777 Charlie: ಚಾರ್ಲಿಗೆ ಟ್ರೈನಿಂಗ್​ ಕೊಟ್ಟ ಆ ದಿನಗಳು ಹೇಗಿತ್ತು ಗೊತ್ತಾ? ಘಾಟಿ ನಾಯಿಗೆ ಬುದ್ದಿ ಕಲಿಸೋಕೆ ಬಂದಿದ್ದರು ಸ್ಪೆಷಲ್​ ಟ್ರೈನರ್​!

777 Charlie: ಈ ಚಾರ್ಲಿ ನಾಯಿ ಹಾಗೂ ಅದಕ್ಕೆ ಟ್ರೈನಿಂಗ್ ಕೊಟ್ಟವರು ಸಹ ಮೈಸೂರಿನವರು. ಇನ್ನೊಂದು ವಿಶೇಷ ಎಂದರೆ ಈ ಸಿನಿಮಾದ ಬಹುಪಾಲು ಶೂಟಿಂಗ್ ಆಗಿದ್ದು ಮೈಸೂರಿನಲ್ಲಿ.

ಪ್ರಮೋದ್​

ಪ್ರಮೋದ್​

  • Share this:
ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ ಚಲನಚಿತ್ರ 777 ಚಾರ್ಲಿ (777 Charlie) ಎರಡನೇ ವಾರದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಉತ್ತಮ ಕಲೆಕ್ಷನ್ (Collection)  ಮಾಡುವ ಮೂಲಕ ಬ್ಲಾಕ್ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾ ಜನರ ಮನದಲ್ಲಿ ನೆನಪಾಗಿ ಶಾಶ್ವತವಾಗಿ ಮನೆ ಮಾಡಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರ ಕಣ್ಣಾಲಿಗಳು ತುಂಬಿ ಬರುತ್ತದೆ. ಅಂಥಹ ಅದ್ಭುತ ಸಿನಿಮಾ ಇದು ಎನ್ನುವುದರಲ್ಲಿ ಯಾಔಉದೇ ಅನುಮಾನವಿಲ್ಲ.  ಇನ್ನು ಈ ಸಿನಿಮಾ ಎಷ್ಟು ಫೇಮಸ್​ ಆಗಿದಿಯೋ ಅದಕ್ಕಿಂತ ಹೆಚ್ಚಾಗಿ ಚಾರ್ಲಿ ನಾಯಿ ಕೂಡ ಬಹಳ ಫೇಮಸ್​. ಅದರ ಅದ್ಭುತ ಅಭಿನಯದ ಮೂಲಕ ಜನರ ಮನ ಗೆದ್ದಿದೆ. ಎಲ್ಲೆಡೆ ಚಾರ್ಲಿ ಚಾರ್ಲಿ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಈ ನಾಯಿಯ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ನಾಯಿ ಎಲ್ಲಿಯದು, ಟ್ರೈನಿಂಗ್ ನೀಡಿದ್ದು ಹೇಗೆ? ಈ ವಿಚಾರಗಳು ಇಲ್ಲಿದೆ.  

ಚಾರ್ಲಿ ಟ್ರೈನರ್ ಮೈಸೂರಿನವರು

ಈ ಚಾರ್ಲಿ ನಾಯಿ ಹಾಗೂ ಅದಕ್ಕೆ ಟ್ರೈನಿಂಗ್ ಕೊಟ್ಟವರು ಸಹ ಮೈಸೂರಿನವರು. ಇನ್ನೊಂದು ವಿಶೇಷ ಎಂದರೆ ಈ ಸಿನಿಮಾದ ಬಹುಪಾಲು ಶೂಟಿಂಗ್ ಆಗಿದ್ದು ಮೈಸೂರಿನಲ್ಲಿ. ಈ ನಾಯಿಗೆ ಟ್ರೈನಿಂಗ್ ಕೊಟ್ಟವರ ಹೆಸರು ಪ್ರಮೋದ್ ಬಿ.ಸಿ. ಚಾರ್ಲಿ ಸಿನಿಮಾದ ಮೊದಲಾರ್ಧದಲ್ಲಿ ಬರುವ ಚಿಕ್ಕ ಹಾಗೂ ನಂತರ ಕಾಣಿಸಿಕೊಳ್ಳುವ ದೊಡ್ಡ ‘ಚಾರ್ಲಿ’ ನಾಯಿಗಳನ್ನು ಇವರೇ ಪಳಗಿಸಿದ್ದು.

ಪ್ರಮೋದ್ ಅವರು ಮೈಸೂರಿನ ಡಿ ಸಾಲುಂಡಿಯಲ್ಲಿ ಡಿಕೆ9 ವರ್ಕಿಂಗ್ ಡಾಗ್‌ ಟ್ರೇನಿಂಗ್‌ ಸ್ಕೂಲ್‌’ ಎನ್ನುವ ಹೆಸರಿನಲ್ಲಿ ನಾಯಿಗಳ ಟ್ರೈನಿಂಗ್ ಸ್ಕೂಲ್​ ನಡೆಸುತ್ತಿದ್ದಾರೆ. ಸುಮಾರು 8 ವರ್ಷಗಳಿಂದ ಈ ಟ್ರೈನಿಂಗ್ ಸ್ಕೂಲ್ ನಡೆಸುತ್ತಿದ್ದು, ಸದ್ಯ 22 ನಾಯಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಈ ತರಬೇತಿಯಲ್ಲಿ ನಾಯಿಗಳಿಗೆ ಮನೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ರೀತಿ ಟ್ರೈನಿಂಗ್ ನೀಡಲಾಗುತ್ತದೆ. ಪ್ರಮೋದ್​ ಅವರೇ ಚಾರ್ಲಿ ಸಿನಿಮಾದ ನಾಯಿಗೆ ಟ್ರೈನಿಂಗ್ ಕೊಟ್ಟವರು.

ಈ ಚಾರ್ಲಿ ನಾಯಿ ಲ್ಯಾಬ್ರಡಾರ್‌ ತಳಿಯಾಗಿದ್ದು,  ದೊಡ್ಡ ‘ಚಾರ್ಲಿ’ಗೆ ಈಗ 4.5 ವರ್ಷ, ಚಿಕ್ಕ ಚಾರ್ಲಿಗೆ 4 ವರ್ಷವಂತೆ. ಇವೆರೆಡು ನಾಯಿಗಳಿಗೆ ಪ್ರಮೋದ್ ಉತ್ತಮವಾಗಿ ಟ್ರೈನಿಂಗ್ ನೀಡಿದ್ದು, ಸಿನಿಮಾದಲ್ಲಿ ಸಹಜ ಅಭಿನಯದ ಮೂಲಕ ಜನರಿಗೆ ಬಹಳ ಇಷ್ಟವಾಗಿದೆ. ಸಿನಿಮಾದಲ್ಲಿ ತೆರೆಯ ಮೇಲೆ ರಕ್ಷಿತ್ ಶೆಟ್ಟಿ ಹೇಳಿದಂತೆ ಕೇಳುವ ಈ ನಾಯಿ ಹಿಂದೆ ಪ್ರಮೋದ್​ ಪರಿಶ್ರಮ ಬಹಳಷ್ಟಿದೆ. ಕ್ಯಾಮೆರಾ ಹಿಂದೆ ನಿಂತು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಹನಿಮೂನ್​ ಮುಗಿಸಿ ಡೈರೆಕ್ಟ್​ ಶೂಟಿಂಗ್​ಗೆ ಹಾಜರಾದ ನಯನತಾರಾ, ಶಾರುಖ್‌ ಜೊತೆ ಜವಾನ್‌ನಲ್ಲಿ ಆ್ಯಕ್ಟ್

ಬೇರೆ ಬೇರೆ ಸಿನಿಮಾಗಳಿಂದ ಬರ್ತಿದೆ ಆಫರ್

ಚಾರ್ಲಿ ಸಿನಿಮಾದ ನಿರ್ದೇಶಕ ಕಿರಣ್ ರಾಜ್‌ ದೇಶದ ವಿವಿಧೆಡೆ ಕಡೆಯಿಂದ 20ಕ್ಕೂ ಹೆಚ್ಚು ನಾಯಿ ತರಬೇತುದಾರರನ್ನು ಸಂಪರ್ಕಿಸಿ, ಸಹಜ ಅಭಿನಯ ಮಾಡುವ ನಾಯಿಯ ಹುಡುಕಾಟದಲ್ಲಿ ಇದ್ದರು. ಆ ಸಮಯದಲ್ಲಿ ನಿರ್ದೇಶಕ ಹೇಮಂತ್ ರಾವ್​ ಕವಲುದಾರಿ ಸಿನಿಮಾದಲ್ಲಿ  ಕಾಣಿಸಿಕೊಂಡಿದ್ದ ನಾಯಿಯನ್ನು ಕೊಟ್ಟಿದ್ದ ಪ್ರಮೋದ್ ಅವರನ್ನು ಸಂಪರ್ಕಿಸಲು ಹೇಳಿದ್ದರಂತೆ. ನಂತರ ಕಿರಣ್ ರಾಜ್ ಪ್ರಮೋದ್ ಅವರನ್ನು ಸಂಪರ್ಕಿಸಿ ಚಾರ್ಲಿ ಸಿನಿಮಾಗೆ ಆಯ್ಕೆ ಮಾಡಿದ್ದಾರೆ.

ಎಂಜಿನಿಯರಿಂಗ್ ಓದಿರುವ ಪ್ರಮೋದ್​ಗೆ ನಾಯಿಗಳೆಂದರೆ ಬಹಳ ಇಷ್ಟ. ಮೊದಲಿನಿಂದಲೂ ಅವರು ನಾಯಿಗಳನ್ನು ಸಾಕುತ್ತಾ ಬಂದಿದ್ದಾರೆ. ಅವರಿಗೆ ಐಪಿಎಸ್​ ಅಧಿಕಾರಿ ಆಗಬೇಕು ಎಂಬ ಆಸೆ ಇತ್ತಂತೆ, ಆದರೆ ಅದು ಆಗದ ಕಾರಣ ಸಂಪೂರ್ಣವಾಗಿ ನಾಯಿ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷ ಎಂದರೆ ಶ್ವಾನ ವಿಜ್ಞಾನದಲ್ಲಿ ಜರ್ಮನಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ.

ಇದನ್ನೂ ಓದಿ: ನಟಿ ಮೀನಾ ಗಂಡನ ಪ್ರಾಣ 'ಪಕ್ಷಿ' ಹಾರಿ ಹೋಗಲು ಇದೇ ಕಾರಣ

ಇನ್ನು ಚಾರ್ಲಿ ಸಿನಿಮಾದ  ಸಕ್ಸಸ್​ ನಂತರ ಅವರಿಗೆ ಬೇರೆ ಸಿನಿಮಾಗಳಿಂದ ಸಹ ಆಫರ್ರ ಬರುತ್ತಿದೆಯಂತೆ. ವಿವಿಧ ಸಿನಿಮಾಗಳಿಗೆ ಈಗಾಗಲೇ ಪ್ರಮೋದ್ ನಾಯಿಗಳನ್ನು ನೀಡಿದ್ದಾರಂತೆ. ​
Published by:Sandhya M
First published: