Anitha EAnitha E
|
news18-kannada Updated:June 30, 2020, 9:23 AM IST
ಅಜಯ್ ದೇವಗನ್
ಲಾಕ್ಡೌನ್ ಸಡಿಲಗೊಂಡಿದ್ದರೂ ಹೆಚ್ಚುತ್ತಿರುವ ಕೊರೋನ ಸೋಂಕಿತರ ಸಂಖ್ಯೆಯಿಂದಾಗಿ ಈಗ ಮತ್ತೆ ಲಾಕ್ಡೌನ್ ಬಿಗಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಚಿತ್ರಮಂದಿರಗಳು ಸದ್ಯಕ್ಕೆ ತೆಗೆಯುವಂತೆ ಕಾಣುತ್ತಿಲ್ಲ. ಇದೇ ಕಾರಣದಿಂದ ಬಾಲಿವುಡ್ ಮಂದಿ ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.
ಈ ಹಿಂದೆ 'ಗುಲಾಬೊ ಸಿತಾಬೊ', 'ಪೆಂಗ್ವಿನ್' ಹಾಗೂ 'ಕೃಷ್ಣ ಆ್ಯಂಡ್ ಹಿಸ್ ಲೀಲ' ಸಿನಿಮಾಗಳು ಒಟಿಟಿ ಮೂಲಕ ತೆರೆ ಕಂಡಿವೆ. ಈಗ ಅಜಯ್ ದೇವಗನ್, ಆಲಿಯಾ ಭಟ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಅವರ ಹೊಸ ಸಿನಿಮಾಗಳೂ ಒಟಿಟಿ ಮೂಲಕ ರಿಲೀಸ್ ಆಗಲಿವೆ.
ಅಜಯ್ ದೇವಗನ್ ಅಭಿನಯದ ಭುಜ್, ಆಲಿಯಾ ಹಾಗೂ ಆದಿತ್ಯ ರಾಯ್ ಕಪೂರ್ ನಟನೆಯ 'ಸಡಕ್ 2', ಅಭಿಷೇಕ್ ಬಚ್ಚನ್ರ 'ಬಿಗ್ ಬುಲ್' ಹಾಗೂ ಅಕ್ಷಯ್ ಕುಮಾರ್ ಅವರ 'ಲಕ್ಷ್ಮಿ ಬಾಂಬ್' ಚಿತ್ರಗಳು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ತೆರೆ ಕಾಣಲಿವೆ.
ನಿನ್ನೆ ಆಯೋಜಿಸಲಾಗಿದ್ದ ಡಿಜಿಟಲ್ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಖುದ್ದು ಸ್ಟಾರ್ಗಳೇ ತಿಳಿಸಿದ್ದಾರೆ. ವರುಣ್ ಧವನ್, ಅಭಿಷೇಕ್ ಬಚ್ಚನ್, ಅಜಯ್ ದೇವಗನ್ ಆಲಿಯಾ ಭಟ್ ಹಾಗೂ ಅಕ್ಷಯ್ ಕುಮಾರ್ ಭಾಗಿಯಾಗಿದ್ದರು.

'ದಿಲ್ ಬೇಚಾರ' ಸಿನಿಮಾದ ಪೋಸ್ಟರ್
ಸುಶಾಂತ್ ಸಿಂಗ್ ರಜಪೂತ್ ಅಭಿನಯದ 'ದಿಲ್ ಬೆಚಾರ', 'ಖುದಾಆಫಿಸ್' ಹಾಗೂ 'ಲೂಟ್ ಕೇಸ್' ಸಿನಿಮಾಗಳೂ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಲಿವೆ. ಡಿಸ್ನಿ ಜೊತೆ ಹಾಟ್ಸ್ಟಾರ್ ಸೇರಿಕೊಂಡಾಗಿನಿಂದ ಇದು ಮೊದಲ ಸಲ ಇಷ್ಟು ದೊಡ್ಡ ಮಟ್ಟದಲ್ಲಿ ಬಿಗ್ ಸ್ಟಾರ್ಗಳ ಸಿನಿಮಾಗಳನ್ನು ರಿಲೀಸ್ ಮಾಡಲಾಗುತ್ತಿದೆ.
Nikhil-Revathi: ಹೊಸ ಫೋಟೋ ಜೊತೆ ಒಂದೊಳ್ಳೆ ಸಂದೇಶ ಕೊಟ್ಟ ನಿಖಿಲ್-ರೇವತಿ..!
ಇದನ್ನೂ ಓದಿ: Skanda Ashok: ಮಗುವಿನ ನಿರೀಕ್ಷೆಯಲ್ಲಿ ರಾಧಾ ರಮಣ ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್- ಶಿಖಾ..!
Published by:
Anitha E
First published:
June 30, 2020, 9:23 AM IST