Rocking Star Yash: ಇದು ಗೂಗ್ಲಿ ಅಂದ್ರೆ; ರಾಕಿಂಗ್​ ಸ್ಟಾರ್​ ಯಶ್ ಟ್ವೀಟ್​ಗೆ ಫಿದಾ ಆದ ಪವನ್ ಒಡೆಯರ್

ಯಶ್​ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿವೆ. ಇದರ ಅಂಗವಾಗಿ ಯಶ್​ ಅಭಿಮಾನಿಗಳು ಟ್ವಿಟ್ಟರ್​ನಲ್ಲಿ ಆಂದೋಲನ ಆರಂಭಿಸಿದ್ದರು. ಹೀಗಾಗಿ 12YearsOfYASHismCDP ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗಿತ್ತು. ಅಲ್ಲದೆ, ಸಾಕಷ್ಟು ಜನರು ಯಶ್​ಗೆ ಧನ್ಯವಾದ ಕೂಡ ಅರ್ಪಿಸಿದ್ದರು.

news18-kannada
Updated:July 20, 2020, 12:31 PM IST
Rocking Star Yash: ಇದು ಗೂಗ್ಲಿ ಅಂದ್ರೆ; ರಾಕಿಂಗ್​ ಸ್ಟಾರ್​ ಯಶ್ ಟ್ವೀಟ್​ಗೆ ಫಿದಾ ಆದ ಪವನ್ ಒಡೆಯರ್
ಯಶ್​-ಪವನ್​ ಒಡೆಯರ್​
  • Share this:
ಯಶ್​ ಸಿನಿಮಾ ಬದುಕಿಗೆ ಪವನ್​ ಒಡೆಯರ್​ ನಿರ್ದೇಶನದ ಗೂಗ್ಲಿ ಉತ್ತಮ ಮೈಲೇಜ್​ ನೀಡಿತ್ತು. ಹೆಸರು ಹಾಗೂ ಹಣ ಎರಡನ್ನೂ ಮಾಡಿದ್ದ ಈ ಚಿತ್ರ ತೆರೆಕಂಡು ಏಳು ವರ್ಷ ಕಳೆದಿದೆ. ಇದನ್ನು ಯಶ್​ ನೆನೆಪಿಸಿಕೊಂಡಿದ್ದಾರೆ. ರಾಕಿ ಭಾಯ್​ ಯಶ್​ ಟ್ವೀಟ್​ಗೆ ಪವನ್​ ಒಡೆಯರ್​ ಫಿದಾ ಆಗಿದ್ದಾರೆ.

ಯಶ್​ ನಟನೆಯ ಗೂಗ್ಲಿ ಸಿನಿಮಾ 2013ರ ಜುಲೈ 19ರಂದು ತೆರೆಗೆ ಬಂದಿತ್ತು. ಪವನ್​ ಒಡೆಯರ್​ ನಿರ್ದೇಶನದ ಈ ಚಿತ್ರಕ್ಕೆ ಕೃತಿ ಕರಬಂಧ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಪ್ರೀತಿಯ ಜೊತೆಗೆ ಸಾಕಷ್ಟು ಭಾವನಾತ್ಮಕ ಅಂಶ ಹಾಗೂ ಹಾಸ್ಯವನ್ನು ಬೆರೆಸಿದ್ದರು ನಿರ್ದೇಶಕ ಪವನ್​ ಒಡೆಯರ್. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾ ತೆರೆಕಂಡು 7 ವರ್ಷಗಳು ಕಳೆದಿವೆ. ಈ ಸಿನಿಮಾವನ್ನು ಯಶ್​ ನೆನೆಪಿಸಿಕೊಂಡಿದ್ದಾರೆ.

ಯಶ್​ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿವೆ. ಇದರ ಅಂಗವಾಗಿ ಯಶ್​ ಅಭಿಮಾನಿಗಳು ಟ್ವಿಟ್ಟರ್​ನಲ್ಲಿ ಆಂದೋಲನ ಆರಂಭಿಸಿದ್ದರು. ಹೀಗಾಗಿ 12YearsOfYASHismCDP ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗಿತ್ತು. ಅಲ್ಲದೆ, ಸಾಕಷ್ಟು ಜನರು ಯಶ್​ಗೆ ಧನ್ಯವಾದ ಕೂಡ ಅರ್ಪಿಸಿದ್ದರು.

ಚಿತ್ರರಂಗಕ್ಕೆ ಬಂದು 12 ವರ್ಷ ಕಳೆದಿದೆ. ಈ ದಿನವನ್ನು ವಿಶೇಷವಾಗಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಇದರ ಜೊತೆ ಗೂಗ್ಲಿ ಸಿನಿಮಾ ತೆರೆಕಂಡು 7 ವರ್ಷ ಕಳೆದಿದೆ. ಪವನ್​ ಒಡೆಯರ್​ ಸೇರಿ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ ಯಶ್​. ಈ ಟ್ವೀಟ್​ ನೋಡಿದ ಪವನ್​ ಒಡೆಯರ್​ ತುಂಬಾನೇ ಖುಷಿಯಾಗಿದ್ದಾರೆ. ಇದಪ್ಪ ಗೂಗ್ಲಿ ಎಂದು ಸಂತಸ ವ್ಯಕ್ಯಪಡಿಸಿದ್ದಾರೆ.

ಯಶ್​ ಸದ್ಯ ತಮ್ಮನ್ನು ಸಂಪೂರ್ಣವಾಗಿ ಕೆಜಿಎಫ್​-2 ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ.
Published by: Rajesh Duggumane
First published: July 20, 2020, 12:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading