OTTನಲ್ಲಿ ಇಂದು ಬಿಡುಗಡೆಯಾಗ್ತಿವೆ 7 ಹೊಸ ಚಿತ್ರಗಳು..! ಪುಲ್‌ ಡೀಟೈಲ್ಸ್‌ ಇಲ್ಲಿದೆ ನೋಡಿ...

ನೀವು ಈ ಶುಕ್ರವಾರ ಏನನ್ನಾದರೂ ರೋಮಾಂಚನಕಾರಿ ಕಥೆ ಇರುವ ಚಿತ್ರವನ್ನು ನೋಡಬೇಕಿದ್ದರೆ, 36 ಫಾರ್ಮ್‌ಹೌಸ್ ಖಂಡಿತವಾಗಿಯೂ ನಿಮ್ಮ ಬಿಂಗ್-ವಾಚ್ ಪಟ್ಟಿಯಲ್ಲಿರಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಶುಕ್ರವಾರ ಬಂತೆಂದರೆ ಸಾಕು ಹೊಸ ಚಿತ್ರಗಳು ಬಿಡುಗಡೆಯಾಗಿರುತ್ತವೆ ಎಂದು ಕಾದು ಕುಳಿತ ಅಭಿಮಾನಿಗಳು ಚಿತ್ರ ಮಂದಿರಗಳ ಮುಂದೆ ಸಾಲು ಗಟ್ಟಿ(Theaters Waiting) ನಿಂತಿರುವುದನ್ನು ನಾವು ಮೊದಲೆಲ್ಲಾ ನೋಡುತ್ತಿದ್ದೆವು. ಆದರೆ ಈ ಕೋವಿಡ್‌ನಿಂದಾಗಿ ಕಳೆದ 2 ವರ್ಷಗಳಿಂದ ಆ ಜನರ ಸಾಲನ್ನು ಚಿತ್ರ ಮಂದಿರಗಳ ಮುಂದೆ ನೋಡುವುದು ತುಂಬಾನೇ ಕಡಿಮೆ ಆಗಿದೆ.ಈಗೆಲ್ಲಾ ಒಟಿಟಿ ಮಾಧ್ಯಮದಲ್ಲಿ(OTT Media) ಪ್ರತಿ ಶುಕ್ರವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳನ್ನು ಮನೆಯಲ್ಲಿಯೇ ಕುಳಿತು ನೋಡುತ್ತಿದ್ದಾರೆ. ಈ ಶುಕ್ರವಾರ ಯಾವೆಲ್ಲಾ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬ ವಿವರವನ್ನು ನಿಮಗಾಗಿ ತಂದಿದ್ದೇವೆ ನೋಡಿ. ಅಮೆಜಾನ್ ಪ್ರೈಮ್(Amazon Prime Video) ವಿಡಿಯೋದಲ್ಲಿ ಇರಾನಿನ ಚಿತ್ರ(Iranian Movie) ‘ಎ ಹೀರೋ’ ದಿಂದ ಹಿಡಿದು, ಜೀ5ನಲ್ಲಿ ‘36 ಫಾರ್ಮ್‌ಹೌಸ್’ ಎಂಬ ಚಿತ್ರದವರೆಗೆ ಯಾವೆಲ್ಲಾ ಚಿತ್ರಗಳು ಬಿಡುಗಡೆಯಾಗಲಿವೆ ನೋಡಿ.

1. ‘ಎ ಹೀರೋ’ - ಅಮೆಜಾನ್ ಪ್ರೈಮ್ ವೀಡಿಯೋ
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ವಾರ ಇರಾನಿನ ಚಿತ್ರವಾದ ‘ಎ ಹೀರೋ’ ಬಿಡುಗಡೆಯಾಗಲಿದೆ. ಸಾಲ ಪಾವತಿಸದ ಕಾರಣ ಜೈಲಿನಲ್ಲಿರುವ ರಹೀಮ್ ಎಂಬ ಖೈದಿಯ ಸುತ್ತ ಈ ಚಲನಚಿತ್ರದ ಕಥೆಯನ್ನು ಬರೆಯಲಾಗಿದೆ. ಅವನು ದೂರನ್ನು ಹಿಂತೆಗೆದುಕೊಳ್ಳಲು ತನಗೆ ಸಾಲ ನೀಡಿದವರನ್ನು ಕೇಳುತ್ತಾನೆ. ಆದರೆ ಅವನು ಯೋಜಿಸಿದಂತೆ ನಡೆಯುವುದಿಲ್ಲ.

2. ‘36 ಫಾರ್ಮ್‌ಹೌಸ್’
ನೀವು ಈ ಶುಕ್ರವಾರ ಏನನ್ನಾದರೂ ರೋಮಾಂಚನಕಾರಿ ಕಥೆ ಇರುವ ಚಿತ್ರವನ್ನು ನೋಡಬೇಕಿದ್ದರೆ, 36 ಫಾರ್ಮ್‌ಹೌಸ್ ಖಂಡಿತವಾಗಿಯೂ ನಿಮ್ಮ ಬಿಂಗ್-ವಾಚ್ ಪಟ್ಟಿಯಲ್ಲಿರಬೇಕು. ಒಬ್ಬ ಮಗ ಮತ್ತು ತಂದೆ ಒಂದು ಮೂಲ ಉದ್ದೇಶಗಳೊಂದಿಗೆ ತೋಟದ ಮನೆಗೆ ಪ್ರವೇಶಿಸುತ್ತಾರೆ. ಆದಾಗ್ಯೂ, ಅವರು ಮನೆಯನ್ನು ಪ್ರವೇಶಿಸಿದ ಸಮಯದಲ್ಲಿ ಮನೆಯಲ್ಲಿರುವ ಸದಸ್ಯರು ಬೇರೆ ಆಲೋಚನೆಗಳನ್ನೇ ಹೊಂದಿರುತ್ತಾರೆ ಎಂದು ಅವರು ಅರಿತುಕೊಳ್ಳುತ್ತಾರೆ. ಈ ಚಿತ್ರದಲ್ಲಿ ಅಮೋಲ್ ಪರಾಶರ್, ಸಂಜಯ್ ಮಿಶ್ರಾ, ಫ್ಲೋರಾ ಸೈನಿ, ಬರ್ಖಾ ಸಿಂಗ್ ಮತ್ತು ವಿಜಯ್ ರಾಜ್ ನಟಿಸಿದ್ದಾರೆ.

ಇದನ್ನೂ ಓದಿ: Valimai OTT: 300 ಕೋಟಿ ಒಟಿಟಿ ಒಪ್ಪಂದ ತಿರಸ್ಕರಿಸಿದ ಅಜಿತ್ ಅಭಿನಯದ 'ವಲಿಮೈ' ಚಿತ್ರತಂಡ!

3. ‘ಆ್ಯಸ್ ವಿ ಸೀ ಇಟ್’ – ಅಮೆಜಾನ್ ಪ್ರೈಮ್ ವೀಡಿಯೋ
ಜ್ಯಾಕ್, ಹ್ಯಾರಿಸನ್ ಮತ್ತು ವೈಲೆಟ್ ಎಂಬ ಮೂವರು ರೂಮ್ ಮೇಟ್‌ಗಳು ಒಟ್ಟಿಗೆ ವಾಸಿಸಲು ಪ್ರಾರಂಭಿಸುತ್ತಾರೆ ಮತ್ತು ಜೀವನದ ದಾರಿಯಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳುವ ಕಥೆಯನ್ನು ಹೊಂದಿದೆ. ಇದು ಈ ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿರುವ ಆಸಕ್ತಿದಾಯಕ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.

4. ‘ಓಜಾರ್ಕ್’ - ನೆಟ್‌ಫ್ಲಿಕ್ಸ್
ಓಜಾರ್ಕ್‌ನ ಸೀಸನ್ 4 ಅನ್ನು ತಲಾ 7 ಕಂತುಗಳನ್ನು ಒಳಗೊಂಡ 2 ಭಾಗಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಒಂದನೇ ಭಾಗ ಜನವರಿ 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಓಜಾರ್ಕ್ ಪ್ರಸ್ತುತ ದಿನದಲ್ಲಿ ನಡೆಯುವ ರೋಮಾಂಚಕ ಕಥೆಯನ್ನು ಹೊಂದಿದೆ. ಬಿರ್ಡೆ ಕುಟುಂಬದ ಸದಸ್ಯರು ಚಿಕಾಗೋ ಜೀವನದಿಂದ ಮಿಸ್ಸೌರಿಯ ಓಜಾರ್ಕ್ಸ್ ಸರೋವರದಲ್ಲಿ ಅಪಾಯಕಾರಿ ಕ್ರಿಮಿನಲ್ ಜೀವನಕ್ಕೆ ಹೇಗೆ ಬದಲಾಗುತ್ತದೆ ಎಂಬ ಕಥೆ ಇದೆ.

5. ‘ಪ್ರೊಟೇಜ್’ – ಲಯನ್ಸ್ ಗೇಟ್ ಪ್ಲೇ
ಪ್ರೊಟೇಜ್ ಚಿತ್ರವು ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಮೈಕೆಲ್ ಕೀಟನ್, ಮ್ಯಾಗಿ ಕ್ಯೂ ಮತ್ತು ಸ್ಯಾಮ್ಯುಯೆಲ್ ಎಲ್. ಜಾಕ್ಸನ್ ನಟಿಸಿದ್ದಾರೆ. ಈ ಚಿತ್ರವನ್ನು ಮಾರ್ಟಿನ್ ಕ್ಯಾಂಪ್‌ಬೆಲ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಒಬ್ಬ ಗುತ್ತಿಗೆ ಕೊಲೆಗಾರನ ಜೀವನದ ಕಥೆಯಾಗಿದೆ. ಗುತ್ತಿಗೆ ಕೊಲೆಗಾರಳು ಚಿಕ್ಕ ಮಗುವಾಗಿದ್ದಾಗ ಅವಳನ್ನು ರಕ್ಷಿಸಿದ ಅವಳ ಮಾರ್ಗದರ್ಶಕನನ್ನು ಕ್ರೂರವಾಗಿ ಕೊಲೆ ಮಾಡಲಾಗುತ್ತದೆ. ಅವಳ ಮಾರ್ಗದರ್ಶಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಕಥೆ ಈ ಚಿತ್ರದಲ್ಲಿದೆ.

6. ಬ್ರಾಹ್ಮ್ಸ್: ದಿ ಬಾಯ್ 2– ಬುಕ್ ಮೈ ಶೋ ಸ್ಟ್ರೀಮ್
ವಿಲಿಯಂ ಬ್ರೆಂಟ್ ಬೆಲ್ ನಿರ್ದೇಶನದ ಮತ್ತು ಕೇಟೀ ಹೋಮ್ಸ್, ಕ್ರಿಸ್ಟೋಫರ್ ಕಾನ್ವೆರಿ, ಓವೈನ್ ಯೆಮನ್, ರಾಲ್ಫ್ ಇನೆಸ್ಸನ್ ಅಭಿನಯಿಸಿರುವ ಈ ಚಿತ್ರವು ತುಂಬಾನೇ ಭಯಾನಕ ಚಲನಚಿತ್ರವಾಗಿದ್ದು ಈ ವಾರದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಒಂದು ಕುಟುಂಬವು ಹಿಲ್ಶೈಯರ್ ಮ್ಯಾನ್ಷನ್‌ಗೆ ಹೋಗುತ್ತದೆ ಮತ್ತು ಶೀಘ್ರದಲ್ಲಿಯೇ ಅವರ ಮಗ ಜೂಡ್ ಬ್ರಾಹ್ಮ್ಸ್ ಎಂಬ ಪಿಂಗಾಣಿ ಬೊಂಬೆಯೊಂದಿಗೆ ಸ್ನೇಹ ಬೆಳೆಸುತ್ತಾನೆ ಮತ್ತು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ.

ಇದನ್ನೂ ಓದಿ: ಉಚಿತವಾಗಿ Netflix, Amazon Prime, Disney Hotstar ಚಂದಾದಾರರಾಗಬೇಕೇ? ಹಾಗಿದ್ದರೆ ಈ ಕೆಲಸ ಮಾಡಿ

7. ಮ್ಯೂನಿಚ್: ದ ಎಡ್ಜ್ ಆಫ್ ವಾರ್ - ನೆಟ್‌ಫ್ಲಿಕ್ಸ್
ರಾಬರ್ಟ್ ಹ್ಯಾರಿಸ್ ಅವರ ಅದೇ ಹೆಸರಿನ ರಾಜಕೀಯ ಕಾದಂಬರಿಯನ್ನು ಆಧರಿಸಿ ಈ ಚಲನಚಿತ್ರವನ್ನು ಮಾಡಲಾಗಿದೆ. ಈ ಚಿತ್ರವನ್ನು 1938ರಲ್ಲಿ ನಡೆದ ಒಂದು ಘಟನೆಯನ್ನು ಅಧರಿಸಿಕೊಂಡು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನೆವಿಲ್ಲೆ ಚೇಂಬರ್ಲಿನ್‌ನ ಸರ್ಕಾರವು ಶಾಂತಿಯುತ ಪರಿಹಾರ ಕಂಡುಕೊಳ್ಳಲು ನೋಡುತ್ತಿದ್ದಾಗ ಹಿಟ್ಲರ್ ಜೆಕೊಸ್ಲೊವಾಕಿಯಾವನ್ನು ಆಕ್ರಮಿಸಲು ಸಿದ್ಧನಾಗುತ್ತಾನೆ. ಆಗಲೇ ಒಬ್ಬ ಯುವ ಬ್ರಿಟಿಷ್ ರಾಜಕಾರಣಿಯನ್ನು ತನ್ನ ಹಳೆಯ ಆಕ್ಸ್‌ಫರ್ಡ್ ಸಹಪಾಠಿಯಿಂದ ಗೌಪ್ಯ ದಾಖಲೆಯನ್ನು ಪಡೆಯುವ ಕಾರ್ಯಾಚರಣೆಗೆ ಕಳುಹಿಸಲಾಗುತ್ತದೆ. ಮುಂದೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಈ ಚಿತ್ರವನ್ನು ನೀವು ನೋಡಲೇ ಬೇಕು.
Published by:vanithasanjevani vanithasanjevani
First published: