777 Charlie Collection: 8ನೇ ದಿನವೂ ಮುಂದುವರೆದ ಚಾರ್ಲಿ ಅಬ್ಬರ, ಇದುವರೆಗೂ ಮಾಡಿದ ಕಲೆಕ್ಷನ್ ಎಷ್ಟು?

Rakshit Shetty: ಚಾರ್ಲಿ ಸಿನಿಮಾ ಬಿಡುಗಡೆಯಾದಾಗಿನಿಂದ ಈ ಚಿತ್ರದ ಬಜೆಟ್​ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಕೆಲ ಮಾಹಿತಿ ಪ್ರಕಾರ ಚಾರ್ಲಿ ಬಜೆಟ್​ 25 ಕೋಟಿ, ಆದರೆ ಕೆಲ ಮೂಲಗಳ ಪ್ರಕಾರ 15 ಕೋಟಿಯಂತೆ.

777 ಚಾರ್ಲಿ ಸಿನಿಮಾ

777 ಚಾರ್ಲಿ ಸಿನಿಮಾ

  • Share this:
ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ 777 ಚಾರ್ಲಿ (777 Charlie) ಎಲ್ಲರ ಮನ ಗೆಲ್ಲುತ್ತಿದೆ. ಈ ಸಿನಿಮಾವನ್ನು (Film)  ಇಷ್ಟಪಡದವರು ಯಾರೂ ಇಲ್ಲ. ಇದರಲ್ಲಿ ಹೀರೋ ರಕ್ಷಿತ್ ಶೆಟ್ಟಿ, ಆದ್ರೆ ಚಾರ್ಲಿ ನಾಯಿ ಮೋಡಿ ಮಾಡಿದೆ. ಹಾಗೆಯೇ ಬಾಕ್ಸ್ ಆಫೀಸ್ ಕಲೆಕ್ಷನ್ (Box Office)  ವಿಚಾರದಲ್ಲಿ ಮುನ್ನುಗುತ್ತಿದ್ದು, 8ನೇ ದಿನ ಸಹ ಉತ್ತಮ ಗಳಿಗೆ ಮಾಡಿದೆ. ಕರ್ನಾಟಕದಲ್ಲಿ (Karnataka) ಈ ಸಿನಿಮಾ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದ್ದು, ಹಿಂದಿಯಲ್ಲಿ ಹಿನ್ನಡೆ ಅನುಭವಿಸಿದೆ. ಹೇಗಿತ್ತು 8ನೇ ದಿನ ಕಲೆಕ್ಷನ್ ಇಲ್ಲಿದೆ ಮಾಹಿತಿ.

ಒಟ್ಟು 50 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ

ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿ ಪ್ರಕಾರ, 777 ಚಾರ್ಲಿ ಸಿನಿಮಾ ಕರ್ನಾಟಕದಲ್ಲಿ ಒಟ್ಟು 1.5 ಕೋಟಿ ಗಳಿಕೆ ಮಾಡಿದೆ. ಇನ್ನು ವಿಶ್ವಾದ್ಯಂತ ಈ ಸಿನಿಮಾ 2.5 ಕೋಟಿ ಬಾಚಿಕೊಂಡಿದೆ. ಹಾಗೆಯೇ ಬಿಡುಗಡೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೆ ಚಾರ್ಲಿ ವಿಶ್ವಾದ್ಯಂತ ಒಟ್ಟು 50.1 ಕೋಟಿ ಗಳಿಸಿದ್ದು, ಕರ್ನಾಟಕದಲ್ಲಿ 36 ಕೋಟಿ ರೂ ಕಲೆಕ್ಷನ್ ಮಾಡಿದೆ.

ರಾಜ್ಯವಾರು ಈ 8 ದಿನಗಳಲ್ಲಿ ಚಾರ್ಲಿ ಮಾಡಿದ ಕಲೆಕ್ಷನ್ ಮಾಹಿತಿ

ವಿಶ್ವಾದ್ಯಂತ: 50.1 ಕೋಟಿ ಒಟ್ಟು

ಕರ್ನಾಟಕ: ಮೊದಲ 8 ದಿನದಲ್ಲಿ 36 ಕೋಟಿ ಗಳಿಕೆ

ಆಂಧ್ರಪ್ರದೇಶ / ತೆಲಂಗಾಣ: ಮೊದಲ 8 ದಿನದಲ್ಲಿ 2 ಕೋಟಿ

ಕೇರಳ: ಮೊದಲ 8 ದಿನದಲ್ಲಿ ಒಟ್ಟು ಗಳಿಕೆ 2.25 ಕೋಟಿ

ಹಿಂದಿ ಹಾಗೂ ಭಾರತದ ಉಳಿದ ಭಾಗಗಳಲ್ಲಿ: ಮೊದಲ 8 ದಿನದಲ್ಲಿ 2 ಕೋಟಿ

ತಮಿಳುನಾಡು: ಮೊದಲ 8 ದಿನದಲ್ಲಿ 1 ಕೋಟಿ ರೂ

ವಿದೇಶದಲ್ಲಿ: ಮೊದಲ 8 ದಿನದಲ್ಲಿ 6.85 ಕೋಟಿ ಗಳಿಕೆ

ಇದನ್ನೂ ಓದಿ: ವೈರಲ್ ಆಯ್ತು ಸೋನಮ್ ಕಪೂರ್ ಸೀಮಂತದ ಫೋಟೋ, ಹುಡುಗಿ ಬಟ್ಟೆಯಲ್ಲಿದ್ದ ಆ ವ್ಯಕ್ತಿ ಮೇಲೆ ಎಲ್ಲರ ಕಣ್ಣು!

ಚಾರ್ಲಿ ಸಿನಿಮಾ ಬಿಡುಗಡೆಯಾದಾಗಿನಿಂದ ಈ ಚಿತ್ರದ ಬಜೆಟ್​ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಕೆಲ ಮಾಹಿತಿ ಪ್ರಕಾರ ಚಾರ್ಲಿ ಬಜೆಟ್​ 25 ಕೋಟಿ, ಆದರೆ ಕೆಲ ಮೂಲಗಳ ಪ್ರಕಾರ 15 ಕೋಟಿಯಂತೆ. ಇನ್ನು ಈ ಸಿನಿಮಾ ವಿಶ್ವದಾದ್ಯಂತ ಸರಿ ಸುಮಾರು 1800 ಸ್ಕ್ರೀನ್​ಗಳಲ್ಲಿ ಬಿಡುಗಡೆಯಾಗಿದೆ. ಗಲ್ಫ್​ ದೇಶಗಳಲ್ಲಿ 100 ಸ್ಕ್ರೀನ್​ಗಳಲ್ಲಿ​ ಹಾಗೂ ಯುಎಸ್​ನಲ್ಲಿ 200 ಸ್ಕ್ರೀನ್​ಗಳಲ್ಲಿ ಬಿಡುಗಡೆಯಾಗಿದೆ.

ಈ ಸಿನಿಮಾ ಕೇರಳದಲ್ಲಿ ಸಹ ಉತ್ತಮ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸ್ ಕಲೆಕ್ಷನ್‌ ಮಾಹಿತಿ ಪ್ರಕಾರ, ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ  ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗಳಿಕೆ ಮಾಡಿದ ಮೂರನೇ ಕನ್ನಡ ಚಿತ್ರವಾಗಿದೆ.  ರಕ್ಷಿತ್ ಶೆಟ್ಟಿಯಲ್ಲದೆ, 777 ಚಾರ್ಲಿ ಚಿತ್ರದಲ್ಲಿ ನಟರಾದ ಎಚ್‌. ಜಿ ಸೋಮಶೇಖರ್ ರಾವ್, ಅಭಿಜಿತ್ ಮಹೇಶ್, ಸಂಗೀತ ಶೃಂಗೇರಿ, ಭಾರ್ಗವಿ ನಾರಾಯಣ್, ರಾಜ್ ಬಿ ಶೆಟ್ಟಿ ಮತ್ತು ಹಲವಾರು ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕಿರಣರಾಜ್ ಕೆ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣವನ್ನು ಅರವಿಂದ್ ಕಶ್ಯಪ್ ಮಾಡಿದ್ದು ಮತ್ತು ಸಂಕಲನವನ್ನು ಪ್ರತೀಕ್ ಶೆಟ್ಟಿ ಮಾಡಿದ್ದಾರೆ. ನೋಬಿನ್ ಪಾಲ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಅಪ್ಪ-ಮಗ ಅಂದ್ರೆ ಹೀಗಿರಬೇಕು, ಕೊನೆ ಸಿನಿಮಾದಲ್ಲೂ ಒಂದೇ ಸಂದೇಶ ಕೊಟ್ಟ ಪುನೀತ್-ರಾಜ್​ಕುಮಾರ್!

ಈ ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ ಬಹಳ ಇಷ್ಟಪಡುತ್ತಿದ್ದಾರೆ. ಇನ್ನು ಈ ಚಿತ್ರವನ್ನು ವೀಕ್ಷಿಸಿದ ಸ್ಯಾಂಡಲ್​ವುಡ್​ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಈ ಸಿನಿಮಾವನ್ನು ನೋಡಿದ್ದು, ಭಾವುಕರಾಗಿದ್ದಾರೆ. ಈ ರೀತಿಯ ಸಿನಿಮಾಗಳು ಬರಬೇಕು. ನಿಜಕ್ಕೂ ಚಾರ್ಲಿ ಸಿನಿಮಾ ಬಹಳ ಅದ್ಭುತವಾಗಿದೆ ಎಂದು ಸಿಎಂ ಹೇಳಿದ್ದರು. ಇನ್ನು ಬಾಲಿವುಡ್‌ ಚಿತ್ರರಂಗದಿಂದಲೂ ಕೂಡ ಚಾರ್ಲಿಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಚಾರ್ಲಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Sandhya M
First published: