• Home
  • »
  • News
  • »
  • entertainment
  • »
  • 777 Charlie Collection: ಹೆಚ್ಚಾಗುತ್ತಿದೆ ಚಾರ್ಲಿ ಕಲೆಕ್ಷನ್, ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಾಲಿವುಡ್​ ನಿರ್ಮಾಪಕ

777 Charlie Collection: ಹೆಚ್ಚಾಗುತ್ತಿದೆ ಚಾರ್ಲಿ ಕಲೆಕ್ಷನ್, ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಾಲಿವುಡ್​ ನಿರ್ಮಾಪಕ

777 ಚಾರ್ಲಿ

777 ಚಾರ್ಲಿ

Rakshit Shetty: ಇನ್ನು ಈ ಚಿತ್ರವನ್ನು ವೀಕ್ಷಿಸಿದ ಸ್ಯಾಂಡಲ್​ವುಡ್​ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಈ ಸಿನಿಮಾವನ್ನು ನೋಡಿದ್ದು, ಭಾವುಕರಾಗಿದ್ದಾರೆ.

  • Share this:

777 ಚಾರ್ಲಿ  (777 Charlie) ಈ ಸಿನಿಮಾವನ್ನು (Film) ಮೆಚ್ಚದವರು ಯಾರೂ ಇಲ್ಲ ಎಂದರೆ ತಪ್ಪಲ್ಲ. ಪ್ರತಿಯೊಬ್ಬರಿಗೂ ಒಂದೆಲ್ಲಾ ಒಂದು ಕಾರಣದಿಂದ ಈ ಸಿನಿಮಾ ಇಷ್ಟವಾಗಿದೆ. ನಾಯಿ ಪ್ರೇಮಿಗಳಿಗೆಗಂತೂ (dog Lovers)  ಇದು ಮನಸ್ಸಿಗೆ ಬಹಳ ಹತ್ತಿರವಾದ ಸಿನಿಮಾ ಎನ್ನಬಹುದು. ಬಿಡುಗಡೆಗೂ ಮುನ್ನ ಬಹಳ ಕ್ರೇಜ್ ಹೆಚ್ಚಿಸಿದ್ದ ಸಿನಿಮಾ , ಬಿಡುಗಡೆಯಾದ ಮೇಲೆ ಸಹ ಜನರ ಮನಸಲ್ಲಿ ಬೇರೂರಿದೆ ಎನ್ನಬಹುದು. ಸದ್ಯ ಚಾರ್ಲಿ ಬಿಡುಗಡೆಯಾಗಿ ಇಂದಿನ ಆರು ದಿನ ಕಳೆದಿದೆ. ನಿನ್ನೆ ಅಂದರೆ 5ನೇ ದಿನದ ಕಲೆಕ್ಷನ್ ಹೇಗಿತ್ತು ಎಂಬ ಮಾಹಿತಿ ಇಲ್ಲಿದೆ.  


ಜಾಸ್ತಿಯಾಗುತ್ತಲೇ ಇದೇ ಚಾರ್ಲಿ ಕಲೆಕ್ಷನ್ 


ಬಾಕ್ಸ್ ಆಫೀಸ್ ಪ್ರದರ್ಶನದ ವಿಚಾರಕ್ಕೆ ಬಂದರೆ ರಕ್ಷಿತ್ ಶೆಟ್ಟಿಅಭಿನಯದ ಈ  ಈ ಚಿತ್ರ ಈಗಾಗಲೇ ಬಾಕ್ಸ್ ಆಫೀಸ್​ನಲ್ಲಿ ಗೆದ್ದು ಬೀಗಿದೆ. ಮೊದಲ ವಾರಾಂತ್ಯದಲ್ಲಿ 24 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಇದು ಆರಂಭದಲ್ಲಿಯೇ ಒಳ್ಳೆಯ ಕಲೆಕ್ಷನ್ ಎನ್ನಬಹುದು.  ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಚಿತ್ರವು ಈಗಾಗಲೇ ಲಾಭದ ಹಾದಿಯಲ್ಲಿದೆ. ಸದ್ಯ ಮಾಹಿತಿ ಪ್ರಕಾರ ಈ ಸಿನಿಮಾ ಮಂಗಳವಾರ ಅಂದರೆ 5ನೇ ದಿನ 4 ಕೋಟಿ ಗಳಿಕೆ ಮಾಡಿದೆ. ಒಟ್ಟಾರೆಯಾಗಿ ಸುಮಾರು 32.7 ಕೋಟಿ ಗಳಿಕೆ ಮಾಡಿದೆ. ವೀಕೆಂಡ್​ಗೆ ಹೋಲಿಸಿದರೆ ಈ ಗಳಿಕೆ ಸ್ವಲ್ಪ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ಕಲೆಕ್ಷನ್ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.


ಚಾರ್ಲಿ ಸಿನಿಮಾದ ಕಲೆಕ್ಷನ್ ಮಾಹಿತಿ ಇಲ್ಲಿದೆ 


ದಿನ 1: ₹ 6.27 ಕೋಟಿ


ದಿನ 2: ₹ 7.87 ಕೋಟಿ


ದಿನ 3 :₹ 10.01 ಕೋಟಿ


ದಿನ 4 :₹ 4.55 ಕೋಟಿ


ದಿನ 5 :₹ 4.00 ಕೋಟಿ


ಒಟ್ಟಾರೆ: ₹ 32.7 ಕೋಟಿ


ಇದನ್ನೂ ಓದಿ: ಅಭಿಮಾನಿಗಳ ಮನೆ-ಮನದಲ್ಲಿ ಇನ್ನೂ ನಿಂತಿಲ್ಲ ಅಪ್ಪು ಸ್ಮರಣೆ! ಚಾಮರಾಜಪೇಟೆಯಲ್ಲಿ ನಿರ್ಮಾಣವಾಗಿದೆ ಪುನೀತ್ ಬಡಾವಣೆ


ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬೋನಿ ಕಪೂರ್


ಇನ್ನು ಈ ಚಿತ್ರವನ್ನು ವೀಕ್ಷಿಸಿದ ಸ್ಯಾಂಡಲ್​ವುಡ್​ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಈ ಸಿನಿಮಾವನ್ನು ನೋಡಿದ್ದು, ಭಾವುಕರಾಗಿದ್ದಾರೆ. ಇನ್ನು ಬಾಲಿವುಡ್‌ ಚಿತ್ರರಂಗದಿಂದಲೂ ಕೂಡ ಚಾರ್ಲಿಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಚಾರ್ಲಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಎಲ್ಲೆಡೆ ಚಾರ್ಲಿ ಹವಾ ಇದೆ ಎನ್ನುವುದು ಸುಳ್ಳಲ್ಲ. ನಟ ರಕ್ಷಿತ್ ಶೆಟ್ಟಿ ಎಷ್ಟು ಫೇಮಸ್​ ಆಗಿದ್ದಾರೋ ಅದಕ್ಕಿಂತ ಹೆಚ್ಚು ಚಾರ್ಲಿ ಫೇಮಸ್​ ಆಗಿದೆ. ಅದಕ್ಕಾಗಿಯೇ ಒಂದು ಅಭಿಮಾನಿ ಬಳಗವಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅದರ ಕಟೌಟ್​ ಅನ್ನು ಕೂಡ ತಮಿಳುನಾಡಿನ ಚಿತ್ರ ಮಂದಿರದಲ್ಲಿ ಹಾಕಲಾಗಿತ್ತು. ಅಷ್ಟರ ಮಟ್ಟಿಗೆ ಚಾರ್ಲಿ ಕ್ರೇಜ್​ ಇದೆ.


ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಜೀವನದಲ್ಲಿ ನೋವನ್ನು ಅನುಭವಿಸಿ, ಒಬ್ಬಂಟಿಯಾಗಿ ಬದುಕುವ ವ್ಯಕ್ತಿಯ ಕಥೆಯನ್ನು  ಹೇಳುತ್ತದೆ. ಮನೆ, ಫ್ಯಾಕ್ಟರಿ ಹೀಗೆ ಯಾಂತ್ರಿಕವಾಗಿ ಕಾಲ ಕಳೆಯುವ ಈ ವ್ಯಕ್ತಿಯ ಬದುಕು  ಜಗಳ, ಇಡ್ಲಿ ತಿನ್ನುವುದು, ಧೂಮಪಾನ ಮತ್ತು ಬಿಯರ್ ಕುಡಿಯುವುದು ಇಷ್ಟೇ ಎನ್ನುವಂತಿರುತ್ತದೆ. ಆದರೆ ಆಕಸ್ಮಿಕವಾಗಿ ಹೆಣ್ಣು ನಾಯಿಯನ್ನು ಭೇಟಿಯಾದಾಗ ಅವನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ.ಇದು ಈ ಚಿತ್ರದ ಎಳೆಯಾಗಿದ್ದು, ಜನರು ಮಿಸ್​ ಮಾಡದೇ ನೋಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಗೆಳೆಯನ ನೆನಪಿನಲ್ಲಿ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡ ನಟಿ, ಐ ಮಿಸ್​ ಯೂ ಅಂತ ಭಾವುಕರಾದ ರಿಯಾ


ರಕ್ಷಿತ್ ಶೆಟ್ಟಿ ಪರಂವಾಹ ಸ್ಟೋಡಿಯಸ್​ ಅಡಿಯಲ್ಲಿ ಜಿಎಸ್ ಗುಪ್ತಾ ಅವರ ಸಹಯೋಗದೊಂದಿಗೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಾರ್ಲಿಯೊಂದಿಗೆ, ರಕ್ಷಿತ್ ಶೆಟ್ಟಿ ಪ್ಯಾನ್-ಇಂಡಿಯನ್ ಇಮೇಜ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಮತ್ತು ಅಭಿಜಿತ್ ಮಹೇಶ್ ಸಂಭಾಷಣೆ ಬರೆದಿದ್ದಾರೆ. ನೋಬಿನ್ ಪಾಲ್ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

Published by:Sandhya M
First published: