• Home
  • »
  • News
  • »
  • entertainment
  • »
  • 777 Charlie: ತಮಿಳುನಾಡಿನಲ್ಲೂ ಚಾರ್ಲಿ ಹವಾ, ಈ ಥರ ಕಟೌಟ್​​ ಯಾವ್​ ಹೀರೋಗಳಿಗೂ ಹಾಕಿಲ್ಲ ರೀ

777 Charlie: ತಮಿಳುನಾಡಿನಲ್ಲೂ ಚಾರ್ಲಿ ಹವಾ, ಈ ಥರ ಕಟೌಟ್​​ ಯಾವ್​ ಹೀರೋಗಳಿಗೂ ಹಾಕಿಲ್ಲ ರೀ

777 ಚಾರ್ಲಿ ಸಿನಿಮಾ

777 ಚಾರ್ಲಿ ಸಿನಿಮಾ

Rakshit Shetty: ಕೇವಲ ಟ್ರೇಲರ್ ಮೂಲಕವೇ ಕಿಚ್ಚು ಹಚ್ಚಿತ್ತಿರುವ ಈ ಚಿತ್ರ, ಅಭಿಮಾನಿಗಳ ನಿರೀಕ್ಷೆಯನ್ನು ಸಹ ಮೀರುತ್ತದೆ ಎಂದರೆ ತಪ್ಪಲ್ಲ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಾಣುತ್ತಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾಯ ಭಾಷೆಯ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ.

ಮುಂದೆ ಓದಿ ...
  • Share this:

ರಕ್ಷಿತ್ ಶೆಟ್ಟಿ (Rakshit Shetty) ನಟನೆ ಜೊತೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಸ್ಯಾಂಡಲ್ವುಡ್ (Sandalwood) ನಲ್ಲಿ ತಮ್ಮದೇ ಆದ ಟ್ರೆಂಡ್ (Trend) ಸೃಷ್ಟಿ ಮಾಡಿದವರು ಎಂದರೆ ತಪ್ಪಾಗಲಾರದು. ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ವಿಭಿನ್ನ ಮ್ಯಾನರಿಸಂ, ಕಿಕ್ ಕೊಡುವ ಡೈಲಾಗ್ಸ್ ರಕ್ಷಿತ್ ಶೆಟ್ಟಿ ಅವರ ಟ್ರೇಡ್ ಮಾರ್ಕ್ (Trade Mark) ಎನ್ನಬಹುದು. ತುಘಲಕ್'ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ '777 ಚಾರ್ಲಿ'(777 Charlie)ಗ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ ಡಿಫ್ರೆಂಟ್. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಜೂನ್‌ 10ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಎಷ್ಟು ನಿರೀಕ್ಷೆ ಹುಟ್ಟಿಸಿದೆ ಎಂದರೆ ತಮಿಳುನಾಡಿನಲ್ಲಿ ಚಾರ್ಲಿ ಕಟೌಟ್​ ರೆಡಿ ಇದೆ.


ಹೌದು, ಸಾಮಾನ್ಯವಾಗಿ ಚಿತ್ರ ಬಿಡುಗಡೆ ಸಮಯದಲ್ಲಿ ಚಿತ್ರಮಂದಿರದಲ್ಲಿ ಹೀರೋ ಕಟ್​ಔಟ್​ ಹಾಕಲಾಗುತ್ತದೆ. ಅಭಿಮಾನಿಗಳು ಹಾರ, ಹಾಲಿನ ಅಭಿಷೇಕ ಹೀಗೆ ಎಲ್ಲಾ ಮಾಡ್ತಾರೆ. ಆದರೆ ಇಲ್ಲಿ ಮಾತ್ರ ಸ್ವಲ್ಪ ವಿಭಿನ್ನ. ತಮಿಳು ನಾಡಿನಲ್ಲಿ ಹೀರೋ ಬದಲಾಗಿ ಶ್ವಾನದ ಕಟೌಟ್​ ಹಾಕಲಾಗಿದೆ. ಅದು ತಮ್ಮ ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ. ಏನಿದು ಕತೆ, ಇಲ್ಲಿದೆ ನೋಡಿ.


777 ಚಾರ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಇದು ಕನ್ನಡ ಮಾತ್ರವಲ್ಲದೇ, ವಿವಿಧ ಭಾಷೆಗಳಲ್ಲಿ ಸಹ ಬಿಡುಗಡೆಯಾಗುತ್ತಿದೆ. ಈ ತಮಿಳುನಾಡಿನಲ್ಲಿ ಸಹ ಚಿತ್ರ ರಿಲೀಸ್ ಆಗುತ್ತಿದ್ದು, ಚೈನ್ನೈನ ಸತ್ಯಂ ಸಿನಿಮಾಸ್​ ಎದುರು ಚಾರ್ಲಿ ಶ್ವಾನದ ಬೃಹತ್ ಕಟೌಟ್​ ನಿಲ್ಲಿಸಲಾಗಿದೆ. ಸದ್ಯ ಅದರ ಫೋಟೋವನ್ನು ಚಿತ್ರತಂಡ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈಗ ಆ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗುತ್ತಿದೆ.ಈ ರೀತಿ ಕನ್ನಡದ ಚಿತ್ರಕ್ಕೆ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಸಂತಸದ ವಿಚಾರವಾಗಿದ್ದು, ಈ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂಬ ಭರವಸೆಯಲ್ಲಿ ಚಿತ್ರತಂಡವಿದೆ.  ರಕ್ಷಿತ್ ಶೆಟ್ಟಿ ತಮ್ಮ ಪರಂವಾಹ ಸ್ಟೋಡಿಯೋಸ್​ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದಲ್ಲಿ ರಾಜ್​ ಬಿ ಶೆಟ್ಟಿ, ಸಂಗೀತಾ ಸೇರಿದಂತೆ ಅನೇಕರು ನಟಿಸಿದ್ದು, ಕಿರಣ್ ರಾಜ್ ಅವರ ನಿರ್ದೇಶನ ಈ ಚಿತ್ರಕ್ಕಿದೆ.


ಇದನ್ನೂ ಓದಿ: ಸಿಂಪಲ್ ಹುಡುಗನಿಗೆ 38ರ ಸಂಭ್ರಮ, ಸಿನಿ ಪ್ರಿಯರ ಕತೆ ಪುಟದಲ್ಲಿ ನಿಮದೊಂದು ಹೆಸರಿದೆ ಕರ್ಣ


ಇನ್ನು ಈ ಚಿತ್ರ ಟ್ರೇಲರ್ ಮೂಲಕ ಕಿಚ್ಚು ಹತ್ತಿಸಿದ್ದು, ಈ ಟ್ರೇಲರ್ ಬಹಳ ಅದ್ಬುತವಾಗಿದ್ದು, ಹಿಂದೆಂದೂ ಯಾರೂ ಮಾಡದ ರೀತಿಯ ಸಿನೆಮಾ ಇದು ಎನ್ನಬಹುದು. ನೋಡುಗರ ಕಣ್ಣಲ್ಲಿ ಕಣ್ಣಾಲಿ ಬರದೇ ಇರದು. ಕನ್ನಡ ಸಿನೆಮಾ ಹಿಸ್ಟರಿಯಲ್ಲಿ ವಿಭಿನ್ನ ರೀತಿಯ ದಾಖಲೆ ಮಾಡುವುದರಲ್ಲಿ ಅನುಮಾನವಿಲ್ಲ. ಅಲ್ಲದೇ ಕೆಜಿಎಫ್ 2 ನಂತರ ಕನ್ನಡದ ಮತ್ತೊಂದು ಸೂಪರ್ ಹಿಟ್ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ. ಈ ಚಿತ್ರ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ರಕ್ಷಿತ್ ಶೆಟ್ಟಿ ಜೀವನದಲ್ಲಿ ಸಹ ಮೈಲುಗಲ್ಲಾಗಲಿದೆ ಎನ್ನಲಾಗುತ್ತಿದೆ.


ಕೇವಲ ಟ್ರೇಲರ್ ಮೂಲಕವೇ ಕಿಚ್ಚು ಹಚ್ಚಿತ್ತಿರುವ ಈ ಚಿತ್ರ, ಅಭಿಮಾನಿಗಳ ನಿರೀಕ್ಷೆಯನ್ನು ಸಹ ಮೀರುತ್ತದೆ ಎಂದರೆ ತಪ್ಪಲ್ಲ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಾಣುತ್ತಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾಯ ಭಾಷೆಯ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ.


ಇದನ್ನೂ ಓದಿ: ಭಾವನೆಗಳೇ ಬದುಕು ಎನ್ನುವ 'ಚಾರ್ಲಿ' - ರಕ್ಷಿತ್​ ಸಿನೆಮಾದ ಟ್ರೇಲರ್​ ನೋಡಿ ಎಮೋಷನಲ್​ ಆದ ಅಭಿಮಾನಿಗಳು


ಇನ್ನುಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ. ಡಿಜಿಟಲ್‌ ಹಕ್ಕು ಕಲರ್ಸ್‌ ಸಂಸ್ಥೆಯ ಒಡೆತನದ ವೂಟ್‌ ಓಟಿಟಿಗೆ ಸಿಕ್ಕಿದೆ. ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ.  ಇನ್ನು ಜೂನ್​ 10ರಂದು ಬಿಡುಗಡೆಯಾಗುವ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Published by:Sandhya M
First published: