777 Charlie Collection: ನಾಲ್ಕನೇ ದಿನವೂ ಚಾರ್ಲಿ ಅಬ್ಬರ, ಸಿನಿಮಾ ಒಟ್ಟು ಕಲೆಕ್ಷನ್ ಇಷ್ಟೊಂದಾ?

Collection report: ನಿನ್ನೆ ವಾರದ ಆರಂಭವಾಗಿರುವುದರಿಂದ ಜನ ಬ್ಯುಸಿ ಇರುತ್ತಾರೆ, ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

777 ಚಾರ್ಲಿ

777 ಚಾರ್ಲಿ

  • Share this:
777 ಚಾರ್ಲಿ (777 Charlie) ಈ ಸಿನಿಮಾ (Film)  ಬಗ್ಗೆ ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಇದೊಂದು ಅದ್ಭುತ ಚಿತ್ರ. ಧರ್ಮ ಎಂಬ ಒಂಟಿ ಮನುಷ್ಯನ ಸರಳವಾದ ಆದರೆ ಭಾವನಾತ್ಮಕ ಕಥೆಯಾಗಿದ್ದು, ರಕ್ಷಿತ್ ಶೆಟ್ಟಿ (Rakshit Shetty)  ನಿಜಕ್ಕೂ ಉತ್ತಮವಾಗಿ ನಿರ್ವಹಿಸಿದ್ದಾರೆ. ಅದರಲ್ಲೂ ಚಾರ್ಲಿ ಹಾಗೂ ರಕ್ಷಿತ್ ನಡುವಿನ ಸಂಬಂಧ ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. ಒಟ್ಟಾರೆಯಾಗಿ ಚಾರ್ಲಿ ಒಂದು ಹೊಸ ಇತಿಹಾಸವನ್ನು (History)  ಬರೆಯುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಸಹ ಇದು ಮುಂದಿದ್ದು, ಒಳ್ಳೆಯ ಗಳಿಕೆ ಮಾಡುತ್ತಿದೆ. ಇಂದಿಗೆ ಬಿಡುಗಡೆಯಾಗಿ 5 ದಿನವಾಗಿದೆ. ನಿನ್ನೆ ಅಂದರೆ ನಾಲ್ಕನೇ ದಿನದ ಕಲೆಕ್ಷನ್ ಹೇಗಿದೆ ಎಂಬುದು ಇಲ್ಲಿದೆ.  

ಸ್ವಲ್ಪ ಇಳಿಕೆ ಕಂಡ ಕಲೆಕ್ಷನ್ 

ನಿನ್ನೆಯ ಕಲೆಕ್ಷನ್ ಸ್ವಲ್ಪ ಕಡಿಮೆಯಾಗಿದ್ದು, 5 ಕೋಟಿ ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ. ಬಿಡುಗಡೆಯಾದ ಮೂರು ದಿನಗಳಿಗೆ ಹೋಲಿಸಿದರೆ ಇದು ಕಡಿಮೆ ಎಂಬುದು ಬಾಕ್ಸ್​ ಆಫೀಸ್​ ಪರಿಣಿತರ ಅಂಬೋಣ. ಆದರೆ ನಿನ್ನೆ ವಾರದ ಆರಂಭವಾಗಿರುವುದರಿಂದ ಜನ ಬ್ಯುಸಿ ಇರುತ್ತಾರೆ, ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಈ ಸಿನಿಮಾ ಮೊದಲ ದಿನ 6 ಕೋಟಿ, ಎರಡನೇ ದಿನ 8 ಕೋಟಿ ಹಾಗೂ ಮೂರನೇ ದಿನ 10 ಕೋಟಿ ಗಳಿಕೆ ಮಾಡಿತ್ತು. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.  ಎಲ್ಲೆಡೆ ಚಾರ್ಲಿ ಹವಾ ಇದೆ ಎನ್ನುವುದು ಸುಳ್ಳಲ್ಲ. ನಟ ರಕ್ಷಿತ್ ಶೆಟ್ಟಿ ಎಷ್ಟು ಫೇಮಸ್​ ಆಗಿದ್ದಾರೋ ಅದಕ್ಕಿಂತ ಹೆಚ್ಚು ಚಾರ್ಲಿ ಫೇಮಸ್​ ಆಗಿದೆ. ಅದಕ್ಕಾಗಿಯೇ ಒಂದು ಅಭಿಮಾನಿ ಬಳಗವಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅದರ ಕಟೌಟ್​ ಅನ್ನು ಕೂಡ ತಮಿಳುನಾಡಿದ ಚಿತ್ರ ಮಂದಿರದಲ್ಲಿ ಹಾಕಲಾಗಿತ್ತು. ಅಷ್ಟರ ಮಟ್ಟಿಗೆ ಚಾರ್ಲಿ ಕ್ರೇಜ್​ ಇದೆ.

ಇದನ್ನೂ ಓದಿ: ಡ್ರಗ್ಸ್​ ಪ್ರಕರಣದಲ್ಲಿ ಸಿದ್ಧಾಂತ್ ಕಪೂರ್​ಗೆ ಜಾಮೀನು, ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಸಿನಿಮಾ ನೋಡಿದ ಸಿಎಂ

ಈ ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ ಇಷ್ಟಪಟ್ಟಿದ್ದಾರೆ. ನಿನ್ನೆಯಷ್ಟೇ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಈ ಸಿನಿಮಾವನ್ನು ವಿಕ್ಷಿಸಿದ್ದು ಭಾವುಕರಾಗಿದ್ದರು. ಇನ್ನು ಚಾರ್ಲಿ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ನಾಯಿ ಪಾತ್ರ ಮೆಚ್ಚುವಂಥದ್ದು. ಜೊತೆಗೆ ನಟ ರಕ್ಷಿತ್ ಶೆಟ್ಟಿ ತುಂಬ ಚೆನ್ನಾಗಿ ನಟಿಸಿದ್ದಾರೆ. ನಾನು ಈ ಸಿನಿಮಾ ಟ್ರೈಲರ್ ನೋಡಿದ್ದೆ, ರಕ್ಷಿತ್ ಆಹ್ವಾನವೂ ಇತ್ತು ಅದಕ್ಕಾಗಿ ಈ ಸಿನಿಮಾ ನೋಡಿದೆ ಎಂದು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಜೀವನದಲ್ಲಿ ನೋವನ್ನು ಅನುಭವಿಸಿ, ಒಬ್ಬಂಟಿಯಾಗಿ ಬದುಕುವ ವ್ಯಕ್ತಿಯ ಕಥೆಯನ್ನು  ಹೇಳುತ್ತದೆ. ಮನೆ, ಫ್ಯಾಕ್ಟರಿ ಹೀಗೆ ಯಾಂತ್ರಿಕವಾಗಿ ಕಾಲ ಕಳೆಯುವ ಈ ವ್ಯಕ್ತಿಯ ಬದುಕು  ಜಗಳ, ಇಡ್ಲಿ ತಿನ್ನುವುದು, ಧೂಮಪಾನ ಮತ್ತು ಬಿಯರ್ ಕುಡಿಯುವುದು ಇಷ್ಟೇ ಎನ್ನುವಂತಿರುತ್ತದೆ. ಆದರೆ ಆಕಸ್ಮಿಕವಾಗಿ ಹೆಣ್ಣು ನಾಯಿಯನ್ನು ಭೇಟಿಯಾದಾಗ ಅವನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ.ಇದು ಈ ಚಿತ್ರದ ಎಳೆಯಾಗಿದ್ದು, ಜನರು ಮಿಸ್​ ಮಾಡದೇ ನೋಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: CM Bommai ಕಣ್ಣಲ್ಲೂ ನೀರು ತರಿಸಿದ ಚಾರ್ಲಿ, ನನಗೆ ಸನ್ನಿ ನೆನಪಾಯ್ತು ಎಂದ ದೊರೆ

ರಕ್ಷಿತ್ ಶೆಟ್ಟಿ ಪರಂವಾಹ ಸ್ಟೋಡಿಯಸ್​ ಅಡಿಯಲ್ಲಿ ಜಿಎಸ್ ಗುಪ್ತಾ ಅವರ ಸಹಯೋಗದೊಂದಿಗೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಾರ್ಲಿಯೊಂದಿಗೆ, ರಕ್ಷಿತ್ ಶೆಟ್ಟಿ ಪ್ಯಾನ್-ಇಂಡಿಯನ್ ಇಮೇಜ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಮತ್ತು ಅಭಿಜಿತ್ ಮಹೇಶ್ ಸಂಭಾಷಣೆ ಬರೆದಿದ್ದಾರೆ. ನೋಬಿನ್ ಪಾಲ್ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
Published by:Sandhya M
First published: