777 ಚಾರ್ಲಿ (777 Charlie) ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸು ಗೆದ್ದ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಒಂದೇ ಸಿನಿಮಾ (Cinema) ಮೂಲಕ ಫೇಮಸ್ ಆದರು. ಚಾರ್ಲಿ ಸಂಗೀತಾ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿತು. ಚಾರ್ಲಿ ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡಿದ್ದರೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು ಸಂಗೀತಾ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕೆಲವು ನಟಿಯ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೈಜಾಮಾ ಪಾರ್ಟಿಯೊಂದು (Pyjama Party) ಸಖತ್ ಸುದ್ದಿ ಮಾಡುತ್ತಿದೆ. ಇದರಲ್ಲಿ ಕಾಂತಾರ ಬೆಡಗಿ ಸಪ್ತಮಿ ಗೌಡ (Sapthami Gowda), ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ (Shrinidhi Shetty), ಚಾರ್ಲಿ ನಟಿ ಸಂಗೀತಾ ಅವರೂ ಇದ್ದರು.
ಪೈಜಾಮಾ ಪಾರ್ಟಿ
KRG ಕನೆಕ್ಟ್ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಚಾನೆಲ್ನಲ್ಲಿಯೂ ಈ ಪಾರ್ಟಿಯನ್ನು ಪ್ರಸಾರ ಮಾಡಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ನಟಿಯರ ಪೈಜಾಮಾ ಪಾರ್ಟಿಯ ಕೆಲವು ತುಣುಕುಗಳನ್ನು ಕಾಣಬಹುದು. ಮಾರ್ಕೆಟಿಂಗ್ ಏಜೆನ್ಸಿ ಕೆಆರ್ಜಿ ಅವರ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಇದರ ಕ್ಲಿಪ್ಸ್ ಶೇರ್ ಮಾಡಲಾಗಿದೆ.
ಯಾರ್ಯಾರಿದ್ರು?
ಈ ಪಾರ್ಟಿಯಲ್ಲಿ ನಟಿ ಮಿಲನಾ ನಾಗರಾಜ್, ಸಪ್ತಮಿ ಗೌಡ, ಶ್ರೀನಿಧಿ ಶೆಟ್ಟಿ, ಸಂಗೀತಾ ಶೇಂಗೇರಿ ಹಾಗೂ ಸ್ಟ್ಯಾಂಡಪ್ ಕಾಮೆಡಿಯನ್ ಸೋನು ವೇಣುಗೋಪಾಲ್ ಇದ್ದರು.
ಫನ್, ಗೇಮ್ಸ್, ಮಾತು, ಹರಟೆ, ನಗು ತುಂಬಿದ್ದ ಈ ಪೈಜಾಮ ಪಾರ್ಟಿಯನ್ನು ನಟಿಯರು ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ಇಲ್ಲಿ ನೆಟ್ಟಿಗರು ಗಮನಿಸಿದ್ದು ಬೇರೆ ಯಾವುದೋ ಮ್ಯಾಟರ್.
ಸಂಗೀತಾ ಶೃಂಗೇರಿ ಸ್ಪೆಷಲ್
ಸಪ್ತಮಿ ಗೌಡ ಹಾಗೂ ಶ್ರೀನಿಧಿ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ನ ಹಿಟ್ ಹೀರೋಯಿನ್ಸ್. ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳು ಹೊಂಬಾಳೆಯ ಬಿಗ್ ಸಕ್ಸಸ್ ಎನ್ನುವುದರಲ್ಲಿ ನೋ ಡೌಟ್. ಆದರೆ ಸಂಗೀತಾ ಶೃಂಗೇರಿ ಈ ಪಾರ್ಟಿ ಜಾಯಿನ್ ಆಗಿದ್ದು ಹೇಗೆ? ಅವರೇನಾದ್ರೂ ಹೊಂಬಾಳೆ ಫಿಲ್ಮ್ಸ್ ಜೊತೆ ಮೂವಿ ಮಾಡ್ತಾ ಇದ್ದಾರಾ ಎನ್ನುವುದು ನೆಟ್ಟಿಗರ ಚರ್ಚೆ.
ಹೊಂಬಾಳೆ ಫಿಲ್ಮ್ಸ್ ಜೊತೆ ಸಂಗೀತಾ?
ಸಂಗೀತಾ ಶೃಂಗೇರಿ ಚಾರ್ಲಿ ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ಸಿನಿಮಾ ಅನೌನ್ಸ್ ಮಾಡುವಾಗ ದೊಡ್ಡಮಟ್ಟದಲ್ಲಿಯೇ ಇರಬಹುದು ಎನ್ನುವುದು ಅವರ ಅಭಿಮಾನಿಗಳ ನಿರೀಕ್ಷೆ. ಹಾಗಾಗಿ ಈಗ ಪೈಜಾಮ ಪಾರ್ಟಿಯಲ್ಲಿಯೂ ಭಾಗಿಯಾಗಿದ್ದು ಇದರ ಅವರ ಹೊಸ ಪ್ರಾಜೆಕ್ಟ್ನ ಸೂಚನೆಯಾ ಎಂದು ಮಾತನಾಡುತ್ತಿದ್ದಾರೆ ಸಿನಿ ಪ್ರೇಮಿಗಳು.
View this post on Instagram
ಶ್ರೀನಿಧಿ ಶೆಟ್ಟಿ ಇರಲಿ ಸಪ್ತಮಿ ಗೌಡ ಇರಲಿ ಇಬ್ಬರ ಹೆಸರು ಕೂಡಾ ಸ್ಟಾರ್ಟ್ ಆಗೋದು ಎಸ್ ಲೆಟರ್ನಿಂದ. ಇವರಿಬ್ಬರು ಕೂಡಾ ಹೊಂಬಾಳೆ ಫಿಲ್ಸ್ಮ್ಗೆ ಲಕ್ಕಿ ಹೀರೋಯಿನ್ಸ್ ಎನ್ನುವುದರಲ್ಲಿ ಡೌಟ್ ಇಲ್ಲ. ಹಾಗಾಗಿ ಇದೇ ಲೆಕ್ಕಾಚಾರ ಇಟ್ಟುಕೊಂಡು ಸಂಗೀತಾ ಶೃಂಗೇರಿ ಅವರನ್ನೂ ತಮ್ಮ ಮುಂದಿನ ಸಿನಿಮಾಗೆ ಆಯ್ಕೆ ಮಾಡುತ್ತಾರಾ ಎನ್ನುವ ಮಾತುಕತೆ ಶುರುವಾಗಿದೆ.
ಸಂಗೀತಾ ಶೃಂಗೇರಿ ಹೆಸರೂ ಕೂಡಾ ಎಸ್ನಿಂದಲೇ ಆರಂಭವಾಗುತ್ತಿದ್ದು ಹಾಗಾಗಿ ಹೊಂಬಾಳೆ ಫಿಲ್ಮ್ಸ್ನ ಮುಂದಿನ ಸಿನಿಮಾಗೆ ಅವರನ್ನೇ ಹೀರೋಯಿನ್ ಮಾಡೋ ಬಗ್ಗೆ ಚರ್ಚೆ ನಡೆಯುತ್ತಿದೆಯಾ ಎನ್ನುವುದು ಅಭಿಮಾನಿಗಳ ಗುಮಾನಿ. ಆದರೆ ಈ ಬಗ್ಗೆ ನಟಿಯಾಗಲಿ, ಹೊಂಬಾಳೆ ಫಿಲ್ಮ್ಸ್ ಆಗಲಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಆದರೆ ಈ ಚರ್ಚೆ ಮಾತ್ರ ಈಗ ಜೋರಾಗಿದೆ.
View this post on Instagram
ಸದ್ಯ ಚಾರ್ಲಿ ನಟಿ ಮಾಲ್ಡೀವ್ಸ್ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ವೆಕೇಷನ್ ಖುಷಿಯಲ್ಲಿದ್ದು ಫೊಟೋಗಳನ್ನೂ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ