66th National Film Awards: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ನಾತಿಚರಾಮಿಗೆ ಐದು, ಕೆ.ಜಿ.ಎಫ್​ಗೆ ಎರಡು ಪ್ರಶಸ್ತಿ..!

66th National Film Awards: ಉರಿ ಸಿನಿಮಾದ ನಟ ವಿಕ್ಕಿ ಕೌಶಲ್​ ಹಾಗೂ ಅಂಧಧುನ್​ ಸಿನಿಮಾದ ಆಯುಷ್ಮಾನ್​ ಖರಾನ ಉತ್ತಮ ನಟರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅರಿಜಿತ್ ಸಿಂಗ್​ ಉತ್ತಮ ಗಾಯಕರಾಗಿ ಆಯ್ಕೆಯಾಗಿದ್ದಾರೆ. ಉಳಿದ ವಿವರಗಳು ಮುಂದಿವೆ...

Anitha E | news18
Updated:August 9, 2019, 5:46 PM IST
66th National Film Awards: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ನಾತಿಚರಾಮಿಗೆ ಐದು, ಕೆ.ಜಿ.ಎಫ್​ಗೆ ಎರಡು ಪ್ರಶಸ್ತಿ..!
ಉತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡ ನಾತಿಚರಾಮಿ
  • News18
  • Last Updated: August 9, 2019, 5:46 PM IST
  • Share this:
ಇಂದು ದೆಹಲಿಯಲ್ಲಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಇದರಲ್ಲಿ ಕನ್ನಡದ ನಾತಿಚರಾಮಿ ಉತ್ತಮ ಕ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಒಟ್ಟಾರೆ ಕನ್ನಡಕ್ಕೆ 11  ಪ್ರಶಸ್ತಿಗಳು ಲಭಿಸಿವೆ. ದಕ್ಷಿಣ ಭಾರತದ ನಟಿ 'ಮಹಾನಟಿ' ಸಿನಿಮಾದ ಕೀರ್ತಿ ಸುರೇಶ್​ ಉತ್ತಮ ನಟಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಕನ್ನಡದ 'ನಾತಿಚರಾಮಿ' ಸಿನಿಮಾಗೆ ಐದು ಪ್ರಶಸ್ತಿಗಳು ಸಿಕ್ಕಿವೆ. ಉತ್ತಮ ಕನ್ನಡ ಸಿನಿಮಾ, ಉತ್ತಮ ಸಾಹಿತ್ಯ, ಉತ್ತಮ ಸಂಕಲನ, ಉತ್ತಮ ಗಾಯಕಿ (ಬಿಂದು ಮಾಲಿನಿ), ಸ್ಪೆಷಲ್​ ಜ್ಯೂರಿ ಪ್ರಶಸ್ತಿ (ಶ್ರುತಿ ಹರಿಹರನ್​) ಸಿಕ್ಕಿದೆ.

ಕನ್ನಡದ ಕೆ.ಜಿ.ಎಫ್​ಗೆ ಉತ್ತಮ ಆ್ಯಕ್ಷನ್​ ಸಿನಿಮಾ ಹಾಗೂ ಸ್ಪೆಷಲ್​ ಎಫೆಕ್ಟ್ಸ್ ವಿಭಾಗದಲ್ಲಿ ಎರಡು ಪ್ರಶಸ್ತಿ ಸಿಕ್ಕಿದೆ. ಒಂದಲ್ಲ ಎರಡಲ್ಲ ಸಿನಿಮಾಗೆ  ಭಾವೈಕ್ಯತಾ ಪ್ರಶಸ್ತಿ ಹಾಗೂ ಉತ್ತಮ ಬಾಲಕಲಾವಿದನ ಪ್ರಶಸ್ತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾಗೆ ಉತ್ತಮ ಮಕ್ಕಳ ಸಿನಿಮಾ ಪ್ರಶಸ್ತಿ ಹಾಗೂ ಮೂಕಜ್ಜಿಯ ಕನಸುಗಳು ಸಿನಿಮಾಗೆ ಉತ್ತಮ ಆಕ್ರೋಸ್​ ಸಿನಿಮಾ ಪ್ರಶಸ್ತಿ ಸಿಕ್ಕಿದೆ.

ಉರಿ ಸಿನಿಮಾದ ನಟ ವಿಕ್ಕಿ ಕೌಶಲ್​ ಹಾಗೂ ಅಂಧಧುನ್​ ಸಿನಿಮಾದ ಆಯುಷ್ಮಾನ್​ ಖರಾನ ಉತ್ತಮ ನಟರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅರಿಜಿತ್ ಸಿಂಗ್​ ಉತ್ತಮ ಗಾಯಕರಾಗಿ ಆಯ್ಕೆಯಾಗಿದ್ದಾರೆ. ಉಳಿದ ವಿವರಗಳು ಮುಂದಿವೆ...

National Film Awards
ನಟಿ ಕೀರ್ತಿ ಸುರೇಶ್​


 

ಉತ್ತಮ ಕನ್ನಡ ಸಿನಿಮಾ, ಉತ್ತಮ ಸಾಹಿತ್ಯ, ಸಂಕಲನ, ಉತ್ತಮ ಗಾಯಕಿ, ಸ್ಪೆಷಲ್​ ಜ್ಯೂರಿ ಪ್ರಶಸ್ತಿ .: ನಾತಿಚರಾಮಿ (ನಾಲ್ಕು ಪ್ರಶಸ್ತಿಗಳು)ಉತ್ತಮ ಆ್ಯಕ್ಷನ್​ ಸಿನಿಮಾ ಹಾಗೂ ಸ್ಪೆಷಲ್​ ಎಫೆಕ್ಟ್ಸ್​: ಕೆ.ಜಿ.ಎಫ್​ (ಎರಡು ಪ್ರಶಸ್ತಿಗಳು)

ಭಾವೈಕ್ಯತಾ ಪ್ರಶಸ್ತಿ, ಅತ್ಯುತ್ತಮ ಬಾಲ ಕಲಾವಿದ: ಒಂದಲ್ಲ ಎರಡಲ್ಲ (ಎರಡು ಪ್ರಶಸ್ತಿಗಳು)

ಉತ್ತಮ ಆಕ್ರೂಸ್​ ಚಿತ್ರ: ಮೂಕಜ್ಜಿಯ ಕನಸುಗಳು

ಉತ್ತಮ ಮಕ್ಕಳ ಸಿನಿಮಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಉತ್ತಮ ನಟ: ವಿಕ್ಕಿ ಕೌಶಲ್​ ಹಾಗೂ ಆಯುಷ್ಮಾನ್​ ಖುರಾನ

ಉತ್ತಮ ಗಾಯಕ: ಅರಿಜಿತ್​ ಸಿಂಗ್​ (ಅದ್ಮಾವತ್​)

ಉತ್ತಮ ಸಾಕ್ಷ್ಯಚಿತ್ರ: ಹೆಲ್ಲಾರೊ (ಗುಜರಾತಿ)

ಉತ್ತಮ ಉರ್ದು ಸಿನಿಮಾ: ಹಮಿದ್​

ಉತ್ತಮ ಹಿಂದಿ ಸಿನಿಮಾ: ಅಂಧಧುನ್​

ಉತ್ತಮ ಕೊಂಕಣಿ ಸಿನಿಮಾ: ಅಮೊರಿ

ಉತ್ತಮ ತೆಲುಗು ಸಿನಿಮಾ: ಮಹಾನಟಿ
ಉತ್ತಮ ಶೈಕ್ಷಣಿಕ ಸಿನಿಮಾ: ಸರಳ ವಿರಳ


ಉತ್ತಮ ಕ್ರೀಡಾ ಸಿನಿಮಾ: ಸ್ವಿಮ್ಮಿಂಗ್ ಥ್ರೂ ದ ಡಾರ್ಕ್​ನೆಸ್​


ಉತ್ತಮ ತನಿಖಾ ಸಿನಿಮಾ: ಅಮೊಲಿ


ಉತ್ತಮ ಗುಜರಾತಿ ಸಿನಿಮಾ: ರೇವಾ

ಉತ್ತಮ ತಮಿಳು ಸಿನಿಮಾ: ಭಾರಂ

ಉತ್ತಮ ರಾಜಸ್ತಾನಿ ಸಿನಿಮಾ: ಟರ್ಟಲ್​

ಉತ್ತಮ ಪಂಜಾಬಿ ಸಿನಿಮಾ: ಹರ್​ಜೀತಾ

ಉತ್ತಮ ಅಸ್ಸಾಮಿ ಸಿನಿಮಾ: ಬಾಬುಲ್​ ಕ್ಯಾನ್​ ಸಿಂಗ್​

ಉತ್ತಮ ಬಂಗಾಳಿ ಸಿನಿಮಾ: ಏಕ್​ ಜೆ ಚಿಲೊ ರಾಜಾ

ಉತ್ತಮ ಪಕೃತಿ ಆಧಾರಿತ ಸಿನಿಮಾ: ದ ವಲ್ಡ್ಸ್​ ಮೋಸ್ಟ್​ ಟೈಗರ್​

ಉತ್ತಮ ವಿಜ್ಞಾನ ಹಾಗೂ ತಂತ್ರಜ್ಞಾನ ಸಿನಿಮಾ: ಜಿ.ಡಿ. ನಾಯ್ಡು- ದ ಎಪಿಸೋಡ್​ ಆಫ್​ ಇಂಡಿಯಾ

ಉತ್ತಮ ಕಲೆ ಮತ್ತು ಸಂಸ್ಕೃತಿಕ ಸಿನಿಮಾ: ಬುಂಕರ್​- ದ ಲಾಸ್ಟ್​ ಆಫ್​ ದ ವಾರಣಾಸಿ ವೀವರ್ಸ್​

Happy Birthday Mahesh Babu: ಹುಟ್ಟುಹಬ್ಬದ ಸಂಭ್ರಮದಲ್ಲಿ ಮಹೇಶ್​ ಬಾಬು: ಹಬ್ಬ ಆಚರಿಸುತ್ತಿರುವ ಅಭಿಮಾನಿಗಳು66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿರುವ ವಿಡಿಯೋ ಇಲ್ಲಿದೆ...

First published: August 9, 2019, 5:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading