ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯಿಸಿರುವ ‘ಗಲ್ಲಿಬಾಯ್‘ ಸಿನಿಮಾ ಬರೋಬ್ಬರಿ 13 ಪ್ರಶಸ್ತಿ ಪಡೆದು ಹೊಸ ಇತಿಹಾಸ ಬರೆದಿದೆ.
ಗುವಾಗತಿಯಲ್ಲಿ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಝೋಯಾ ಅಖ್ತರ್ ನಿರ್ದೇಶನದ ‘ಗಲ್ಲಿಬಾಯ್‘ ಪ್ರಶಸ್ತಿ ಗೆದ್ದುಕೊಂಡಿದೆ. ಈ ಹಿಂದೆ ‘ಬ್ಲಾಕ್‘ ಸಿನಿಮಾ 11 ಪ್ರಶಸ್ತಿ ಗೆದ್ದುಕೊಂಡು ಅತಿ ಹೆಚ್ಚು ಪ್ರಶಸ್ತಿ ಗೆದ್ದ ಸಿನಿಮಾ ಎಂಬ ಕೀರ್ತಿಗೆ ಭಾಜನವಾಗಿತ್ತು. ಆದರೀಗ ‘ಗಲ್ಲಿಬಾಯ್‘ ಈ ಪ್ರಶಸ್ತಿಯನ್ನು ಗೆದ್ದು ಹೊಸ ಸಾಧನೆ ಮಾಡಿದೆ
ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ‘ಗಲ್ಲಿ ಬಾಯ್‘ ಚಿತ್ರಕ್ಕೆ ದೊರಕಿದೆ. ಇನ್ನು ನಾಯಕ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಪಡೆದರು. ಚಿತ್ರದ ನಿರ್ದೇಶನಕ್ಕಾಗಿ ಝೋಯಾ ಅಖ್ತರ್ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಬೊಜ್ಜಿನ ಸಮಸ್ಯೆಗೆ ನೀವು ತಿನ್ನುವ ಈ ಆಹಾರ ಕೂಡ ಕಾರಣವಾಗಬಹುದು!
‘ಗಲ್ಲಿಬಾಯ್‘ ಸಿನಿಮಾದಲ್ಲಿ ಎಂಸಿ ಶೇರ್ ಪಾತ್ರ ನಿರ್ವಹಿಸಿದ್ದ ಸಿದ್ದಾರ್ಥ್ ಚತುರ್ವೇದಿ ಮತ್ತು ರಾಜಿಯಾ ಪಾತ್ರ ನಿರ್ವಹಿಸಿದ ಅಮೃತಾ ಸುಭಾಷ್ ಅತ್ಯುತ್ತಮ ಪೋಷಕ ನಟ ಮತ್ತು ನಟಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.
ಇದರ ಜೊತೆಗೆ ಅತ್ಯುತ್ತಮ ಸಂಗೀತ ಪ್ರಶಸ್ತಿ ‘ಗಲ್ಲಿ ಬಾಯ್‘ ಚಿತ್ರದ ಝೋಯಾ ಅಖ್ತರ್, ಅಂಕುರ್ ತಿವಾರಿ ಪಾಲಾಯಿತು. ಅದೇ ಚಿತ್ರದ ‘ಅಪ್ನಾ ಟೈಮ್ ಅಯೇಗಾ‘ ಹಾಡಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ದೊರೆಯಿತು. ಅತ್ಯುತ್ತಮ ಸಂಭಾಷಣೆ ಮತ್ತು ಚಿತ್ರಕಥೆ ಈ ಸಿನಿಮಾಗೆ ದೊರಕಿದೆ
ಇನ್ನು ವಿಮರ್ಶಕರ ಚಿತ್ರ ಪ್ರಶಸ್ತಿ ‘ಆರ್ಟಿಕಲ್ 15‘ ಮತ್ತು ‘ಸೋಂಚಿರಿಯಾ‘ ಪಾಲಾಯಿತು. ವಿಮರ್ಶಕರ ಶ್ರೇಷ್ಠ ನಟ ಆಯುಶ್ಮಾನ್ ಖುರಾನಾ ಪಾಲಾದರೆ, ನಟಿ ಪ್ರಶಸ್ತಿ ಭೂಮಿ ಪಡ್ನೇಕರ್ ಮತ್ತು ತಾಪ್ಸಿ ಪಾಲಾಯಿತು.
ಅತ್ಯುತ್ತಮ ಗಾಯಕ ಪ್ರಶಸ್ತಿ ಅರ್ಜಿತ್ ಸಿಂಗ್ ಪಾಲಾದರೆ, ಗಾಯಕಿ ಪುರಸ್ಕಾರ ಶಿಲ್ಪಾ ರಾವ್ ಪಾಲಾಯಿತು. ಜೀವಮಾನದ ಸಾಧಕ ಪುರಸ್ಕಾರವು ರಮೇಶ್ ಸಿಪ್ಪಿ ಅವರಿಗೆ ನೀಡಲಾಗಿದೆ, ಎಕ್ಸಲೆನ್ಸ್ ಇನ್ ಫಿಲ್ಮ್ ಪ್ರಶಸ್ತಿ ಗೋವಿಂದ ಅರಿಗೆ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ನಿತಿನ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ