಿ ಭಾವುಕರಾದ ರಾಘಣ್ಣ

ಸಿನಿಮಾ ಬಿಡುಗಡೆಯಾಗಿ ಇಂದಿಗೆ ನಾಲ್ಕನೇ ದಿನವಾಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಮೊದಲ ದಿನದಿಂದಲೇ ಉತ್ತಮ ಆರಂಭ ಪಡೆದಿರುವ ಈ ಸಿನಿಮಾ, ಈಗಾಗಲೇ 20 ಕೋಟಿ ಬಾಜಿಕೊಂಡಿದೆ ಎಂಬ ಮಾಹಿತಿ ಇದೆ.ಪ್ಯಾನ್​ ಇಂಡಿಯಾ ಚಿತ್ರವಾಗಿರುವ ಚಾರ್ಲಿ, ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ.  ಇನ್ನು ರಾಜ್ಯದ ಸಿಎಂ ಕೂಡ ಈ ಸಿನಿಮಾವನ್ನು ಇಂದು ನೋಡುವ ನಿರೀಕ್ಷೆ ಇದ್ದು, ಎಲ್ಲಾ ಕಡೆ ಥಿಯೇಟರ್ ಫುಲ್ ಎನ್ನುವ ಮಾತು ಕೇಳಿ ಬರುತ್ತಿದೆ. ಹಲವಾರು ಕಡೆ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು, ಆ ಸಮಯದಿಂದಲೇ ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈಗಂತೂ ಸಿನಿ ಪ್ರೇಮಿಗಳು ಹಾಗೂ ನಾಯಿ ಪ್ರೆಮಿಗಳಿಗೆ ಬಹಳ ಇಷ್ಟವಾಗಿದೆ.

ಸಿಎಂ ಇಂದು ಸಿನಿಮಾ ನೋಡ್ತಾರಂತೆ

ಚಾರ್ಲಿ ಸಿನಿಮಾ ಬಿಡುಗಡೆಯಾಗುವ ಮೊದಲಿನಿಂದಲೂ ಬಹಳ ಸುದ್ದಿಯಲ್ಲಿತ್ತು. ಟ್ರೈಲರ್​ ನೋಡಿದ ಪ್ರತಿಯೊಬ್ಬರು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದರು. ಸಿನಿಮಾ ಬಿಡುಗಡೆಯಾದ ಮೇಲಂತೂ ಅದರ ಬಗ್ಗೆ ಮಾತನಾಡದವರಿಲ್ಲ. ಈ ಚಿತ್ರಕ್ಕೆ ಉತ್ತಮ ರಿವ್ಯೂ ಬಂದಿದ್ದು ಸಿನಿ ಪ್ರಿಯರು ಈ ಚಿತ್ರವನ್ನು ವಿಮರ್ಶೆ ಮಾಡಲು ಸಾಧ್ಯವಿಲ್ಲ. ಮಾಡಲೂ ಬಾರದು. ಇದರಲ್ಲಿ ತಪ್ಪು ಹುಡುಕಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮೂರನೇ ದಿನವೂ ಮುಂದುವರಿದ ಚಾರ್ಲಿ ಅಬ್ಬರ, ಟಿಕೆಟ್​ ಸಿಗದೇ ಅಭಿಮಾನಿಗಳಿಗೆ ನಿರಾಸೆ

ಬಹಳ ಎಮೋಷನ್ ಸಿನಿಮಾ ಇದಾಗಿದ್ದು, ನಾಯಿಯನ್ನು ಇಷ್ಟಪಡದವರೂ ಕೂಡ ಭಾವುಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಚಿತ್ರದ ಕ್ರೇಜ್ ಎಷ್ಟಿತ್ತು ಎಂದರೆ ಚಾರ್ಲಿ ಅಭಿಮಾನಿ ಬಳಗ ಹುಟ್ಟಿಕೊಂಡು ಅದರ ಪೋಸ್ಟರ್ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು.
Published by:Sandhya M
First published: